Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರಕ್ಕೆ ಆಲಮಟ್ಟಿ ಹಿನ್ನೀರಿನಿಂದ ಸಗಟು ನೀರು ಸರಬರಾಜು ಮಾಡುವ ಪಿ.ಎಸ್.ಸಿ ಕೊಳವೆ ಮಾರ್ಗವನ್ನು ಬದಲಾಯಿಸಿ ಎಂ.ಎಸ್ ಪೈಪ್ ಅಳವಡಿಸುವ ಕಾಮಗಾರಿಗೆ ರೂ.50.13 ಕೋಟಿ ಗಳಿಗೆ ಆಡಳಿತಾತ್ಮಕ ಅನುಮೋದನೆ ದೊರಕಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು. ಹಾಗೂ ನಗರಕ್ಕೆ ಅಗತ್ಯವಿರುವ 3ನೇ ಹಂತದ ಯೋಜನೆ ಅನುಷ್ಠಾನಕ್ಕಾಗಿ ಸರ್ವೇ ಕಾರ್ಯಕ್ಕೆ ಹಣ ಭರಣಾ ಮಾಡಲು ಮಹಾನಗರ ಪಾಲಿಕೆಗೆ ಕೋರಲಾಗಿದೆ ಎಂದು ಸರ್ಕಾರ ತಿಳಿಸಿದೆ.ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು, ಬೃಹತ್ತಾಗಿ ಬೆಳೆಯುತ್ತಿರುವ ವಿಜಯಪುರ ಮಹಾನಗರವು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಹಾಗೂ ಭವಿಷ್ಯತ್ತಿನ ದಿನಗಳಲ್ಲಿ ಇಡೀ ಮಹಾನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ತಲೆದೊರುವ ಕುರಿತಂತೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 962ರ ಮೂಲಕ ಸರ್ಕಾರದ ಗಮನಸೆಳೆದಿದ್ದರು.ಕೊಲ್ಹಾರದಿಂದ ವಿಜಯಪುರ ನಗರಕ್ಕೆ ಸಗಟು ನೀರು ಸರಬರಾಜು ಮಾಡುವ ಪಿ.ಎಸ್.ಸಿ ಕೊಳವೆ ಮಾರ್ಗದಲ್ಲಿ ಪದೇ ಪದೇ ಪೈಪ್ ಗಳು ಒಡೆದು ಅನಾವಶ್ಯಕವಾಗಿ ಸಾಕಷ್ಟು ನೀರು ಸೋರಿಕೆ ಆಗುವುದಲ್ಲದೆ, ದುರಸ್ತಿಗಾಗಿ…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಜಿಲ್ಲೆಯ ಇಬ್ಬರು ಸಚಿವರು ಮತ್ತು ಶಾಸಕರು ಪಕ್ಷಾತೀತವಾಗಿ ಸರಕಾರಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಹರೀಶ ಎಂಟಮಾನ ಆಗ್ರಹಿಸಿದರು.ಮಂಗಳವಾರ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ವಿಜಯಪುರ ಜಿಲ್ಲೆಗೆ ಮಂಜೂರಾಗಿರುವ ವೈದ್ಯಕೀಯ ಕಾಲೇಜು ಖಾಸಗೀಕರಣ ಕೈಬಿಟ್ಟು ಸರಕಾರಿ ವೈದ್ಯಕೀಯ ಕಾಲೇಜಾಗಿಯೆ ಪ್ರಾರಂಭಿಸಬೇಕು ಎಂದು ಕಳೆದ 90 ದಿನಗಳಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು ಅವರ ಹೋರಾಟಕ್ಕೆ ಜಿಲ್ಲೆಯ ವಿವಿದ ಸಂಘಟನೆಗಳು ಬೆಂಬಲಿಸಿವೆ. ಹಾಗೆ ವಿವಿಧ ಸಂಘಟನೆಗಳಿಂದ ವಿನೂತನವಾಗಿ ಜಿಲ್ಲೆಯಾದ್ಯಂತ ಹೊರಾಟ ಮಾಡಿದ್ದು ಇದೆಲ್ಲವನ್ನು ಮನಗಂಡಂತ ಜಿಲ್ಲೆಯ ಸಚಿವರು, ಶಾಸಕರು ಹೋರಾಟಕ್ಕೆ ಬೆಂಬಲಿಸಿ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹಾಗೂ ಇನ್ನೋರ್ವ ಸಚಿವರಾದ ಶಿವಾನಂದ ಪಾಟೀಲ ಮತ್ತು ವಿಜಯಪುರ ನಗರ ಶಾಕ ಬಸನಗೌಡ ಪಾಟೀಲ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು ಪಕ್ಷಾತೀತವಾಗಿ ಸರಕಾರಕ್ಕೆ ಒತ್ತಾಯಿಸಿ ಸರಕಾರಿ ವೈದ್ಯಕೀಯ ಕಾಲೇಜು ಆರಂಬಿಸಬೇಕು. ಒಂದು ವೇಳೆ ನಿಷ್ಕಾಳಜಿ ತೋರಿದರೆ ಜಿಲ್ಲೆಯ ಸಚಿವರು ಶಾಸಕರು…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಇಂಡಿ ತಾಲೂಕಿನ ಝಳಕಿ ಠಾಣಾ ವ್ಯಾಪ್ತಿಯಲ್ಲಿ ಬರುವ ಬಳ್ಳೊಳ್ಳಿ ಗ್ರಾಮದಲ್ಲಿ ರವಿವಾರ ತಡರಾತ್ರಿ ಯುವ ಕಳ್ಳರು 8 ಮನೆಗಳಿಗೆ ನುಗ್ಗಿ ಸರಣಿ ಗಳ್ಳತನ ನಡೆಸಿ, ಓಮಿನಿ ವ್ಯಾನ ವಾಹನದಲ್ಲಿ ಪರಾರಿಯಾದ್ದಾರೆ ಎಂದು ಝಳಕಿ ಠಾಣಾಧಿಕಾರಿ ಮಂಜುನಾಥ ತೀರಕನ್ನವರ ತಿಳಿಸಿದರು.ಬಳ್ಳೊಳ್ಳಿ ಗ್ರಾಮದ ಬಡ ಜನರು ಕಬ್ಬಿನ ಕಟಾವಕ್ಕೆ, ಇಟಿಂಗಿ ಭಟ್ಟಿಗಳಿಗೆ ದುಡಿಯಲು ಹೊಗಿದ್ದು ಅಂತಹ ಬಡವರ ಮನೆಗಳಿಗೆ ಸುಮಾರು ರಾತ್ರಿ 1:30 ರಿಂದ 2:30 ರ ಸಮಯದಲ್ಲಿ ಸುಮಾರು 8 ಮನೆಗಳ ಬೀಗ ಒಡೆದಿದ್ದಾರೆ, ಗ್ರಾಮದ ಸಿ. ಸಿ ಕ್ಯಾಮರಾ ಒಂದರಲ್ಲಿ ನಾಲ್ಕು ಜನ ಯುವಕರು, ಕೈಯಲ್ಲಿ ಮಾರಕಾಸ್ತ್ರಗಳೊಂದಿಗೆ ರಸ್ತೆಯಲ್ಲಿ ತಿರುಗಾಡುವ ದೃಶ್ಯ ಕಂಡುಬಂದಿದೆ, ಆದರೆ ಸರಿಯಾದ ಸಾಕ್ಷಿಗಳು ಮತ್ತು ಪುರಾವೇಗಳನ್ನು ಕಲೆ ಹಾಕಲು ಪೋಲಿಸರು ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಬಳ್ಳೊಳ್ಳಿ ಗ್ರಾಮದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಝಳಕಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ಕಾರ್ಯಾಚರಣೆ ನಡೆಸಲಾಗುತ್ತಿದೆ,ಮನೆಯಲ್ಲಿ ಇಲ್ಲದ ಸಮಯ ನೋಡಿ,ದುಡಿಯಲು ಹೊಗಿರುವವರ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: 79ನೇ ಸ್ವತಂತ್ರ್ಯ ದಿನಾಚರಣೆ ಅಂಗವಾಗಿ ಮಾಮ್ಸ ಸ್ಕೆಟ್ ಅಕಾಡೆಮಿ ವತಿಯಿಂದ ಆಲ್ ಇಂಡಿಯಾ ಸ್ಕೇಟಿಂಗ್ ತರಬೇತಿದಾರರ ಸಂಘಟನೆ ಆಯೋಜಿಸಿದ್ದ 79 ನಿಮಿಷಗಳ ನಿರಂತರ ಸ್ಟಾಪ್ ಸ್ಕೇಟಿಂಗ್ ಮ್ಯಾರಾಥಾನಲ್ಲಿ ನಗರದ ಪ್ರತಿಷ್ಠಿತ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಯು. ಎನ್. ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ದಾಖಲೆ ನಿರ್ಮಿಸಿದ್ದಾರೆ.ವಿಜಯಪುರದ ನಗರದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ದೇಶದ 22 ನಾನಾ ನಗರಗಳಲ್ಲಿ 572 ವಿದ್ಯಾರ್ಥಿಗಳು ವಿಶ್ವದಾಖಲೆ ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದರು. ಅದರ ಫಲಿತಾಂಶ ಈಗ ಪ್ರಕಟವಾಗಿದೆ.ಈ ವಿದ್ಯಾರ್ಥಿಗಳಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಸ್ಕೂಲ್ ನ ಮೂರು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ವಿಜಯಪುರದ ಒಟ್ಟು 14 ವಿದ್ಯಾರ್ಥಿಗಳು 79 ನಿಮಿಷಗಳ ಕಾಲ ತಡೆರಹಿತ ಸ್ಕೇಟಿಂಗ್ ಮಾಡಿ ಈ ದಾಖಲೆಯಲ್ಲಿ ಹೆಸರು ದಾಖಲಿಸಿದ್ದಾರೆ. ಏಳನೇ ತರಗತಿಯ ವಿದ್ಯಾರ್ಥಿನಿ ಅಲ್ವಿನಾ ಪಟೇಲ, ಆರನೇ ತರಗತಿಯ ವಿದ್ಯಾರ್ಥಿ ಜೈನ್ ಬಾಗವಾನ, ಎಂಟನೇ ತರಗತಿ ವಿದ್ಯಾರ್ಥಿನಿ ಹೀರಾ ಮೆಹತಾ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇತ್ತೀಚಿನ ದಿನಗಳಲ್ಲಿ ಹುರುಕು ಅಂದರೆ ಕಜ್ಜಿ(ಸ್ಕೇಬೀಸ್) ರೋಗದ ಅವಾಂತರ ಹೆಚ್ಚಾಗಿದ್ದು, ರೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿ.ಎಲ್.ಡಿ.ಇ ಡಿಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ ಎಂ ಪಾಟೀಲ ವೈದ್ಯಕೀಯ ಕಾಲೇಜಿನ ಚರ್ಮ ರೋಗ ವಿಭಾಗದಲ್ಲಿ ಡಿಸೆಂಬರ್ 20 ರಿಂದ ಡಿಸೆಂಬರ್ 24ರ ವರೆಗೆ ಉಚಿತ ತಪಾಸಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಡಾ. ಅರುಣ ಚಂ. ಇನಾಮದಾರ ತಿಳಿಸಿದ್ದಾರೆ.ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ವಸತಿ ನಿಲಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಈ ಚರ್ಮರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಸಾರ್ಕೊಪ್ಟಸ್ ಸ್ಕೇಬೈ ಎಂಬ ಪರಾವಲಂಬಿ ಜೀವಜಂತುವಿನಿಂದ ಬರುವ ಸಾಂಕ್ರಾಮಿಕ ಕಾಯಿಲೆ ಇದಾಗಿದೆ. ರಾತ್ರಿ ವೇಳೆಯಲ್ಲಿ ವಿಪರೀತ ತುರಿಕೆ ಉಂಟಾಗುತ್ತದೆ. ದೇಹದ ಎಲ್ಲ ಸಂದುಗಳಲ್ಲಿ ಈ ಕಾಯಿಲೆ ಕಂಡು ಬರುತ್ತದೆ. ಒಬ್ಬರಿಂದ ಒಬ್ಬರಿಗೆ ಬಹುಬೇಗ ಈ ರೋಗ ಹರಡುತ್ತಿದೆ. ಆಸ್ಪತ್ರೆಯ ಚರ್ಮರೋಗ ವಿಭಾಗದಲ್ಲಿ ಪ್ರತಿದಿನ ಈ ರೋಗದಿಂದ ಬಳಲುತ್ತಿರುವ ವಿದ್ಯಾರ್ಥಿಗಳು ಚಿಕಿತ್ಸೆಗೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಬೆಳಗ್ಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆಯ ಸಂದೇಶ ಬಂದಿದ್ದು, ಪೊಲೀಸರು ತೀವ್ರ ತಪಾಸಣೆ, ಪರಿಶೀಲನೆ ನಡೆಸಿದರು.ಮಂಗಳವಾರ ಬೆಳಗ್ಗೆ 6:58ರ ಸುಮಾರಿಗೆ ಜಿಲ್ಲಾಧಿಕಾರಿ ಕಚೇರಿಗೆ ಇ-ಮೇಲ್ ಮೂಲಕ ಸಂದೇಶ ಸ್ವೀಕೃತವಾಗಿದ್ದು, ಅದರಲ್ಲಿ ಕಾರ್ಯಾಲಯದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಒಡ್ಡಿಯಲಾಗಿದೆ.ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಗಳು, ಸಿಬ್ಬಂದಿ ತಕ್ಷಣವೇ ಶ್ವಾನ ದಳದೊಂದಿಗೆ ಆಗಮಿಸಿ ಪರಿಶೀಲನೆ ನಡೆಸಿದರು.ನಗರ ವಲಯದ ಡಿವೈಎಸ್ಪಿ, ಡಿಎಆರ್ ಡಿವೈಎಸ್ಪಿ, ಸಿಪಿಐ ಹಾಗೂ ಗೋಲಗುಂಬಜ್ ಠಾಣೆಯ ಪಿಎಸ್‌ಐ ಸೇರಿ ಹಿರಿಯ ಅಧಿಕಾರಿಗಳು ಸಹ ಜಿಲ್ಲಾಧಿಕಾರಿಗಳ ಕಾರ್ಯಾಲಯವನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡಿದರು.ಆದ್ದರಿಂದ ಸಿಬ್ಬಂದಿ ಹಾಗೂ ಸಾರ್ವಜನಿಕರು ಯಾವುದೇ ರೀತಿಯ ಭಯ ಪಡುವ ಅವಶ್ಯಕತೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Read More

ಲೇಖನ- ಡಾ ಶಶಿಕಾಂತ ಪಟ್ಟಣರಾಮದುರ್ಗ ಉದಯರಶ್ಮಿ ದಿನಪತ್ರಿಕೆ ಅವರು ಕನ್ನಡ ನಾಡಿನ ಶೈಕ್ಷಣಿಕ ಮತ್ತು ಸಾಹಿತ್ಯಕ ಪ್ರಪಂಚದಲ್ಲಿ ಪ್ರಸಿದ್ಧ ಹೆಸರಾಗಿದ್ದಾರೆ. ಆಡಳಿತ ಶಿಕ್ಷಣ ಅಧ್ಯಾತ್ಮ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ನಾಮಾಂಕಿತರೆನಿಸಿದ ಪ್ರೊ ಎಸ್ ಎಸ್ ಮಾಳವಾಡ ಅವರು ದೇಶ ಕಂಡ ಶ್ರೇಷ್ಠ ಆಡಳಿತಗಾರರು ಮತ್ತು ಅಧ್ಯಾತ್ಮಜೀವಿಗಳು.ಪ್ರೊ.ಮಾಳವಾಡ ಅವರ ಪತ್ನಿ ಶಾಂತಾದೇವಿ ಮಾಳವಾಡ ಅವರು ಸಹಾ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸಿದವರಾಗಿದ್ದು ಈ ದಂಪತಿಗಳು ತಮ್ಮ ಮಹತ್ವದ ಕೊಡುಗೆಗಳಿಗಾಗಿ ಕನ್ನಡ ನಾಡಿನ ಪ್ರಾತಃಸ್ಮರಣೀಯರೆನಿಸಿದ್ದಾರೆ.ಪ್ರಾಧ್ಯಾಪನ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಮಹಾನ್ ಹೆಸರಾದ ಸ. ಸ ಮಾಳವಾಡರು ಧಾರವಾಡ ಜಿಲ್ಲೆಯ ಮೆಣಸಗಿಯಲ್ಲಿ ನವೆಂಬರ್ 14, 1910ರ ವರ್ಷದಲ್ಲಿ ಜನಿಸಿದರು. ತಂದೆ ಸಂಗನ ಬಸಪ್ಪನವರು ಮತ್ತು ತಾಯಿ ಕಾಳಮ್ಮನವರು.ಮಾಳವಾಡರ ಪ್ರಾರಂಭಿಕ ಶಿಕ್ಷಣವು ಗೋವನ ಕೊಪ್ಪ, ಗುಳೇದಗುಡ್ಡ, ಬಾಗಲಕೋಟೆ, ವಿಜಾಪುರಗಳಲ್ಲಿ ನೆರವೇರಿತು. ಉನ್ನತ ವ್ಯಾಸಂಗವನ್ನು ಧಾರವಾಡದಲ್ಲಿ ನಡೆಸಿದ ಅವರು ಎಂ. ಎ ಪದವೀಧರರಾದ ಮೇಲೆ ಕೆಲಕಾಲ ಮಾಧ್ಯಮಿಕ ಕಾಲೇಜು ಶಿಕ್ಷಕರಾಗಿ ಕಾರ್ಯನಿರ್ವಹಿಸಿ ನಂತರದಲ್ಲಿ ಧಾರವಾಡದ ಕರ್ನಾಟಕ…

Read More

ಲೇಖನ- ಜಯಶ್ರೀ ಜೆ.ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ನನಗೇನೂ ದೊರೆಯುತ್ತಿಲ್ಲ ಇತರರಿಗೆ ಸಲೀಸಾಗಿ ಅವರು ಬಯಸಿದ್ದು ಸಿಗುತ್ತಿದೆ. ಎಂದು ಹೆಚ್ಚಿನ ಸಂದರ್ಭಗಳಲ್ಲಿ ನಮಗೆ ಅನ್ನಿಸುವುದು. ಬಯಸಿದ್ದನ್ನು ಪಡೆಯಬೇಕಾದರೆ ಮಾಡಬೇಕಾಗಿರುವುದು ಏನು? ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಹೊರಟರೆ ಅಳವಡಿಸಿಕೊಳ್ಳಲೇಬೇಕಾದ ಕೆಲ ಗುಣಗಳ ಪಾತ್ರ ಎದ್ದು ಕಾಣುತ್ತದೆ. ಅದರಲ್ಲಿ ಅತಿ ಮುಖ್ಯವಾದುದು ಸ್ವಯಂ ಶಿಸ್ತು. ಅಯ್ಯೋ! ಪ್ರತಿಯೊಂದರಲ್ಲೂ ಶಿಸ್ತು ಪಾಲಿಸಬೇಕು ಎನ್ನುವ ಹಿರಿಯರ ಮಾತು ಕೇಳಿ ಕೇಳಿ ಸುಸ್ತಾಗಿದ್ದೇವೆ ಎನ್ನುತ್ತಿರೇನು? ಶಿಸ್ತು ಪಾಲಿಸದಿದ್ದರೆ ಸಣ್ಣ ಪುಟ್ಟದನ್ನು ಪಡೆಯಲು ಸಾಧ್ಯವಿಲ್ಲ. ಮೌರಿನ್ ಡೌಡ್ ಹೇಳಿದ ಪ್ರಕಾರ” ನಿಮಗೆ ಅರ್ಹತೆ ಇರುವುದಕ್ಕಿಂತ ಕಡಿಮೆ ಲೆಕ್ಕಾಚಾರಕ್ಕೆ ನೀವು ಒಪ್ಪಿಕೊಂಡ ತಕ್ಷಣ ನೀವು ಕೇಳಿದ್ದಕ್ಕಿಂತಲೂ ಕಡಿಮೆ ದೊರೆಯುತ್ತದೆ.” ನಾವು ಎಷ್ಟರ ಮಟ್ಟಿಗೆ ಅರ್ಹರು ಎನ್ನುವುದನ್ನು ತಿಳಿದುಕೊಳ್ಳುವುದು ಪ್ರಮುಖವಾಗಿದೆ. ಸ್ವಯಂ ಶಿಸ್ತು ಎಂದರೆ..?ಶಿಸ್ತು ಎಂದರೆ ನಮಗೆ ನಾವು ಕಠಿಣತಮವಾಗಿ ನಡೆದುಕೊಳ್ಳುವುದಲ್ಲ. ಅದೊಂದು ಕ್ರಮಬದ್ಧ ನಡುವಳಿಕೆ. ‘ಸ್ವಯಂ ನಿಯಂತ್ರಣವೇ ಸ್ವಯಂ ಶಿಸ್ತು.’ನಮ್ಮ ದೌರ್ಬಲ್ಯಗಳನ್ನು ಜಯಿಸುವುದೇ ಸ್ವಯಂ ಶಿಸ್ತು.’ ಸ್ವಯಂ ಶಿಸ್ತಿಲ್ಲದ…

Read More

ಸ್ಪೀಕರ್‌ಗೆ ಯು.ಟಿ. ಖಾದರ್ ರಿಗೆ ವಿಧಾನಸಭೆಯ ವಿಪಕ್ಷ ನಾಯಕ ಆರ್ ಅಶೋಕ್ ಪತ್ರ | ಬೆಳಗಾವಿ: ರಾಜ್ಯ ವಿಧಾನಸಭೆಯ ಚಳಿಗಾಲದ ಅಧಿವೇಶನವನ್ನು ಇನ್ನೂ ಒಂದು ವಾರ ವಿಸ್ತರಿಸುವಂತೆ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸೋಮವಾರ ಸ್ಪೀಕರ್ ಯು.ಟಿ. ಖಾದರ್ ಅವರನ್ನು ಕೋರಿದ್ದಾರೆ.ಸ್ಪೀಕರ್ ಅವರಿಗೆ ಬರೆದ ಪತ್ರದಲ್ಲಿ, ರಾಜ್ಯಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಚರ್ಚಿಸಿ ಅವುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.ಡಿಸೆಂಬರ್ 8 ರಂದು ಬೆಳಗಾವಿಯಲ್ಲಿ ಪ್ರಾರಂಭವಾದ ಅಧಿವೇಶನ ಈ ತಿಂಗಳ 19 ರವರೆಗೆ ನಡೆಯಲಿದೆ. “ಡಿಸೆಂಬರ್ 8 ರಿಂದ 19 ರವರೆಗೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನವನ್ನು ನಡೆಸಲು ನಿರ್ಧರಿಸಲಾಗಿತ್ತು ಆದರೆ ಕೆಲವು ಕಾರಣಗಳಿಂದಾಗಿ, ಅಧಿವೇಶನವನ್ನು 2 ದಿನಗಳವರೆಗೆ ಕಡಿಮೆ ಮಾಡಲಾಗಿದೆ” ಎಂದು ಅಶೋಕ್ ಹೇಳಿದರು.ಹಾಲಿ ಶಾಸಕರಾದ ಎಚ್.ವೈ. ಮೇಟಿ ಮತ್ತು ಶಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸಂತಾಪ ಸೂಚಿಸಿದ ನಂತರ ಡಿಸೆಂಬರ್ 8 ಮತ್ತು 15 ರಂದು ಸದನವನ್ನು ಮುಂದೂಡಲಾಗಿದೆ.ರಾಜ್ಯಕ್ಕೆ ಸಂಬಂಧಿಸಿದಂತೆ ಅನೇಕ ಜ್ವಲಂತ ಸಮಸ್ಯೆಗಳಿವೆ,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ವಿಜಯಪುರ, ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ ಬೆಂಗಳೂರು ಹಾಗೂ ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆ, (ಟೆಕ್ಸಾಕ್) ಬೆಂಗಳೂರ ಇವರ ಸಹಯೋಗದಲ್ಲಿ ಎಂ.ಎಸ್. ಎಂ.ಇ. ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದು (ರ್ಯಾಂಪ್) ಯೋಜನೆಯಡಿಯಲ್ಲಿ ಟ್ರೆಡ್ಸ್ ಯೋಜನೆಯ ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮ ಇತ್ತಿಚಿಗೆ ನಗರದ ಹೋಟೆಲ್ ಮಧುವನ ಇಂಟರ್ ನ್ಯಾಷನಲ್, ನಡೆಯಿತು.ಜಿಲ್ಲಾ ಅಗ್ರಣೀಯ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕರಾದ, ಸಿದ್ದಯ್ಯ ಬಿ. ಇವರು ಮಾತನಾಡಿ, ಎಂ.ಎಸ್.ಎಂ.ಇ. ಗಳಿಗೆ ಬ್ಯಾಂಕಿನಿಂದ ದೊರೆಯುವ ಯೋಜನೆಗಳ ಮತ್ತು ಬ್ಯಾಂಕ ಮೂಲಕ ಸಾಲ ಪಡೆಯುವಲ್ಲಿ ಸಮಸ್ಯೆಗಳು ಎದುರಾದಲ್ಲಿ ತಮ್ಮ ಗಮನಕ್ಕೆ ತರುವಂತೆ ತಿಳಿಸಿದರು.ವಿಜಯಪುರದ ಎಸ್.ಎಂ.ಇ. ಶಾಖೆಯ ಭಾರತೀಯ ಸ್ಟೇಟ್ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕರಾದ ಶ್ರೀಶೈಲಯ್ಯ ಹೆಚ್. ಗಲಗಲಿ ಇವರು ಮಾತನಾಡಿ, ಟ್ರೆಡ್ಸ್ ಯೋಜನೆಯಲ್ಲಿ ಎಂ.ಎಸ್.ಎಂ.ಇ ಯವರಿಗೆ ಬರಬೇಕಾದ ಪಾವತಿಗಳನ್ನು ಹಣಕಾಸು ಸಂಸ್ಥೆಗಳ ಮೂಲಕ ತ್ವರಿತವಾಗಿ ನಗದು ಪಡೆಯಲು ಅನುಕೂಲವಾಗುವ ಒಂದು ಡಿಜಿಟಲ್…

Read More