ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಬಿಎಲ್‌ಡಿಇ ಸಂಸ್ಥೆ ಸಮಕುಲಾಧಿಪತಿ ಡಾ.ವೈ.ಎಂ.ಜೈಯರಾಜ್ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಮ್ಮ ಪೂರ್ವಜರು ನಕ್ಷತ್ರಗಳ ಆಧಾರದ ಮೇಲೆ ಪಂಚಾಂಗವನ್ನು ನಿರ್ಮಾಣ ಮಾಡಿದ್ದಾರೆ. ಭಾರತದ ಪಂಚಾಂಗ ನಿರ್ಮಾತೃಗಳು ವಿಜ್ಞಾನಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಬಿಎಲ್‌ಡಿಇ ಸಂಸ್ಥೆ ಸಮಕುಲಾಧಿಪತಿ ಡಾ.ವೈ.ಎಂ.ಜೈಯರಾಜ್ ಹೇಳಿದರು.
ನಗರದ ಬಿಎಲ್‌ಡಿಇ ಸಂಸ್ಥೆಯ ಎಸ್‌ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಸಂಶೋಧನೆ ಮತ್ತು ಅಭಿವೃದ್ಧಿ ಕೋಶ, ಸ್ನಾತಕೋತ್ತರ ಭೌತ ಶಾಸ್ತ್ರ ಅಧ್ಯಯನ ವಿಭಾಗ ಹಾಗೂ ಎನ್‌ಟಿಪಿಸಿ ಕೂಡಗಿ, ಕರ್ನಾಟಕ ಸೋಪ್ ಆ್ಯಂಡ್ ಡಿಟರ್ಜಂಟ್ ಲಿಮಿಟೆಡ್ ಬೆಂಗಳೂರು ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ” ಎನರ್ಜಿ, ಎನ್ವಿರಾನ್ಮೆಂಟ್ ಆ್ಯಂಡ್ ಮಟೇರಿಯಲ್ಸ್ ಸೈನ್ಸ್ ” ಎಂಬ ವಿಷಯದ ಕುರಿತು ಎರಡು ದಿನಗಳ ಅಂತರಾಷ್ಟ್ರೀಯ ಸಮ್ಮೇಳನ ಭಾಗವಹಿಸಿ ಮಾತನಾಡಿದ ಅವರು, ವಿಶ್ವ ವಿಸ್ಮಯಗಳನ್ನು ತನ್ನೋಳಗೆ ಇಟ್ಟುಕೊಂಡಿದೆ ಸಾವಿರಾರು ನಕ್ಷತ್ರಗಳು, ಸೂರ್ಯ ನಮ್ಮ ಪ್ಲಾನೆಟ್ ಸಿಸ್ಟಮ್ ಮುಂದೆ ನಾವುಗಳು ಅತಿ ಸಣ್ಣವರು. ಇಂದಿನ ಯುವ ಸಮುದಾಯ ಸಂಶೋಧನೆಗಳ ಮೂಲಕ ಮರುಬಳಕೆ ಶಕ್ತಿ, ಪರಿಸರ ಹಾಗೂ ಸಾಮಗ್ರಿಗಳ ಬಗ್ಗೆ ವಿಜ್ಞಾನ ಲೋಕಕ್ಕೆ ಕೊಡುಗೆ ನೀಡಬೇಕು ಎಂದರು.
ಕೂಡಗಿ ಎನ್‌ಟಿಪಿಸಿ ಪ್ರಧಾನ ವ್ಯವಸ್ಥಾಪಕ ಮಧು ಎಸ್. ಮಾತನಾಡಿ, ಎನ್‌ಟಿಪಿಸಿ ದೇಶದ ಅತೀ ದೊಡ್ಡ ಎಲೆಕ್ಟ್ರಿಕ್ ಎನರ್ಜಿ ಕಂಪನಿಯಾಗಿದ್ದು ಮೈನಿಂಗ್ ಮೂಲಕ ಕಲ್ಲಿದ್ದಿಲು ಸೇರಿದಂತೆ ಸಾಮಗ್ರಿಗಳನ್ನು ಬಳಸಿಕೊಂಡು ರಾತ್ರಿ ಹಗಲು ನಿರಂತರ ವಿದ್ಯುತ್ ಉತ್ಪಾದನೆ ಮಾಡುತ್ತಿದೆ. ಅಮೇರಿಕಾಗಿಂತಲೂ ಭಾರತದ ಜನಸಂಖ್ಯೆ ದೊಡ್ಡದಿದೆ. ಎಲ್ಲರಿಗೂ ವಿದ್ಯುತ್ ಪೂರೈಕೆ ಆಗಬೇಕು. ದೇಶದ ಶೇ.೨೫ ರಷ್ಟು ವಿದ್ಯುತ್ ಪೂರೈಕೆಯನ್ನು ಎನ್‌ಟಿಪಿಸಿ ಮಾಡುತ್ತಿದೆ. ಅದರಲ್ಲೂ ಕೂಡಗಿ ಥರ್ಮಲ್ ಪ್ಲಾಂಟ್ ನಿರಂತರವಾಗಿ ವಿದ್ಯುತ್ ಉತ್ಪಾದನೆ ಮಾಡುತ್ತಿರುವ ಕರ್ನಾಟಕದ ಅತೀ ದೊಡ್ಡ ಪವರ್ ಪ್ಲಾಂಟ್ ಆಗಿದೆ ಎಂದರು.
ಸೋಲಾಪುರದ ಸಿಆರ್‌ಟಿಡಿ ಸಿಂಘದ ಸಂಸ್ಥೆಯ ನಿರ್ದೇಶಕ ಪ್ರೋ.ಎಸ್.ಎಚ್.ಪವಾರ ಮಾತನಾಡಿ, ಎನರ್ಜಿ, ಎನ್ವಿರಾನ್ಮಿಂಟ್ ಹಾಗೂ ಮಟೇರಿಯಲ್ ಸೈನ್ಸ್ ಅತೀ ಮಹತ್ವದ ವಿಷಯ ನೋ ಎನರ್ಜಿ ನೋ ಲೈಫ್ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಎನರ್ಜಿ ಮತ್ತು ಎನ್ವಿರಾನ್ಮಿಂಟ್ ಒಂದು ನಾಣ್ಯದ ಎರಡು ಮುಖಗಳು. ಪರಿಸರ ಸಮತೋಲನ ಕಾಪಾಡಿಕೊಳ್ಳಲು ನಾವು ಸೋಲಾರ ಎನರ್ಜಿ ಬಳಸಿಕೊಳ್ಳುವತ್ತ ಗಮನ ಹರಿಸಬೇಕಿದೆ. ದೇಶದಲ್ಲಿ ಸೋಲಾರ್ ಎನರ್ಜಿ ಬಳಕೆ ಕುರಿತಾಗಿ ಹಲವಾರು ಸಂಸ್ಥೆಗಳು ಸಂಶೋಧನೆ ಹಾಗೂ ಅಭಿವೃದ್ಧಿ ಕಾರ್ಯದಲ್ಲಿ ನಿರತವಾಗಿವೆ. ಯುವಕರು ನಿರಂತರ ಸಂಶೋಧನೆಗಳನ್ನು ಮಾಡಿ ಮರುಬಳಕೆ ಇಂಧನಗಳ(ಶಕ್ತಿ) ಬಗ್ಗೆ ಹೊಸ ಆವಿಸ್ಕಾರಗಳನ್ನು ಮಾಡಬೇಕು. ಪೆಟ್ರೋಲ್ ಹಾಗೂ ಡಿಸೇಲ್ ಮರು ಉತ್ಪಾದಿಸಲಾಗದ ಎನರ್ಜಿ ಆದರೆ ಸೋಲಾರ್ ಎನರ್ಜಿ ನಿರಂತರವಾಗಿ ನಾವು ಬಳಸಿಕೊಂಡರೂ ಅದು ಮುಗಿದು ಹೋಗುವುದಿಲ್ಲ. ಹಸಿರು ಶಕ್ತಿ ಬಳಕೆ ಪರಿಸರ ಸ್ನೇಹಿಯಾಗಿದೆ ಎಂದರು.
ನಾವು ನಿರಂತರವಾಗಿ ನೈಸರ್ಗಿಕವಾಗಿ ದೊರೆಯುವ ಡಿಸೇಲ್, ಪೆಟ್ರೋಲ್ ಎನರ್ಜಿ ಬಳಸಿಕೊಂಡು ಹೋದರೆ ಒಂದು ದಿನ ಆ ಶಕ್ತಿ ಮುಗಿದು ಹೋಗುತ್ತದೆ. ಯುವ ಸಮುದಾಯ ಮರುಬಳಕೆ ಶಕ್ತಿಯ ಪರ್ಯಾಯ ಮಾರ್ಗಗಳನ್ನು ಹಾಗೂ ಮೂಲಗಳನ್ನು ಹುಡುಕಬೇಕಿದೆ. ಮುಗಿದು ಹೋಗುವ ನೈಸರ್ಗಿ ಸಂಪತ್ತನ್ನು ಬಳಕೆ ಮಾಡುವುದರ ಬದಲು ಸೋಲಾರ್ ಶಕ್ತಿಯನ್ನು ಬಳಕೆ ಮಾಡಿಕೊಳ್ಳಬೇಕು. ಕಾರ್ ಸೇರಿದಂತೆ ವಾಹನಗಳಲ್ಲಿ ಹೈಡ್ರೋಜನ್ ಬಳಕೆ ಬಗ್ಗೆ ಯೋಚಿಸಬೇಕು. ಹೈಡ್ರೋಜನ್ ಬಳಕೆ ಮಾಡುವುದು ವೆಚ್ಚದಾಯಕ ಅದಕ್ಕೆ ಪರ್ಯಾಯವಾಗಿ ಸೋಲಾರ ಬಳಸುವುದು ಉತ್ತಮ ಎಂದರು.
ಈ ಸಂದರ್ಭದಲ್ಲಿ ದಕ್ಷಿಣ ಕೊರಿಯಾದ ಚೋನಮ್ ನ್ಯಾಷಿನಲ್ ವಿಶ್ವವಿದ್ಯಾಲಯದ ಡಾ.ಸಾವಂತ್ ಎಸ್.ಮಾಳಿ, ಬಿಎಲ್‌ಡಿಇ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ.ವಿ.ಎಸ್.ಬಗಲಿ, ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ಧೆ, ಉಪ ಪ್ರಾಚಾರ್ಯ ಡಾ.ಅನಿಲ ಭೀ.ನಾಯಕ, ಡಾ.ಗೀರಿಜಾ ನಿಂಬಾಳ, ಡಾ.ಮಹೇಶಕುಮಾರ ಕೆ, ಡಾ.ಪಿ.ಎಸ್.ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

