ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ಮಹಾರಾಷ್ಟ್ರದ ತುಳಜಾಪುರ ನಗರದ ಅಂಬಾಭವಾನಿ ದೇವಸ್ಥಾನದಲ್ಲಿ ದೀಪವನ್ನು ಹೊತ್ತಿಸಿಕೊಂಡು, ಅದನ್ನು ಅಫಜಲಪುರ ತಾಲೂಕಿನ ಗಡಿ ಗ್ರಾಮವಾದ ಹೊಸೂರ ಗ್ರಾಮದಲ್ಲಿ ಅಂಬಿಕಾದೇವಿಯ ಮಂದಿರ ಮುಂದೆ ಜ್ಯೋತಿ ಹಚ್ಚುವುದು ವಾಡಿಕೆ. ನವರಾತ್ರಿಯ ಘಟಸ್ಥಾಪನೆಯ ಮುನ್ನಾ ದಿನ ತಾಲೂಕಿನ ಹೊಸೂರ ಗ್ರಾಮದ ಅಂಬಾಭವಾನಿ ಯುವಕ ಮಂಡಳಿಯ ಯುವಕರು ತುಳಜಾಪುರಕ್ಕೆ ಹೋಗಿ, ತುಳಜಾಭವಾನಿ ಮಂದಿರದಲ್ಲಿ ದೀಪ ಹೊತ್ತಿಸಿಕೊಂಡು ಅದು ಆರದಂತೆ ನೂರಾರು ಕಿ.ಮೀ ಕಾಲ್ನಡಿಗೆ ಮೂಲಕ ತರಲಾಯಿತು. ಈ ದೀಪ ಸೋಮವಾರ ಮಧ್ಯಾಹ್ನ ಗ್ರಾಮಕ್ಕೆ ತರಲಾಯಿತು. ಈ ವೇಳೆ ಗ್ರಾಮಸ್ಥರು ಅದಕ್ಕೆ ಪೂಜೆ ಸಲ್ಲಿಸಿ ಜ್ಯೋತಿಗೆ ಸ್ವಾಗತ ಮಾಡಿಕೊಂಡರು. ನಂತರ ಅಂಬಾಭವಾನಿ ದೇವಾಸ್ಥಾನದಲ್ಲಿ ಪ್ರತಿಷ್ಠಾಪಿಸಿದ ಅಂಬಾಭವಾನಿಯ ಮುಂದೆ ಜ್ಯೋತಿ ಹಚ್ಚಲಾಯಿತು.
ಪ್ರತಿವರ್ಷದಂತೆ ಈ ವರ್ಷವು ಕೂಡ 15 ದಿನಗಳ ಕಾಲ ಶ್ರೀ ಕಡಿಕೋಳ ಮಡಿವಾಳೇಶ್ವರ ಪುರಾಣ ಕಾರ್ಯಕ್ರಮ ಶ್ರೀ.ಮ.ನಿ.ಪ್ರ ವೇಧಾಂತಚಾರ್ಯ ಮುರುಗೇಂದ್ರ ಮಹಾಸ್ವಾಮಿಗಳು ವಿರಕ್ತಮಠ ಅಥರ್ಗಾ ಇವರಿಂದ ಇಂದಿನಿಂದ ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಪುರಾಣ ಜರಗುವುದು.

