ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಲ್ಲಿನ ಸರ್ಕಾರಿ ಪ್ರಥಮ ದಜೇ ಕಾಲೇಜಿನಲ್ಲಿ ಪ್ರಸಕ್ತ ಸಾಲಿನಲ್ಲಿ ಬಿ.ಕಾಂ (ಎ.ಇ.ಡಿ.ಪಿ) ಬ್ಯಾಂಕಿಂಗ್ ಹಣಕಾಸು ಸೇವೆಗಳು ಹಾಗೂ ವಿಮೆ (ಇನ್ಸುರೆನ್ಸ್) ಪದವಿ ಕೋರ್ಸ್ನ್ನು ಆರಂಭಿಸಲಾಗಿದೆ.
ಈ ನೂತನ ಕೋರ್ಸಿನ ಪ್ರಮುಖ ವೈಶಿಷ್ಟ್ಯಗಳೆನೆಂದರೆ ವಿದ್ಯಾರ್ಥಿಗಳಿಗೆ ಮೊದಲ ೨ವರ್ಷಗಳ ವರೆಗೆ ತರಗತಿ ಮತ್ತು ಪರೀಕ್ಷೆ ಇರಲಿವೆ. ೩ನೇ ವರ್ಷ ಪೂರ್ಣ ಪ್ರಮಾಣದ ತರಬೇತಿ ನೀಡಲಾಗುತ್ತಿದ್ದು ಈ ಅವಧಿಯಲ್ಲಿ ರೂ.೮ ಸಾವಿರದಿಂದ ೧೫ ಸಾವಿರ ರೂವರೆಗೆ ಸ್ಟೈಫಂಡ್ ನೀಡಲಾಗುವುದು. ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ೩ವರ್ಷ ಪೂರ್ಣಗೊಂಡ ನಂತರ ಬಿ.ಕಾಂ ಪದವಿ ಆಧಾರದ ಮೇಲೆ ಎಮ್ ಕಾಂ ಮತ್ತು ಎಂ.ಬಿ.ಎ ಸ್ನಾತ್ತಕೋತ್ತರ ವಿದ್ಯಾಭ್ಯಾಸ ಮುಂದುವರೆಸಲು ಅವಕಾಶವಿರುತ್ತದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆಯೂ ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಪ್ರಥಮ ದರ್ಜೆ ಕಾಲೇಜ್ ಪ್ರಾಂಶುಪಾಲರ ಕಾರ್ಯಾಲಯವನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
