Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಚಡಚಣ: ಅನ್ನ ನೀಡುವ ಭೂತಾಯಿಗೆ ಹಾಗೂ ಹೊಲದಲ್ಲಿ ಸಮೃದ್ಧವಾಗಿ ಬೆಳೆದು ನಿಂತ ಬೆಳೆಗೆ ಮನೆಮಂದಿಯಲ್ಲ ಸೇರಿ ಸಂಭ್ರಮದಿಂದ ಪೂಜೆಸಲ್ಲಿಸುವ ವಾಡಿಕೆ ಹಿಂದಿನಿಂದ ಬಂದಿದೆ. ಉತ್ತರ ಕರ್ನಾಟಕದ ರೈತರ ಪಾಲಿಗೆ ಸಂಭ್ರಮದ ಹಬ್ಬ. ಎಳ್ಳ ಅಮವಾಸ್ಯೆಯ ನಿಮಿತ್ತ ಚಡಚಣ ತಾಲೂಕಿನಾದ್ಯಂತ ಹಾಗೂ ರೇವತಗಾಂವ ಗ್ರಾಮದ ಕೆಂಬತ್ತಿ ವಸ್ತಿಯಲ್ಲಿನ ರೈತ ಮಹಿಳೆಯರು ಶುಕ್ರವಾರದಂದು ಭೂತಾಯಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸಿ, ಮುತ್ತ್ಯೈದೆಯರಿಗೆ ಉಡಿ ತುಂಬುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.ಅತಿವೃಷ್ಟಿಯಿಂದ ಮುಂಗಾರು ಬಹುತೇಕ ಹಾಳಾಗಿದ್ದು ಹಿಂಗಾರಿ ಚನ್ನಾಗಿ ಬೆಳದು ನಿಂತಿರೋ ಜೋಳ, ಕಡಲೆ ಸೇರಿದಂತೆ ಹಿಂಗಾರು ಬೆಳೆಯಲ್ಲಿ ಐದು ಕಲ್ಲಿನ ಪಾಂಡವರನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ‘ಸಜ್ಜಿ ರೊಟ್ಟಿ ಚವಳಿಕಾಯಿ ಚಾಂಗಬಲೋ’ ಎಂದು ಹೇಳುತ್ತ ಹೊಲದ ತುಂಬ ಭೂತಾಯಿಗೆ ಚರಗ ಚೆಲ್ಲಿದರು.ಚರಗ ಚೆಲ್ಲಿದ ಅನ್ನ ಆಹಾರ ತಿನ್ನಲು ಬರುವ ಪಕ್ಷಿಗಳು ಹೊಲದಲ್ಲಿರುವ ಕೀಟಗಳನ್ನು ತಿಂದು ರೈತರಿಗೆ ಸಹಾಯಮಾಡುತ್ತವೆ. ಚಡಚಣ ತಾಲೂಕಿನ ಪ್ರತಿ ಮಹಿಳೆಯರು ತಮ್ಮ ಮನೆಗಳಲ್ಲಿ ತಯಾರಿಸಿದ ಸಜ್ಜೆ ಕಡಬು, ಹೋಳಿಗೆ, ಹಸಿ…
ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಳ್ಳ ಅಮಾವಾಸ್ಯೆಗೆ ವಿಶೇಷ ಮಹತ್ವವಿದೆ.ಗ್ರಾಮೀಣ ಸೊಗಡಿನ ಹಬ್ಬದಂದು ಅನ್ನದಾತರು ಬನ್ನಿ ಗಿಡದ ಬುಡದಲ್ಲಿ ಪಂಚ ಪಾಂಡವರನ್ನು ಪ್ರತಿಷ್ಠಿಾಪಿಸಿಪೂಜೆ ಸಲ್ಲಿಸುತ್ತಾರೆ. ಭೂಮಿ ತಾಯಿಯ ಋಣ ತೀರಿಸುವ ಸಲುವಾಗಿ ಜೋಳದ ಕನಿಕೆಯಿಂದ ಕೊಂಪೆ ಕಟ್ಟಿ, ಸೀರೆ ಉಡಿಸಿ ಉಡಿ ತುಂಬಿ , ಪೂಜೆ ಸಲ್ಲಿಸಿ, ಕರ್ಪೂರ ಬೆಳಗಿ ಕಾಯಿ ಹೊಡೆದು ಭೂತಾಯಿಯ ಮಡಿಲ್ಲಲ್ಲಿ ಚರಗ ಚೆಲ್ಲಿ ಕೃತಜ್ಞತೆಯಿಂದ ಸ್ಮರಿಸುತ್ತಾರೆ.ಈ ಶುಭ ಸಂದರ್ಭದಲ್ಲಿ ಬಂಧು ಬಾಂಧವರು, ಆತ್ಮೀಯ ಸಹೋದ್ಯೋಗಿ ಮಿತ್ರರು ಒಂದಾಗಿ ಸೇರಿ ಹಬ್ಬದ ಸವಿ ರುಚಿ ಎಳ್ಳು ಹಚ್ಚಿದ ಸಜ್ಜಿ ರೋಟಿ, ಸಜ್ಜಿ ಕಡುಬು, ಪುಂಡಿ ಪಲ್ಲೆ, ಇಂಡಿ ಪಲ್ಯ , ಭರ್ತ, ಭಜ್ಜಿ, ಅಪ್ಪಳ, ಸೆಂಡಗೆ, ಅಂಬಲಿ, ಹೋಳಿಗೆ, ಅನ್ನ ಸಾರು, ಮೃಷ್ಟಾನ್ನ ಭೋಜನ ಸವಿದು ಸಂಭ್ರಮಿಸುತ್ತಾರೆ.ಈ ಪವಿತ್ರ ದಿನ ನಾಡಿನ ಸಮಸ್ತ ರೈತರಿಗೆ, ಕೃಷಿ ಕಾರ್ಮಿಕರಿಗೆ, ಸುಖ ಸಂತೋಷ ನೆಮ್ಮದಿ ಸಮೃದ್ಧಿ, ಸಂಪತ್ತು, ಕೊಟ್ಟು ಕರುಣಿಸಲಿ ಎನ್ನುತ್ತಾರೆ ರೈತಾಪಿ ವರ್ಗ.
ಬಿ.ಎಲ್.ಡಿ.ಡೀಮ್ಡ್ ವಿವಿ 13ನೇ ಘಟಿಕೋತ್ಸವದಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗದ ವೈದ್ಯಕೀಯ ಮೌಲ್ಯಮಾಪನ ಮತ್ತು ಶ್ರೇಯಾಂಕ ಮಂಡಳಿಯ ಅಧ್ಯಕ್ಷ ಡಾ. ಎಂ.ಕೆ.ರಮೇಶ ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದೇಶದಲ್ಲಿ ವೈದ್ಯಕೀಯ ಸೇವೆ ಹೊಸ ಮಜಲನ್ನು ತಲುಪಿದ್ದು, ರೋಗಗಳಿಗೆ ಗುಣಮಟ್ಟದ ಸೇವೆ ತಲುಪಿಸಲು ಅತ್ಯಾಧುನಿಕ ತಂತ್ರಜ್ಞಾನ ಸದ್ಬಳಕೆಯಾಗುತ್ತಿದೆ ಎಂದು ನವದೆಹಲಿ ರಾಷ್ಟ್ರೀಯ ವೈದ್ಯಕೀಯ ಆಯೋಗದ ವೈದ್ಯಕೀಯ ಮೌಲ್ಯಮಾಪನ ಮತ್ತು ಶ್ರೇಯಾಂಕ ಮಂಡಳಿಯ ಅಧ್ಯಕ್ಷ ಡಾ. ಎಂ. ಕೆ. ರಮೇಶ ಹೇಳಿದ್ದಾರೆ.ಶುಕ್ರವಾರ ನಗರದ ಪ್ರತಿಷ್ಠಿತ ಬಿ. ಎಲ್. ಡಿ. ಡೀಮ್ಡ್ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದರು.ಒಂದು ಕಾಲದಲ್ಲಿ ಬರಕ್ಕೆ ಹೆಸರಾಗಿದ್ದ ವಿಜಯಪುರ ಜಿಲ್ಲೆಯಲ್ಲಿ ಇಂದು ಮಲೆನಾಡಿನ ಅನುಭವವಾಗುತ್ತಿದೆ. ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಆವರಣ ಹಚ್ಚು ಹಸಿರಿನಿಂದ ಕೂಡಿದ್ದು, ವಿದ್ಯಾಭ್ಯಾಸಕ್ಕೆ ಹೇಳಿ ಮಾಡಿಸಿದಂತಿದೆ. ವೈದ್ಯಕೀಯ ಪದವಿ ಪಡೆದ ವಿದ್ಯಾರ್ಥಿಗಳಿಗೆ ಈಗ ವೃತ್ತಿ ಜೀವನದ ಹೊಸದೊಂದು ಅಧ್ಯಾಯ ಪ್ರಾರಂಭವಾಗಿದೆ. ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಇನ್ನೂ ಹೆಚ್ಚಾಗಿ ಅಧ್ಯಯನ ನಿರತರಾಗಬೇಕು. ವೃತ್ತಿಯಲ್ಲಿ ತೊಡಗಿಸಿಕೊಳ್ಳುವ ಯುವವೈದ್ಯರು…
(ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಕುರಿತ ಲೇಖನ ಮಾಲಿಕೆ) ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಪ್ರತಿ ಸಮಸ್ಯೆಗೂ ಒಂದು ಪರಿಹಾರವಿದೆ ಎಂಬ ವಿಶ್ವಾಸ ಮನುಷ್ಯನಲ್ಲಿ ಮೂಡಲು ಕಾರಣ ಆತನ ಜ್ಞಾನದ ಬುನಾದಿ ಮತ್ತು ಆತ ತನ್ನ ಕೆಲಸದಲ್ಲಿ ಇಟ್ಟಿರುವ ನಂಬಿಕೆ.ಮನುಷ್ಯನಿಗೆ ಆತ್ಮವಿಶ್ವಾಸ ಬರುವುದು ಆತ ಸಮಸ್ಯೆ ಗಳನ್ನು ನೋಡುವ ಮತ್ತು ಅವುಗಳನ್ನು ಎದುರಿಸುವ ರೀತಿಯಲ್ಲಿ. ಸಮಸ್ಯೆಯನ್ನು ಕಂಟಕ ಎಂದು ನೋಡಿದಾಗ ಮನುಷ್ಯ ಬೇಸರಕ್ಕೊಳ್ಳಗಾಗುತ್ತಾನೆ ಬದಲಾಗಿ ಸಮಸ್ಯೆಯನ್ನು ಸವಾಲಾಗಿ ಭಾವಿಸಿ ಅದರ ಪರಿಹಾರಗಳನ್ನು ಯೋಚಿಸಿದಾಗ ಸಮಸ್ಯೆಗಳು ಸುಲಭವಾಗಿ ಪರಿಹರಿಸಲ್ಪಡುತ್ತವೆ. ಮತ್ತೆ ಕೆಲ ಜನರು ಪರಿಹಾರದಲ್ಲೂ ಸಮಸ್ಯೆಗಳನ್ನು ಹುಡುಕುವರು.ನಮ್ಮಲ್ಲಿರುವ ಜ್ಞಾನ ಮತ್ತು ನಾವು ವಸ್ತು ವಿಷಯಗಳಲ್ಲಿ ಹೊಂದಿರುವ ವಿಶ್ವಾಸ ಮತ್ತು ಅವುಗಳನ್ನು ಈಡೇರಿಸುವ ನಿಟ್ಟಿನಲ್ಲಿ ನಾವು ಕೈಗೊಳ್ಳುವ ಚಟುವಟಿಕೆಗಳು ನಮಗೆ ಸವಾಲನ್ನು ಪರಿಹರಿಸಲು ಶಕ್ತಿಯನ್ನು ನೀಡುತ್ತವೆ.ಆದರೆ ಸಂತೋಷದ ವಿಷಯವೆಂದರೆ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವ ಮತ್ತು ಅವುಗಳನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಯಶಸ್ವಿಯಾಗುತ್ತಿದ್ದಾರೆ. ಪ್ರತಿಯೊಂದು ಸಮಸ್ಯೆಗೂ ಪರಿಹಾರ…
ಬಂಥನಾಳ ಮೋರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹೇಶ ಪೋತದಾರ ಶಿಕ್ಷಕರಿಗೆ ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಂಥನಾಳದ ಮೋರಾರ್ಜಿ ದೇಸಾಯಿ ವಸತಿ ಶಾಲೆಗೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ ಅವರು ಬುಧವಾರ ಭೇಟಿ ನೀಡಿ, ವಸತಿ ಶಾಲೆಯ ನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು.ಬಳಿಕ ಶಿಕ್ಷಕರೊಂದಿಗೆ ಸಭೆ ನಡೆಸಿದ ಅವರು, ಪಾಠ ಭೋಧನೆ ಪೂರ್ವದಲ್ಲಿ ಸಂಬಂಧಿಸಿದ ವಿಷಯದ ಬಗ್ಗೆ ಪಾಠ ಯೋಜನೆಯನ್ನು ಸಿದ್ದಪಡಿಸಿಕೊಂಡು ವಿದ್ಯಾರ್ಥಿಗಳಿಗೆ ಮನ-ಮುಟ್ಟುವಂತೆ ಪಾಠ ಮಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ ಸಾಧಿಸಬೇಕು ಎಂದು ಸಲಹೆ ನೀಡಿದರು. ವಿಶೇಷವಾಗಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆಯ ೨೯ ಅಂಶಗಳನ್ನು ಪರಿಪಾಲನೆ ಮಾಡುವುದರೊಂದಿಗೆ ನೀಲನಕ್ಷೆ ತಯಾರಿಸಿಕೊಂಡು ಹಾಗೂ ಮಾದರಿ ಪ್ರಶ್ನೆ ಪತ್ರಿಕೆ ನೀಡಿ ವಿಷೇಷ ತರಗತಿಗಳನ್ನು ಏರ್ಪಡಿಸಿ, ಗುಣಾತ್ಮಕ ಹಾಗೂ ಪರಿಮಣಾತ್ಮಕ ಭೋಧನೆ ಮಾಡಿ ಮೂರು ತಿಂಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅಣಿಗೊಳಿಸಬೇಕೆಂದು ಮಾರ್ಗದರ್ಶನ ಮಾಡಿದರು. ವಸತಿ ಶಾಲೆಯ…
ಪೂರೈಕೆ ಸರಪಳಿ ಹಾಗೂ ಸಾರಿಗೆಯಲ್ಲಿನ ಶ್ರೇಷ್ಠತೆಗಾಗಿ ಸಪ್ಲೆ ಚೈನ್ ಆೃಂಡ್ ಲಾಜಿಸ್ಟಿಕ್ಸ್ ಎಕ್ಸಲೆನ್ಸ್ ಅವಾರ್ಡ್ಸ್ (ಸ್ಕೇಲ್)-2025 ಉದಯರಶ್ಮಿ ದಿನಪತ್ರಿಕೆ ಹುಬ್ಬಳ್ಳಿ: ಸಾರಿಗೆ ಕ್ಷೇತ್ರದ ದಿಗ್ಗಜ ವಿಆರ್‌ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್‌ಗೆ ದೇಶದ ಪ್ರತಿಷ್ಠಿತ ಕಾನ್ಫಿಡರೇಶನ್ ಆ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಕೊಡಮಾಡುವ ಸಪ್ಲೈ ಚೈನ್ ಆೃಂಡ್ ಲಾಜಿಸ್ಟಿಕ್ಸ್ ಎಕ್ಸಲೆನ್ಸ್ ಅವಾರ್ಡ್ಸ್ (ಸ್ಕೇಲ್) – 2025 ಪ್ರಶಸ್ತಿ ಲಭ್ಯವಾಗಿದೆ. ತನ್ಮೂಲಕ ಈಗಾಗಲೇ ಹತ್ತಾರು ಗೌರವ, ಸನ್ಮಾನಗಳಿಗೆ ಪಾತ್ರವಾಗಿರುವ ಸಂಸ್ಥೆಯ ಸಾಧನೆಯ ಕಿರೀಟಕ್ಕೆ ವಿಶೇಷ ಗರಿ ಮೂಡಿದಂತಾಗಿದೆ.ಸಿಐಐ ಇನ್‌ಸ್ಟಿಟ್ಯೂಟ್ ಆ್ ಲಾಜಿಸ್ಟಿಕ್ಸ್ ಸ್ಕೇಲ್ ಅವಾರ್ಡ್ಸ್ ಟೀಂ ಹೈದ್ರಾಬಾದ್‌ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಮಾರಂಭದಲ್ಲಿ 12ನೇ ಆವೃತ್ತಿಯ ಪ್ರಶಸ್ತಿಯನ್ನು ವಿಆರ್‌ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್‌ಗೆ ನೀಡಿ ಗೌರವಿಸಲಾಯಿತು.ಪೂರೈಕೆ ಸರಪಳಿ ಹಾಗೂ ಸಾರಿಗೆಯಲ್ಲಿನ ಶ್ರೇಷ್ಠತೆಗಾಗಿ ಈ ಪ್ರಶಸ್ತಿ ನೀಡಲಾಗಿದೆ. ದೇಶದ ಜನರಿಗೆ ಸಂಸ್ಥೆಯು ನಿರಂತರವಾಗಿ ನೀಡುತ್ತಿರುವ ಗಮನಾರ್ಹ ಸೇವೆಯನ್ನು ಪರಿಗಣಿಸಿ ತೀರ್ಪುಗಾರರ ಸಮಿತಿಯು ವಿಆರ್‌ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್ ಅನ್ನು ಆಯ್ಕೆ ಮಾಡಿದೆ ಎಂದು ಸಿಐಐ ತಿಳಿಸಿದೆ.ಪ್ರತಿಷ್ಠಿತ ಈ ಗೌರವ ಬಂದಿರುವುದು ವಿಆರ್‌ಎಲ್…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಕೆ.ಕೆ.ಆರ್.ಡಿ.ಬಿ ಅಂತೆ ನಮಗೂ ಒಂದು ಬೋರ್ಡ್ ಮಾಡಿಕೊಡುವ ಅಗತ್ಯವಿದೆ. ಬೆಳಗಾವಿಯಲ್ಲಿ ನಡೆದ ಈ ಅಧಿವೇಶನ ಸಾರ್ಥಕವಾಗುತ್ತದೆ ಎಂದು ದೇವರಹಿಪ್ಪರಗಿ ಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ ಕುದರಿ ಸಾಲವಾಡಗಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು.ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬುಧವಾರ`ಮಾತನಾಡಿದ ಅವರು, ಈ ಭಾಗದ ಜಲ್ವಂತ ಸಮಸ್ಯೆಗಳ ಬಗ್ಗೆ ಎಳೆ ಎಳೆಯಾಗಿ ವಿವರಿಸಿ ಸರ್ಕಾರದ ಗಮನ ಸೆಳೆದರು.ಉತ್ತರ ಕರ್ನಾಟಕದಲ್ಲೇ ವಿಜಯಪುರ ಜಿಲ್ಲೆ ಅತಿ ಹಿಂದುಳಿದ ಜಿಲ್ಲೆಯಾಗಿದೆ. ಆದ್ದರಿಂದ ಜಿಲ್ಲೆ ಇನ್ನೂ ಸಾಕಷ್ಟು ಅಭಿವೃದ್ಧಿ ಆಗಬೇಕಿದೆ. ನಮ್ಮ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ವ್ಯವಸ್ಥೆ ಇಲ್ಲ. ಜಿಲ್ಲೆಯಿಂದ ಬೆಂಗಳೂರಿಗೆ ಪ್ರಯಾಣಿಸಲು ಸಾರ್ವಜನಿಕರಿಗೆ ಸರಿಯಾದ ರೈಲಿನ ವ್ಯವಸ್ಥೆ ಕೂಡ ಇಲ್ಲ. ಪ್ರಯಾಣಿಕರು ಬೆಂಗಳೂರಿಗೆ ತಲುಪಲು 9 ರಿಂದ 10 ಗಂಟೆಯವರೆಗೆ ಪ್ರಯಾಣಿಸಬೇಕಾಗುತ್ತದೆ. ಆದ್ದರಿಂದ ಸರಕಾರ ಆಲಮಟ್ಟಿಯಿಂದ ಚಿತ್ರದುರ್ಗ ಮಾರ್ಗವಾಗಿ ರೈಲು ಮಾರ್ಗ ಮಾಡಬೇಕೆಂಬುದು ಬಹು ಮುಖ್ಯ ಬೇಡಿಕೆಯಾಗಿದೆ ಎಂದರು.ಈ ಸಲ ವಿಜಯಪುರ ಜಿಲ್ಲೆಯಲ್ಲಿ ಅತಿ ಹೆಚ್ಚಿನ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಗುರುವಾರ ಉಳ್ಳಾಗಡ್ಡಿ ದರ ಕುಸಿತಕ್ಕೆ ಬೇಸತ್ತ ರೈತರು ಮಾರುಕಟ್ಟೆ ಮುಂಭಾಗದಲ್ಲಿ ಹಾಯ್ದುಹೋಗುವ ಮನಗೂಳಿ-ಬಿಜ್ಜಳ ರಾಜ್ಯ ಹೆದ್ದಾರಿ ಮೇಲೆ ರೈತರು ಉಳ್ಳಾಗಡ್ಡಿ ಸುರಿದು ಕೆಲ ಹೊತ್ತು ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು.ಪ್ರತಿಭಟನೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ, ಪಿಐ ಗುರುಶಾಂತ ದಾಶ್ಯಾಳ ಭೇಟಿ ನೀಡಿ ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತದೆ.ಸ್ಥಳಕ್ಕೆ ಎಪಿಎಂಸಿ ಅಧಿಕಾರಿಗಳು, ತಹಸೀಲ್ದಾರರು ಬರುತ್ತಾರೆ. ತಮಗೆ ನ್ಯಾಯಯುತ ಬೆಲೆ ಸಿಗುವಂತೆ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಮನವೊಲಿಸಿ ರಸ್ತೆ ತಡೆ ಹಿಂಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾದರು. ನಂತರ ರೈತರು ಎಪಿಎಂಸಿ ಆವರಣದಲ್ಲಿ ತಮ್ಮ ಪ್ರತಿಭಟನೆ ಮುಂದುವರಿಸಿದರು. ಆಗ ಸ್ಥಳಕ್ಕೆ ಗ್ರೇಡ್ -2 ತಹಸೀಲ್ದಾರ ಎಸ್.ಎಚ್. ಅರಕೇರಿ ಭೇಟಿ ನೀಡಿದರು. ಇವರ ಮುಂದೆ ರೈತರು ಬೆಂಗಳೂರಿನಲ್ಲಿ ₹2500-₹3000 ರೂಪಾಯಿ ಸಿಗುವ ಉಳ್ಳಾಗಡ್ಡಿ ಮಾಲಿಗೆ ಬಸವನಬಾಗೇವಾಡಿ ಮಾರುಕಟ್ಟೆಯಲ್ಲಿ ಕೇವಲ 500ಕ್ಕೆ ಕೇಳುತ್ತಿದ್ದಾರೆ. ರೈತರಿಗೆ ಈರುಳ್ಳಿ ಪಾಕೀಟ್ ಮಾಡುವ 500 ಕೂಲಿಯೂ ಸಿಗುತ್ತಿಲ್ಲ. ವಿಜಯಪುರದಲ್ಲಿ ಹೆಚ್ಚಿನ…
ರೇವತಗಾಂವದ ಸಿಂಹಗಢ ಮಹಾರಾಜರ ದೇವಾಲಯ | ಜೀರ್ಣೋದ್ಧಾರಕ್ಕೆ ಗ್ರಾಮಸ್ಥರ ಆಗ್ರಹ ಉದಯರಶ್ಮಿ ದಿನಪತ್ರಿಕೆ ವರದಿ: ಸಿದ್ರಾಮ ಮಾಳಿರೇವತಗಾಂವ: ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ರೇವತಗಾಂವ ಗ್ರಾಮವು ಮಹಾರಾಷ್ಟ್ರದ ಗಡಿಭಾಗದ ದೇಗುಲವು, ಸೂಕ್ಷ್ಮ ವಾಸ್ತುಶಿಲ್ಪ ಶೈಲಿಯ ದೇವಾಲಯವು ಪ್ರವಾಸಿಗರ ಗಮನವನ್ನು ಸೆಳೆಯುತ್ತದೆ. ಗ್ರಾಮದಲ್ಲಿರುವ ಶ್ರೀ ಸದ್ಗುರು ಸಿಂಹಗಢ ಮಹಾರಾಜರ ದೇವಾಲಯವು ಅತ್ಯಂತ ಪ್ರಸಿದ್ಧಿ ಪಡೆದ ಈ ದೇವಾಲಯವು ಹಲವಾರು ವರ್ಷಗಳ ಇತಿಹಾಸ ಹೊಂದಿದೆ.ಈ ಸಿಂಹಗಢ ಮಹಾರಾಜರ ದೇವಾಲಯವು ದ್ರಾವಿಡ ಶೈಲಿಯ ಸಭಾಮಂಟಪ , ಪ್ರದಕ್ಷಣಾಪಥ ಕುರುಹುಗಳನ್ನು ಇರುವದು ನೋಡಿದರೆ, ಈ ದೇವಾಲಯಗಳು ಹಂಪಿ ಮಾದರಿಯಲ್ಲಿ ನಿರ್ಮಿಸಲಾಗಿದೆ ಎಂಬುದು ತಿಳಿದುಬರುತ್ತದೆ. ಈ ದೇವಾಲಯದಲ್ಲಿ ಬೃಹತ್ ಗಾತ್ರದ ಮಹಾದೇವನ ಲಿಂಗವೂ ಇದೆ. ಸುಮಾರು ೬೪ ವರ್ಷಗಳ ಹಿಂದೆ ಅಂದರೆ, ೧೯೫೯ ರಲ್ಲಿ ಮಹಾದೇವನ ದೇವಾಲಯವೆಂದು ಕರೆಯುತ್ತಾರೆ.ಸುಮಾರು ೬೪ ವರ್ಷಗಳ ಹಿಂದೆ ರೇವತಗಾಂವ ಗ್ರಾಮಕ್ಕೆ ಆಗಮಿಸಿದ ಸಿಂಹಗಢ ಮಹಾರಾಜರು ಮೂಲತಃ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಸಮೀಪದಲ್ಲಿರುವ ಸಿಂಹಗಢ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದರು. ವಾಹನ ಚಾಲಕರಾಗಿ ಕಾರ್ಯ…
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ಉದಯರಶ್ಮಿ ದಿನಪತ್ರಿಕೆ ಬೆಳಗಾವಿ: ಮುಂದಿನ ಶೈಕ್ಷಣಿಕ ವರ್ಷದೊಳಗೆ 11 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು ಎಂದು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಶಾಸಕ ಹರೀಶ ಪೂಂಜ ಅವರ ಪ್ರಶ್ನೆಗೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಉತ್ತರಿಸಿದರು.ರಾಜ್ಯದಲ್ಲಿ 41,088 ಸರ್ಕಾರಿ ಪ್ರಾಥಮಿಕ ಶಾಲೆಗಳಿವೆ. 1,78,935 ಹುದ್ದೆಗಳು ಮಂಜೂರಾಗಿದ್ದು, ಈ ಪೈಕಿ 1,33,345 ಹುದ್ದೆಗಳು ಭರ್ತಿಯಾಗಿದ್ದು, 45,590 ಹುದ್ದೆಗಳು ಖಾಲಿ ಇರುತ್ತವೆ. ಖಾಲಿ ಇರುವ ಹುದ್ದೆಗಳನ್ನು ಹಂತ ಹಂತವಾಗಿ ನೇಮಕಾತಿ ಮಾಡಲು ಈಗಾಗಲೇ ಕ್ರಮ ವಹಿಸಲಾಗಿದೆ.ರಾಜ್ಯದಲ್ಲಿ 5,024 ಸರ್ಕಾರಿ ಪ್ರೌಢ ಶಾಲೆಗಳಿದ್ದು, ಈ ಪ್ರೌಢಶಾಲೆಗಳಿಗೆ 44,144 ಹುದ್ದೆಗಳು ಮಂಜೂರಾಗಿರುತ್ತವೆ. ಈ ಪೈಕಿ 32,010 ಹುದ್ದೆಗಳು ಭರ್ತಿಯಾಗಿದ್ದು 12,134 ಹುದ್ದೆಗಳು ಖಾಲಿ ಇರುತ್ತವೆ. ಪ್ರಸ್ತುತ ಖಾಲಿ ಇರುವ ಹುದ್ದೆಗಳಿಗೆ ಎದುರಾಗಿ 2025-2026ನೇ ಶೈಕ್ಷಣಿಕ ಸಾಲಿಗೆ ಪ್ರಾಥಮಿಕ ಶಾಲೆಗಳಲ್ಲಿ 40,000 ಮತ್ತು ಪ್ರೌಢಶಾಲೆಗಳಲ್ಲಿ 11,000 ಒಟ್ಟಾರೆಯಾಗಿ 51,000 ಅತಿಥಿ ಶಿಕ್ಷಕರನ್ನು…
