Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ರೈತ ಕೇವಲ ಉತ್ಪಾದಕನಲ್ಲ, ಕೃಷಿಯ ಸಂಪೂರ್ಣ ಮೌಲ್ಯ ಸರಪಳಿಯಲ್ಲಿ ಪಾಲುದಾರ ಮತ್ತು ಉದ್ಯಮಿಯಾಗಬೇಕು ಎಂಬ ಪರಿಕಲ್ಪನೆಯೊಂದಿಗೆ ರೈತ ಉತ್ಪಾದಕ ಕಂಪನಿಯಾಗಿ ‘ಆತ್ಮನಿರ್ಭರ ರೈತ’ ನಿರ್ಮಾಣದತ್ತ ದಾಸೋಹಿ ದೃಢ ಹೆಜ್ಜೆಯನ್ನಿಡುತ್ತಿದೆ ಇಡುತ್ತಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ ಭಾವಿಕಟ್ಟಿ ಹೇಳಿದರು.ಪಟ್ಟಣದ ಎ.ಪಿ.ಎಂ.ಸಿ ಆವರಣದಲ್ಲಿ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿಯಿಂದ ರೈತರಿಗೆ ತೋಟಗಾರಿಕೆ ಮತ್ತು ಆರಣ್ಯ ಸಸಿಗಳನ್ನು ಪೂರೈಸುವ ಉದ್ದೇಶದಿಂದ ಸ್ಥಾಪಿಸಲಾದ ದಾಸೋಹಿ ಹಸಿರು ಅಭಿವೃದ್ಧಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕೃಷಿಯ ಉತ್ಪಾದನೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆಗೆ ಸಂಬಂದಿಸಿದಂತೆ ಪರಿಹಾರಾತ್ಮಕ ಅನುಸಂಧಾನಗಳಿಗೆ ಹೆಸರಾದ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿಯ ಪ್ರಯತ್ನಗಳು ಕರ್ನಾಟಕ ರೈತ ಉತ್ಪಾದಕ ಸಂಸ್ಥೆಗಳ ಬೆಳವಣಿಗೆಗೆ ಹೊಸ ಮಾದರಿಯಾಗಿವೆ ಎಂದರು.ಮುಖ್ಯ ಅತಿಥಿಯಾಗಿದ್ದ ಪಶು ಸಂಗೋಪನೆ ಮತ್ತು ವೈಧ್ಯಕೀಯ ಇಲಾಖೆಯ ಮುಖ್ಯ ಪಶು ವೈಧ್ಯಾಧಿಕಾರಿ ಡಾ. ಸುರೇಶ ಮಾತನಾಡಿ ರೈತ ಉತ್ಪಾದಕ ಕಂಪನಿಗಳು ಕೇವಲ ರೈತರ ಉತ್ಪನ್ನಗಳನ್ನು ಮಾರಾಟ ಮಾಡುವ ಸಂಸ್ಥೆಗಳಾಗದೆ, ರೈತರಿಗೆ ಅಗತ್ಯವಿರುವ…
ಲೇಖನ- ಶೀತಲ್ ಹೆಗಡೆ.ನಿರ್ವಾಹಕಿ’ನಮ್ಮ ಕಥಾ ಅರಮನೆ’ ಉದಯರಶ್ಮಿ ದಿನಪತ್ರಿಕೆ ಜೀವನದಲ್ಲಿ ಬದಲಾವಣೆ ಅನಿವಾರ್ಯ. ಪ್ರಕೃತಿಯಿಂದ ಹಿಡಿದು ಮಾನವನ ಬದುಕಿನವರೆಗೂ ಪ್ರತಿಯೊಂದೂ ಬದಲಾವಣೆಯ ಹಾದಿಯಲ್ಲೇ ಸಾಗುವುದು. ಬದಲಾವಣೆಯನ್ನು ಸ್ವೀಕರಿಸಿದವರು ಬೆಳೆಯುತ್ತಾರೆ. ಅದನ್ನು ಅನುಸರಿಸದೇ ಇದ್ದವರು ಕಾಲದ ಹಿಂದೆಯೇ ಇರುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಬದಲಾವಣೆಯ ಹೆಜ್ಜೆಯನ್ನು ಧೈರ್ಯದಿಂದಲೇ ಇಡಬೇಕು.ಬದಲಾವಣೆಯೆಂದರೆ ಕೇವಲ ಹೊಸತನ್ನು ಅಳವಡಿಸಿಕೊಳ್ಳುವುದಲ್ಲ ಬದಲಾಗಿ ನಮ್ಮಲ್ಲಿರುವ ದೋಷಗಳನ್ನು ತಿದ್ದಿಕೊಂಡು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಎಂದರ್ಥ. ಕೆಟ್ಟ ಅಭ್ಯಾಸವನ್ನು ಬಿಟ್ಟು ಒಳ್ಳೆಯ ಅಭ್ಯಾಸವನ್ನು ರೂಢಿಸಿಕೊಳ್ಳುವುದು, ನಕಾರಾತ್ಮತೆಯನ್ನು ಮರೆತು ಸರಾರಾತ್ಮತೆಯ ಕಡೆಗೆ ಒಲವನ್ನು ರೂಢಿಸಿಕೊಳ್ಳುವುದು. ಸಮಯದ ಮಹತ್ವವನ್ನು ಅರಿತು ಶಿಸ್ತಿನ ಜೀವನ ನಡೆಸುವುದು. ಇವೆಲ್ಲ ಬದಲಾವಣೆಯ ಹೆಜ್ಜೆಗಳೇ.ಸಮಾಜದ ಅಭಿವೃದ್ಧಿಯು ವ್ಯಕ್ತಿಯ ಬದಲಾವಣೆಯಿಂದಲೇ ಆಗುವುದು. ವ್ಯಕ್ತಿಯ ಉತ್ತಮ ಬದಲಾವಣೆ ಇತರರಿಗೆ ಮಾದರಿಯಾಗುವುದು. ಪರಿಸರ ಸಂರಕ್ಷಣೆ, ಸ್ವಚ್ಛತೆ, ಶಿಕ್ಷಣ, ಮಾನವೀಯತೆ ಹಾಗೂ ಸಹಾನುಭೂತಿ ಇಂತಹ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಸಮಾಜವು ಅಭಿವೃದ್ಧಿಯೆಡೆಗೆ ಸಾಗುವುದು.ಸಮಾಜದಲ್ಲಿ ಬದಲಾವಣೆ ಯಾವ ಯಾವ ಕ್ಷೇತ್ರದಲ್ಲಿ ಆಗುತ್ತಿದೆ ಎಂಬುದಾಗಿ ಒಮ್ಮೆ ಗಮನಹರಿಸಿದಾಗ..೧) ಕೃಷಿಯಲ್ಲಿ ಹೊಸ…
ಲೇಖನ- ರೇಖಾ ಶಂಕರ್.ನಿರ್ವಾಹಕಿ’ನಮ್ಮ ಕಥಾ ಅರಮನೆ’ ಉದಯರಶ್ಮಿ ದಿನಪತ್ರಿಕೆ ಈಗಿನ ದಿನಮಾನದಲ್ಲಿ ಹಿಂಸೆ, ಕೊಲೆ ಅತ್ಯಾಚಾರ ಇವುಗಳು ಹೆಚ್ಚಿವೆ. ಪ್ರಿಯಕರನ ನೆರವಿನಿಂದ ಪತಿಯನ್ನೇ ಕೊಲ್ಲಿಸುವುದು, ಅಡ್ಡಿಯಾಗುತ್ತಾರೆಂದು ಎಳೆ ಮಕ್ಕಳನ್ನೇ ಸಾಯಿಸುವುದು, ಅಸಹಾಯಕತೆ, ದೌರ್ಬಲ್ಯಗಳನ್ನು ದುರುಪಯೋಗಿಸಿಕೊಂಡು ಲೈಂಗಿಕ ದೌರ್ಜನ್ಯವೆಸಗುವುದು, ಚಿಕ್ಕ ಮಕ್ಕಳ ಮೇಲಿನ ಅತ್ಯಾಚಾರ, ದುರ್ಬಲರನ್ನು ಹಿಂಸಿಸಿ ಆನಂದಿಸುವುದು ಮುಂತಾದ ಸುದ್ದಿಗಳು ದಿನಬೆಳಗಾದರೆ ರಾಚುತ್ತಿರುತ್ತವೆ. ಒಂದೇ, ಎರಡೇ ವಿಕೃತಿಯ ನೂರಾರು ಉದಾಹರಣೆಗಳನ್ನು ಕೊಡಬಹುದು.ಮನುಜ ತಾನು ಬೆಳೆದ ವಾತಾವರಣದ ಪರಿಣಾಮವೇ ಅಥವಾ ಹುಟ್ಟಿದಾಗಿನಿಂದ ಬಂದ ಸ್ವಭಾವವೇ ಎಂಬುದು ಇಲ್ಲಿ ಪ್ರಸ್ತುತ. ಇನ್ನೊಬ್ಬರಿಗೆ ಆಗುವ ಹಿಂಸೆ, ಅವಮಾನಗಳನ್ನು ಕಂಡು ಸಂತೋಷಿಸುವುದು, ಸ್ವತಃ ಹಿಂಸೆ ನೀಡಿ, ಅವಮಾನಿಸಿ ಸಂತೋಷಿಸುವುದೇ ವಿಕೃತಿ. ಈ ವಿಕೃತಿ ಮನುಷ್ಯನ ಅಂತರ್ಗತ ಸ್ವಭಾವವಾಗಿದ್ದು, ವಿಕೃತಿಯ ಕ್ರೂರ ಪರಾಕಾಷ್ಠೆಯೆಂದರೆ ಚಿತ್ರವಿಚಿತ್ರ ಹಿಂಸೆ ನೀಡಿ ಕೊಲ್ಲುವುದು, ಲೈಂಗಿಕವಾಗಿ ಶೋಷಿಸಿ ಹತ್ಯೆಗೈಯುವುದು ಇತ್ಯಾದಿ. ವಿಕೃತಿಗೆ ಅಸೂಯೆಯೂ ಒಂದು ಕಾರಣವಾಗಿದೆ.ಕೆಲವು ಬಾರಿ ನಮಗೆ ತಿಳಿಯದೆ ಇನ್ನೊಬ್ಬರನ್ನು ನೋಯಿಸಿರುತ್ತೇವೆ. ಎಲ್ಲೋ ಜನನಿಬಿಡ ಪ್ರದೇಶದಲ್ಲಿ ತಮ್ಮದೇ ಯೋಚನೆಯಲ್ಲಿ ಮುಳುಗಿ ಕಾಲು ಚಾಚಿ…
ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಏಕೋ ಏನೋ ಗೊತ್ತಿಲ್ಲ ಯಾವುದೇ ಕೆಲಸದಲ್ಲೂ ಆಸಕ್ತಿಯೇ ಇಲ್ಲ. ಹೇಗೋ ಮನಸ್ಸಿಗೆ ಒಪ್ಪಿಸಿ ಹುಮ್ಮಸ್ಸು ಮೂಡಿಸಿಕೊಂಡು ಯಾವ ಕೆಲಸವನ್ನು ಆರಂಭಿಸಿದರೂ ಅರ್ಧಂಬರ್ಧ ಮಾಡಿ ನಿಲ್ಲಿಸಿ ಬಿಡ್ತಿನಿ ಅನ್ನೋದು ಬಹುತೇಕ ಜನರ ಚಿಂತೆ. ಸಾಮಾನ್ಯವಾಗಿ ಬಹಳಷ್ಟು ಜನರನ್ನು ಮೇಲಿಂದ ಮೇಲೆ ಈ ತೊಂದರೆ ಕಾಡುತ್ತದೆ. ಮೇಲ್ನೋಟಕ್ಕೆ ಈ ಸಮಸ್ಯೆ ದೊಡ್ಡದೇನಲ್ಲ ಆದರೆ ಇದರ ಬೇರುಗಳನ್ನು ಬಲಗೊಳ್ಳಲು ಬಿಟ್ಟರೆ ಸಮಸ್ಯೆ ತಪ್ಪಿದ್ದಲ್ಲ. ಏನೆಲ್ಲ ಇದ್ದರೂ ಏನೂ ಸಾಧಿಸಲು ಸಾಧ್ಯವಾಗುವುದಿಲ್ಲ. ಅಂಥ ಪರಿಸ್ಥಿತಿ ನಿರ್ಮಾಣ ಮಾಡಿ ಬಿಡುತ್ತದೆ. ‘ಒಂದು ದುರ್ಬಲ ಮನಸ್ಸು ಒಂದು ಸೂಕ್ಷ್ಮ ದರ್ಶಕದಂತೆ. ಅದು ಸಣ್ಣ ವಿಷಯಗಳನ್ನು ದೊಡ್ಡದಾಗಿಸುತ್ತದೆ. ಆದರೆ ದೊಡ್ಡದನ್ನು ಪಡೆಯಲಾರದು.’ ಸ್ವಯಂ ಸ್ಪೂರ್ತಿ ಇರದಿದ್ದರೆ ಸಂಕಟ, ನೋವು, ಅವಮಾನ ಹಾಗೂ ಬೇಸರಗಳು ಬೆನ್ನು ಹತ್ತಿ ಜೀವ ತಿನ್ನುತ್ತವೆ. ಜೀವನವನ್ನು ನಿಸ್ಸಾರಗೊಳಿಸುತ್ತವೆ. ಇತರರ ಮುಂದೆ ತಲೆ ತಗ್ಗಿಸುವಂತೆ ಮಾಡುತ್ತವೆ. ಕೆಲವೊಮ್ಮೆ ಶಿಕ್ಷೆಯನ್ನು ಅನುಭವಿಸುವಂತೆ ಮಾಡುತ್ತವೆ. ಸ್ಪೂರ್ತಿ ಇಲ್ಲದ ಸ್ಥಿತಿಯಲ್ಲಿ ನಿರಂತರ ಎಲ್ಲದರಲ್ಲೂ…
ತಂದೆಯ ಸಾವಿನ ಹಿಂದೆ ಹಿರಿಯ ಪುತ್ರಿಯ ಕೈವಾಡದ ಶಂಕೆ | ಮೃತನ ಕಿರಿಯ ಪುತ್ರಿಯಿಂದ ದೂರು ದಾಖಲು | ಮೃತನ ಹಿರಿಯ ಪುತ್ರಿ ಹಾಗೂ ಆಕೆಯ ಪರಿಚಿತ ವ್ಯಕ್ತಿ ಪೊಲೀಸರು ವಶಕ್ಕೆ ಉದಯರಶ್ಮಿ ದಿನಪತ್ರಿಕೆ ವಿಶೇಷ ವರದಿ: ಶಂಕರ್ ಎಸ್ ಬಿಇಂಡಿ: ಭಾನುವಾರ ಕೊಲೆಯಾದ ನಿವೃತ್ತ ಶಿಕ್ಷಕ ಸಿದ್ದಪ್ಪ ಬಸಪ್ಪ ಅಂಜುಟಗಿ (62) ಅವರ ಅನುಮಾನಾಸ್ಪದ ಸಾವಿನ ಪ್ರಕರಣ ಇದೀಗ ಮತ್ತಷ್ಟು ತಿರುವು ಪಡೆದುಕೊಂಡಿದೆ. ಮೃತನ ಹತ್ಯೆಯ ಹಿಂದೆ ಹಿರಿಯ ಪುತ್ರಿ ಪ್ರಿಯಾಂಕಾ ಅವರ ಕೈವಾಡವಿದೆಯೇ ಎಂಬ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.ಮೃತನ ಹಿರಿಯ ಪುತ್ರಿ ಪ್ರಿಯಾಂಕಾ (30) ಹಾಗೂ ಆಕೆಯೊಂದಿಗೆ ವೈಯಕ್ತಿಕ ಸಂಬಂಧ ಹೊಂದಿದ್ದರು ಎನ್ನಲಾಗಿರುವ ಸಂತೋಷ ಸಿಂಧೆ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಸಿದ್ದಪ್ಪ ಅಂಜುಟಗಿ ಅವರು ನಿವೃತ್ತ ಶಿಕ್ಷಕರಾಗಿದ್ದು, ಅವರ ಮೃತದೇಹ ಬೆಡ್‌ಶೀಟ್‌ನಲ್ಲಿ ಸುತ್ತಿದ ಸ್ಥಿತಿಯಲ್ಲಿ ರಸ್ತೆ ಬದಿಯಲ್ಲಿ ಪತ್ತೆಯಾಗಿತ್ತು. ತಲೆ ಹಾಗೂ ಎದೆ ಭಾಗಕ್ಕೆ ಬಲವಾದ ಹೊಡೆತ ಬಿದ್ದಿರುವ ಶಂಕೆ…
ವಿಜಯಪುರ ಜಿಲ್ಲೆೆಗೆ ಬರಗಾಲ ಘೋಷಣೆ, ರೈತರ ಕೃಷಿ ಸಾಲ ಮನ್ನಾ & ಮೇವು ಬ್ಯಾಂಕ್, ಗೋಶಾಲೆ ತೆರೆಯಲು ಮುಖಂಡರ ಆಗ್ರಹ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಚಿವ ಬಿ.ನಾಗೇಂದ್ರ ರಾಜೀನಾಮೆ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜಿಲ್ಲಾ ಬಿಜೆಪಿ ನಗರದಲ್ಲಿಂದು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿತು.ಬೆಳಗ್ಗೆ ನಗರದ ಡಾ.ಅಂಬೇಡ್ಕರ ಸರ್ಕಲ್ ಬಳಿ ಆರಂಭವಾದ ಹೋರಾಟದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ನೂರಾರು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.ಭ್ರಷ್ಟ ಸಚಿವನ ರಾಜೀನಾಮೆಯನ್ನು ಕಾಂಗ್ರೆಸ್ ಪಡೆಯಲೇಬೇಕು, ಇಲ್ಲವಾದಲ್ಲಿ ನಿರಂತರವಾಗಿ ಹೋರಾಟ ನಡೆಸಲಾಗುವುದು ಎಂದು ಮುಖಂಡರು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನಾಗೇಂದ್ರ ಅವರು 175 ಕೋಟಿ ರೂ. ಅವ್ಯವಹಾರ ಎಸಗಿದ್ದು ನಿಜ ಎಂದು ಒಪ್ಪಿಕೊಂಡು, ಈಗ ಮತ್ತೆ ನಾಗೇಂದ್ರಗೆ ಸಚಿವ ಸ್ಥಾನ ಕೊಟ್ಟಿರುವುದು ನಾಚಿಕೆಗೇಡಿನ ಸಂಗತಿ ಎಂದು ವಾಗ್ದಾಳಿ ನಡೆಸಿದರು.ಕಾಂಗ್ರೆಸ್‌ನವರು ಎಸ್‌ಸಿ/ಎಸ್‌ಟಿ/ ಅಲ್ಪಸಂಖ್ಯಾತರ ಪರ ಎಂದು ಹೇಳಿಕೊಂಡು ಈ ಸಮುದಾಯದ ಅನುದಾನವನ್ನು ದುರ್ಬಳಕೆ ಮಾಡಲಾಗಿದೆ. ವಾಲ್ಮಿಕಿ ನಿಗಮದ ಅನುದಾನವನ್ನು ದುರ್ಬಳಕೆ ಮಾಡಿದ…
ವಿಜಯಪುರದಲ್ಲಿ ಹಾಲುಮತ ಸಮಾಜದ ಮುಖಂಡರಿಂದ ಸುದ್ದಿಗೋಷ್ಠಿ | ಸಚಿವ ಎಂ.ಬಿ.ಪಾಟೀಲರ ರಾಜಕೀಯ ಸಹಾಯದ ಸ್ಮರಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ ಅವರಿಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ಅಸಮಾಧಾನಗೊಂಡು ಹಾಲುಮತ ಸಮಾಜವನ್ನು ರಾಜಕೀಯಕ್ಕೆ ಎಳೆದು ತಂದಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸಂಗೀತಾ ದಿನ್ನಿ ಹೇಳಿದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸಿಂಗ ಅವರು ಮುಖ್ಯಮಂತ್ರಿಗಳಾಗಿದ್ದಾಗ ವಿಜಯಪುರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆರಿಸಲು ಎಂ.ಬಿ.ಪಾಟೀಲರು ಮತ್ತು ಶಿವಾನಂದ ಪಾಟೀಲರು ಚರ್ಚಿಸಿ ಹಾಲುಮತ ಸಮಾಜದ ಮಹಿಳೆಗೆ ಅಧ್ಯಕ್ಷ ಸ್ಥಾನಕ್ಕೆ ಕೂರಿಸಲು ನಿರ್ಧರಿಸಿದ್ದರು. ಅದೇ ರೀತಿ ಅಂದು ನನ್ನನ್ನು ಪ್ರಥಮ ಹಾಲುಮತದ ಮಹಿಳಾ ಅಭ್ಯರ್ಥಿಯನ್ನಾಗಿ ಅವಕಾಶವನ್ನು ಕಲ್ಪಿಸಿದ್ದರು. ಆದರೆ, ಈ ಕುರಿತು ಹಾಲುಮತ ಸಮಾಜದ ಬಗ್ಗೆ ನಾಡಗೌಡರ ಹೇಳಿಕೆ ಅನಗತ್ಯವಾಗಿತ್ತು ಎಂದು ಹೇಳಿದರು.ಅಲ್ಲದೇ, ಅವರದೇ ಕ್ಷೇತ್ರದ ಮತ್ತು ನಾಡಗೌಡರನ್ನು ಬೆಂಬಲಿಸಿದ್ದ ಮುದ್ದೇಬಿಹಾಳದ ಕೆಂಚಪ್ಪ ಬಿರಾದಾರ, ತಿಕೋಟಾದ ತಮ್ಮಣ್ಣ ಹಂಗರಗಿ, ಸಿಂದಗಿಯ ಮಲ್ಲಣ್ಣ ಸಾಲಿ ಅವರನ್ನು ಜಿಪಂ ಉಪಾಧ್ಯಕ್ಷರನ್ನಾಗಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಕೃಷ್ಣ-ವಾದಿರಾಜ ಮಠದಲ್ಲಿ ಸೆಪ್ಟೆಂಬರ 4-5 ರಂದು ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುವದೆಂದು ಶ್ರೀಮಠದ ವಿಜಯಪುರ ಶಾಖೆಯ ಗೌರವಾಧ್ಯಕ್ಷ ಗೋಪಾಲ ನಾಯಕ ಹೇಳಿದರು.ಭಕ್ತರ ಸಂಭ್ರಮ ಸಡಗರ ಮಧ್ಯ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಮಾತನಾಡಿದ ಅವರು ದಿನಾಂಕ 4 ರಂದು ಶ್ರೀ ಕೃಷ್ಣ ದೇವರಿಗೆ ಲಕ್ಷ ತುಳಸಿ ಅರ್ಪಣೆ , ಮಹಿಳಾ ಮಂಡಳಿಗಳಿಂದ ಅಖಂಡ ಭಜನೆ ಮರು ದಿನ ಪಂಚಾಮೃತ ಅಭಿಷೇಕ ಪೂಜೆ ನೈವೇದ್ಯ ಮತ್ತು ಪ್ರಸಾದ ವಿತರಣೆ ನಡೆಯುತ್ತವೆ ಎಂದು ಹೇಳಿದರು.ಶ್ರೀಗಳ ಆದೇಶದ ಮೇರೆಗೆ ಶ್ರೀಮಠದ ಆವರಣದಲ್ಲಿದ್ದ ವಿದ್ಯಾರ್ಥಿ ನಿಲಯದ ಹಳೆ ಕಟ್ಟಡ ತೆರವುಗೊಳಿಸಿ ಆಧುನಿಕ ನೂತನ ಕಟ್ಟಡ ನಿರ್ಮಾಣ ಮಾಡುವ ಕೆಲಸ ವೇಗದಿಂದ ನಡೆದಿದೆ. ಅಂದಾಜು ರೂ. 7 ಕೋಟಿ ವೆಷ್ಷದಲ್ಲಿ ನಿರ್ಮಾಣವಾಗುವ ಕಟ್ಟಡಕ್ಕೆ ಅನೇಕ ಭಕ್ತರು ದೇಣಿಗೆ ನೀಡುತ್ತಿದ್ದಾರೆ. ಭಕ್ತಾದಿಗಳು ಇನ್ನಷ್ಟು ದೇಣಿಗೆ ನೀಡಲು ಮುಂದೆ ಬರಲು ಕರೆ ನೀಡಿದರು.ಪ್ರಕಾಶ ಅಕ್ಕಲಕೋಟ ಮಾತನಾಡಿ ಹಿರಿಯರ ಸ್ಮರಣೆಯಲ್ಲಿ ಒಂದು ಕೋಣೆ ನಿರ್ಮಾಣಕ್ಕೆ ರೂ. 5…
ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಖಂಡದ ರಾಮ್ ಲೀಲಾ ಮೈದಾನದ ಕಾರ್ಯಕ್ರಮದಲ್ಲಿ ಭಾಗವಹಿಸಿ ತೆರಳಿದ ನಂತರ, ಅವರು ಕುಳಿತಿದ್ದ ಮತ್ತು ಕಾರ್ಯಕ್ರಮ ನಡೆಸಿದ ಸ್ಥಳವನ್ನು ಸ್ವಚ್ಛಗೊಳಿಸಿರುವುದು ಅತ್ಯಂತ ಅವಮಾನಕರ ಸಂಗತಿಯಾಗಿದೆ ಎಂದು ಕೆಂಭಾವಿ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ವಿರುಪಾಕ್ಷ ಗುಡಿಮನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದೇಶದ ಹಿರಿಯ ರಾಜಕೀಯ ನಾಯಕ ಹಾಗೂ ದಲಿತ ಸಮುದಾಯದ ಪ್ರತಿನಿಧಿಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇಂತಹ ಅವಮಾನ ಮಾಡಿರುವುದು ಖಂಡನೀಯ ಎಂದಿದ್ದಾರೆ. ಜಾತಿ ಆಧಾರಿತ ಭೇದಭಾವ ಮತ್ತು ಅಸ್ಪೃಶ್ಯತೆಯ ಮನೋಭಾವವನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು.ಸಂವಿಧಾನವು ಎಲ್ಲ ನಾಗರಿಕರಿಗೂ ಸಮಾನತೆ, ಸ್ವಾಭಿಮಾನ ಮತ್ತು ಗೌರವದ ಹಕ್ಕನ್ನು ನೀಡಿದೆ. ಆದರೆ, ಒಬ್ಬ ಪ್ರಮುಖ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸ್ಥಳವನ್ನು ಶುದ್ಧೀಕರಿಸಿರುವ ಘಟನೆ ನಿಜವಾಗಿದ್ದರೆ, ಇದು ಸಂವಿಧಾನದ ಆಶಯಗಳಿಗೆ ಹಾಗೂ ಸಾಮಾಜಿಕ ನ್ಯಾಯದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಗುಡಿಮನಿ ಹೇಳಿದ್ದಾರೆ.ಘಟನೆಯ ಕುರಿತು ಸಂಬಂಧಿಸಿದ…
ಧೂಳಖೇಡದ ಶಂಕರಲಿಂಗ ದೇವಾಲಯದಲ್ಲಿ ವಿಶೇಷ ಪೂಜೆ | ಪಲ್ಲಕ್ಕಿ, ನಂದಿಧ್ವಜಕ್ಕೆ ಪವಿತ್ರ ಸ್ನಾನ ಉದಯರಶ್ಮಿ ದಿನಪತ್ರಿಕೆ ಚಡಚಣ: ಇಂಡಿ ತಾಲೂಕಿನ ಬಳ್ಳೊಳ್ಳಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವರ ಪಲ್ಲಕ್ಕಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರಾವಣ ಮಾಸದ ಭಾನುವಾರದಂದು ಬಳ್ಳೊಳ್ಳಿಯಿಂದ ಧೂಳಖೇಡ ಗ್ರಾಮದ ಶ್ರೀ ಶಂಕರಲಿಂಗ ದೇವಸ್ಥಾನಕ್ಕೆ ಭವ್ಯ ಮೆರವಣಿಗೆಯೊಂದಿಗೆ ಆಗಮಿಸಿತು.ಭಕ್ತರು ಪಲ್ಲಕ್ಕಿ ಹಾಗೂ ನಂದಿಧ್ವಜದೊಂದಿಗೆ ದೇವಾಲಯಕ್ಕೆ ಆಗಮಿಸಿ, ಬಳ್ಳೊಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಭಾಗವಹಿಸಿ ರಾತ್ರಿ ಇಡೀ ಭಜನೆ, ಕೀರ್ತನೆ ಹಾಗೂ ಆರಾಧನಾ ಕಾರ್ಯಕ್ರಮಗಳನ್ನು ನಡೆಸಿದರು.ಧಾರ್ಮಿಕ ಆಚರಣೆಗಳಿಂದ ಧೂಳಖೇಡದ ಶಂಕರಲಿಂಗ ದೇವಸ್ಥಾನದ ಆವರಣದಲ್ಲಿ ಭಕ್ತಿಮಯ ವಾತಾವರಣ ನಿರ್ಮಾಣವಾಗಿತ್ತು.ಸೋಮವಾರ ಬೆಳಿಗ್ಗೆ ಭಕ್ತರು ಭೀಮಾ ನದಿ ತಟಕ್ಕೆ ತೆರಳಿ ಶ್ರೀ ವೀರಭದ್ರೇಶ್ವರ ದೇವರ ಪಲ್ಲಕ್ಕಿ, ನಂದಿಧ್ವಜ ಸೇರಿದಂತೆ ಪೂಜಾ ಸಾಮಗ್ರಿಗಳಿಗೆ ಪವಿತ್ರ ಸ್ನಾನ ಮಾಡಿಸಿದರು. ಬಳಿಕ ಬಳ್ಳೊಳ್ಳಿ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಭಕ್ತರು ಭೀಮಾ ನದಿಯಲ್ಲಿ ಪುಣ್ಯಸ್ನಾನ ಮಾಡಿ, ಶ್ರೀ ಶಂಕರಲಿಂಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ…
