ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ನಗರದ ಹೃದಯ ಭಾಗವಾದ ಹನುಮಾನ್ ಚೌಕದಲ್ಲಿ ‘ಸ್ವಚ್ಛತೆಯೇ ಸೇವಾ 2025’ ಎಂಬ ವಿಶೇಷ ಸ್ವಚ್ಛತಾ ಅಭಿಯಾನಕ್ಕೆ ನಗರಸಭೆ ವತಿಯಿಂದ ಚಾಲನೆ ನೀಡದರು.
ಹನುಮಾನ್ ಚೌಕದಲ್ಲಿ ನಿರಂತರವಾಗಿ ಕಸ ಬೀಳುತ್ತಿದ್ದ. ಈ ಹಿನ್ನೆಲೆಯಲ್ಲಿ ನಗರಸಭೆಯ ಸಿಬ್ಬಂದಿ ಶ್ರಮಪಟ್ಟು ಸ್ಥಳವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದರು. ನಂತರ, ಆ ಸ್ಥಳದಲ್ಲಿ ವಿವಿಧ ಬಣ್ಣದ ಆಕರ್ಷಕ ರಂಗೋಲಿಗಳನ್ನು ಅಳವಡಿಸಿ, ಸ್ವಚ್ಛತೆಯ ಪ್ರತೀಕವಾಗಿ ಸಾರ್ವಜನಿಕರ ಗಮನ ಸೆಳೆಯುವ ಪ್ರಯತ್ನ ಮಾಡಿ ಈ ಸಾಂಸ್ಕೃತಿಕ ಪರಿವರ್ತನೆಯ ಮೂಲಕ ಕಸ ಎಸೆಯುವ ಸ್ಥಳವನ್ನು ಜಾಗೃತಿಯ ಕೇಂದ್ರವಾಗಿ ರೂಪಿಸಿ, ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸದರು
ಸಾರ್ವಜನಿಕರಲ್ಲಿ ವಿನಂತಿ:
ನಗರಸಭೆ ಅಧಿಕಾರಿಗಳು “ನಮ್ಮ ನಗರ ನಮ್ಮ ಹೊಣೆ” ಎಂಬ ಘೋಷಣೆಯೊಂದಿಗೆ ಸಾರ್ವಜನಿಕರಿಗೆ ವಿನಮ್ರ ವಿನಂತಿ ಸಲ್ಲಿಸಿದರು. ಎಲ್ಲೆಂದರಲ್ಲಿ ಕಸ ಎಸೆಯದೆ, ನಗರಸಭೆಯ ಟಾಟಾ ವಾಹನಗಳಿಗೆ ಕಸ ನೀಡುವ ಮೂಲಕ ನಗರವನ್ನು ಸ್ವಚ್ಛವಾಗಿಡುವಲ್ಲಿ ಸಹಕಾರ ನೀಡಬೇಕೆಂದು ಅವರು ಮನವಿ ಮಾಡಿದರು.
ಕಂದಾಯ ಇಲಾಖೆ ಅಧಿಕಾರಿ ಯಲ್ಲಪ್ಪ ಬಿದರಿ, ಹಿರಿಯ ಆರೋಗ್ಯ ನಿರ್ದೇಶಕ ಸಚಿನ ಹಿರೇಮಠ,ವಿನಾಯಕ, ಕಿರಿಯ ಆರೋಗ್ಯ ನಿರ್ದೇಶಕ ಮಂಜುನಾಥ ಹಡಪದ, ಶ್ರೀಕಾಂತ ಘಾಟಗೆ,ರಘು ಕಡಕೋಳ, ಪೌರಾಯುಕ್ತರು. ಇದ್ದರು

