Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ತಾಂಬಾ ಗ್ರಾಮದ ಪಿಕೆಪಿಎಸ್ ಗೆ ಅಧ್ಯಕ್ಷರಾಗಿ ಲಕ್ಷ್ಮಣ ಹಿರೇಕುರಬರ, ಉಪಾದ್ಯಕ್ಷರಾಗಿ ಶಂಕರೆಪ್ಪ ಶಿರಗೂರ ಅವಿರೋಧ ಆಯ್ಕೆಯಾದರು.ಅ. ೨೪ ರಂದು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿ ಇವರು ಇಬ್ಬರು ನಾಮಪತ್ರ ಸಲ್ಲಿಸಿದರು.ಹೀಗಾಗಿ ಲಕ್ಷ್ಮಣ ಹಿರೇಕುರಬರ ಅಧ್ಯಕ್ಷರಾಗಿ ಮತ್ತು ಶಂಕರೆಪ್ಪ ಶಿರಗೂರ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.ಒಟ್ಟು ೧೨ ಸದಸ್ಯರು ಆಯ್ಕೆಯಾಗಿದ್ದರು.ಚುನಾವಣೆ ಅಧಿಕಾರಿ ಕೆ.ಬಿ.ಪಾಟೀಲ ಇವರು ಅವಿರೋಧ ಆಯ್ಕೆ ಘೋಷಣೆ ಮಾಡಿದರು.ಅಪ್ಪಣ್ಣ ಕಲ್ಲೂರ, ರಾಚಪ್ಪ ಗಳೇದ, ರವಿಕುಮಾರ ಚವ್ಹಾಣ , ಕಾಮೇಸ ಉಕ್ಕಲಿ, ನಾಗಪ್ಪ ಕುರಬತಹಳ್ಳಿ, ಎಸ್.ಎಸ್.ಕನಾಳ, ಸಿದಗೊಂಡ ಹಿರೇಕುರಬರ, ಜಿ.ಎಸ್.ಹತ್ತಳ್ಳಿ, ಮಹಾದೇವ ಮೂಲಿಮನಿ, ಮಹಮ್ಮದ ವಾಲಿಕಾರ, ಸಿದ್ದು ಹತ್ತಳ್ಳಿ, ಆರ್.ಎಂ.ನಾಟಿಕಾರ ಪರಶು ಬಿಸನಾಳ ಮತ್ತಿತರಿದ್ದರು.

Read More

ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭು ಮಹಾಸ್ವಾಮೀಜಿ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಉತ್ತರ ಕರ್ನಾಟಕದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಬಿ.ಎಲ್.ಡಿ.ಇ ಸಂಸ್ಥೆ ಅಪಾರ ಕೊಡುಗೆ ನೀಡುತ್ತಿದೆ ಎಂದು ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭು ಮಹಾಸ್ವಾಮಿಗಳು ಹೇಳಿದ್ದಾರೆ.ಗುರುವಾರ ನಗರದಲ್ಲಿ ನಡೆದ ಬಿ.ಎಲ್.ಡಿ.ಇ ಸಂಸ್ಥೆಯ ಸಂಸ್ಥಾಪನ ದಿನ ಕಾರ್ಯಕ್ರಮದಲ್ಲಿ‌ ಅವರು ಮಾತನಾಡಿದರು.ಜ್ಯೋತಿಬಾ ಫುಲೆ ಅವರಂತೆ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಅವರು ಬಿ.ಎಲ್.ಡಿ.ಇ‌ ಸಂಸ್ಥೆಯನ್ನು ಪ್ರಾರಂಭಿಸುವ ಮೂಲಕ ಈ ಭಾಗದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಿದರು. ನಂತರ ಬಂಥನಾಳ‌ ಶ್ರೀಗಳು ಪ್ರವಚನಗಳ ಮೂಲಕ ಸಂಸ್ಥೆ ಆರ್ಥಿಕವಾಗಿ ಬೆಳೆಯಲು ಕೊಡುಗೆ ನೀಡಿದರು. ಶ್ರೀಮತಿ ಬಂಗಾರಮ್ಮ‌ ಸಜ್ಜನ 54 ಎಕರೆ ಭೂಮಿ ನೀಡಿದರು. ಶ್ರೀ ಬಿ. ಎಂ. ಪಾಟೀಲರು ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜು ಪ್ರಾರಂಭಿಸಿ ವೃತ್ತಿಪರ ಕೋರ್ಸುಗಳಿಗೆ ಆದ್ಯತೆ ನೀಡಿದರು. ಅವರು ಹಾಕಿದ ಭದ್ರ ಬುನಾದಿಯ ಪರಿಣಾಮ ಈಗ ಸಂಸ್ಥೆಯ ಅಡಿಯಲ್ಲಿ 100ಕ್ಕಿಂತಲೂ ಹೆಚ್ಚು ವಿದ್ಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ಸಂಸ್ಥೆಯ ಅಧ್ಯಕ್ಷ ಎಂ.…

Read More

ಕಾರ್ಯನಿರತ ಪತ್ರಕರ್ತರ ಸಂಘ ವಿಜಯಪುರ ಜಿಲ್ಲಾ ಘಟಕದ ಚುನಾವಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಾರ್ಯನಿರತ ಪತ್ರಕರ್ತರ ಸಂಘ (ರಿ) ವಿಜಯಪುರ ಜಿಲ್ಲಾ ಘಟಕದ ಚುನಾವಣೆಯಲ್ಲಿ ಜಿಲ್ಲಾ ಖಜಾಂಚಿ ಸ್ಥಾನಕ್ಕಾಗಿ ಸ್ಪರ್ಧಿಸಲು ನಾಡೋಜ ಪತ್ರಿಕೆಯ ಜಿಲ್ಲಾ ವರದಿಗಾರ ರಾಹುಲ್ ಆಪ್ಟೆ ಅವರು ಶುಕ್ರವಾರ ಜಿಲ್ಲಾ ಚುನಾವಣಾಧಿಕಾರಿ ಟಿ.ಕೆ.ಮಲಗೊಂಡ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಇಂದುಶೇಖರ ಮಣೂರ, ಅಶೋಕ ಯಡಳ್ಳಿ ಮಹೇಶ ಶೆಟಗಾರ, ಶರಣು ಮಸಳಿ, ಪ್ರಕಾಶ ಬೆಣ್ಣೂರ, ಮೋಹನ ಕುಲಕರ್ಣಿ, ಕೆ.ಕೆ.ಕುಲಕರ್ಣಿ, ಸಂಗನಗೌಡ ಪಾಟೀಲ, ಗುರು ಗದ್ದನಕೇರಿ, ಶಶಿ ಮೆಂಡೆಗಾರ, ರಾಹುಲ್ ಆಪ್ಟೆ, ಡಿ.ಬಿ.ವಡವಡಗಿ, ಬಸವರಾಜ ಉಳ್ಳಾಗಡ್ಡಿ, ಗೋಪಾಲ ಕನಿಮಣಿ, ಚಿದಂಬರ (ಪುಟ್ಟು) ಕುಲಕರ್ಣಿ, ಶ್ರೀನಿವಾಸ ಸೂರಗೊಂಡ, ಸುನೀಲ ಭಾಸ್ಕರ, ಪವನ ಕುಲಕರ್ಣಿ, ರಾಜೇಂದ್ರಕುಮಾರ ಹಜೇರಿ, ಸುಧೀಂದ್ರ ಕುಲಕರ್ಣಿ ಸೇರಿದಂತೆ ಹಲವರಿದ್ದರು.

Read More

ಕಾರ್ಯನಿರತ ಪತ್ರಕರ್ತರ ಸಂಘ ವಿಜಯಪುರ ಜಿಲ್ಲಾ ಘಟಕದ ಚುನಾವಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಾರ್ಯನಿರತ ಪತ್ರಕರ್ತರ ಸಂಘ (ರಿ) ವಿಜಯಪುರ ಜಿಲ್ಲಾ ಘಟಕದ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಹಿರಿಯ ಪತ್ರಕರ್ತ ಹಾಗೂ ಟಿವಿ 9 ಜಿಲ್ಲಾ ವರದಿಗಾರ ಅಶೋಕ ಯಡಳ್ಳಿ ಅವರು ಶುಕ್ರವಾರ ಜಿಲ್ಲಾ ಚುನಾವಣಾಧಿಕಾರಿ ಟಿ.ಕೆ.ಮಲಗೊಂಡ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.ಈ ವೇಳೆ ಹಿರಿಯ ಪತ್ರಕರ್ತರಾದ ಇಂದುಶೇಖರ ಮಣೂರ, ಮಹೇಶ ಶೆಟಗಾರ, ಶರಣು ಮಸಳಿ, ಪ್ರಕಾಶ ಬೆಣ್ಣೂರ, ಮೋಹನ ಕುಲಕರ್ಣಿ, ಕೆ.ಕೆ.ಕುಲಕರ್ಣಿ, ಸಂಗನಗೌಡ ಪಾಟೀಲ, ಗುರು ಗದ್ದನಕೇರಿ, ಶಶಿ ಮೆಂಡೆಗಾರ, ರಾಹುಲ್ ಆಪ್ಟೆ, ಡಿ.ಬಿ.ವಡವಡಗಿ, ಬಸವರಾಜ ಉಳ್ಳಾಗಡ್ಡಿ, ಗೋಪಾಲ ಕನಿಮಣಿ, ಚಿದಂಬರ (ಪುಟ್ಟು) ಕುಲಕರ್ಣಿ, ಶ್ರೀನಿವಾಸ ಸೂರಗೊಂಡ, ಸುನೀಲ ಭಾಸ್ಕರ, ಪವನ ಕುಲಕರ್ಣಿ, ರಾಜೇಂದ್ರಕುಮಾರ ಹಜೇರಿ, ಸುಧೀಂದ್ರ ಕುಲಕರ್ಣಿ ಸೇರಿದಂತೆ ಹಲವರಿದ್ದರು.

Read More

ಕಾರ್ಯನಿರತ ಪತ್ರಕರ್ತರ ಸಂಘ ವಿಜಯಪುರ ಜಿಲ್ಲಾ ಘಟಕದ ಚುನಾವಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಾರ್ಯನಿರತ ಪತ್ರಕರ್ತರ ಸಂಘ (ರಿ) ವಿಜಯಪುರ ಜಿಲ್ಲಾ ಘಟಕದ ಚುನಾವಣೆಯಲ್ಲಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಲು “ಉದಯರಶ್ಮಿ” ದಿನಪತ್ರಿಕೆ ಸಂಪಾದಕ ಇಂದುಶೇಖರ ಮಣೂರ ಅವರು ಶುಕ್ರವಾರ ಜಿಲ್ಲಾ ಚುನಾವಣಾಧಿಕಾರಿ ಟಿ.ಕೆ.ಮಲಗೊಂಡ ಅವರಿಗೆ ನಾಮಪತ್ರ ಸಲ್ಲಿಸಿದರು.ಈ ವೇಳೆ ಹಿರಿಯ ಪತ್ರಕರ್ತರಾದ ಅಶೋಕ ಯಡಳ್ಳಿ, ಮಹೇಶ ಶೆಟಗಾರ, ಶರಣು ಮಸಳಿ, ಪ್ರಕಾಶ ಬೆಣ್ಣೂರ, ಮೋಹನ ಕುಲಕರ್ಣಿ, ಕೆ.ಕೆ.ಕುಲಕರ್ಣಿ, ಸಂಗನಗೌಡ ಪಾಟೀಲ, ಗುರು ಗದ್ದನಕೇರಿ, ಶಶಿ ಮೆಂಡೆಗಾರ, ರಾಹುಲ್ ಆಪ್ಟೆ, ಡಿ.ಬಿ.ವಡವಡಗಿ, ಬಸವರಾಜ ಉಳ್ಳಾಗಡ್ಡಿ, ಗೋಪಾಲ ಕನಿಮಣಿ, ಚಿದಂಬರ (ಪುಟ್ಟು) ಕುಲಕರ್ಣಿ, ಶ್ರೀನಿವಾಸ ಸೂರಗೊಂಡ, ಸುನೀಲ ಭಾಸ್ಕರ, ಪವನ ಕುಲಕರ್ಣಿ, ರಾಜೇಂದ್ರಕುಮಾರ ಹಜೇರಿ, ಸುಧೀಂದ್ರ ಕುಲಕರ್ಣಿ ಸೇರಿದಂತೆ ಹಲವರಿದ್ದರು. ಹದಿನೆಂಟು ನಾಮಪತ್ರ ಸಲ್ಲಿಕೆ :ಮಲಗೊಂಡ ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ) ವಿಜಯಪುರ ಜಿಲ್ಲಾ ಘಟಕದ ಚುನಾವಣೆಯಲ್ಲಿ ಸ್ಪರ್ಧಿಸಲು ಅ. 24 ಶುಕ್ರವಾರ ಮಧ್ಯಾಹ್ನ 3 ಗಂಟೆವರೆಗೆ ವಿವಿಧ 26…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಡುರಸ್ತೆಯಲ್ಲಿ ಹಾಡುಹಗಲೇ ತನ್ನ ಪತ್ನಿಯನ್ನೇ ಮಾರಕಾಸ್ತ್ರದಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಸಿಂದಗಿ ಪಟ್ಟಣದ ಆನಂದ ಟಾಕೀಸ್ ಬಳಿ ಸಂಭವಿಸಿದೆ.ಘಟನೆಯಿಂದಾಗಿ ತೀವ್ರವಾಗಿ ಗಾಯಗೊಂಡಿರುವ ಮಹಿಳೆಯನ್ನು ಅನುಸೂಯಾ ಮಾದರ ಎಂದು ಗುರುತಿಸಲಾಗಿದ್ದು, ಹಲ್ಲೆ ನಡೆಸಿದ ವ್ಯಕ್ತಿಯನ್ನು ಯಮನಪ್ಪ ಮಾದರ ಎಂದು ಗುರುತಿಸಲಾಗಿದೆ.ನಡು ರಸ್ತೆಯಲ್ಲಿಯೇ ಮಚ್ಚು ಹಿಡಿದು ಹಲ್ಲೆ ನಡೆಸಿರುವ ಭೀಬತ್ಸ ದೃಶ್ಯ ಮೊಬೈಲ್‌ಗಳಲ್ಲಿ ಸೆರೆಯಾಗಿದೆ. ಏಕಾಏಕಿಯಾಗಿ ತನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿದಾಗ ಅಲ್ಲಿದ್ದ ಜನರು ಸಹ ಪ್ರಾಣದ ಹಂಗು ತೊರೆದು ಕಾಪಾಡಲು ಮುಂದಾದರೂ ಅವರತ್ತಲೂ ಮಾರಕಾಸ್ತ್ರ ಪ್ರದರ್ಶಿಸಿದ್ದಾನೆ, ಆದರೂ ಕೆಲವು ಯುವಕರು ಕಲ್ಲು ಹಾಗೂ ಬಡಿಗೆಯ ಸಹಾಯದಿಂದ ಆತನನ್ನು ಹಿಡಿದು ಅನಾಹುತ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಮಹಿಳೆಯನ್ನು ಸಿಂದಗಿ ತಾಲೂಕಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಸಿಂದಗಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಮುಂದುವರೆದಿದೆ.

Read More

ಸಹಕಾರಿ ಸಂಘಗಳ ಮುಖಂಡರು, ಕನ್ನಡಪರ ಹೋರಾಟಗಾರರು, ವಿದ್ಯಾರ್ಥಿಗಳು ತಮ್ಮ ರಕ್ತದ ಮೂಲಕ ಸಹಿ ಮಾಡಿ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಒತ್ತಾಯಿಸಿ ಸರ್ಕಾರಿ ಮೆಡಿಕಲ್ ಕಾಲೇಜ್ ಹೋರಾಟ ಸಮಿತಿ ಪದಾಧಿಕಾರಿಗಳು, ವೈದ್ಯರು, ಮಾಧ್ಯಮ ಪ್ರತಿನಿಧಿಗಳು, ವಿವಿಧ ಸಹಕಾರಿ ಸಂಘಗಳ ಮುಖಂಡರು, ಕನ್ನಡಪರ ಹೋರಾಟಗಾರರು, ವಿದ್ಯಾರ್ಥಿಗಳು ತಮ್ಮ ರಕ್ತದ ಮೂಲಕ ಸಹಿ ಮಾಡಿ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಿದರು.ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆಗಾಗಿ ಕಳೆದ ೩೭ ದಿನಗಳಿಂದ ಸತತ ಹೋರಾಟ ನಡೆಯುತ್ತಿದ್ದು, ಹೋರಾಟದ ಭಾಗವಾಗಿ ಸರ್ಕಾರಿ ಮೆಡಿಕಲ್ ಕಾಲೇಜ್ ಹೋರಾಟ ಸಮಿತಿ ರಕ್ತ ಸಹಿ ಸಂಗ್ರಹಣಾ ಅಭಿಯಾನಕ್ಕೆ ಕರೆ ನೀಡಿತ್ತು.ವಿಜಯಪುರದ ಡಾ.ಬಿ.ಆರ್. ಅಂಬೇಡ್ಕರ ವೃತ್ತದ ಧರಣಿ ಸ್ಥಳದಲ್ಲಿ ಅಳವಡಿಸಲಾಗಿದ್ದ ಶುಭ್ರವರ್ಣದ ಬೃಹತ್ ಬಟ್ಟೆಯ ಮೇಲೆ ಅನೇಕರು ತಮ್ಮ ರಕ್ತದಿಂದ ಸಹಿ ಮಾಡಿದರು.ವೈದ್ಯಕೀಯ ಸಿಬ್ಬಂದಿಯ ನೆರವಿನಿಂದ ಸುರಕ್ಷಿತ ಉಪಕರಣಗಳ ಮೂಲಕ ತಮ್ಮ ರಕ್ತವನ್ನು ಪಡೆದು ಅದೇ ರಕ್ತದಲ್ಲಿ ಸಹಿ ಮಾಡಿದರು. ಇನ್ನೂ ಕೆಲವರು `ಸರ್ಕಾರಿ ವೈದ್ಯಕೀಯ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕನೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರ ವಿಜಯಪುರ ಜಿಲ್ಲಾ ಪ್ರವೇಶ ನಿರ್ಭಂಧ ಖಂಡನೀಯ, ಕೂಡಲೇ ಈ ವಿಷಯದಲ್ಲಿ ರಾಜ್ಯಪಾಲರು ಮಧ್ಯಪ್ರವೇಶಿಸಿ ಈ ನಿರ್ಬಂಧ ತೆರವುಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಕೂಡಲೇ ನಿರ್ದೇಶನ ನೀಡುವಂತೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ವಿಜಯಪುರಕ್ಕೆ ಆಗಮಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಕ್ರಾಂತಿವೀರ ಬ್ರಿಗೇಡ್ ನೇತೃತ್ವದಲ್ಲಿ ನಿಯೋಗದೊಂದಿಗೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ಈಶ್ವರಪ್ಪ, ಶ್ರೀಗಳ ನಿರ್ಬಂಧ ಆದೇಶವನ್ನು ವಾಪಸ್ಸು ಪಡೆಯುವಂತೆ ಒತ್ತಾಯಿಸಿದರು.ಕನೇರಿ ಶ್ರೀಗಳು ಕಳೆದ ಹಲವಾರು ದಶಕಗಳಿಂದ ಅಧ್ಯಾತ್ಮ, ಕೃಷಿ, ಗೋ ರಕ್ಷಣೆ, ಭಾರತೀಯ ಸಂಸ್ಕೃತಿ ಪ್ರಸಾರ ಸೇರಿದಂತೆ ಅನೇಕ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ, ಜನರ ಆರೋಗ್ಯಕ್ಕಾಗಿ ಆಯುರ್ವೇದದ ಮೂಲಕ ಪರಿಹಾರ ಕಲ್ಪಿಸಿ ಜನರ ಆರೋಗ್ಯ ರಕ್ಷಣೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ, ಸಾವಯುವ ಕೃಷಿ ಉತ್ಪಾದನೆ, ಕೃಷಿಕರಿಗೆ ಉತ್ತೇಜನ ಹೀಗೆ ನಾನಾ ರೀತಿಯಲ್ಲಿ ನಾಡಿಗೆ ಸೇವೆ ಮಾಡುತ್ತಿದ್ದಾರೆ, ಆದರೆ ಕೆಲವರು ಶ್ರೀಗಳ ವಿರುದ್ಧ ಇಲ್ಲ ಸಲ್ಲದ ವಿಷಯವನ್ನು ದೊಡ್ಡದು ಮಾಡಿ ರಾಜಕೀಯ ಲಾಭ…

Read More

ನಾವು – ನಮ್ಮ ಮಕ್ಕಳು(ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಕುರಿತ ಲೇಖನ ಮಾಲಿಕೆ) ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಕೇವಲ ಒಂದು ದಶಕದ ಹಿಂದೆ ಎಲ್ಲರ ಬಳಿ ಮೊಬೈಲ್ ಫೋನ್ ಇರಲಿಲ್ಲ. ಆಗ ಇಂಟರ್ನೆಟ್ ಸೌಲಭ್ಯ ಕೂಡ ಅಷ್ಟೇನೂ ಸುಲಭವಾಗಿ ದೊರೆಯುತ್ತಿರಲಿಲ್ಲವಾದ ಕಾರಣ ವಿವಿಧ ಗ್ಯಾಜೆಟ್ಗಳನ್ನು ಮಕ್ಕಳು ಬಳಸುವುದು ದೂರವಾಗುತ್ತಿತ್ತು. ಆದರೆ ಕೇವಲ ಕೆಲವೇ ವರ್ಷಗಳಲ್ಲಿ ಅಂತರ್ಜಾಲ ಸೌಲಭ್ಯ ಮನೆಮನೆಯ ಬಾಗಿಲು ತಟ್ಟಿದ್ದು ಎಲ್ಲರ ಕೈಯಲ್ಲೂ ವಿವಿಧ ಬಗೆಯ ಮೊಬೈಲ್ ಸೆಟ್ಟುಗಳು ಇದ್ದು ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರೆಗೆ ಹತ್ತು ಹಲವಾರು ಜಾಲತಾಣಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಇಂದಿನ ಯುವಶಕ್ತಿಯಲ್ಲಿರುವ ಚೈತನ್ಯ ಕುಗ್ಗುತ್ತಿದೆ.ಶಿಕ್ಷಣ ಮಕ್ಕಳಲ್ಲಿ ಅತ್ಯವಶ್ಯಕವಾಗಿ ಹೊಂದಲೇಬೇಕಾದದ್ದು. ಒಂದು ಉತ್ತಮ ಬದುಕನ್ನು ಸಾಧಿಸಲು ಪದವಿಯವರೆಗಿನ ಓದು ಅನಿವಾರ್ಯವಷ್ಟೇ ಅಲ್ಲ ಅವಶ್ಯಕತೆಯೂ ಹೌದು.ಓದಿನ ಜೊತೆ ಜೊತೆಗೆ ಉದ್ಯೋಗ ಮಾಡಲು ಅವಶ್ಯಕವಾದ ಕೌಶಲ್ಯ ತರಬೇತಿಯು ಇಂದಿನ ಮಕ್ಕಳಿಗೆ ಬೇಕೇ ಬೇಕು. ಅಂತರ್ಜಾಲದ ನೆರವಿನಿಂದ ಸಾಮಾಜಿಕ ಜಾಲತಾಣಗಳ ಒಳಹೊಕ್ಕು ತಾಂತ್ರಿಕ…

Read More

ಸಚಿವ ಡಾ. ಎಂ.ಬಿ.ಪಾಟೀಲ ರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಕಿವಿಮಾತು ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಚಿವ ಡಾ.ಎಂ.ಬಿ. ಪಾಟೀಲರು ಮುಖ್ಯಮಂತ್ರಿಯಾಗಲಿ ಅದಕ್ಕೆ ನಮ್ಮ ಅಭ್ಯಂತರವಿಲ್ಲ, ಆದರೆ ತಾವು ಮುಖ್ಯಮಂತ್ರಿಯಾಗಲು ಹಿಂದೂ ಸಮಾಜವನ್ನು ಒಡೆಯುವ ದುಸ್ಸಾಹಸಕ್ಕೆ ಕೈ ಹಾಕಬೇಡಿ, ಈ ಹಿಂದೆಯೂ ಲಿಂಗಾಯತ ಧರ್ಮ ಪ್ರತ್ಯೇಕ ವಿಚಾರ ವಿಷಯ ಮುನ್ನೆಲೆಗೆ ತಂದು ಕೈ ಸುಟ್ಟುಕೊಂಡಿದ್ದೀರಿ, ಈಗ ಪುನಃ ಧರ್ಮ ಒಡೆದು ಮುಖ್ಯಮಂತ್ರಿಯಾಗುವ ಕೆಲಸ ಬೇಡ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹೇಳಿದರು.ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಮುಖ್ಯಮಂತ್ರಿ ಆಗುವ ಇರಾದೆಯಲಿರುವ ಸಚಿವ ಪಾಟೀಲರು ಈ ಧರ್ಮ ವಿಭಜನೆಯಲ್ಲಿ ತೊಡಗಿದ್ದಾರೆ,೨೦೨೮ ರಲ್ಲಿ ಮುಖ್ಯಮಂತ್ರಿ ಆಗುವ ಕನಸು ಕಾಣಬೇಡಿ, ನವ್ಹೆಂಬರ್ ಕ್ರಾಂತಿಯಲ್ಲಿಯೇ ನೀವು ಮುಖ್ಯಮಂತ್ರಿ ಆಗಬೇಕು ಹೊರತು ಮುಂದೆ ನಾನು ಮುಖ್ಯಮಂತ್ರಿ ಆಗುವೆ ಎಂಬ ಕನಸು ಕಾಣಲು ಹೋಗಬೇಡಿ, ಮುಂದೆ ಬಿಜೆಪಿ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದರು.ಕನೇರಿ ಶ್ರೀಗಳ ಮನಸ್ಸಿಗೆ ನೋವು ಮಾಡುವ ಕೆಲಸ ನಡೆದಿದೆ,…

Read More