ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಸುಕ್ಷೇತ್ರ ಜಾಯವಾಡಗಿ ಗ್ರಾಮದ ಶಿವಪ್ಪ ವ ಸೋಮನಾಥ ಮುತ್ಯಾನ ದೇವಸ್ಥಾನದ ಹಿಂಭಾಗದಲ್ಲಿದ್ದ 100 ವರ್ಷದ ಬೃಹತ್ ಆಲದ ಮರ ಬುಧವಾರ ಬೆಳಗ್ಗೆ ಧರೆಗೆ ಉರುಳಿತು. ಆಲದ ಮರವು ತಾನಾಗಿಯೆ ಸಾವಕಾಶವಾಗಿ ಯಾವ ಜೀವಿಗೂ ಹಾಗೂ ಯಾವ ವಸ್ತುವಿಗೂ ಹಾನಿಯಾಗದಂತೆ ಧರೆಗೆ ಉರುಳಿದೆ. ಶಿವಪ್ಪ ಮತ್ತು ಸೋಮನಾಥ ಮುತ್ತ್ಯಾ ಅವರ ಶಕ್ತಿ ಒಂದು ಪವಾಡದಿಂದ ಯಾರಿಗೂ ಹಾನಿಯಾಗಿಲ್ಲ.
ಸದ್ಭಕ್ತರು ಆ ದೇವರ ಮೇಲೆ ಇಟ್ಟಿರುವ ಅಪಾರವಾದ ಭಕ್ತಿ ನಿಜವಾಗಿ ಇಲ್ಲಿ ಕಾಣಬಗುದಾಗಿದೆ. ಸುಮಾರು 100 ವರ್ಷಗಳ ಹಳೆಯದಾದ ಆಲದ ಮರವು ಎಲ್ಲರಿಗೂ ನೆರಳು ಕೊಟ್ಟು ಎಲ್ಲರಿಗೂ ಬೇಕಾಗಿ ಯಾವದಕ್ಕೂ ಹಾನಿ ಮಾಡದೆ ಒಬ್ಬ ಶರಣರ ಆಯಸ್ಸು ಮುಗಿದಂತೆ ಆ ಮರದ ಆಯಸ್ಸು ಮುಗಿದು ಧರೆಗೆ ಉರುಳಿದೆ. ಅದೇ ಸ್ಥಾನದಲ್ಲಿ ಬರುವ ದಿನಗಳಲ್ಲಿ ಮತ್ತೊಂದು ಮರವು ಉದ್ಭವಿಸಲಿ ಬೆಳೆಯುವಂತಾಗಲೆಂದು ಜಾಯವಾಡಗಿ, ಹರಸೂರಿನ ಕರಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮತ್ತು ಸೋಮನಾಥ, ಶಿವಪ್ಪ ಮುತ್ತ್ಯಾ ಅವರ ಟ್ರಸ್ಟ್ ಕಮಿಟಿ ಪದಾಧಿಕಾರಿಗಳು ತಿಳಿಸಿದ್ದಾರೆ.

