ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೧೨ನೇ ಶತಮಾನದಲ್ಲಿ ಶರಣರ ವಚನಗಳು ಸತ್ಯ, ಶುದ್ಧ, ಕಾಯಕದಿಂದ ಕೂಡಿದ್ದು ಮಾನವೀಯ ಮೌಲ್ಯಗಳನ್ನು ಶರಣರು ಸಮಾನತೆ ಕಾಯಕ, ದಾಸೋಹ ತಮ್ಮ ಜೀವನೂದ್ದಕ್ಕೂ ಸಾರ್ಥಕತೆಯನ್ನು ಪಡೆದವರು. ನಮಗೆಲ್ಲ ಜೀವನಕ್ಕೆ ಅಮೃತ ನೀಡಿದವರು ಎಂದು ಉಪನ್ಯಾಸಕ ಡಾ. ಎಂ.ಎಸ್. ಮಾಗಣಗೇರಿ ಹೇಳಿದರು.
ನಗರದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ವೀರಶೈವ ಲಿಂಗಾಯತ ಸಭಾಭವನದಲ್ಲಿ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಶರಣ ಕಿನ್ನರಿ ಬೊಮ್ಮಯ್ಯನವರ ಅನುಭಾವ ಕುರಿತು ಮಾತನಾಡಿದ ಅವರು ಆಂದ್ರಪ್ರದೇಶದ ಕಿನ್ನರಿ ಬೊಮ್ಮಯ್ಯನವರು ಅಕ್ಕಸಾಲಿಗ ವೃತ್ತಿ ಮಾಡುತ್ತ ಪ್ರವೃತ್ತಿಗಾಗಿ ಕಿನ್ನರಿ ವಾದನವನ್ನು ನುಡಿಸುತ್ತ ಕಲ್ಯಾಣಕ್ಕೆ ಬಂದು ಮನತಣಿಸುವಂತೆ ಕಿನ್ನರಿ ನುಡಿಸುತ್ತ ಪಡೆದ ಹಣವನ್ನು ಶರಣರ ದಾಸೋಹಕ್ಕಾಗಿ ಬಳಸುತ್ತ ನಿಸ್ವಾರ್ಥ ಬದುಕು ಹಾಕಿದವರು. ವೈರಾಗ್ಯನಿಧಿ ಅಕ್ಕಮಹಾದೇವಿ ಕುರಿತು ೧೮ ವೈರಾಗ್ಯ ವಚನಗಳನ್ನು ರಚಿಸಿದ್ದಾರೆ. ಅವೆಲ್ಲವೂ ಅನುಭಾವದ ನುಡಿದರು. ಸಮಾನತೆ, ಅರಿವು, ಜ್ಞಾನ, ಶರಣರ ಸ್ತುತಿ ಅವುಗಳಲ್ಲಿ ಅಡಕವಾಗಿವೆ ಎಂದರು.
ಮಹಾಸಭೆಯ ಕಾರ್ಯದರ್ಶಿ ದೊಡ್ಡಣ್ಣ ಬಜಂತ್ರಿ ಮಾತನಾಡುತ್ತ ಅರಿವಿನ ಮಾರ್ಗ ವಚನಗಳ ಮೂಲಕ ತಂದುಕೊಟ್ಟ ಶರಣರು ಅರಿವಿನ ಸಂಕೇತ ಪರಿವರ್ತನೆಗೆ ಬದಾವಣೆಗೆ ಸಾಧ್ಯ ಜೀವನದಲ್ಲಿ ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಮಹಾಸಭೆಯ ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿ ಕಿನ್ನರಿ ಬೊಮ್ಮಯ್ಯ ವಾದನವನ್ನು ಪ್ರತಿದಿನ ತೃಪರಾಂತಕ ದೇವಾಲಯದಲ್ಲಿ ನುಡಿಸುತ್ತ ತನ್ಮಯನಾಗಿದ್ದಾಗ ದೇವರು ಕೂಡ ತಲೆದೂಗುತ್ತಿದ್ದ ಎಂಬುದು ತಿಳಿದುಬರುತ್ತದೆ. ಶರಣರ ನಡೆ, ನುಡಿ, ಅಚಾರ, ವಿಚಾರ ನಮ್ಮನ್ನು ಸನ್ಮಾರ್ಗದಡೆಗೆ ಒಯ್ಯುತ್ತ ವೆ ಎಂದರು.
ಮಹಾಸಭೆಯ ಪ್ರದಾನ ಕಾರ್ಯದರ್ಶಿ ಬಿ.ಟಿ. ಈಶ್ವರಗೊಂಡ ಸ್ವಾಗತಿಸಿದರು. ಸಾಹಿತಿ ಸಂಗಮೇಶ ಬದಾಮಿ ನಿರೂಪಿಸಿದರು. ನಿರ್ದೇಶಕ ಡಾ. ಸಂಗಮೇಶ ಮೇತ್ರಿ ವಂದಿಸಿದರು.
ಡಾ. ವಿ.ಡಿ. ಐಹೊಳ್ಳಿ, ಮ.ಗು. ಯಾದವಾಡ, ಸಹದೇವ ನಾಡಗೌಡರ, ಬಸವರಾಜ ಒಂಟಗೋಡಿ, ಸುಭಾಸ ಬೇಟಗೇರಿ, ಮಹಾದೇವ ಹಾಲಳ್ಳಿ, ಎಸ್.ಎನ್. ಶಿವಣಗಿ, ಸುಭಾಸ ಯಾದವಾಡ, ಶರಣೆ ಅಕ್ಕಮಹಾದೇವಿ ಬುರ್ಲಿ, ಸವಿತಾ ಝಳಕಿ, ಜಂಬುನಾಥ ಕಂಚ್ಯಾಣಿ, ಕಾಶೀನಾಥ ಅಣೆಪ್ಪನವರ, ವಿಠ್ಠಲ ತೇಲಿ, ಕೆ.ಎಫ್. ಅಂಕಲಗಿ ದಂಪತಿಗಳು, ಜಗದೀಶ ಮೋಟಗಿ ಉಪಸ್ಥಿತರಿದ್ದರು. ಶರಣರು, ಶರಣೆಯರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

