ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣದಲ್ಲಿ ಡಿಸೈಲ್ ಅಭಾವದ ಕಾರಣದಿಂದಾಗಿ ತೈಲ ವಿತರಣಾ ಕೇಂದ್ರ( ಪೆಟ್ರೋಲ್ ಪಂಪ್)ಗಳ ಮುಂದೆ ವಾಹನಗಳು ಸಾಲುಗಟ್ಟಿ ನಿಂತು ಚಾಲಕರು, ಮಾಲೀಕರು ಪರದಾಡುವಂತಾಯಿತು.
ಪಟ್ಟಣದಲ್ಲಿ ಪೆಟ್ರೋಲ್ ದೊರೆಯುತ್ತಿದೆ ಆದರೆ ಡಿಸೈಲ್ ಕೊರತೆ ಉಂಟಾಗಿದೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ಕ್ಯಾನ್ ಗಳೊಂದಿಗೆ ವಾಹನಗಳ ಮಾಲೀಕರು ಹಾಗೂ ಚಾಲಕರು ಪಂಪ್‌ಗಳ ಮುಂದೆ ಜಮಾಯಿಸಿದರು. ಇದರಿಂದ ಜನದಟ್ಟಣೆ ಹೆಚ್ಚಾಗಿದ್ದು ಕಂಡು ಬಂದಿತು. ಜೊತೆಗೆ ಟ್ರ‍್ತಾಕ್ಟರ್‌ಗಳ ಮಾಲೀಕರು ಸಹ ತಮಗೆ ಅಗತ್ಯವಾದ ಡಿಸೈಲ್ ಕೊಳ್ಳಲು ಸಾಲಾಗಿ ನಿಲ್ಲಿಸಿದರು. ಇದರಿಂದ ವಿಚಲಿತರಾದ
ಪಂಪ್ ಸಿಬ್ಬಂದಿ ಕ್ಯಾನ್‌ಗಳಿಗೆ ಹಾಗೂ ಟ್ರ‍್ತಾಕ್ಟರ್‌ಗಳಿಗೆ ತಲಾ ಎರಡು ಸಾವಿರ ಮೌಲ್ಯದ ಹಾಗೂ ಟಿಪ್ಪರಗಳಿಗೆ ಐದು ಸಾವಿರ ಮೌಲ್ಯದ ಡಿಸೈಲ್ ವಿತರಿಸುವ ಮೂಲಕ ಸಮಾಧಾನಪಡಿಸಿದರು.
ಇನ್ನೂ ಕೆಲವು ಪಂಪ್‌ಗಳಲ್ಲಿ ಡಿಸೈಲ್ ನೋಸ್ತಾಕ್ ಎಂಬ ಫಲಕ ತೂಗು ಹಾಕಿದ್ದು , ಇರುವ ಪಂಪ್‌ಗಳಲ್ಲಿ ಗದ್ದಲ ಉಂಟಾಗಲು ಕಾರಣವಾಯಿತು.
ಡಿಸೈಲ್ ಪಡೆಯಲು ಯಾವುದೇ ಧಾವಂತ ಬೇಡ , ಸಮಾಧಾನದಿಂದ ಪಡೆಯೋಣ ಎಂದು ವಾಹನಗಳ ಮಾಲೀಕರು ಎಲ್ಲರನ್ನೂ ಸಮಾಧಾನ ಪಡಿಸಿದರು.
ಈ ಸಂದರ್ಭದಲ್ಲಿ ಕಾಶೀನಾಥ ಕೋರಿ, ಭೀಮನಗೌಡ ಬಿರಾದಾರ, ಮಹೇಶ ಯಾಳಗಿ, ಮಂಜುನಾಥ ಇಂಡಿ, ರಫೀಕ ನಡುವಿನಮನಿ, ಹುಸೇನಿ ವಿಜಯಪುರ, ಹುಚ್ಚಪ್ಪ ಹರಿಜನ, ಉಮೇಶ ಕೋಟಿನ್ ಇದ್ದರು.

