Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಆ.23 ರಂದು ವಿಜಯಪುರ ಜಿಲ್ಲೆಯಲ್ಲಿ ನಡೆಯಲಿರುವ ಸಂಗೊಳ್ಳಿ ರಾಯಣ್ಣ ಉತ್ಸವ ಕಾರ್ಯಕ್ರಮದ ಯಶಸ್ವಿ ಆಯೋಜನೆಗಾಗಿ ತಿಕೋಟಾ ತಾಲೂಕು ಮಟ್ಟದ ಪೂರ್ವಭಾವಿ ಸಭೆ ಜರುಗಿತು.ಸಭೆಯಲ್ಲಿ ಭಾಗವಹಿಸಿದ ಮುಖಂಡರು ಉತ್ಸವದ ರೂಪುರೇಷೆಗಳು, ಕಾರ್ಯಕ್ರಮದ ಸಿದ್ಧತೆಗಳು, ಸಾರ್ವಜನಿಕರ ಭಾಗವಹಿಸುವಿಕೆ, ಶಿಸ್ತು ಹಾಗೂ ವ್ಯವಸ್ಥೆಗಳ ಕುರಿತು ಚರ್ಚಿಸಿ ಅಗತ್ಯ ಸಲಹೆಗಳನ್ನು ನೀಡಲಾಯಿತು. ಉತ್ಸವವನ್ನು ಅದ್ದೂರಿಯಾಗಿ ಹಾಗೂ ಯಶಸ್ವಿಯಾಗಿ ನಡೆಸಲು ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವಂತೆ ಕರೆ ನೀಡಲಾಯಿತು. ರಾಯಣ್ಣರ ಶೌರ್ಯ, ಸಾಹಸ ಮತ್ತು ದೇಶಭಕ್ತಿಯನ್ನು ಸ್ಮರಿಸುವ ಈ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ಹುಲಿಜಂತಿಯ ಮಾಳಿಂಗರಾಯ ಮಹಾರಾಜರು, ಅಮೋಘಸಿದ್ದೇಶ್ವರ ದೇವಸ್ಥಾನದ ಧರ್ಮದರ್ಶಿ ಅಪ್ಪು ಒಡೆಯರ್, ಮಲ್ಲಪ್ಪ ಪೂಜಾರಿ ಗದಗಿ ಪೂಜಾರಿ, ವಿಜಯಪುರ ಜಿಲ್ಲೆಯ ರಾಯಣ್ಣ ಉತ್ಸವ ಸಮಿತಿ ಅಧ್ಯಕ್ಷರಾದ ಪ್ರಕಾಶ್ ಜಾಲಗೇರಿ, ತಿಕೋಟ ತಾಲೂಕಿನ ಹಾಲುಮತ ಸಮಾಜದ ಹಿರಿಯರಾದ ರಾಮಣ್ಣ ಮೆಂಡೆಗಾರ ವಕೀಲರು, ಮಾಜಿ ಜಿಪಂ ಸದಸ್ಯರಾದ ಸಾಬು ಮಾಶ್ಯಾಳ, ಮಾಯಪ್ಪ ಪೂಜಾರಿ, ಲೇಪು…

Read More

ಮನೆ ಮನೆಗಳಲ್ಲಿ ನಾಗಪ್ಪನಿಗೆ ಹಾಲೆರೆಯುವ ಮೂಲಕ ವಿಶೇಷ ಪೂಜೆ | ಪರಸ್ಪರ ಸಿಹಿತಿನಿಸು ಹಂಚಿಕೊಂಡು ಹಬ್ಬದ ಸಂಭ್ರಮ ಉದಯರಶ್ಮಿ ದಿನಪತ್ರಿಕೆ ಬಾಗಲಕೋಟೆ, (ಜಮಖಂಡಿ): ನಾಗರ ಪಂಚಮಿ ಹಬ್ಬವನ್ನು ಮಹಿಳೆಯರು ಸಂಭ್ರಮ, ಸಡಗರ ಹಾಗೂ ಭಕ್ತಿಭಾವದಿಂದ ಆಚರಿಸಿದರು. ಬೆಳಗ್ಗೆಯಿಂದಲೇ ಮನೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಮಹಿಳೆಯರು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.ಮನೆಯ ನಾಗಪ್ಪನಿಗೆ ಹಾಲೆರೆಯುವುದು, ಅರಿಶಿನ-ಕುಂಕುಮ, ಹೂವುಗಳಿಂದ ಅಲಂಕರಿಸಿ ಪೂಜೆ ಸಲ್ಲಿಸುವುದು ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಬಳಿಕ ನಾಗದೇವರಿಗೆ ಎಳ್ಳುಂಡೆ, ವಿವಿಧ ಬಗೆಯ ಸಿಹಿತಿನಿಸುಗಳು ಹಾಗೂ ನೈವೇದ್ಯ ಅರ್ಪಿಸಿ ಕುಟುಂಬದ ಸುಖ, ಶಾಂತಿ, ಆರೋಗ್ಯ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಲಾಯಿತು.ನಾಗರ ಪಂಚಮಿಯ ವಿಶೇಷತೆಯಾದ ಎಳ್ಳುಂಡೆ, ಕರ್ಜೂರ, ಉಂಡೆ, ಸಿಹಿ ತಿಂಡಿಗಳು ಸೇರಿದಂತೆ ಸಾಂಪ್ರದಾಯಿಕ ತಿನಿಸುಗಳನ್ನು ಮಹಿಳೆಯರು ಮನೆಯಲ್ಲಿ ತಯಾರಿಸಿ, ನೆರೆಹೊರೆಯವರು ಹಾಗೂ ಬಂಧು-ಬಳಗದವರೊಂದಿಗೆ ಹಂಚಿಕೊಂಡರು. ಮನೆ ಮನೆಗೆ ತೆರಳಿ ಪರಸ್ಪರ ಸಿಹಿತಿನಿಸುಗಳನ್ನು ಕೊಟ್ಟು-ತೆಗೆದುಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಆಚರಣೆಗಳ ಜೊತೆಗೆ…

Read More

ಸಿಂದಗಿಯ ಶ್ರೀ ಸಮರ್ಥ ವಿದ್ಯಾವಿಕಾಸ ವಿವಿದೊದ್ದೇಶಗಳ ಸಂಸ್ಥೆಯ ಪ್ರೇರಣಾ ಶಿಶುನಿಕೇತನ, ವಿದ್ಯಾನಿಕೇತನ ಪ್ರಾಥಮಿಕ ಶಾಲೆ, ಪ್ರೇರಣಾ ಪ್ರಾಥಮಿಕ ಶಾಲೆ, ಪ್ರೇರಣಾ ಪಬ್ಲಿಕ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಸಹಯೋಗದಲ್ಲಿ ೮೦ನೆಯ ಸ್ವಾತಂತ್ರ‍್ಯೋತ್ಸವ ದಿನಾಚರಣೆ ಆಚರಣೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸ್ವಾತಂತ್ರ‍್ಯ ಹೋರಾಟಗಾರರ ತ್ಯಾಗ, ಬಲಿದಾನಗಳ ಫಲವಾಗಿ ಭಾರತ ಸ್ವಾತಂತ್ರ‍್ಯ ಹೊಂದಿದ್ದು, ಸ್ವಾತಂತ್ರ‍್ಯೋತ್ಸವವು ದೇಶದ ರಾಜಕೀಯ, ಆರ್ಥಿಕ, ಶೈಕ್ಷಣಿಕ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಗತಿಯನ್ನು ಸ್ಮರಿಸುವ ಮಹತ್ವದ ದಿನವಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಪಿ.ಡಿ.ಕುಲಕರ್ಣಿ ಹೇಳಿದರು.ಸಿಂದಗಿ ಪಟ್ಟಣದ ಶ್ರೀ ಸಮರ್ಥ ವಿದ್ಯಾವಿಕಾಸ ವಿವಿದೊದ್ದೇಶಗಳ ಸಂಸ್ಥೆಯ ಪ್ರೇರಣಾ ಶಿಶುನಿಕೇತನ, ವಿದ್ಯಾನಿಕೇತನ ಪ್ರಾಥಮಿಕ ಶಾಲೆ, ಪ್ರೇರಣಾ ಪ್ರಾಥಮಿಕ ಶಾಲೆ, ಪ್ರೇರಣಾ ಪಬ್ಲಿಕ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಸಹಯೋಗದಲ್ಲಿ ಹಮ್ಮಿಕೊಂಡ ೮೦ನೆಯ ಸ್ವಾತಂತ್ರ‍್ಯೋತ್ಸವ ದಿನಾಚರಣೆಯ ದ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ದೇಶಭಕ್ತಿ, ತ್ಯಾಗ ಮತ್ತು ಬ್ರಿಟಿಷರ ವಿರುದ್ಧದ ಹೋರಾಟ ಯುವಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ. ಮಕ್ಕಳು…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಗರದಲ್ಲಿ ನೂತನ ರಸ್ತೆಗಳನ್ನು ನಿರ್ಮಿಸುವುದರ ಜೊತೆಗೆ ವಿದ್ಯುತ್ ದೀಪಗಳಿಂದ ನಗರವನ್ನು ಅಲಂಕರಿಸುವ ಮಹದಾಸೆ ಹೊಂದಿದ್ದೇನೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಸಿಂದಗಿ ನಗರದ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಲೋಕೋಪಯೋಗಿ ಇಲಾಖೆಯ ೨೦೨೫-೨೬ನೇ ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ರೂ.೨ಕೋಟಿ ವೆಚ್ಚದಲ್ಲಿ ಕೈಗೊಳ್ಳಲಿರುವ ಬೀದಿ ದೀಪ ಅಳವಡಿಕೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಸಿಂದಗಿ ನಗರ ವೇಗವಾಗಿ ಬೆಳೆಯುತ್ತಿದ್ದು, ರಸ್ತೆ, ಬೀದಿ ದೀಪ ಹಾಗೂ ಉದ್ಯಾನವನಗಳ ಅಭಿವೃದ್ಧಿಗೆ ವಿಶೇಷ ಅನುದಾನ ಮೀಸಲಿಡಲಾಗಿದೆ. ಈಗಾಗಲೇ ೩೪ ರಸ್ತೆಗಳ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದ್ದು, ೮ ರಸ್ತೆಗಳ ಕಾಮಗಾರಿ ಆರಂಭಗೊಂಡಿದೆ. ಉಳಿದ ರಸ್ತೆಗಳಿಗೂ ಶೀಘ್ರದಲ್ಲೇ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಹೇಳಿದರು. ನಗರದಲ್ಲಿ ೨೭ ಕಿ.ಮೀ. ಉದ್ದದ ಸಿಸಿ ರಸ್ತೆ ನಿರ್ಮಾಣಕ್ಕೆ ರೂ.೨೦ ಕೋಟಿ ಅನುದಾನದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಮಂಜೂರಾತಿ ಪಡೆದು ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.ಸಿಂದಗಿ ನಗರದ ಒಟ್ಟು ಆರು ಪ್ರಮುಖ ರಸ್ತೆಗಳಿಗೆ ನೂತನ ವಿದ್ಯುತ್ ಕಂಬಗಳ ಮಂಜೂರಾತಿ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕೊಳಚೆ ಪ್ರದೇಶಾಭಿವೃದ್ಧಿ ವತಿಯಿಂದ ಈಗಾಗಲೇ ೩೨೧ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ. ಅದರಲ್ಲಿ ೧೦೪ ಫಲಾನುಭವಿಗಳಿಗೆ ಮನೆ ಕಟ್ಟಿಕೊಡಲಾಗಿದೆ. ಇನ್ನು ಅಲ್ಲಿ ಹಲವಾರು ವರ್ಷಗಳಿಂದ ವಾಸಿಸುತ್ತಿರುವವರನ್ನು ಸರಕಾರದಿಂದ ಸಮೀಕ್ಷೆ ಮಾಡಿಸಿ ಉಳಿದವರಿಗೆ ೫ಎಕರೆ ೮ಗುಂಟೆಯಲ್ಲಿ ಮುಂಬರುವ ದಿನಮಾನಗಳಲ್ಲಿ ನಿವೇಶನ ಹಂಚಿಕೆ ಮಾಡುವ ಕಾರ್ಯ ಮಾಡುತ್ತೇನೆ ಎಂದು ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು.ಸಿಂದಗಿ ನಗರದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಮುಖ್ಯಮಂತ್ರಿಗಳ ನಗರ ನಿವೇಶನ ಯೋಜನೆ ಅಡಿಯಲ್ಲಿ ಸಿಂದಗಿ ನಗರಸಭೆ ವತಿಯಿಂದ ಅರ್ಹ ಫಲಾನುಭವಿಗಳಿಗೆ ಹಮ್ಮಿಕೊಂಡ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು, ರಾಜೀವ್ ಗಾಂಧಿ ವಸತಿ ನಿಗಮಕ್ಕೆ ೨೨೧ ಫಲಾನುಭವಿಗಳ ಪಟ್ಟಿಯನ್ನು ಕಳುಹಿಸಲಾಗಿತ್ತು. ೧೮೩ ಅರ್ಹ ಫಲಾನುಭವಿಗಳ ಪಟ್ಟಿ ಆಯ್ಕೆಯಾಗಿ ಬಂದಿದೆ. ಸು.೪೦ ತಾಂತ್ರಿಕ ದೋಷದಿಂದ ಹಕ್ಕು ಪತ್ರಗಳಾಗಿಲ್ಲ. ಹಾಗಾಗಿ ಇಂದು ೧೮೩ ಹಕ್ಕು ಪತ್ರಗಳು ವಿತರಣೆಯಾಗಿ ಬಡ ಕುಟುಂಬಗಳಿಗೆ ತಲುಪುತ್ತಿರುವುದು ಅತ್ಯಂತ ತೃಪ್ತಿ ತಂದಿದೆ. ಸಿಂದಗಿ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಿದ ಮೇಲೆ ಸೂರು ಇಲ್ಲದವರಿಗೆ ಸೂರುವದಗಿಸುವ ಯೋಜನೆ…

Read More

ಸಮೃದ್ಧಿ ಸಹಕಾರ ಸಂಘದಲ್ಲಿ ಅಧ್ಯಕ್ಷೆ ಸಂಗೀತಾ ನಾಯಿಕ್ ರಿಂದ ಧ್ವಜಾರೋಹಣ ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪಟ್ಟಣದ ಶಾಲಾ, ಕಾಲೇಜು, ಸರ್ಕಾರಿ ಕಚೇರಿ, ಬ್ಯಾಂಕ್, ಸಹಕಾರಿ ಸಂಘಗಳು ಸೇರಿದಂತೆ ತಾಲ್ಲೂಕಿನ ವಿವಿಧೆಡೆಯಲ್ಲಿ ಧ್ವಜಾರೋಹಣ ನೆರವೇರಿಸಿ ೮೦ನೇ ಸ್ವಾತಂತ್ರೋತ್ಸವ ದಿನ ಆಚರಿಸಲಾಯಿತು.ಸಮೃದ್ಧಿ ಸಹಕಾರ ಸಂಘಧ್ವಜಾರೋಹಣವನ್ನು ಅಧ್ಯಕ್ಷೆ ಸಂಗೀತಾ ನಾಯಿಕ್ ಹಾಗೂ ಉಪಾಧ್ಯಕ್ಷ ರಿಯಾಜ್ ತಾಂಬೋಳಿ ನೆರವೇರಿಸಿದರು.ಗಣ್ಯರಾದ ಡಾ.ಆರ್.ಆರ್.ನಾಯಿಕ್, ನಿರ್ದೇಶಕರಾದ ಪಿ.ಜಿ.ಹಿರೇಮಠ, ಬಿ.ಎನ್.ಬಬಲೇಶ್ವರ, ವೆಂಕಟೇಶ ಕುಲಕರ್ಣಿ, ಎ.ಕೆ.ಹಿರೇಮಠ, ಕೆ.ಎಸ್.ಕೋರಿ, ಗುರು ಕರಭಂಟನಾಳ, ಮಂಜುನಾಥ ಒಂಟೆತ್ತಿನ, ಉಮೇಶ ಹಳಪಾಣಿ, ಸುಭಾಸ್ ಜಾಧವ, ಅಯ್ಯನಗೌಡ ಬಿರಾದಾರ(ಹರನಾಳ) ಹಾಗೂ ಸಿಬ್ಬಂದಿ ಇದ್ದರು.ತಾಲ್ಲೂಕು ನಿವೃತ್ತ ನೌಕರರ ಸಂಘ೮೦ನೇ ಸ್ವಾತಂತ್ರ‍್ಯ ಧ್ವಜಾರೋಹಣವನ್ನು ಸಂಘದ ಅಧ್ಯಕ್ಷ ಸಿ.ಕೆ.ಕುದರಿ ನೆರವೇರಿಸಿದರು.ಎಂ.ಆರ್.ಶಿರಸಂಗಿಮಠ, ರತ್ನಾಕರ, ಕೆ.ಸಿ.ಮಠ, ಎಸ್.ವಿ.ಆಲಾಳಮಠ, ಪಿ.ಎಸ್.ಮಿಂಚನಾಳ, ಶಾಂತಪ್ಪ ಪಡನೂರ, ಎಂ.ಎಂ.ಕಠಾರಿ, ಪಿ.ಜಿ.ಹಿರೇಮಠ, ಬಿ.ಎನ್.ಬಬಲೇಶ್ವರ, ಜಿ.ಎ.ಪಾಟೀಲ, ಎಸ್.ಜಿ.ತಾವರಖೇಡ, ಪಿ.ಎಚ್.ಪಟೇಲ, ಮಡ್ಡೇಪ್ಪಗೋಳ. ಕೆ.ಎನ್.ಮಣ್ಣೂರ, ಬಿ.ಜಿ.ಪಾಟೀಲ ಸಹಿತ ಇತರರು ಇದ್ದರು.ಯಾಳವಾರ ಶ್ರೀ ಸೋಮೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜಸಂಸ್ಥೆಯ ಅಧ್ಯಕ್ಷ ರಾಜುಗೌಡ ನಾಡಗೌಡ್ರ ಧ್ವಜಾರೋಹಣ ನೆರವೇರಿಸಿದರು.ಸಂಸ್ಥೆಯ ಬಿ.ಆರ್.ಪಾಟೀಲ, ಎಸ್.ಎಸ್.ಥಬ್ಬಣ್ಣವರ, ಆರ್.ಎಸ್.ಪಾಟೀಲ, ಎ.ಡಿ.ನಾಗರಾಳ,…

Read More

ವಿಜಯಪುರ ಜಿಲ್ಲೆಯಲ್ಲಿ ಸಚಿವ ಎಂ.ಬಿ.ಪಾಟೀಲ ಅವರಿಂದ ಬರ ಪರಿಸ್ಥಿತಿ ಹಾಗೂ ಬೆಳೆ ವೀಕ್ಷಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತೀವ್ರ ಮಳೆ ಅಭಾವದಿಂದಾಗಿ ಜಿಲ್ಲೆಯಲ್ಲಿ ಎದುರಾಗಿರುವ ಬರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಬಿ.ಪಾಟೀಲ ಅವರು, ಭಾನುವಾರ ಜಿಲ್ಲೆಯಾದ್ಯಂತ ರೈತರ ಜಮೀನುಗಳಿಗೆ ಖುದ್ದು ಭೇಟಿ ನೀಡಿ ಹಾನಿಗೀಡಾದ ಬೆಳೆಗಳನ್ನು ಪರಿಶೀಲಿಸಿ, ಸಂಕಷ್ಟದಲ್ಲಿರುವ ರೈತರ ಪರ ನಮ್ಮ ಸರ್ಕಾರವಿದೆ ಎಂದು ಭರವಸೆ ನೀಡಿದರು.ಇಂಡಿ ತಾಲೂಕಿನ ಹೊರ್ತಿ ಗ್ರಾಮದ ರೈತ ಮಾಳಪ್ಪ ಸೊನಕನಹಳ್ಳಿ ಅವರ ೬ ಎಕರೆ ಜಮೀನಿನಲ್ಲಿ ಒಣಗುತ್ತಿರುವ ತೊಗರಿ ಬೆಳೆಯನ್ನು ಸಚಿವರು ವೀಕ್ಷಿಸಿದರು.ಈ ವೇಳೆ ರೈತರ ಸಮಸ್ಯೆಯನ್ನು ಸಹಾನುಭೂತಿಯಿಂದ ಆಲಿಸಿದ ಸಚಿವರು, ನಮ್ಮ ಸರ್ಕಾರವು ಸಂಕಷ್ಟದಲ್ಲಿರುವ ರೈತರ ಪರವಾಗಿ ನಿಲ್ಲುತ್ತದೆ. ರೈತರ ಕಷ್ಟ-ನಷ್ಟಗಳನ್ನು ತಿಳಿದುಕೊಳ್ಳಲು ಜಿಲ್ಲೆಯಾದ್ಯಂತ ಪ್ರವಾಸ ಕೈಗೊಳ್ಳಲಾಗಿದ್ದು, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ವೈಜ್ಞಾನಿಕ ವರದಿ ಸಿದ್ಧಪಡಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಈ ಸಮಗ್ರ ವರದಿಯನ್ನು…

Read More

ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಂದ ನೀರಿನ ಮಾದರಿ ಸಂಗ್ರಹ ಉದಯರಶ್ಮಿ ದಿನಪತ್ರಿಕೆ ಎಚ್ ಡಿ ಕೋಟೆ: ತಾಲೂಕಿನ ಜೀವನಾಡಿ ತಾರಕಾ ಮತ್ತು ಕಪಿಲಾ ನದಿಗೆ ಕಲುಷಿತ ನೀರು ಸೇರ್ಪಡೆ ಆರೋಪ ಸಂಬಂಧ ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸೋಮವಾರ ತಾಲೂಕಿಗೆ ಭೇಟಿ ನೀಡಿ ನೀರಿನ ಮಾದರಿ ಸಂಗ್ರಹಿಸಿದರು.ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮೈಸೂರು ಗ್ರಾಮಾಂತರ ಪರಿಸರ ಇಲಾಖಾಧಿಕಾರಿ ಜಯಲಕ್ಷ್ಮಿ ನೇತೃತ್ವದ ತಂಡ ತಾಲೂಕಿಗೆ ಆಗಮಿಸಿ ಕಲುಷಿತ ನೀರು ಸೇರ್ಪಡೆ ಆಗುವ ಸ್ಥಳಗಳಿಗೆ ಭೇಟಿ ನೀಡಿ ನೀರಿನ ಮಾದರಿ ಸಂಗ್ರಹಿಸಿತ್ತು. ಪಟ್ಟಣದ ಒಂದನೇ ವಾರ್ಡ್, ಮುಸ್ಲಿಂ ಬ್ಲಾಕ್ ಮತ್ತು ರಾಮಲಿಂಗೇಶ್ವರ ದೇವಸ್ಥಾನ ಹಳೆ ಸೇತುವೆ ಕಾಲುವೆಯಲ್ಲಿ ನೀರಿನ ಮಾದರಿ ಸಂಗ್ರಹಿಸಿತ್ತು. ಬಳಿಕ ತಾರಕ ನದಿಯ ಬಲದಂಡೆ ನಾಲೆಗೆ ಸೇರುತ್ತಿರುವ ಹೈರಿಗೆ ಗ್ರಾಮ ಮತ್ತು ತಾರಕ ಮತ್ತು ಕಬಿನಿ ನೀರು ಸೇರುವ ಹೆಚ್ ಮಟಕೆರೆ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಸಮೀಪ ನಾಲೆಯಲ್ಲಿ ನೀರು ಸಂಗ್ರಹಿಸಿತ್ತುಜಯಲಕ್ಷ್ಮಿ ಮಾತನಾಡಿ, ಹೆಚ್ ಡಿ ಕೋಟೆ ಪಟ್ಟಣದಲ್ಲಿ…

Read More

ನಿಡಗುಂದಿ ಓಂ ಶಾಂತಿ ಶಾಖೆಯ ಬ್ರಹ್ಮಕುಮಾರಿ ಬಿ.ಕೆ.ರೇಣುಕಾ ಅವರಿಂದ ಮಕ್ಕಳಿಗೆ ಸಲಹೆ ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಸ್ವಾಸ್ಥ್ಯಭರಿತ ನಾಗರಿಕ ಸಮಾಜ ನಿಮಾ೯ಣಕ್ಕೆ ಯುವಜನತೆ ಮುಂದಾಗಬೇಕು.ತಮ್ಮ ಮನಸಿನ ಆಮಲು ಮತ್ತೇರಿಸುವ ಚಟಾದಿಗಳ ಮೋಹದ ಪ್ರಬಲತೆಯನ್ನು ದಿಟ್ಟತೆಯ ಸ್ವಸ್ಥತೆಯಿಂದ ನಿಯಂತ್ರಿಸಬೇಕು. ಶುಭ್ರ, ಶುದ್ಧತೆವುಳ್ಳ ವ್ಯಕ್ತಿತ್ವ ತಮ್ಮದಾಗಿಸಿಕೊಂಡು ಸಾಗಬೇಕು. ಮಾದಕ ವ್ಯಸನದ ಚಟಗಳಿಗೆ ಅಂಟಿಕೊಳ್ಳದೇ, ಅವಗುಣಗಳಿಗೆ ವಶವಾಗದೇ ದೈಹಿಕ ಹಾಗೂ ಮಾನಸಿಕ ಉತ್ತಮ ಆರೋಗ್ಯ ಕಾಯ್ದುಕೊಳ್ಳುವ ಮೂಲಕ ಬದುಕಿನ ಚೈತ್ರ ಪಥ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ನಿಡಗುಂದಿ ಓಂ ಶಾಂತಿ ಶಾಖೆಯ ಬ್ರಹ್ಮಕುಮಾರಿ ಬಿ.ಕೆ.ರೇಣುಕಾ ಹೇಳಿದರು.ಇಲ್ಲಿನ ರಾವಬಹದ್ದೂರ ಡಾ.ಫ.ಗು.ಹಳಕಟ್ಟಿ (ಆರ್.ಬಿ.ಪಿ.ಜಿ) ಪ್ರೌಢಶಾಲೆಯಲ್ಲಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿ ವಿಶ್ವವಿದ್ಯಾಲಯ ನಿಡಗುಂದಿ ಶಾಖಾ ಆಶ್ರಮದ ವತಿಯಿಂದ ಹಮ್ಮಿಕೊಂಡಿದ್ದ ೧೦ ಕೋಟಿ ನಶೆ ಮುಕ್ತ ಮಹಾ ಅಭಿಯಾನದ ಜಾಗೃತಿ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಅವರು, ಇಂದಿನ ಯುವಜನಾಂಗದಲ್ಲಿ ಮಾದಕ ದ್ರವ್ಯದ ಬಳಕೆಯು ಹೆಚ್ಚಾಗುತ್ತಲಿದೆ. ಪರಿಣಾಮ ಸಾಮಾಜಿಕ, ಮಾನಸಿಕ, ದೈಹಿಕ ಸಮಸ್ಯೆಗಳು ತೀವ್ರಗೊಳ್ಳುತ್ತಲಿವೆ. ನಶೆವೆಂಬ ಚಟ ಕುಟುಂಬ ಹಾಗೂ…

Read More