ಉದಯರಶ್ಮಿ ದಿನಪತ್ರಿಕೆ
ನಿಡಗುಂದಿ: ಹಿರಿಯ ಜೀವ ಮಲ್ಲಯ್ಯ ಸಾಲಿಮಠ ಅಖಿಲ ಭಾರತ ವೀರಶೈವ ಮಹಾಸಭಾ ನಿಡಗುಂದಿ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಪಟ್ಟಣದ ಶ್ರೀ ರುದ್ರೇಶ್ವರ ಮಠದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ (ರಿ) ಬೆಂಗಳೂರು ಹಾಗೂ ಜಿಲ್ಲಾ ಘಟಕ ವಿಜಯಪುರ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ನಿಡಗುಂದಿ ತಾಲೂಕು ಘಟಕದ ಚುನಾವಣಾ ದೃಢೀಕರಣ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಯ್ಯ ಸಾಲಿಮಠ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ನಡೆದ ನಿಡಗುಂದಿ ತಾಲೂಕು ಘಟಕದ ಚುನಾವಣಾ ದೃಢೀಕರಣ ಪ್ರಮಾಣಪತ್ರ ವಿತರಣಾ ಸಮಾರಂಭದಲ್ಲಿ ಪಟ್ಟಣದ ಹಿರಿಯನೇಕರು ಪಾಲ್ಗೊಂಡಿದ್ದರು.
ಜಿಲ್ಲಾ ಘಟಕದ ಅಧ್ಯಕ್ಷರಾದ ವಿ.ಸಿ.ನಾಗಠಾಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಟಿ.ಈಶ್ವರಗೊಂಡ, ಕಾರ್ಯಕಾರಿಣಿ ಸದಸ್ಯ ವಿಜಯ ಹುಂಡೇಕಾರ, ಸಂಘಟನಾ ಕಾರ್ಯದರ್ಶಿ ಬಸವರಾಜಕುಮಾರ್ ಕುಮಸಗಿ, ಸಿ.ಎಸ್.ಕನಕಾಲ್ಮಠ, ರಾಮನಗೌಡ ಹೆಬ್ಬಾಳ, ಮಾಜಿ ಜಿಪಂ ಸದಸ್ಯ ಶಿವಾನಂದ ಅವಟಿ ಇವರ ಸಮ್ಮುಖದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ನಿಡಗುಂದಿ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಮಲ್ಲಯ್ಯ ಸಾಲಿಮಠ ಅವರನ್ನು ಆಯ್ಕೆ ಮಾಡಲಾಯಿತು. ಇವರ ಜೊತೆಗೆ ಏಳು ಜನ ಮಹಿಳಾ ಘಟಕದ, ಹದಿಮೂರು ಜನ ಪುರುಷರು ಘಟಕದ ಕಾರ್ಯನಿರ್ವಾಹಕ ಸಮಿತಿ ಸದಸ್ಯರನ್ನಾಗಿ ಅವಿರೋಧವಾಗಿ ಆಯ್ಕೆಯಾದರು. ಹೊಸದಾಗಿ ಆಯ್ಕೆಗೊಂಡ ಸದಸ್ಯರಿಗೆ ಚುನಾವಣಾ ಅಧಿಕೃತ ಪತ್ರವನ್ನು ವಿತರಿಸಿ ಸನ್ಮಾನಿಸಲಾಯಿತು.
ಚಂದ್ರಶೇಖರ ನಿಡಗುಂದಿ ಸ್ವಾಗತಿಸಿದರು. ಶಿಕ್ಷಕ ವಾಗ್ಮಿ ಬಸವರಾಜ ಹಂಚಲಿ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಉಪನ್ಯಾಸಕ ಪ್ರಕಾಶ ವೈ.ಧನಶೆಟ್ಟಿ ಆಭಾರಮನ್ನಿಸಿದರು.

