Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕಬ್ಬು ಬೆಳೆಗಾರರು ನ್ಯಾಯಯುತವಾಗಿ ತಮ್ಮ ಬೇಡಿಕೆಯನ್ನು ಕೇಳುತ್ತಿರುವುದರಲ್ಲಿ ತಪ್ಪೇನಿದೆ . ಈ ಹಿಂದೆ ರೈತರು ಪ್ರತಿ ಟನ್ ಕಬ್ಬಿಗೆ ರೂ.೪,೫೦೦ ನೀಡಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದರು. ಆದರೆ ಇದೀಗ ಪ್ರತಿ ಟನ್‌ಗೆ ಕನಿಷ್ಠ ರೂ.೩೫೦೦ ಕೇಳುತ್ತಿದ್ದಾರೆ. ಸರ್ಕಾರ ಇದಕ್ಕೆ ಕೂಡಲೇ ಸ್ಪಂದಿಸಬೇಕು ಎಂದು ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಒತ್ತಾಯಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ರೈತರು ಮತ್ತು ಕಬ್ಬು ಬೆಳೆಗಾರರು ಎದುರಿಸಿಕೊಂಡು ಬರುತ್ತಿರುವ ಸಮಸ್ಯೆ ಹಾಗೂ ಸಂಕಷ್ಟಗಳು ಸರಕಾರಕ್ಕೆ ತಿಳಿಯದ ವಿಷಯವೇನಲ್ಲ. ಎಲ್ಲವೂ ಗೊತ್ತಿರುವಂತಹ ವಿಚಾರಗಳೇ ಆಗಿವೆ. ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕಾದರೆ ರೈತರು ಪ್ರತಿ ವರ್ಷ ಬೆಂಬಲ ಬೆಲೆಗಾಗಿ ಹೋರಾಟ ಮಾಡಬೇಕಾದ ದುಸ್ಥಿತಿ ಎದುರಾಗಿದೆ. ಆದರೆ ಇದು ಹೋಗಬೇಕಾಗಿದೆ. ಪ್ರಸ್ತುತ ರೈತರು ಕೇಳುತ್ತಿರುವ ಬೆಲೆಯು ಸೂಕ್ತವಾಗಿದೆ. ನಮ್ಮ ರೈತರಿಗೆ ಹೆಚ್ಚಿನ ಬೆಲೆಯನ್ನೇ ನೀಡುವ ಪ್ರಯತ್ನ ರಾಜ್ಯ ಸರಕಾರ ಮಾಡಬೇಕು. ರಾಜ್ಯ ಸರಕಾರ ಕೂಡಲೇ ರೈತರಿಗೆ ಸ್ಪಂದಿನೆ ಮಾಡದೇ ಹೋದರೆ ಇನ್ನಷ್ಟು ರೈತರ…
ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಬೆಳಗಾವಿ, ವಿಜಯಪುರ,ಜಿಲ್ಲೆಗಳ ರೈತರು ಪ್ರತಿ ಟನ್ ಕಬ್ಬಿಗೆ ರೂ ೩೫೦೦ ನಿಗದಿಗಾಗಿ ಕಳೆದ ಏಳೆಂಟು ದಿನಗಳಿಂದ ನಡೆಸುತ್ತಿರುವ ಹೋರಾಟಕ್ಕೆ ವಾಸು ದೇವ ಬಣದ ರಾಜ್ಯ ರೈತ ಸಂಘ( ಹಸಿರು ಸೇನೆ) ನಿಡಗುಂದಿ ತಾಲೂಕಾ ಘಟಕ ತನ್ನ ಬೆಂಬಲ ವ್ಯಕ್ತಪಡಿಸಿತು.ಆಲಮಟ್ಟಿಯಲ್ಲಿ ಜರುಗಿದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ನಿಡಗುಂದಿ ತಾಲೂಕ ಘಟಕದ ಅಧ್ಯಕ್ಷ ತಿರುಪತಿ ಬಂಡಿವಡ್ಡರ ಮಾತನಾಡಿ, ರೈತರು ಬೆಳೆದ ಕಬ್ಬಿನಿಂದ ನೂರಾರು ಕೋಟಿ ಲಾಭ ಗಳಿಸುತ್ತಿರುವ ಸಕ್ಕರೆ ಕಾರ್ಖಾನೆ ಗಳ ಮಾಲೀಕರು ರೈತರು ಬೆಳೆದ ಕಬ್ಬಿಗೆ ನ್ಯಾಯೋಚಿತವಾದ ಬೆಲೆ ನೀಡುತ್ತಿಲ್ಲ, ಜೊತೆ ಕಬ್ಬು ಕಳುಹಿಸಿದ ರೈತರಿಗೆ ಸಕಾಲಕ್ಕೆಹಣ ಪಾವತಿ ಮಾಡುತ್ತಿಲ್ಲ , ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದರು.ಕಬ್ಬಿನ ಕಾರ್ಖಾನೆ ಗಳು ಹೆಚ್ಚಾಗಿ ರಾಜಕಾರಣಿಗಳ ಹಿಡಿತದಲ್ಲಿದ್ದು ರೈತರ ಜೀವದ ಜೊತೆ ಆಟವಾಡುತ್ತಿವೆ , ಆದ್ದರಿಂದ ಸರ್ಕಾರ ರೈತರ ಬೇಡಿಕೆಗಳನ್ನು ಒಪ್ಪಿಕೊಳ್ಳ ಬೇಕೆಂದು ಆಗ್ರಹಿಸಿದರುಈ ವಿಷಯದಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸಿದರೆ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ೫೦ ನ್ನು ಬಂದ್…
ಉದಯರಶ್ಮಿ ದಿನಪತ್ರಿಕೆ ಚಡಚಣ: ಚಡಚಣ ವಲಯದ ಚಡಚಣ ನಗರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಒಕ್ಕೂಟ ತರಬೇತಿ ಕಾರ್ಯಾಗಾರ ನಡೆಯಿತು.ತಾಲೂಕಿನ ಯೋಜನಾಧಿಕಾರಿ ನಟರಾಜ ಎಲ್.ಎಂ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳದ ಸೇವಾ ಪರಂಪರೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉದ್ದೇಶ ಮತ್ತು ಕಾರ್ಯಕ್ರಮಗಳು, ಒಕ್ಕೂಟಗಳ ರಚನೆ ಹಾಗೂ ಪದಾಧಿಕಾರಿಗಳ ಜವಾಬ್ದಾರಿ, ಮತ್ತು ಒಕ್ಕೂಟ ಸಭೆಗಳ ಪರಿಣಾಮಕಾರಿ ನಿರ್ವಹಣೆ ಕುರಿತು ಮಾಹಿತಿ ನೀಡಿದರು.ತಾಲೂಕು ವಿಚಕ್ಷಣಾಧಿಕಾರಿ ಸಿದ್ದಪ್ಪ ಚುಳಕಿ ಅವರು ಬ್ಯಾಂಕ್ ಮೂಲಕ ಸಾಲದ ಪ್ರಗತಿ ನಿಧಿ ವಿತರಣೆ, ಸಾಲದ ಸದ್ವಿನಿಯೋಗ, ಸಂಘದ ಪರಿಕಲ್ಪನೆ, ಬ್ಯಾಂಕ್ ಡಿಪಿ ಮತ್ತು ಪ್ರಗತಿ ರಕ್ಷಾ ಕವಚ ಕಾರ್ಯಕ್ರಮಗಳ ಕುರಿತು ಭಾಗವಹಿಸಿದವರಿಗೆ ಮಾರ್ಗದರ್ಶನ ನೀಡಿದರು.ವಲಯ ಮೇಲ್ವಿಚಾರಕ ಶಿವಯ್ಯ ಹಿರೇಮಠ ಅವರು ಬ್ಯಾಂಕಿಂಗ್ ಸೇವಾ ವ್ಯವಸ್ಥೆ, ಸಿಸಿ ಖಾತೆ ನಿರ್ವಹಣೆ ಹಾಗೂ ಲಾಭಾಂಶ ವಿತರಣೆ ಕುರಿತು ವಿವರಿಸಿದರು.ಕಾರ್ಯಕ್ರಮವನ್ನು ತಾಲೂಕು ಕೃಷಿ ಅಧಿಕಾರಿ ಸುದೀಪ್ ಕಟಗೇರಿ ನಿರೂಪಿಸಿ, ಸ್ವಾಗತ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಸ್ಮಶಾನ ಜಾಗದ ಸಲುವಾಗಿ ಅಂಜುಮನ ಕಮಿಟಿಯ ಮುಸ್ಲಿಂ ಮುಖಂಡರು ಹಾಗೂ ಪಟ್ಟಣ ಪಂಚಾಯತ ಅದ್ಯಕ್ಷರ ಮದ್ಯ ವಾಗ್ವಾದ ಜರುಗಿತು. ಗುರುವಾರ ಪಟ್ಟಣದ ಇಂಡಿ ರಸ್ತೆಗೆ ಹೊಂದಿಕೊಂಡಿರುವ ಮುಸ್ಲಿಂ ಸಮಾಜದ ಸ್ಮಶಾನ ಜಾಗದಲ್ಲಿದ್ದ ಕಾಂಪೌಂಡ್ ರಸ್ತೆ ಅಗಲಿಕರಣ ಸಂದರ್ಭದಲ್ಲಿ ತೆರವುಗೊಳಿಸಿದರಿಂದ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ ಇದರಿಂದ ಸ್ಮಶಾನ ಜಾಗ ಗಲಿಜಾಗುತ್ತಿದೆ ಕಾಂಪೌಂಡ್ ನಿರ್ಮಿಸಲು ಆಗ್ರಹಿಸಿ ಮನವಿ ಮಾಡಲು ಮುಂದಾಗಿದ್ದರು. ಸ್ಥಳಕ್ಕೆ ಆಗಮಿಸಿದ್ದ ಪ.ಪಂ. ಅಧ್ಯಕ್ಷ ಸಾಧೀಕ ಸುಂಬಡ ಮಾತನಾಡಿ ಇಂಡಿ ರಸ್ತೆಯ ಐಬಿ ಇಂದ ಅಫಜಲಪುರ ರಸ್ತೆ ಪೆಟ್ರೋಲ್ ಪಂಪ ವರೆಗೆ ರಸ್ತೆ ಮದ್ಯದಿಂದ 50 ಪುಟ ವರೆಗೂ ತೆರವು ಮಾಡಲಾಗಿದೆ. ಈ ತೆರವು ಕಾರ್ಯದಲ್ಲಿ ಶ್ರೀಮಂತ, ಬಡವ ಯಾವುದೆ ಧರ್ಮ ಸಮುದಾಯ, ಜಾತಿ ತಾರತಮ್ಯ ಮಾಡದೆ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ ಎಂದರು.ತೆರವು ಕಾರ್ಯದಲ್ಲಿ ಹಿಂದೂ ಸಮುದಾಯದ ಗೊಲ್ಲರ ಸಮಾಜದ ಯಲ್ಲಮ್ಮ ದೇವಿ ದೇವಸ್ಥಾನ ಪೂರ್ಣವಾಗಿ ತೆರವು ಮಾಡಲಾಗಿದೆ ಹಾಗೆ ಅಫಜಲಪುರ ರಸ್ತೆಯ ಹನುಮಾ ದೇವಸ್ಥಾನ ಕಾಂಪೌಂಡ್,…
ರೈತರ ಹೋರಾಟಕ್ಕೆ ವಕೀಲರ ಸಂಘ, ಎಬಿವಿಪಿ ಬೆಂಬಲ | ರಸ್ತೆ ತಡೆದು ಪ್ರತಿಭಟನೆ ಉದಯರಶ್ಮಿ ದಿನಪತ್ರಿಕೆ ಇಂಡಿ: ಪ್ರತಿ ಟನ್ ಕಬ್ಬಿಗೆ ರೂ ೩೫೦೦ ದರ ನಿಗದಿ ಮಾಡುವಂತೆ ಆಗ್ರಹಿಸಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರೈತರು ನಡೆಸುತ್ತಿರುವ ಹೋರಾಟ ಗುರುವಾರ ನಾಲ್ಕನೆಯ ದಿನಕ್ಕೆ ಕಾಲಿಟ್ಟಿತು.ರೈತರ ಹೋರಾಟಕ್ಕೆ ಬೆಂಬಲಿಸಿ ವಕೀಲರ ಸಂಘ ಮತ್ತು ಎಬಿವಿಪಿ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿ ರೈತರ ಹೋರಾಟ ಮುಂದುವರೆದಿದೆ.ಈ ಮಧ್ಯೆ ಹೋರಾಟಕ್ಕೆ ಜೆಡಿ ಎಸ್, ಬಿಜೆಪಿ ಕರವೇ ಸೇರಿ ವಿವಿಧ ಸಂಘಟನೆಗಳು ಸಾಥ ಕೊಟ್ಟಿದ್ದು ರೈತರ ಕಿಚ್ಚು ಮತ್ತಷ್ಟು ಹೆಚ್ಚಾಗಿದೆ.ಇಂದು ವಕೀಲರು, ಎಬಿವಿಪಿ ಕಾರ್ಯಕರ್ತರು ಮತ್ತು ಕಬ್ಬು ಹೋರಾಟಗಾರರು ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ಮಾಡಿ ಹೋರಾಟ ಮಾಡಿದರು.ಇದರಿಂದ ಬಸ್ಸುಗಳು ಮತ್ತು ಯಾವದೇ ವಾಹನ ಚಲಿಸಲಿಲ್ಲ. ಮತ್ತು ಪ್ರಯಾಣಿಕರಿಗೆ ಅತೀವ ತೊಂದರೆಯಾಯಿತು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಒಂದು ಟನ್ ಕಬ್ಬು ನುರಿದರೆ ಕಾಖಾನೆಯವರಿಗೆ ಸಕ್ಕರೆ, ಮೊಲಾಸಿಸ್, ಎಥೆನಾಲ್ ಮತ್ತು ವಿದ್ಯುತ್ ಸೇರಿ ರೂ ಹದಿನಾಲ್ಕು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಿ.ಎಲ್.ಡಿ.ಇ ಸ್ವಾಯತ್ತ ವಿಶ್ವವಿದ್ಯಾಲಯ ಕಾನೂನು ಶಾಲೆ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಚೇರಿ ಇವರ ಸಹಯೋಗದಲ್ಲಿ “ಸೈಬರ್ ಕಾನೂನು ಮತ್ತು ಸೈಬರ್ ಅಪರಾಧಗಳ ಕುರಿತು ರಾಷ್ಟ್ರಮಟ್ಟದ ಸಮ್ಮೇಳನ-೨೦೨೫* ಕಾರ್ಯಕ್ರಮವನ್ನು ನಗರದ ಬಿ.ಎಲ್.ಡಿ.ಇ ಸ್ವಾಯತ್ತ ವಿಶ್ವವಿದ್ಯಾಲಯದ ಕೇಂದ್ರಿಯ ಗ್ರಂಥಾಲಯದ ಸಭಾಂಗಣದಲ್ಲಿ ನವೆಂಬರ್ ೦೭ ರಂದು ಹಮ್ಮಿಕೊಳ್ಳಲಾಗಿದೆ.ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ ನಿಂಬರಗಿ ಇವರು, ಸಂಪನ್ಮೂಲ ವ್ಯಕ್ತಿಗಳಾಗಿ ಹೊಳೆನರಸೀಪುರದ ಸರಕಾರಿ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಕೆ ಮಾಟೊಳ್ಳಿ,ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವರಾದ ಡಾ. ಸುನೀಲ್ ಬಗಾಡೆ ,ಬೆಂಗಳೂರಿನ ಸೈಬರ್ ಕ್ರೈಂ ವಿಭಾಗ, ಸಿ.ಐ.ಡಿ ವಿಭಾಗದ ಡಿ.ವೈ.ಎಸ್.ಪಿ ಯಶವಂತ ಕುಮಾರ,ಮಂಗಳೂರಿನ ಸಹ್ಯಾದ್ರಿ ತಾಂತ್ರಿಕ ಮತ್ತು ಆಡಳಿತ ಮಹಾವಿದ್ಯಾಲಯದ ಕಂಪ್ಯೂಟರ್ ಇಂಜಿನಿಯರ್ ವಿಭಾಗದ ಪ್ರಾಧ್ಯಾಪಕರಾದ ಡಾ. ಅನಂತ ಪ್ರಭು ಹಾಗೂ ವಿವಿಧ ರಾಜ್ಯದ ಕಾನೂನು ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ವಕೀಲರು, ವೈದ್ಯರು ಹಾಗೂ ಬಿ.ಎಲ್.ಡಿ.ಇ ಸ್ವಾಯತ್ತ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳು, ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ…
ವಿಜಯಪುರ ವಿಭಾಗಕ್ಕೆ ೧೦ ಬಹುಮಾನ, ಮಹಿಳೆಯರ ಥ್ರೋಬಾಲ್‌ನಲ್ಲಿ ಪ್ರಥಮ ಸ್ಥಾನ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸಂಸ್ಥಾಪನಾ ದಿನಾಚರಣೆ ಹಾಗೂ ರಜತ ಮಹೋತ್ಸವದ ಅಂಗವಾಗಿ ನಿಗಮದ ಅಧಿಕಾರಿ,ಸಿಬ್ಬಂದಿಯವರಿಗೆ ಕಲಬುರಗಿಯ ಶ್ರೀ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಬುಧವಾರ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು.ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಒಟ್ಟು ೯ ವಿಭಾಗಗಳಲ್ಲಿನ ೪೫೦ ಕ್ರೀಡಾಪಟುಗಳು ಭಾಗವಹಿಸಿದ್ದು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದ ಕ್ರೀಡಾಪಟುಗಳು ವೈಯಕ್ತಿಕ ಅಥ್ಲೆಟಿಕ್ಸ್ ಆಟಗಳಲ್ಲಿ ೧೦ ಬಹುಮಾನಗಳನ್ನು ಪಡೆದಿದ್ದಾರೆ.ಮಹಿಳೆಯರ ಥ್ರೋಬಾಲ್ ಆಟದಲ್ಲಿ ಕಲಬುರಗಿ ವಿಭಾಗ-೧ರ ತಂಡದ ವಿರುದ್ಧ ವಿಜಯಪುರ ವಿಭಾಗ-೧ರ ಮಹಿಳಾ ಕ್ರೀಡಾಪಟುಗಳು ವಿಜೇತರಾಗಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಕ್ರೀಡಾಪಟುಗಳ ಸಾಧನೆಗೆ ಕಲಬುರಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ, ಕೇಂದ್ರ ಕಚೇರಿಯ ಇಲಾಖೆಯ ಮುಖ್ಯಸ್ಥರು ಹಾಗೂ ವಿಭಾಗೀಯ ನಿಯಂತ್ರಣಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ ಎಂದು ವಿಜಯಪುರದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಪ್ರಕಟಣೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಕೃಷಿ ಮಹಾವಿದ್ಯಾಲಯದಲ್ಲಿ ಪಪಂ ಅಭ್ಯರ್ಥಿಗಳಿಗಾಗಿ ಮನೋವಿಜ್ಞಾನ ಹಾಗೂ ಪಜಾ ಅಭ್ಯರ್ಥಿಗಳಿಗಾಗಿ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರ ತಲಾ ಒಂದು ಹುದ್ದೆಗೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ನವೆಂಬರ್ ೨೫ರಂದು ಬೆಳಗ್ಗೆ ೧೧ ಗಂಟೆಗೆ ಕೃಷಿ ಮಹಾವಿದ್ಯಾಲಯದ ಡೀನ್ ಅವರ ಕಾರ್ಯಾಲಯದಲ್ಲಿ ಸಂದರ್ಶನ ನಡೆಯಲಿದೆ.ಅಗತ್ಯ ಶೈಕ್ಷಣಿಕ ಅರ್ಹತೆಯುಳ್ಳ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವಿಜಯಪುರದ ಕೃಷಿ ಮಹಾವಿದ್ಯಾಲಯದ ಡೀನ್ ಅವರ ಕಚೇರಿಯನ್ನು ಸಂಪರ್ಕಿಸುವಂತೆ ಮಹಾವಿದ್ಯಾಲಯದ ವಿದ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಕೃಷಿ ಮಹಾವಿದ್ಯಾಲಯದಲ್ಲಿ ಪಜಾ ಅಭ್ಯರ್ಥಿಗಳಿಗಾಗಿ ಕೃಷಿ ಮೈಕ್ರೊಬಯೊಲಾಜಿ ಹಾಗೂ ಪ.ಪಂ ಅಭ್ಯರ್ಥಿಗಳಿಗಾಗಿ ಅಗ್ರಿಕಲ್ಚರಲ್ ಎಕಾನಾಮಿಕ್ಸ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರ ತಲಾ ಒಂದು ಹುದ್ದೆಗೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ನವೆಂಬರ್ ೨೫ರಂದು ಬೆಳಗ್ಗೆ ೧೧ ಗಂಟೆಗೆ ಕೃಷಿ ಮಹಾವಿದ್ಯಾಲಯದ ಡೀನ್ ಅವರ ಕಾರ್ಯಾಲಯದಲ್ಲಿ ಸಂದರ್ಶನ ನಡೆಯಲಿದೆ.ಅಗತ್ಯ ಶೈಕ್ಷಣಿಕ ಅರ್ಹತೆಯುಳ್ಳ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವಿಜಯಪುರದ ಕೃಷಿ ಮಹಾವಿದ್ಯಾಲಯದ ಡೀನ್ ಅವರ ಕಚೇರಿಯನ್ನು ಸಂಪರ್ಕಿಸುವಂತೆ ಮಹಾವಿದ್ಯಾಲಯದ ವಿದ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಡಿಸೆಂಬರ್ ೩ರಂದು ಆಚರಿಸಲಿರುವ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ನ.೧೧ರಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರು ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದೆ.ಜಿಲ್ಲೆಯ ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರು ಹಾಗೂ ವಿಕಲಚೇತನರು ಸಭೆಯಲ್ಲಿ ಭಾಗವಹಿಸಿ, ತಮ್ಮ ಅಮೂಲ್ಯ ಸಲಹೆಗಳನ್ನು ನೀಡಬಹುದಾಗಿದೆ.ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪಂಚಾಯತ ಆವರಣದಲ್ಲಿರುವ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ದೂರವಾಣಿ ಸಂಖ್ಯೆ: ೦೮೩೫೨-೭೯೬೦೬೦ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
