ಉದಯರಶ್ಮಿ ದಿನಪತ್ರಿಕೆ
ಚಡಚಣ: ಚಡಚಣ ವಲಯದ ಚಡಚಣ ನಗರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಒಕ್ಕೂಟ ತರಬೇತಿ ಕಾರ್ಯಾಗಾರ ನಡೆಯಿತು.
ತಾಲೂಕಿನ ಯೋಜನಾಧಿಕಾರಿ ನಟರಾಜ ಎಲ್.ಎಂ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳದ ಸೇವಾ ಪರಂಪರೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉದ್ದೇಶ ಮತ್ತು ಕಾರ್ಯಕ್ರಮಗಳು, ಒಕ್ಕೂಟಗಳ ರಚನೆ ಹಾಗೂ ಪದಾಧಿಕಾರಿಗಳ ಜವಾಬ್ದಾರಿ, ಮತ್ತು ಒಕ್ಕೂಟ ಸಭೆಗಳ ಪರಿಣಾಮಕಾರಿ ನಿರ್ವಹಣೆ ಕುರಿತು ಮಾಹಿತಿ ನೀಡಿದರು.
ತಾಲೂಕು ವಿಚಕ್ಷಣಾಧಿಕಾರಿ ಸಿದ್ದಪ್ಪ ಚುಳಕಿ ಅವರು ಬ್ಯಾಂಕ್ ಮೂಲಕ ಸಾಲದ ಪ್ರಗತಿ ನಿಧಿ ವಿತರಣೆ, ಸಾಲದ ಸದ್ವಿನಿಯೋಗ, ಸಂಘದ ಪರಿಕಲ್ಪನೆ, ಬ್ಯಾಂಕ್ ಡಿಪಿ ಮತ್ತು ಪ್ರಗತಿ ರಕ್ಷಾ ಕವಚ ಕಾರ್ಯಕ್ರಮಗಳ ಕುರಿತು ಭಾಗವಹಿಸಿದವರಿಗೆ ಮಾರ್ಗದರ್ಶನ ನೀಡಿದರು.
ವಲಯ ಮೇಲ್ವಿಚಾರಕ ಶಿವಯ್ಯ ಹಿರೇಮಠ ಅವರು ಬ್ಯಾಂಕಿಂಗ್ ಸೇವಾ ವ್ಯವಸ್ಥೆ, ಸಿಸಿ ಖಾತೆ ನಿರ್ವಹಣೆ ಹಾಗೂ ಲಾಭಾಂಶ ವಿತರಣೆ ಕುರಿತು ವಿವರಿಸಿದರು.
ಕಾರ್ಯಕ್ರಮವನ್ನು ತಾಲೂಕು ಕೃಷಿ ಅಧಿಕಾರಿ ಸುದೀಪ್ ಕಟಗೇರಿ ನಿರೂಪಿಸಿ, ಸ್ವಾಗತ ಹಾಗೂ ವಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸೇವಾಪ್ರತಿನಿಧಿಗಳಾದ ಇಂತೀಯಾಜ್, ಅನುರಾಧ, ವಿಜಯಲಕ್ಷ್ಮಿ, ಬಸಿರಾ, ಬಿಸ್ಮಿಲ್ಲಾ, ಸನಾ, ರಾಜೇಶ್ವರಿ, ಗುರುದೇವಿ, ಭಾಗ್ಯಶ್ರೀ, ಗಿರಿಜಾ ಸೇರಿದಂತೆ ಚಡಚಣ ವಲಯದ ಒಕ್ಕೂಟ ಪದಾಧಿಕಾರಿಗಳು ಉಪಸ್ಥಿತರಿದ್ದರು.

