ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ಮಹಾರಾಷ್ಟçದ ವೀರ, ಶೀನಾ, ಉಜನಿ ಜಲಾಶಯಗಳಿಂದ ಹಾಗೂ ತಾಲೂಕಿನ ಭೋರಿ ಹಳ್ಳದಿಂದ ಹರಿದು ಭೀಮಾ ನದಿ ಸೇರಿದ ನೀರಿನಿಂದ ೧ ಲಕ್ಷ ೬೦ ಸಾವಿರ ಕ್ಯೂಸೇಕ್ ನೀರು ಹರಿದು ಬಂದಿದೆ ಎಂದು ಕೆಎನ್‌ಎನ್‌ಎಲ್ ಎಇಇ ಸಂತೋಷಕುಮಾರ ಸಜ್ಜನ್ ಮಾಹಿತಿ ನೀಡಿದ್ದಾರೆ.
ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಭಾರಿ ಪ್ರಮಾಣದ ನೀರು ನದಿಗೆ ಹರಿದು ಬಂದ ಪ್ರಯುಕ್ತ ಬ್ಯಾರೇಜ್‌ನ ಗೇಟ್‌ಗಳ ಮೂಲಕ ನೀರು ಹೊರಗಡೆ ಬಿಡಲಾಗುತ್ತಿದೆ. ಇದರಿಂದ ದೇವಲ ಗಾಣಗಾಪೂರ, ಘತ್ತರಗಾ ಹಾಗೂ ಚಿನಮಳ್ಳಿ ಬ್ಯಾರೆಜ್‌ಗಳು ಮುಳುಗಡೆಯಾಗಿದ್ದು ಸಾರ್ವಜನಿಕರು ನದಿ ಹತ್ತಿರಕ್ಕೆ ಹೋಗಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

