Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಆರೋಗ್ಯಕರ ಮತ್ತು ಕಾಂತಿಯುತ ಚರ್ಮವನ್ನು ಪಡೆಯಲು ಜನರು ಪ್ರತಿದಿನ ಸೇವಿಸುವ ಆಹಾರ ಮತ್ತು ಪಾನೀಯಗಳು ಹೆಚ್ಚು ಪ್ರಭಾವವನ್ನು ಬೀರುತ್ತವೆ ಎಂದು ಸಾರಂಗಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಹೇಳಿದರು.ಸಿಂದಗಿ ಪಟ್ಟಣದ ಸಾರಂಗಮಠದಲ್ಲಿ ಪೂಜ್ಯಶ್ರೀ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ ಹಾಗೂ ಶಹಾಪುರ ಚರ್ಮರೋಗ ಹಾಗೂ ಕಾಂತಿವರ್ಧಕ ಚಿಕಿತ್ಸಾಲಯ ಇವುಗಳ ಸಹಯೋಗದಲ್ಲಿ ಹಮ್ಮಿಕೊಂಡ ಉಚಿತ ಚಿಕಿತ್ಸಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಶೇಷವಾಗಿ ಬೆಳಿಗ್ಗೆ ಚರ್ಮದ ಆರೈಕೆಯಲ್ಲಿ ತೊಡಗಿಕೊಂಡರೆ ಇದು ನಿಮ್ಮ ಚರ್ಮದ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದರು.ಈ ವೇಳೆ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ಅನಾರೋಗ್ಯಕರ ಮತ್ತು ಒತ್ತಡದ ಜೀವನ ಶೈಲಿಯಿಂದಾಗಿ ದೇಹವು ವೇಗವಾಗಿ ವಯಸ್ಸಾಗುತ್ತದೆ. ನಯವಾದ ಚರ್ಮಕ್ಕಾಗಿ ಪ್ರಾಣಾಯಾಮದೊಂದಿಗೆ ಸ್ವಲ್ಪ ಆಸನ ಮಾಡುವುದರಿಂದ ಚರ್ಮವು ಹೊಳೆಯುತ್ತದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಚರ್ಮರೋಗ ತಜ್ಞೆ ಡಾ.ಅಪೂರ್ವ ರಮೇಶ ಶಹಾಪುರ ಮಾತನಾಡಿ, ಚರ್ಮದಲ್ಲಿ ತುರಿಕೆ, ಕಜ್ಜಿಗಳು ಕಾಣಿಸಿಕೊಂಡ ತಕ್ಷಣವೇ ಎಲ್ಲರೂ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.ಶಿಬಿರದಲ್ಲಿ ೨೦೭ಜನ ಉಚಿತವಾಗಿ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಹುಬ್ಬಳ್ಳಿಯ ಕೆ.ಎಲ್.ಇ ಟೆಕ್ನಾಲಜಿಕಲ್ ವಿಶ್ವವಿದ್ಯಾಲಯದ ಅಡಿ ನಡೆಯುವ ೨೦೨೪-೨೫ನೆಯ ಸಾಲಿನ ಪರೀಕ್ಷೆಯಲ್ಲಿ ಎಮ್.ಟೆಕ್ ವಿಭಾಗದ ವಿದ್ಯಾರ್ಥಿ ಶಿವರಾಜ ಹಿರೇಮಠ ರಾಜ್ಯಕ್ಕೆ ಮೂರನೆಯ ರ‍್ಯಾಂಕ್ ಪಡೆದುಕೊಂಡು ಕೀರ್ತಿಯನ್ನು ಹೆಚ್ಚಿಸಿದ್ದಾರೆ.ವಿದ್ಯಾರ್ಥಿಯ ಕಠಿಣ ಪರಿಶ್ರಮ, ಪ್ರಾಧ್ಯಾಪಕರ ಅತ್ಯುತ್ತಮ ಭೋಧನೆ ರ‍್ಯಾಂಕ್ ಪಡೆದುಕೊಳ್ಳಲು ಸಾಧ್ಯವಾಗಿದೆ. ಇವರ ಸಾಧನೆಗೆ ಬೋಧಕ-ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗೆ ಶುಭ ಕೋರಿದ್ದಾರೆ.

Read More

“ಉದಯರಶ್ಮಿ” ಪತ್ರಿಕೆಯ ವರದಿ ಪರಿಣಾಮ ಎಚ್ಚೆತ್ತ ಅಧಿಕಾರಿಗಳು ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಇಲ್ಲಿನ ಪರಿಸರದಲ್ಲಿ ಡೈಬ್ಯಾಕ್ ರೋಗಕ್ಕೆ ಒಣಗುತ್ತಿರುವ ನೂರಾರು ಬೇವಿನ ಮರಗಳಿಗೆ ಕಳೆದ ಎರಡು ದಿನಗಳಿಂದ ಆಲಮಟ್ಟಿ ಕೆಬಿಜೆಎನ್ಎಲ್ ಅರಣ್ಯ ಇಲಾಖೆಯ ಸಿಬ್ಬಂದಿ ಔಷಧಿ ಸಿಂಪಡಣೆ ಮಾಡುತ್ತಿದ್ದಾರೆ.ಬಾಧಿತ ಗಿಡಗಳಿಗೆ ತಜ್ಞರ ಶಿಫಾರಸ್ಸು ಮೇರೆಗೆ ಔಷಧವನ್ನು ಅರಣ್ಯ ಇಲಾಖೆಯ ಕಾರ್ಮಿಕರು ಸಿಂಪಡಿಸುತ್ತಿದ್ದಾರೆ.ಒಣಗುತ್ತಿರುವ ನೂರಾರು ಬೇವಿನ ಮರಗಳ ಕುರಿತು ’ಉದಯರಶ್ಮಿ’ ಪತ್ರಿಕೆಯು ಇತ್ತೀಚಿನ ಸಂಚಿಕೆಯಲ್ಲಿ ವಿಸ್ಕೃತ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ಅಧಿಕಾರಿಗಳು ಇದೀಗ ಕ್ರಮಕ್ಕೆ ಮುಂದಾಗಿರುವುದು ಸ್ತುತ್ಯಾರ್ಹವಾಗಿದೆ.ಆಲಮಟ್ಟಿಯ ಪರಿಸರದಲ್ಲಿ ಸುಮಾರು ೬೦೦ ಕ್ಕೂ ಅಧಿಕ ಬೇವಿನ ಮರಗಳು “ಟೀ ಮಾಸ್ಕುಟೋ ಬಗ್’ ಕಾಯಿಲೆಗೆ ಒಳಗಾಗಿ ನಂತರ ಶಿಲೀಂಧ್ರದ ರೀತಿ ಡೈಬ್ಯಾಕ್ ಎಂಬ ರೋಗಕ್ಕೆ ತುತ್ತಾಗಿದ್ದವು. ಇದರಿಂದ ಆ ಮರಗಳ ಎಲೆಗಳು ಸಂಪೂರ್ಣ ಒಣಗಿದ್ದವು. ಇಡೀ ಗಿಡ ಕಳಾಹೀನಗೊಂಡಿತ್ತು.ಆಲಮಟ್ಟಿ ಕೆಬಿಜೆಎನ್ಎಲ್ ಅರಣ್ಯ ಇಲಾಖೆಯ ಅಧಿಕಾರಿಗಳು ಸಸ್ಯ ತಜ್ಞರನ್ನು ಸಂಪರ್ಕಿಸಿ ಈ ರೋಗಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿ ಅಗತ್ಯ ಸಲಹೆ ಪಡೆದಿದ್ದರು.ಅವರ ಮಾರ್ಗದರ್ಶನದಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕಾಂಗ್ರೆಸ್ ಹಿರಿಯ ನಾಯಕ ಶಾಮನೂರ ಶಿವಶಂಕರಪ್ಪ ಅವರ ನಿಧನದಿಂದ ರಾಜ್ಯವು ಒಬ್ಬ ಅನುಭವಿ ರಾಜಕೀಯ ನಾಯಕನನ್ನು ಹಾಗೂ ಮಹತ್ವದ ಸಾಮಾಜಿಕ ಮುಖಂಡನನ್ನು ಕಳೆದುಕೊಂಡಂತಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ ಮತ್ತು ಅವರ ಕುಟುಂಬಕ್ಕೆ ದುಃಖ ಭರಿಸುವಂತಹ ಶಕ್ತಿ ನೀಡಲಿ ಎಂದು ಶಾಸಕ ಅಶೋಕ ಮನಗೂಳಿ ಸಂತಾಪ ವ್ಯಕ್ತಪಡಿಸಿದ್ದಾರೆ.ಸಂತಾಪ: ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಸಾರಂಗಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಯಂಕಂಚಿ ಶ್ರೀಮಠದ ಅಭಿನವ ರುದ್ರಮುನಿ ಶಿವಾಚಾರ್ಯರು, ಮಾಜಿ ವಿಪ ಶಾಸಕ ಅರುಣ ಶಹಾಪುರ, ಮಾಜಿ ಶಾಸಕ ರಮೇಶ ಭೂಸನೂರ, ಅಖಿಲ ಭಾರತ ವೀರಶೈವ ಮಹಾಸಭಾ ಸಿಂದಗಿ ತಾಲೂಕಾಧ್ಯಕ್ಷ ಅಶೋಕ ವಾರದ, ಮಲ್ಲಿಕಾರ್ಜುನ ಅಲ್ಲಾಪುರ, ಕಾರ್ಯನಿತರ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಮಹಾಂತೇಶ ನೂಲಾನವರ, ಭೀಮಾಶಂಕರ ತಾರಾಪುರ, ದಾನೇಶ ಬಮ್ಮಣ್ಣಿ, ಆನಂದ ಶಾಬಾದಿ, ಎಂ.ಎಂ.ಹಂಗರಗಿ, ಮುತ್ತು ಮುಂಡೇವಾಡಗಿ, ಚಂದ್ರಶೇಖರ ನಾಗರಬೆಟ್ಟ, ಮಲ್ಲನಗೌಡ ಪಾಟೀಲ ಇಬ್ರಾಹಿಂಪುರ, ಶಿವಾನಂದ ಬಡಾನೂರ, ಸತೀಶ ಬಸರಕೋಡ, ಶಿವಾನಂದ…

Read More

೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಚಿನ್ ಕೌಶಿಕ್ ಸಲಹೆ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಲೋಕ್‌ಅದಾಲತ್ ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡಲ್ಲಿ ಎರಡೂ ಪಕ್ಷಗಳು ತಮ್ಮ ಪ್ರಕರಣದ ತೀರ್ಮಾನವನ್ನು ತಾವೇ ತೆಗೆದುಕೊಂಡಂತಾಗುತ್ತದೆ. ಹಾಗಾಗಿ ಹೆಚ್ಚೆಚ್ಚು ಪ್ರಕರಣಗಳನ್ನು ಲೋಕ್‌ಅದಾಲತ್ ಮೂಲಕ ಬಗೆಹರೆಸಿಕೊಳ್ಳಲು ಪಕ್ಷಗಾರರು ಮುಂದೆ ಬರಬೇಕು ಎಂದು ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಚಿನ್ ಕೌಶಿಕ್ ಅವರು ಸಲಹೆ ನೀಡಿದರು.ಪಟ್ಟಣದ ನ್ಯಾಯಾಲಯಗಳ ಸಂಕೀರ್ಣದಲ್ಲಿ ತಾಲೂಕು ಕಾನೂನು ಸೇವಾ ಸಮೀತಿಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟಿçÃಯ ಲೋಕ್ ಅದಾಲತ್ ನಲ್ಲಿ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿ ಅವರು ಮಾತನಾಡಿದರು.ಇಲ್ಲಿ ಇತ್ಯರ್ಥವಾದ ಪ್ರಕರಣಗಳ ವ್ಯಾಜ್ಯ ಮುಂದುವರೆಯುವದಿಲ್ಲ. ಮೇಲ್ಮನವಿ ಹೋಗಲು ಅವಕಾಶಗಳಿರುವದಿಲ್ಲ. ಮತ್ತು ಮುಖ್ಯವಾಗಿ ಎರಡೂ ಪಕ್ಷ ತಮ್ಮ ತೀರ್ಪನ್ನು ತಾವೇ ಆರಿಸಿಕೊಂಡು ಗೆದ್ದಂತಾಗುತ್ತದೆ. ಎಲ್ಲ ಪಕ್ಷಗಾರರು ಲೋಕ್‌ಅದಾಲತ್ ನ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಅವರು ಮಾತನಾಡಿ, ಪಕ್ಷಗಾರರಲ್ಲಿ ಯಾವುದೇ ದ್ವೇಶ ಹುಟ್ಟಿಕೊಳ್ಳಬಾರದು. ತಮ್ಮ ತಮ್ಮಲ್ಲಿಯೇ ನ್ಯಾಯ ಸುರಳೀತವಾಗಿ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟ ಕೊಡಮಾಡುವ ಶ್ರೇಷ್ಠ ತೋಟಗಾರಿಕಾ ರೈತ ಪ್ರಶಸ್ತಿಗೆ ತಾಲೂಕಿನ ಮುಳವಾಡದ ರೈತ ಬಸವರಾಜ ಸಿದ್ದಾಪುರವರು ಆಯ್ಕೆಯಾಗಿದ್ದಾರೆ.ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ದಲ್ಲಿ ಡಿ.21 ರಿಂದ 23ರವರೆಗೆ ನಡೆಯಲಿರುವ ತೋಟಗಾರಿಕೆ ಮೇಳ 2025ರ ಡಿ.21 ರಂದು ಭಾನುವಾರ ನಡೆಯಲಿರುವ ತೋಟಗಾರಿಕೆ ಮೇಳದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವದು ಎಂದು ಪ್ರಕಟಣೆ ತಿಳಿಸಿದೆ.

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಸದ್ಗುಣಿಗಳೂ ಮತ್ತು ವಿಷಯ ಸಂಪನ್ನರಾದ ಶಿಕ್ಷಕರು ಮಕ್ಕಳ ಪಾಲಿಗೆ ವರದಾನವಾಗಿದ್ದಾರೆ, ಗುರುವಿನಿಂದಲೇ ಶಿಷ್ಯರಿಗೆ ಮೋಕ್ಷ ಪ್ರಾಪ್ತವಾಗುವುದೆಂದು ನಿವೃತ್ತ ಪೊಲೀಸಾಧಿಕಾರಿ ಬಿ ಆಯ್ ಪಾಟೀಲ ಹೇಳಿದರು.ಮುಳವಾಡ ಗ್ರಾಮದಲ್ಲಿ ಶನಿವಾರ ಶ್ರೀ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಘದ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಉದ್ಘಾಟನ ಸಮಾರಂಭದ ಜ್ಯೋತಿ ಬೆಳಗಿಸಿ ಮಾತನಾಡಿದರು.ಸಂಘದ ಕಾರ್ಯದರ್ಶಿ ಜಂಬುನಾಥ ಕಂಚ್ಯಾಣಿ ಮಾತನಾಡಿ, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳು ದೇಶದ ಆರೋಗ್ಯಕರವಾದ ಅಭಿವೃದ್ಧಿಗೆ ಪರೋಕ್ಷವಾಗಿ ಶ್ರಮಿಸುತ್ತಿರುವವೆಂದು ಹೇಳಿದರು.ನಿವೃತ್ತ ಪ್ರಾಚಾರ್ಯರ ಡಾ. ವಿ.ಡಿ.ಐಹೊಳ್ಳಿ ಮಾತನಾಡಿ ಪರೀಕ್ಷೆಗಳಲ್ಲಿ ಉನ್ನತ ಅಂಕಗಳನ್ನು ಪಡೆಯಲು ಮಕ್ಕಳು ಮಾಡಬೇಕಾದ ಪ್ರಯತ್ನ ಮತ್ತು ಅಧ್ಯಯನದ ತಂತ್ರಗಳನ್ನು ಹೇಳಿಕೊಟ್ಟರು.ಸಾಹೇಬಗೌಡ ಪಾಟೀಲರು ಹಾಗೂ ವರ್ಲ್ಡ ಬುಕ್ ಆಫ್ ರೆಕಾರ್ಡ್ಸ ನಲ್ಲಿ ಸೇರ್ಪಡೆಗೊಂಡ ಸ್ಥಳೀಯ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕರಾದ ಡಿ.ಎಸ್.ಖಿಲಾರಿ ಮತ್ತು ಖಗೋಳ ದೂರದರ್ಶಕವನ್ನು ತಯಾರಿಸಿದ ಪ್ರತಿಭಾವಂತ ವಿದ್ಯಾರ್ಥಿ ಕೃಷ್ಣ ಕುಂಬಾರ ಹಾಗೂ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಸಂಗಮೇಶ ಬುರ್ಲಿ ಮತ್ತು ಕಾರ್ಯದರ್ಶಿ ರಾಘವೇಂದ್ರ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದಸ್ತು ಬರಹಗಾರರಿಗೆ ನೋಂದಣಿ ಇಲಾಖೆಯಿಂದ ಗುರುತಿನ ಚೀಟಿ ನೀಡಬೇಕು ಮತ್ತು ಕಾವೇರಿ 0.3 ತಂತ್ರಾಂಶ ಜಾರಿಗೆ ತರುವುದನ್ನು ಕೈ ಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪರವಾನಿಗೆ ಪಡೆದ ಜಿಲ್ಲೆಯ ದಸ್ತು ಬರಹಗಾರರ ಒಕ್ಕೂಟದ ಪದಾಧಿಕಾರಿಗಳು ಸೋಮವಾರ ಮುಷ್ಕರ ನಡೆಸಿದರು.ನಗರದ ಸೊಲ್ಲಾಪುರ ರಸ್ತೆಯಲ್ಲಿರುವ ಉಪ ನೋಂದಣಿ ಇಲಾಖೆ ಎದುರು ಮುಷ್ಕರ ನಡೆಸಿದ ಪದಾಧಿಕಾರಿಗಳು, ಸರ್ಕಾರದ ನಡೆಯಿಂದಾಗಿ ದಸ್ತು ಬರಹಗಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಕೂಡಲೇ ತೊಂದರೆದಾಯಕ ತೀರ್ಮಾನಗಳನ್ನು ಕೈ ಬಿಡಬೇಕೆಂದು ಆಗ್ರಹಿಸಿದರು.ದಸ್ತು ಬರಹಗಾರರ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಡಿ.ಎಸ್. ಸಾವಳಗಿ ಮಾತನಾಡಿ, ರಾಜ್ಯಾದ್ಯಂತ ದಿನಕ್ಕೊಂದು ಕಾನೂನು ರೂಪಿಸುತ್ತಿರುವ ಹಿನ್ನೆಲೆ ದಸ್ತು ಬರಹಗಾರರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಹೀಗಾಗಿ ಕೇರಳ ಮಾದರಿಯಲ್ಲಿ ದಸ್ತು ಬರಹಗಾರರಿಗೆ ಪ್ರತ್ಯೇಕವಾಗಿ ಲಾಗಿನ್ ನೀಡಬೇಕು. ಈಗ ಚಾಲ್ತಿಯಲ್ಲಿರುವ ಸಿಟಿಜನ್ ಲಾಗಿನ್ ಹಿಂಪಡೆಯಬೇಕು. ಪ್ರತಿ ನೋಂದಣಿ ಕಾಗದಕ್ಕೆ ಅಧಿಕೃತ ದಸ್ತ ಬರಹಾರರ ಮೊಹರು ಕಡ್ಡಾಯಗೊಳಿಸಬೇಕೆಂದು ಆಗ್ರಹಿಸಿದರು.ಒಕ್ಕೂಟದ ಪ್ರಮುಖರಾದ ಎಚ್.ಆರ್. ಬಾಗವಾನ, ಪಾರಸ ಹೊಸಮನಿ,…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ರವಿವಾರ ದಿನಾಂಕ: 14ರಂದು ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ವಿವಿಧ ದತ್ತಿನಿಧಿ ಗೋಷ್ಠಿಯಲ್ಲಿ ಚಡಚಣ ತಾಲೂಕ ಕಾನಿಪ ಘಟಕದ ನೂತನ ಹಾಗೂ 2025-2028 ನೇ ಅವಧಿಗೆ ಎರಡನೇ ಬಾರಿ ಮರು ಆಯ್ಕೆಯಾದ ಅಧ್ಯಕ್ಷ ರಮೇಶ ಬಿರಾದಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಪ್ರಶಸ್ತಿ ಪುರಸ್ಕೃತ ಸುರೇಶ ಕಾಗಲಕರ ಸೇರಿದಂತೆ ವಿಜಯಪುರ ಜಿಲ್ಲೆಯ ವಿವಿಧ ತಾಲೂಕಿನ ಕಾನಿಪ ಘಟಕದ ನೂತನ ಅಧ್ಯಕ್ಷರಾದ ಬಸವನಬಾಗೇವಾಡಿಯ ರಾಜು ಗಣಾಚಾರಿ, ಮುದ್ದೇಬಿಹಾಳದ ಡಿ ಬಿ ವಡವಡಗಿ, ಇಂಡಿಯ ಅಬುಶಾಮ ಹವಾಲ್ದಾರ, ತಾಳಿಕೋಟಿಯ ಮೈಬೂಬಸುಬಾನಿ ಶಿರಸಗಿ, ನಿಡಗುಂದಿಯ ಬಸವರಾಜ ಹೆರಕಲ್, ತಿಕೋಟಾದ ಸಾತಲಿಂಗಯ್ಯ ಸಾಲಿಮಠ, ಕೊಲ್ಹಾರದ ಅರುಣಕುಮಾರ ಔರಸಂಗ, ಆಲಮೇಲದ ಅವಧೂತ ಬಂಡಗಾರ ಅವರಿಗೆ ಇದೆ ಸಂದರ್ಭದಲ್ಲಿ ಸನ್ಮಾನಿಸಲಾಯಿತುಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ಎ.ಕಾಲೇಬಾಗ, ವಿಜಯಪುರದ ಜಾಗತಿಕ ಲಿಂಗಾಯತ ಮಹಾಸಭೆಯ ಅಧ್ಯಕ್ಷ ಬಸನಗೌಡ ಪಾಟೀಲ ಹರನಾಳ, ತಿಕೋಟಾ ಕಸಾಪ ತಾಲೂಕು ಘಟಕದ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಳೆದ ಕೆಲವು ದಿನಗಳ ಹಿಂದೆ ಭಾರತ ಸರ್ವೋಚ್ಚ ನ್ಯಾಯಾಲಯವು ಪ್ರಕರಣ ಒಂದರಲ್ಲಿ ತಂದೆ ಪರಿಶಿಷ್ಟ ಜಾತಿ ಅಲ್ಲದಿದ್ದರೂ ತಾಯಿ ಪರಿಶಿಷ್ಟ ಜಾತಿ ಆಗಿದ್ದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಜಾತಿ ಪ್ರಮಾಣ ಒದಗಿಸಬೇಕೆಂದು ಆದೇಶ ನೀಡಿದ್ದು ಇದರಿಂದ ನಿಜ ಪರಿಶಿಷ್ಟ ಜಾತಿ ಜನರಿಗೆ ಅನ್ಯಾಯವಾಗುತ್ತದೆ. ಜೊತೆಗೆ ಸರ್ವೋಚ್ಛ ನ್ಯಾಯಾಲಯದ ಆದೇಶ ದುರುಪಯೋಗ ಆಗುವ ಸಾಧ್ಯತೆ ಇದ್ದು, ಸದರಿ ನ್ಯಾಯಾಲಯದ ಆದೇಶವನ್ನು ಪರಾಮರ್ಶೆ ಮಾಡಲು ರಾಜ್ಯ ಸರ್ಕಾರದಿಂದ ಕ್ರಮ ತೆಗೆದುಕೊಳ್ಳಬೇಕು ಎಂದು ಭೀಮ್ ಸರಕಾರ ಸಂಘಟನೆ ಆಗ್ರಹಿಸಿದೆ.ಈ ಕುರಿತು ಮಾತನಾಡಿದ ಸಂಘಟನೆ ಮುಖಂಡರು, ಭವಿಷ್ಯದಲ್ಲಿ ಪರಿಶಿಷ್ಟ ಜಾತಿಯ ಹೆಣ್ಣು ಮಗಳಿಗೆ ಪರಿಶಿಷ್ಟ ಜಾತಿ ಅಲ್ಲದ ಪುರುಷನೊಂದಿಗೆ ಮದುವೆಯಾದಲ್ಲಿ ಅವರಿಗೆ ಜನಿಸಿದ ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಸರಿಪಾಲು ದೊರಕುವಂತಾಗಬೇಕು. ಏಕೆಂದರೆ ಮೇಲಿನ ಸರ್ವೋಚ್ಛ ನ್ಯಾಯಾಲಯದ ತೀರ್ಪು ಸರಿ ಅನಿಸಿದರೆ ಇದನ್ನು ಅಳವಡಿಸುವುದು ಅನಿವಾರ್ಯವಾಗುತ್ತದೆ. ಅಂದರೆ ಪರಿಶಿಷ್ಟ ಜಾತಿಯ ಜನರಿಗೆ ಆಗುವ ಸಂಭವನೀಯ ಅನ್ಯಾಯವನ್ನು ತಡೆಗಟ್ಟದಂತಾಗುತ್ತದೆ,ಇಲ್ಲವಾದಲ್ಲಿ ಸರ್ವೋಚ್ಛ ನ್ಯಾಯಾಲಯದ ತೀರ್ಪು ಈ ಜನಾಂಗದ ಜನರಿಗೆ…

Read More