Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಇಂಡಿ: ಅತೀವೃಷ್ಟಿ ಹಾಗೂ ಭೀಮೆಯ ಪ್ರವಾಹದ ದುಸ್ಥಿತಿಯಲ್ಲಿರುವ ಸಂತ್ರಸ್ತರಿಗೆ ದಸರಾ ಹಬ್ಬದ ಪ್ರಯುಕ್ತ ಮೂರು ನೂರು ಕುಟುಂಬಕ್ಕೆ ಆಹಾರ ಕಿಟ್ ವಿತರಿಸಿ ಬಿಜೆಪಿ ಎಸ್ಟಿ ಮೂರ್ಚಾ ಜಿಲ್ಲಾ ಅಧ್ಯಕ್ಷ ರವಿ ವಗ್ಗೆ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.ತಾಲೂಕಿನ ಬುಯ್ಯಾರ ಗ್ರಾಮದಲ್ಲಿ ಭೀಮೆಯ ಪ್ರವಾಹದಿಂದ ಜನರು ಬದುಕು ಅತ್ಯಂತ ಚಿಂತಾ ಜನಕವಾಗಿದೆ. ಒಂದು ಕಡೆ ಮೇಘರಾಜನ ಅಬ್ಬರ ಹೆಚ್ಚಾಗಿದ್ದು, ಇನ್ನೊಂದು ಕಡೆ ಮಹಾರಾಷ್ಟ್ರದ ಉಜನಿ‌ ಜಲಾಶಯದಿಂದ ಹಾಗೂ ಸಿನಾ ನದಿಯಿಂದ‌‌ ಲಕ್ಷಾಂತರ ಕ್ಯೂಸಕ್ಸ್ ನೀರು ಭೀಮೆಗೆ ಹರಿದು ಬರುತ್ತಿದೆ. ಇದರಿಂದ ಬುಯ್ಯಾರ ಗ್ರಾಮದಲ್ಲಿ ಪ್ರವಾಹ ಅವಾಂತರ ಸೃಷ್ಟಿ ಮಾಡಿದ್ದು ಜನರು ಬದುಕು ದುಸ್ತರವಾಗಿದೆ. ಆದರೆ‌ ನಾಡುದೇವಿಯ ಮತ್ತು ದಸರಾ ಹಬ್ಬ ಪ್ರಯುಕ್ತ ಹೆಣ್ಣು ಮಕ್ಕಳು ಉಪವಾಸ ಇರುವುದನ್ನು ಕಂಡು, ಮನುಕುಲಕಿ ಬಿಜೆಪಿ ಎಸ್ಟಿ ಮೂರ್ಚಾ ಜಿಲ್ಲಾ ಅಧ್ಯಕ್ಷ ರವಿ ವಗ್ಗೆ‌ ಹಾಗೂ ಅವರ ತಂಡ ಗ್ರಾಮದಲ್ಲಿ ಆಹಾರ ಕಿಟ್ ಹಂಚುವ ಮೂಲಕ ಮಾನವಿಯತೆ ಮೆರೆದಿದ್ದಾರೆ.ಈ ಸಂದರ್ಭದಲ್ಲಿ‌ ಎಸ್ಟಿ ಮೂರ್ಚಾ ಅಧ್ಯಕ್ಷ ರವಿ…

Read More

ನವರಾತ್ರಿ ಉಡಿ ತುಂಬುವ ಕಾರ್ಯಕ್ರಮದಲ್ಲಿ ಪ್ರೊ:ಎಂ.ಎಸ್.ಖೊದ್ನಾಪೂರ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೆಡುಕಿನ ವಿರುದ್ದ ಒಳಿತಿನ ವಿಜಯವನ್ನು ನಾವು ನವರಾತ್ರಿ ಹಬ್ಬದ ಮೂಲಕ ಸ್ಮರಿಸುತ್ತೇವೆ. ದುರ್ಗಾದೇವಿಯು ಒಂಬತ್ತು ದಿನಗಳವರೆಗೆ ಶಕ್ತಿಯ ಆರಾಧನೆ ಮಾಡುವ ಮತ್ತು ದೇವಿಯು ಜಗತ್ತಿನಲ್ಲಿ ದುಷ್ಟರ ಸಂಹಾರ ಮಾಡಿ, ಶಿಷ್ಟರ ರಕ್ಷಣೆಗಾಗಿ ನವಶಕ್ತಿ ಅವತಾರಗಳನ್ನು ತಾಳುತ್ತಾಳೆ ಎಂಬ ಪ್ರತೀತಿಯಿದೆ ಎಂದು ಪ್ರೊ. ಎಂ.ಎಸ್.ಖೊದ್ನಾಪೂರ ಅಭಿಪ್ರಾಯಪಟ್ಟರು.ಅವರು ನಗರದ ಅಥಣಿ ರಸ್ತೆಯಲ್ಲಿರುವ ಎನ್.ಜಿ.ಓ ಕಾಲನಿಯ ಶ್ರೀ ಹನುಮಾನ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಜರುಗಿದ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಅವರು ಮಾತನಾಡಿ, ಯತ್ರ ನಾರೇಶು ಪೂಜ್ಯಂತೇ ತತ್ರ ರಮಂತೇ ದೇವತಾ: ಎಂಬ ಸಂಸ್ಕೃತ ಶ್ಲೋಕದಂತೆ ಎಲ್ಲಿ ಸ್ತ್ರೀಯನ್ನು ಪೂಜ್ಯನೀಯ ಮತ್ತು ಗೌರವಯುತ ಭಾವನೆಯಿಂದ ಕಾಣುತ್ತಾರೋ ಅಲ್ಲಿ ಸ್ವತ: ದೇವತೆಗಳೇ ಬಂದು ನೆಲೆಸುತ್ತಾರೆ ಎಂಬ ಪ್ರತೀತಿಯಿದೆ. ಈ ಹಬ್ಬದ ಪ್ರಯುಕ್ತ ಸುಮಂಗಲೆಯರು ಪ್ರತಿ ದಿನ ಮುಂಜಾವಿನ ಸಮಯದಲ್ಲಿ ಶಮಿವೃಕ್ಷಕ್ಕೆ ಪೂಜೆಯನ್ನು ಸಲ್ಲಿಸುವುದು, ಪ್ರತಿ ಮನೆಯಲ್ಲೂ ಒಂಬತ್ತು ದಿನಗಳ ಪರ್ಯಂತ ದೀಪ ಹಾಕುವುದು, ಘಟಸ್ಥಾಪನೆ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳದೇ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಒಳ್ಳೆಯ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು ಎಂದು ಸಕ್ಕರೆ, ಕಬ್ಬು ಅಭಿವೃದ್ಧಿ, ಕೃಷಿ ಮಾರುಕಟ್ಟೆ ಸಚಿವ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ಹೇಳಿದರು.ತಾಲ್ಲೂಕಿನ ಭೈರವಾಡಗಿ ಗ್ರಾಮದಲ್ಲಿ ಶನಿವಾರ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ದಶಮಾನೋತ್ಸವ ಹಾಗೂ ಸಹಕಾರಿ ಸೌಧ ಕಟ್ಟಡದ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.ಸಂಘಗಳ ಮೂಲಕ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಮತ್ತು ಹೈನುಗಾರಿಕೆ, ಕುರಿಸಾಕಾಣಿಕೆ, ದ್ರಾಕ್ಷಿ ಬೆಳೆ ಸಾಲ, ತೋಟದ ಮನೆ ನಿರ್ಮಾಣಕ್ಕೆ ಸಾಲ, ಸ್ವಸಹಾಯ ಗುಂಪುಗಳಿಗೆ ಸಾಲ ಸಹಿತ ವಿವಿಧ ಸಾಲಗಳನ್ನು ನೀಡಲಾಗುತ್ತಿದೆ. ಇವುಗಳನ್ನು ಪಡೆದ ರೈತರು ಆರ್ಥಿಕ ಅಭಿವೃದ್ಧಿ ಸಾಧಿಸಿ ಪುನಃ ಸಂಘದಲ್ಲಿ ಹೆಚ್ಚು ಠೇವಣಿ ಇಡುವಂತೆ ಸದೃಡರಾಗಬೇಕೆಂದು ಹೇಳಿದರು.ಸಂಘದ ಸಂಸ್ಥಾಪಕ ಅಧ್ಯಕ್ಷ ಗುರುಪ್ರಸಾದ ಸ್ವಾಮೀಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಚಿವರು ತಿಳಿಸಿದ ಎಲ್ಲ ಸಾಲಸೌಲಭ್ಯಗಳನ್ನು ಸಂಘದಿAದ ಪಡೆದು ಆರ್ಥಿಕ ಅಭಿವೃದ್ಧಿ ಸಾಧಿಸಿ ಸಂಘದ…

Read More

ಉದಯರಶ್ಮಿ ದಿನಪತ್ರಿಕೆ ದೇವರ ಹಿಪ್ಪರಗಿ: ಶರಣರ ನಾಡಿನ ನಾಡದೇವಿಯ ೧೦ನೇ ವರ್ಷದ ಉತ್ಸವದ ಅಂಗವಾಗಿ ದೇವಿಯ ಮೆರವಣಿಗೆ ಭಕ್ತಿ ಭಾವದೊಂದಿಗೆ ವಿಜೃಂಭಣೆಯಿಂದ ಜರುಗಿತು.ಪಟ್ಟಣದ ಬುದ್ನಿ ಓಣಿಯಲ್ಲಿ ದಿ:೨೮ ರಿಂದ ಅಕ್ಟೋಬರ್ ೨ರವರೆಗೆ ಐದುದಿನಗಳ ಕಾಲ ಪ್ರತಿಷ್ಠಾಪನೆಗೊಳ್ಳುತ್ತಿರುವ ನಾಡದೇವಿ ಮಹೋತ್ಸವದ ಅಂಗವಾಗಿ ದೇವಿಯ ಮೆರವಣಿಗೆ ಭಾನುವಾರ ಇಂಡಿ ರಸ್ತೆಯ ಕೆ.ಇ.ಬಿಯಿಂದ ಪ್ರಾರಂಭಗೊಂಡು, ಅಂಬೇಡ್ಕರ ವೃತ್ತ, ಮೊಹರೆ ವೃತ್ತ ಮಾರ್ಗವಾಗಿ ಮೇನ್ ಬಜಾರ್ , ಪತ್ತಾರಕಟ್ಟೆಯ ಮೂಲಕ ಪ್ರತಿಷ್ಠಾಪನೆಯ ಸ್ಥಳ ಸಾಯಂಕಾಲ ತಲುಪಿತು.ಮೆರವಣಿಗೆಯಲ್ಲಿ ಸಾರವಾಡದ ಗೊಂಬೆಮೇಳ, ಸ್ಥಳೀಯ ಚಿಕ್ಕಮಕ್ಕಳ ಕೋಲಾಟ ಹಾಗೂ ಜಮಖಂಡಿಯ ಸಂಗೀತ ವೃಂದದ ನಡುವೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನೋಡುಗರ ಗಮನ ಸೆಳೆದರು. ಪೂರ್ಣಕುಂಭಹೊತ್ತ ಮಹಿಳೆಯರು, ಕಳಸ ಕನ್ನಡಿಗಳೊಂದಿಗೆ ಸುಮಂಗಲೆಯರು ಮೆರವಣಿಗೆಯಲ್ಲಿ ಬರಿಗಾಲಲ್ಲಿ ನಡೆದು ತಮ್ಮ ಭಕ್ತಿ ತೋರಿದರು.ಉತ್ಸವ ಸಮೀತಿ ಅಧ್ಯಕ್ಷ ಸಾಹೇಬಗೌಡ ದಾನಗೊಂಡ, ಉಪಾಧ್ಯಕ್ಷ ವೀರೇಶ ಬುದ್ನಿ, ದಿನೇಶ ಪಾಟೀಲ, ಪ್ರಭುದೇವ ಹಿರೇಮಠ, ಚೇತನ ಇಂಡಿ, ಕಾಶೀನಾಥ ಹಿರೇಮಠ, ಬಸವರಾಜ ಬುದ್ನಿ, ಶ್ರೀಶೈಲ ಯಂಭತ್ನಾಳ, ದತ್ತಾತ್ರೇಯ ಕುಲಕರ್ಣಿ, ಕುಮಾರಸ್ವಾಮಿ…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಇಂದು ಭೀಮಾ ನದಿಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಸಂತ್ರಸ್ತರ ಅಹವಾಲುಗಳನ್ನು ಆಲಿಸಿದರು.ಆಲಮೇಲ ತಾಲೂಕಿನ ದೇವಣಗಾಂವ, ಕುಮಸಗಿಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾದ ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರ ಸಮಸ್ಯೆ ಆಲಿಸಿದರು.ಕಾಳಜಿ ಕೇಂದ್ರಗಳಲ್ಲಿ ಕಲ್ಪಿಸಿರುವ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದ ಅವರು, ಅಲ್ಲಿನ ಸಂತ್ರಸ್ಥರೊಂದಿಗೆ ಮಾತನಾಡಿ, ಕಾಳಜಿ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಯಾರು ಸಹ ಭಯ ಪಡುವ ಅವಶ್ಯಕತೆ ಇಲ್ಲ. ಜಿಲ್ಲಾಡಳಿತ ನಿಮ್ಮ ಜೊತೆಗಿದ್ದು, ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸನ್ನದ್ಧವಾಗಿದ್ದು, ಯಾವುದೇ ಜನ ಜಾನುವಾರಗಳ ಪ್ರಾಣ ಹಾನಿಯಾಗದಂತೆ ಎಲ್ಲಾ ರೀತಿಯ ಸಕಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.ಸಂತ್ರಸ್ತರಿಗೆ ಊಟೋಪಚಾರ ಹಾಗೂ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕುಮಸಗಿ ಗ್ರಾಮದ ಹತ್ತಿರ ಹರಿಯುವ ಭೀಮಾ ನದಿ ತೀರಕ್ಕೆ ಭೇಟಿ ನೀಡಿ, ಪ್ರವಾಹ ಪರಿಸ್ಥಿತಿಯ ಕುರಿತು ಅವಲೋಕಿಸಿದರು.ದೇವಣಗಾಂವ ಗ್ರಾಮದ ಸಮೀಪ ಇರುವ ದೇವಣಗಾವ ಸೇತುವೆಗೆ ಭೇಟಿ ನೀಡಿ…

Read More

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತ ಸಂಪೂರ್ಣ ಹದಗೆಟ್ಟಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ಕೆಟ್ಟಿದೆ, ಅಂದಾದುಂದಿ ಸರ್ಕಾರ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ ಹೇಳಿದರು.ಭಾನುವಾರ, ಆಲಮಟ್ಟಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ರಾಜ್ಯಾದ್ಯಂತ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿದೆ. ಬೆಂಗಳೂರಿನ ಹದಗೆಟ್ಟ ರಸ್ತೆ ಸಮಸ್ಯೆ ವಿಶ್ವದಾದ್ಯಂತ ಚರ್ಚೆಯಾಗುತ್ತಿದೆ. ಬಾಗಲಕೋಟೆಯಿಂದ ಆಲಮಟ್ಟಿಗೆ ಬರಬೇಕಾದರೂ ರಸ್ತೆ ತುಂಬಾ ತಗ್ಗು ದಿನ್ನೆಗಳು ಎಂದು ಶೆಟ್ಟರ್ ಆರೋಪಿಸಿದರು.ಗುತ್ತಿಗೆದಾರ ಸಂಘದವರು ಬಿಜೆಪಿ ಸರ್ಕಾರವಿದ್ದಾಗಕ್ಕಿಂತಲೂ ಎರಡು ಪಟ್ಟು ಹೆಚ್ಚು ಭ್ರಷ್ಟಾಚಾರ ಕಾಂಗ್ರೆಸ್ ಸರ್ಕಾರದಲ್ಲಿದೆ ಎಂದು ಆರೋಪಿಸಿದೆ. ಕಳೆದ ಮೂರು ವರ್ಷಗಳ ಹಿಂದೆ ಬಿಜೆಪಿ ಸರ್ಕಾರದಲ್ಲಿ ಶೇ ೪೦ ರಷ್ಟು ಭ್ರಷ್ಟಾಚಾರ ಇದೆ ಎಂದು ಹೇಳಿ, ಅದಕ್ಕೆ ಹೋರಾಟ ರೂಪಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಈಗ ಇಂತಹ ಆರೋಪ ಕಾಂಗ್ರೆಸ್ ಸರ್ಕಾರಕ್ಕೂ ಬಂದಿದೆ. ಬಿಜೆಪಿ ಸರ್ಕಾರದಲ್ಲಿ ಮಾಡಿದ ಆರೋಪದ ತನಿಖೆ ಕಾಂಗ್ರೆಸ್ ಸರ್ಕಾರ ಕೈಗೊಂಡರೂ ಅದು ಸಾಬಿತಾಗಲಿಲ್ಲ ಎಂದರು.ಈಗ ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗದೇ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಕಳೆದ 15 ದಿನಗಳಿಂದ ಸತತವಾಗಿ ಏರು ಮುಖವಾಗಿ ಸಾಗಿ ಪ್ರವಾಹ ಪರಿಸ್ಥಿತಿ ತಂದೊಡ್ಡಿದ್ದ ಭೀಮಾ ನದಿಯ ನೀರು ಶನಿವಾರ ಮತ್ತು ರವಿವಾರ ಇಳಿಮುಖ ಕಂಡಿದ್ದರಿಂದ ಜನತೆಯಲ್ಲಿ ನಿರಾಳ ಭಾವ ಉಂಟಾಗಿದೆ.ಶನಿವಾರ ದಿವಸ 3 ಲಕ್ಷ ಕ್ಯೂಸೆಕ್ ನೀರು ಹರಿಯುತ್ತಿದ್ದ ಅಭಿಮಾನದಿಯಲ್ಲಿ ಸ್ವಲ್ಪಮಟ್ಟಿಗೆ ಕಡಿಮೆಯಾಗಿ ರವಿವಾರ ದಿನ 2 ಲಕ್ಷ 80 ಸಾವಿರ ಕ್ಯೂಸೆಕ್ಸ್ ನೀರು ಹರಿಯುತ್ತಿದೆಆಲಮೇಲ ತಾಲೂಕಿನ ದೇವಣಗಾಂವ ಸಮೀಪದ ಸೊನ್ನ ಬ್ಯಾರೇಜ್ ನಲ್ಲಿ ಒಟ್ಟು 28 ಗೇಟುಗಳ ಮೂಲಕ 2 ಲಕ್ಷ 80 ಸಾವಿರ ಕ್ಯೂಸೆಕ್ಸ್ ನೀರು ಹೊರ ಬಿಡಲಾಗುತ್ತಿದೆ ಬ್ಯಾರೇಜ್ ಗೆ ಅಷ್ಟೇ ಪ್ರಮಾಣದ ಒಳಹರಿವು ಕೂಡ ಇದೆ ಎಂದು ಅಫಜಲಪುರ ಕೆಎನ್ಎನ್ಎಲ್ ಎ ಇ ಇ ಸಂತೋಷಕುಮಾರ ಸಜ್ಜನ ತಿಳಿಸಿದ್ದಾರೆ‌.ಉಜನಿ ಜಲಾಶಯದಿಂದ ಬಿಡಲಾಗಿರುವ ಒಂದು ಲಕ್ಷ ಕ್ಯೂಸೆಕ್, ಸೀನಾ ನದಿಯಿಂದ ರೂ.1 ಲಕ್ಷ 50 ಸಾವಿರ ಕ್ಯೂಸೆಕ್ಸ್, ಬೋರಿ ಹಳ್ಳ ಮತ್ತು ಕರ್ನಾಟಕ ಮಹಾರಾಷ್ಟ್ರದ ಭೀಮಾ ನದಿ ಪಾತ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ರೂ.30…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪೌರಕಾರ್ಮಿಕ ಸಮುದಾಯವನ್ನು ಸದಾ ಕೃತಜ್ಞತೆಯಿಂದ ಸ್ಮರಿಸುವುದು. ಅವರ ಬೇಡಿಕೆಗಳನ್ನು ಈಡೇರಿಸುವುದೇ ಅವರಿಗೆ ಸಲ್ಲಿಸಬಹುದಾದ ನಿಜ ಗೌರವವಾಗುತ್ತದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಸಿಂದಗಿ ನಗರದ ಗುಂದಗಿ ಫಂಕ್ಷನ್ ಹಾಲಿನಲ್ಲಿ ಕರ್ನಾಟಕ ರಾಜ್ಯ ಪೌರ ನೌಕರ ಸಂಘದ ವತಿಯಿಂದ ಹಮ್ಮಿಕೊಂಡ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಗಲು ರಾತ್ರಿ ಎನ್ನದೇ, ಬಿಸಿಲು, ಮಳೆ, ಗಾಳಿಯನ್ನು ಲೆಕ್ಕಿಸದೇ ದುಡಿಯುತ್ತಿರುವ ಇವರು ಕಠಿಣ ಪರಿಶ್ರಮ ಜೀವಿಗಳು. ಇವರ ಸಮರ್ಪಣಾ ಭಾವಕ್ಕೆ ನಾವು ಎಷ್ಟು ಕೃತಜ್ಞತೆ ಸಲ್ಲಿಸಿದರು ಕಡಿಮೆ. ತಮಗಿರುವ ಕಷ್ಟವನ್ನು ನುಂಗಿ ದೇಶ ಕಟ್ಟುವಲ್ಲಿ ಕಾರ್ಮಿಕರ ಪಾತ್ರ ಬಹಳ ಹಿರಿದಾಗಿದೆ. ಸಿಂದಗಿ ನಗರದ ಕಾರ್ಮಿಕ ಕುಟುಂಬ ಫಲಾನುಭವಿಗಳಿಗೆ ೪೭ನಿವೇಶನಗಳನ್ನು ನೀಡಲಾಗಿದೆ. ಈಗಿರುವ ೭ಲಕ್ಷದ ೫೦ಸಾವಿರ ರೂಪಾಯಿ ಹಣವನ್ನು ಮನೆ ಕಟ್ಟಿಕೊಳ್ಳಲು ಸಾಲುವದಿಲ್ಲವೆಂದು ಅದನ್ನು ೧೫ ಲಕ್ಷಕ್ಕೆ ಹೆಚ್ಚಿಸಲು ಸಂಬಂಧಿಸಿದ ಸಚಿವರಿಗೆ ವಿನಂತಿಸಲಾಗಿದೆ ಎಂದರು.ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಮಾತನಾಡಿ, ದೇಶದ ಜನರು…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸ್ವಾಭಾವಿಕವಾಗಿ ಉಜನಿ ಆಣೆಕಟ್ಟಿನಿಂದ ನೀರು ಬಿಟ್ಟ ಸಂದರ್ಭದಲ್ಲಿ ಪ್ರವಾಹ ಆಗುತ್ತಿತ್ತು. ಆದರೆ ಈ ಬಾರಿ ಸಿನಾ ಬೆಸನ್‌ನಲ್ಲಿ ಸುಮಾರು ೩ಲಕ್ಷ ೫೦ಸಾವಿರ ಕ್ಯೂಸೆಕ್ ನೀರು ಬಿಟ್ಟಿರುವ ಕಾರಣ ತೀವ್ರವಾದ ಪ್ರವಾಹದ ಭೀತಿ ಎದುರಾಗಿದೆ. ಪ್ರವಾಹವಿರುವ ಸ್ಥಳಗಳಲ್ಲಿ ಸುರಕ್ಷತಾ ಕ್ರಮಗಳನ್ನು ಜಿಲ್ಲಾಡಳಿತ, ತಾಲೂಕಾಡಳಿತ ಕೈಗೊಂಡು ನೆರೆ ಸಂತ್ರಸ್ತರಿಗೆ ಶಾಲೆಯಲ್ಲಿ ಮೂಲಭೂತ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.ಸಿಂದಗಿ ಮತಕ್ಷೇತ್ರದ ಆಲಮೇಲ ತಾಲೂಕಿನ ಕುಮಸಗಿ ಹಾಗೂ ದೇವಣಗಾಂವ ಗ್ರಾಮದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ ಸಂತ್ರಸ್ತರಿಗೆ ಧೈರ್ಯ ತುಂಬಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಸಗಿ ಗ್ರಾಮದಲ್ಲಿ ಸುಮಾರು ೧೦೦ಮನೆಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿವೆ. ಅವರಿಗೆ ಸ್ಥಳಾಂತರದ ವ್ಯವಸ್ಥೆ ಮಾಡಲಾಗುವುದು. ಪ್ರತಿ ಬಾರಿ ಪ್ರವಾಹ ಬಂದ ಸಂದರ್ಭದಲ್ಲಿ ಸ್ಥಳಾಂತರಕ್ಕೆ ಒಪ್ಪಿಕೊಳ್ಳುತ್ತಾರೆ. ಮಳೆ ಕಡಿಮೆಯಾದ ಮೇಲೆ ಮತ್ತೆ ಇಲ್ಲಿಯೇ ಉಳಿದುಕೊಳ್ಳುತ್ತಾರೆ. ಇಂತಹ ಅನೇಕ ಉದಾಹರಣೆಗಳಿವೆ. ಈ ಬಾರಿ ೧೦೦ಕುಟುಂಬಗಳು ನಿಶ್ಚಿತವಾಗಿ ಸ್ಥಳಾಂತರವಾಗುತ್ತೇವೆ ಎಂದು ಹೇಳಿದ್ದಾರೆ.…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಪಟ್ಟಣದ ಶ್ರೀ ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಇತಿಹಾಸ ಹಾಗೂ ಅರ್ಥಶಾಸ್ತ್ರದ ವಿಭಾಗದ ಅಡಿಯಲ್ಲಿ ವಿಶ್ವ ಪ್ರವಾಸೋದ್ಯಮದ ದಿನದ ಅಂಗವಾಗಿ ಪರಂಪರೆಯಿಂದ ಜೀವನೋಪಾಯದವರೆಗೆ ಎಂಬ ವಿಷಯದ ಕುರಿತು ಒಂದು ದಿನದ ವಿಶೇಷ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು.ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾ. ಅಪ್ಪು ಜಾಧವ ಮಾತನಾಡಿ ಪ್ರವಾಸೋದ್ಯಮದ ಪ್ರಾಮುಖ್ಯತೆ ಮತ್ತು ಅದರ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಮೌಲ್ಯಗಳ ಬಗ್ಗೆ ಅಂತರರಾಷ್ಟ್ರೀಯ ಸಮುದಾಯದಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಡಾ.ಎಸ್.ಎಸ್. ದೇಸಾಯಿ ಪ್ರವಾಸೋದ್ಯಮವು ವಿಶ್ವದ ಪ್ರಮುಖ ಉದ್ಯಮಗಳಲ್ಲಿ ಒಂದಾಗಿದೆ. ಭಾರತದಂತ ಬೃಹತ್ ಪ್ರಜಾಪ್ರಭುತ್ವ ದೇಶದ ಮೇಲೆ ಆರ್ಥಿಕ ಪ್ರಭಾವವನ್ನು ಬೀರುವ ಶಕ್ತಿ ಹಾಗೂ ಸಾಮರ್ಥ್ಯ ಪ್ರವಾಸೋದ್ಯಮಕ್ಕೆ ಇದೆ. ಅದಲ್ಲದೆ ಸಾಕಷ್ಟು ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಅವಕಾಶ ಕೂಡ ಇದರಲ್ಲಿ ಅಡಕವಾಗಿದೆ ಎಂದರು.ಡಾ. ಮಯೂರ್ ಕುದುರಿ ನಿರೂಪಿಸಿ, ಸ್ವಾಗತಿಸಿದರು, ಡಾ.ಮುರಗೇಶ ಕೆ.ಎಮ್. ವಂದಿಸಿದರು.ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.

Read More