ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ತಾಲ್ಲೂಕಿನ ಆಲಗೂರ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಕಲಕೇರಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡುವುದರ ಮೂಲಕ ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದರು.
ಸಿಂದಗಿ ತಾಲ್ಲೂಕು ಕ್ರೀಡಾಂಗಣದಲ್ಲಿ ಭಾನುವಾರ ಜರುಗಿದ ಕಲಕೇರಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಬಾಲಕರು ಕಬಡ್ಡಿಯಲ್ಲಿ ‘ಪ್ರಥಮ’ ಸ್ಥಾನ ಖೋ ಖೋ, ಥ್ರೋಬಾಲ್, ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದರು. ವೈಯಕ್ತಿಕ ವಿಭಾಗದಲ್ಲಿ ರಹಿಮತ್ ಅಲಿ ಕಲಕೇರಿ ೧೦೦ ಮೀಟರ್ ಓಟ ಹಾಗೂ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ, ಉದ್ದಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದನು. ಕಾರ್ತಿಕ ಮಾಕೊಂಡ ೪೦೦ ಮೀ ಓಟದಲ್ಲಿ ಪ್ರಥಮ, ಕಾರ್ತಿಕ ಇಮ್ಲಾಪುರ ೬೦೦ ಮೀ ಓಟದಲ್ಲಿ ಪ್ರಥಮ, ತಿಪ್ಪಣ್ಣ ತಮ್ಮಣ್ಣಗೋಳ ೬೦೦ ಮೀ ಓಟದಲ್ಲಿ ದ್ವಿತೀಯ, ಮಲ್ಲಿಕಾರ್ಜುನ ಅಮ್ಮಾಗೋಳ ೨೦೦ ಮೀ ಓಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದರು.
ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಮುಖ್ಯಶಿಕ್ಷಕ ಜಿ.ಎಮ್.ತಳವಾರ, ದೈಹಿಕ ಶಿಕ್ಷಕ ವಿ.ಎನ್.ಮದ್ದರಕಿ, ಸಹಶಿಕ್ಷಕರಾದ ಅಬ್ಬಾಸಲಿ ಪಾಂಡು, ಎಚ್.ಬಿ.ಪೂಜಾರಿ, ಎಸ್.ಬಿ.ಹಗಟಗಿ, ಆರ್.ಜಿ.ಸುಸಲಾದಿ, ಎನ್.ಜಿ.ಬಿರಾದಾರ, ಎನ್.ಟಿ.ಅತ್ತಾರ, ಈರಣ್ಣ.ಹೂಗಾರ, ಪ್ರದೀಪ ಟಿ,ಬಿ.ಸುಧಾಕರ, ಐ.ಬಿ.ಮೋರಟಗಿ ಸೇರಿದಂತೆ ಗ್ರಾಮಸ್ಥರು, ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.

