ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಸ್ಮಶಾನ ಜಾಗದ ಸಲುವಾಗಿ ಅಂಜುಮನ ಕಮಿಟಿಯ ಮುಸ್ಲಿಂ ಮುಖಂಡರು ಹಾಗೂ ಪಟ್ಟಣ ಪಂಚಾಯತ ಅದ್ಯಕ್ಷರ ಮದ್ಯ ವಾಗ್ವಾದ ಜರುಗಿತು. ಗುರುವಾರ ಪಟ್ಟಣದ ಇಂಡಿ ರಸ್ತೆಗೆ ಹೊಂದಿಕೊಂಡಿರುವ ಮುಸ್ಲಿಂ ಸಮಾಜದ ಸ್ಮಶಾನ ಜಾಗದಲ್ಲಿದ್ದ ಕಾಂಪೌಂಡ್ ರಸ್ತೆ ಅಗಲಿಕರಣ ಸಂದರ್ಭದಲ್ಲಿ ತೆರವುಗೊಳಿಸಿದರಿಂದ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ ಇದರಿಂದ ಸ್ಮಶಾನ ಜಾಗ ಗಲಿಜಾಗುತ್ತಿದೆ ಕಾಂಪೌಂಡ್ ನಿರ್ಮಿಸಲು ಆಗ್ರಹಿಸಿ ಮನವಿ ಮಾಡಲು ಮುಂದಾಗಿದ್ದರು. ಸ್ಥಳಕ್ಕೆ ಆಗಮಿಸಿದ್ದ ಪ.ಪಂ. ಅಧ್ಯಕ್ಷ ಸಾಧೀಕ ಸುಂಬಡ ಮಾತನಾಡಿ ಇಂಡಿ ರಸ್ತೆಯ ಐಬಿ ಇಂದ ಅಫಜಲಪುರ ರಸ್ತೆ ಪೆಟ್ರೋಲ್ ಪಂಪ ವರೆಗೆ ರಸ್ತೆ ಮದ್ಯದಿಂದ 50 ಪುಟ ವರೆಗೂ ತೆರವು ಮಾಡಲಾಗಿದೆ. ಈ ತೆರವು ಕಾರ್ಯದಲ್ಲಿ ಶ್ರೀಮಂತ, ಬಡವ ಯಾವುದೆ ಧರ್ಮ ಸಮುದಾಯ, ಜಾತಿ ತಾರತಮ್ಯ ಮಾಡದೆ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ ಎಂದರು.
ತೆರವು ಕಾರ್ಯದಲ್ಲಿ ಹಿಂದೂ ಸಮುದಾಯದ ಗೊಲ್ಲರ ಸಮಾಜದ ಯಲ್ಲಮ್ಮ ದೇವಿ ದೇವಸ್ಥಾನ ಪೂರ್ಣವಾಗಿ ತೆರವು ಮಾಡಲಾಗಿದೆ ಹಾಗೆ ಅಫಜಲಪುರ ರಸ್ತೆಯ ಹನುಮಾ ದೇವಸ್ಥಾನ ಕಾಂಪೌಂಡ್, ಅಂಬೇಡ್ಕರ್ ನಗರದ ದಲಿತ ಸಮುದಾಯದ ಬಡ ಜನರ ಮನೆಗಳು ತೆರವು ಮಾಡಿದೆ, ಹಾಗೆ ಹುಚ್ಚಲಿಂಗೇಶ್ವರ ದೇವಸ್ಥಾನದ ಬಳಿ ಇರುವ ಸಮುದಾಯ ಭವನ, ಅಂಬೇಡ್ಕರ್ ನಗರದ ಕಮಾನ ಎಲ್ಲವು ತೆರವು ಮಾಡಲಾಗಿದೆ. ಹಾಗೆ ಮುಸ್ಲಿಂ ಸಮಾಜದ ಸ್ಮಶಾನದ ಜಾಗದಲ್ಲಿನ ಕಾಂಪೌಂಡ್ ತೆರವು ಮಾಡಲಾಗಿದೆ. 50 ಪುಟ ಜಾಗ ಯಲ್ಲಿವರೆಗು ಬರುತ್ತೆ ಅಲ್ಲಿಯವರೆಗೂ ಕಾನೂನು ರೀತಿ ತೆರವು ಮಾಡಲಾಗುತ್ತೆ ಯಾವುದೆ ಕಾರಣಕ್ಕು ಬಿಡುವದಿಲ್ಲ. ಅದಕ್ಕೆ ಒಪ್ಪಿದರೆ ಪಟಣ್ಣ ಪಂಚಾಯಿತಿಯಿಂದಲೆ ಸ್ಮಶಾನಕ್ಕೆ ಕಾಂಪೌಂಡ್ ನಿರ್ಮಿಸಿ ಕೊಡುತ್ತೇವೆ. ಯಾರಿಗೂ ತಾರತಮ್ಯ ಮಾಡುವದಿಲ್ಲ. ಅಭಿವೃದ್ಧಿ ಕೆಲಸಕ್ಕೆ ಯಾರು ಅಡ್ಡಿಪಡಿಸಬೇಡಿ ಎಂದು ವಿನಂತಿಸಿದರು.
ಕೆಲ ಮುಸ್ಲಿಂ ಯುವಕರು ಪ.ಪಂ ಅಧ್ಯಕ್ಷ ನೀನು ಒಬ್ಬ ಮುಸ್ಲಿಂ ಆಗಿ ನಮಗೆ ವಿರುದ್ದವಾಗುವದು ಸರಿಯಲ್ಲ, ಮತ್ತು ಸ್ಮಶಾನ ಜಾಗ ಯಾವುದೆ ಕಾರಣಕ್ಕೂ ತೆರವು ಮಾಡಕೂಡದು, ತೆರವು ಮಾಡಲು ಮುಂದಾದರೆ ಅದಕ್ಕೆ ಮುಸ್ಲಿಂರು ಎಲ್ಲರೂ ಒಂದಾಗಿ ಅಡ್ಡಿಪಡಿಸುತ್ತೆವೆ ಎಂದಾಗ ಅದಕ್ಕೆ ಅಧ್ಯಕ್ಷ ಸಾಧಿಕ ಸುಂಬಡ, ನಾನು ಮುಸ್ಲಿಂರಿಗೆ ಅಷ್ಟೆ ಅಧ್ಯಕ್ಷನಲ್ಲ, ಈ ಪಟ್ಡಣಕ್ಕೆ ಅಧ್ಯಕ್ಷ ಈ ಸ್ಥಾನದಲ್ಲಿದ್ದು ಯಾರಿಗೂ ತಾರತಮ್ಯ ಮಾಡದೆ ಕಾನೂನು ಚೌಕಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೆನೆ ಎಂದರು.
ಪ.ಪಂ. ಅಧ್ಯಕ್ಷ ಸಾಧಿಕ ಸುಂಬಡ ಮತ್ತು ಮುಸ್ಲಿಂ ಮುಖಂಡ ವಾಹಬ ಸುಂಬಡ ಮದ್ಯೆ ಮಾತಿನ ವಾಗ್ವಾದ ಜರುಗಿ ವಿಕೋಪಕ್ಕೆ ತಲುಪಿತು. ಕೆಲ ಮುಖಂಡರು ಮದ್ಯ ಪ್ರವೇಶಿಸಿ ಎಲ್ಲರು ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳೊಣ ಎಂದು ಸಮಾದಾನಪಡಿಸಿದರು.
ಅಂಜುಮನ್ ಕಮಿಟಿಯ ಕಾರ್ಯದರ್ಶಿ ರಾಜಅಹಮ್ಮದ ಪಟೇಲ, ಫಾರುಖ ಮೇಲಿನಮನಿ ಸೇರಿದಂತೆ ನೂರಾರು ಮುಸ್ಲಿಂ ಸಮುದಾಯದ ಜನರು ಇದ್ದರು.

