ರೈತರ ಹೋರಾಟಕ್ಕೆ ವಕೀಲರ ಸಂಘ, ಎಬಿವಿಪಿ ಬೆಂಬಲ | ರಸ್ತೆ ತಡೆದು ಪ್ರತಿಭಟನೆ
ಉದಯರಶ್ಮಿ ದಿನಪತ್ರಿಕೆ
ಇಂಡಿ: ಪ್ರತಿ ಟನ್ ಕಬ್ಬಿಗೆ ರೂ ೩೫೦೦ ದರ ನಿಗದಿ ಮಾಡುವಂತೆ ಆಗ್ರಹಿಸಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರೈತರು ನಡೆಸುತ್ತಿರುವ ಹೋರಾಟ ಗುರುವಾರ ನಾಲ್ಕನೆಯ ದಿನಕ್ಕೆ ಕಾಲಿಟ್ಟಿತು.
ರೈತರ ಹೋರಾಟಕ್ಕೆ ಬೆಂಬಲಿಸಿ ವಕೀಲರ ಸಂಘ ಮತ್ತು ಎಬಿವಿಪಿ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿ ರೈತರ ಹೋರಾಟ ಮುಂದುವರೆದಿದೆ.
ಈ ಮಧ್ಯೆ ಹೋರಾಟಕ್ಕೆ ಜೆಡಿ ಎಸ್, ಬಿಜೆಪಿ ಕರವೇ ಸೇರಿ ವಿವಿಧ ಸಂಘಟನೆಗಳು ಸಾಥ ಕೊಟ್ಟಿದ್ದು ರೈತರ ಕಿಚ್ಚು ಮತ್ತಷ್ಟು ಹೆಚ್ಚಾಗಿದೆ.
ಇಂದು ವಕೀಲರು, ಎಬಿವಿಪಿ ಕಾರ್ಯಕರ್ತರು ಮತ್ತು ಕಬ್ಬು ಹೋರಾಟಗಾರರು ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ಮಾಡಿ ಹೋರಾಟ ಮಾಡಿದರು.
ಇದರಿಂದ ಬಸ್ಸುಗಳು ಮತ್ತು ಯಾವದೇ ವಾಹನ ಚಲಿಸಲಿಲ್ಲ. ಮತ್ತು ಪ್ರಯಾಣಿಕರಿಗೆ ಅತೀವ ತೊಂದರೆಯಾಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಒಂದು ಟನ್ ಕಬ್ಬು ನುರಿದರೆ ಕಾಖಾನೆಯವರಿಗೆ ಸಕ್ಕರೆ, ಮೊಲಾಸಿಸ್, ಎಥೆನಾಲ್ ಮತ್ತು ವಿದ್ಯುತ್ ಸೇರಿ ರೂ ಹದಿನಾಲ್ಕು ಸಾವಿರ ಬರುತ್ತದೆ.
ಸರಕಾರ ಸಕ್ಕರೆ ಕಾರ್ಖಾನೆಗಳಿಂದ ಉತ್ಪಾದನೆಯಾಗುವ ಉಪ ಉತ್ಪನ್ನಗಳಿಂದ ಸಂಗ್ರಹವಾಗುವ ತೆರಿಗೆ ಪ್ರಮಾಣದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಸಮನ್ವಯತೆಯಿಂದ ಶೇ ೧೦ ರಷ್ಟು ಅಂದರೆ ರೂ ೪೦೦ ಅನ್ನು ಸರಕಾರವೇ ನೀಡಿದರೆ ರೈತರಿಗೆ ಅನುಕೂಲವಾಗಲಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಎಸ್.ಬಿ.ಬೂದಿಹಾಳ ವಕೀಲರಾದ ಸೋಮು ನಿಂಬರಗಿಮಠ, ಎಂ.ಎಸ್.ತೇಲಿ, ಮಾಣಿಕ ಜನಾಬ, ಎಸ್.ಎಸ್.ಪಾಟೀಲ, ಬೆ.ಬಿ.ಬೇವನೂರ ಮಾತನಾಡಿ, ಕಾರ್ಖಾನೆಗಳು ಕಬ್ಬಿನ ತೂಕದಲ್ಲಿ ಪಾರಧರ್ಶಕತೆ ಕಾಪಾಡಬೇಕು, ಪ್ರತಿ ಕಬ್ಬಿಗೆ ರೂ ೩೫೦೦ ದರ ನೀಡಬೇಕು. ಮತ್ತು ರೈತರಿಗೆ ಕಬ್ಬು ಸಾಗಾಣಿಕೆ ಮಾಡಿದ ೧೫ ದಿನದಲ್ಲಿ ಹಣ ಪಾವತಿಸಬೇಕು. ಜಿಲ್ಲಾಧಿಕಾರಿ ಕಬ್ಬಿನ ತೂಕದಲ್ಲಿ ಕಾಳಜಿ ವಹಿಸಬೇಕು ಎಂದರು.
ಎಬಿವಿಪಿ ಸಚೀನ ಧನಗೊಂಡ, ರಾಹುಲ್ ಜಾಧವ, ಗಣೇಶ ಹಂಜಗಿ, ಐಶ್ವರ್ಯ ಅರಳಿಚಂಡಿ, ಭಾಗ್ಯಶ್ರೀ ವಾಲಿಕಾರ, ಪಲ್ಲವಿ ಕಂಬಾರ, ಆರತಿ ಸಾಲೋಟಗಿ ಯೋಗೇಶ ಪೂಜಾರ ಭೀಮನಗೌಡ ಬಗಲಿ ಮಾತನಾಡಿದರು.
ಜೆಡಿ ಎಸ್ ಬಿ.ಡಿ.ಪಾಟೀಲ ಬಿಜೆಪಿಯ ತಾಲೂಕಾ ಅಧ್ಯಕ್ಷ ಹಣಮಂತಗೌಡ ಪಾಟೀಲ, ಕಾಸುಗೌಡ ಬಿರಾದಾರ, ಮಲ್ಲಿಕಾರ್ಜುನ ಕಿವಡೆ, ಮಲ್ಲು ಗುಡ್ಲ, ಕರವೇ ಬಾಳು ಮುಳಜಿ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಬಿ.ಕಂಬೋಗಿ ಮಾತನಾಡಿದರು.
ಸ್ಥಳಕ್ಕೆ ಗೋಳಸಾರದ ಪರಮಪೂಜ್ಯ ಅಭಿನವ ಪುಂಡಲಿಂಗ ಶಿವಯೋಗಿಗಳು, ಚಿಕ್ಕಬೇವನೂರದ ಪರಮಪೂಜ್ಯ ಗುರು ಚಕ್ರವರ್ತಿ ಓಂಕಾರಯ್ಯ ಮಹಾಸ್ವಾಮಿಗಳು ಸೇರಿದಂತೆ ಹಲವಾರು ಶ್ರೀಗಳು ಬೆಂಬಲ ಸೂಚಿಸಿದರು.
ವಕೀಲರಾದ ಬಿ.ಕೆ.ಮಸಳಿ, ಅರವಿಂದ ಹಂಜಗಿ, ಆರ್.ಆರ್.ಕೋಳಿ, ರೋಹಿತ ಕೋಳೆಕರ,ಅಳಂದಿಕರ, ಶೀಲವಂತ ಉಮರಾಣಿ, ಅನೀಲಗೌಡ ಬಿರಾದಾರ, ಭೀಮನಗೌಡ ಬಿರಾದಾರ ಹಿರೇಬೇವನೂರ ಮತ್ತಿತರಿದ್ದರು.

