ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕಬ್ಬು ಬೆಳೆಗಾರರು ನ್ಯಾಯಯುತವಾಗಿ ತಮ್ಮ ಬೇಡಿಕೆಯನ್ನು ಕೇಳುತ್ತಿರುವುದರಲ್ಲಿ ತಪ್ಪೇನಿದೆ . ಈ ಹಿಂದೆ ರೈತರು ಪ್ರತಿ ಟನ್ ಕಬ್ಬಿಗೆ ರೂ.೪,೫೦೦ ನೀಡಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದರು. ಆದರೆ ಇದೀಗ ಪ್ರತಿ ಟನ್‌ಗೆ ಕನಿಷ್ಠ ರೂ.೩೫೦೦ ಕೇಳುತ್ತಿದ್ದಾರೆ. ಸರ್ಕಾರ ಇದಕ್ಕೆ ಕೂಡಲೇ ಸ್ಪಂದಿಸಬೇಕು ಎಂದು ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ರೈತರು ಮತ್ತು ಕಬ್ಬು ಬೆಳೆಗಾರರು ಎದುರಿಸಿಕೊಂಡು ಬರುತ್ತಿರುವ ಸಮಸ್ಯೆ ಹಾಗೂ ಸಂಕಷ್ಟಗಳು ಸರಕಾರಕ್ಕೆ ತಿಳಿಯದ ವಿಷಯವೇನಲ್ಲ. ಎಲ್ಲವೂ ಗೊತ್ತಿರುವಂತಹ ವಿಚಾರಗಳೇ ಆಗಿವೆ. ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕಾದರೆ ರೈತರು ಪ್ರತಿ ವರ್ಷ ಬೆಂಬಲ ಬೆಲೆಗಾಗಿ ಹೋರಾಟ ಮಾಡಬೇಕಾದ ದುಸ್ಥಿತಿ ಎದುರಾಗಿದೆ. ಆದರೆ ಇದು ಹೋಗಬೇಕಾಗಿದೆ. ಪ್ರಸ್ತುತ ರೈತರು ಕೇಳುತ್ತಿರುವ ಬೆಲೆಯು ಸೂಕ್ತವಾಗಿದೆ. ನಮ್ಮ ರೈತರಿಗೆ ಹೆಚ್ಚಿನ ಬೆಲೆಯನ್ನೇ ನೀಡುವ ಪ್ರಯತ್ನ ರಾಜ್ಯ ಸರಕಾರ ಮಾಡಬೇಕು. ರಾಜ್ಯ ಸರಕಾರ ಕೂಡಲೇ ರೈತರಿಗೆ ಸ್ಪಂದಿನೆ ಮಾಡದೇ ಹೋದರೆ ಇನ್ನಷ್ಟು ರೈತರ ಹೋರಾಟ ಜಟೀಲವಾಗುತ್ತಾ ಹೋಗುತ್ತದೆ ಎಂದು ಆಗ್ರಹಿದ್ದಾರೆ.

