ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಬೆಳಗಾವಿ, ವಿಜಯಪುರ,ಜಿಲ್ಲೆಗಳ ರೈತರು ಪ್ರತಿ ಟನ್ ಕಬ್ಬಿಗೆ ರೂ ೩೫೦೦ ನಿಗದಿಗಾಗಿ ಕಳೆದ ಏಳೆಂಟು ದಿನಗಳಿಂದ ನಡೆಸುತ್ತಿರುವ ಹೋರಾಟಕ್ಕೆ ವಾಸು ದೇವ ಬಣದ ರಾಜ್ಯ ರೈತ ಸಂಘ( ಹಸಿರು ಸೇನೆ) ನಿಡಗುಂದಿ ತಾಲೂಕಾ ಘಟಕ ತನ್ನ ಬೆಂಬಲ ವ್ಯಕ್ತಪಡಿಸಿತು.
ಆಲಮಟ್ಟಿಯಲ್ಲಿ ಜರುಗಿದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ನಿಡಗುಂದಿ ತಾಲೂಕ ಘಟಕದ ಅಧ್ಯಕ್ಷ ತಿರುಪತಿ ಬಂಡಿವಡ್ಡರ ಮಾತನಾಡಿ, ರೈತರು ಬೆಳೆದ ಕಬ್ಬಿನಿಂದ ನೂರಾರು ಕೋಟಿ ಲಾಭ ಗಳಿಸುತ್ತಿರುವ ಸಕ್ಕರೆ ಕಾರ್ಖಾನೆ ಗಳ ಮಾಲೀಕರು ರೈತರು ಬೆಳೆದ ಕಬ್ಬಿಗೆ ನ್ಯಾಯೋಚಿತವಾದ ಬೆಲೆ ನೀಡುತ್ತಿಲ್ಲ, ಜೊತೆ ಕಬ್ಬು ಕಳುಹಿಸಿದ ರೈತರಿಗೆ ಸಕಾಲಕ್ಕೆಹಣ ಪಾವತಿ ಮಾಡುತ್ತಿಲ್ಲ , ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದರು.
ಕಬ್ಬಿನ ಕಾರ್ಖಾನೆ ಗಳು ಹೆಚ್ಚಾಗಿ ರಾಜಕಾರಣಿಗಳ ಹಿಡಿತದಲ್ಲಿದ್ದು ರೈತರ ಜೀವದ ಜೊತೆ ಆಟವಾಡುತ್ತಿವೆ , ಆದ್ದರಿಂದ ಸರ್ಕಾರ ರೈತರ ಬೇಡಿಕೆಗಳನ್ನು ಒಪ್ಪಿಕೊಳ್ಳ ಬೇಕೆಂದು ಆಗ್ರಹಿಸಿದರು
ಈ ವಿಷಯದಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸಿದರೆ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ೫೦ ನ್ನು ಬಂದ್ ಮಾಡಿ ನಿಡಗುಂದಿ ತಾಲೂಕಾ ಘಟಕದ ರೈತ ಸಂಘದ ವತಿಯಿಂದ ಉಗ್ರ ಹೋರಾಟ ಮಾಡಲಾಗುವುದೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ( ಹಸಿರು ಸೇನೆ ಆಲಮಟ್ಟಿ ಶಾಖೆಯ ಕಾರ್ಯದರ್ಶಿ ಗುರುರಾಜ ವಡ್ಡರ , ಮತ್ತು ಕರ್ನಾಟಕ ರಾಜ್ಯ ದಲಿತ ಯುವಶಕ್ತಿ ಸಮಿತಿ ರಾಜ್ಯ ಅಧ್ಯಕ್ಷರಾದ ಬಾಳೇಶ್ ತಳವಾರ, ತಾಲೂಕು ರೈತ ಮುಖಂಡರಾದ ಶಿವಪ್ಪ ಬೇನಮಟ್ಟಿ, ರೈತ ಮುಖಂಡರಾದ ಬಸವರಾಜ ಸಾತಿಹಾಳ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು
