ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಜಾತಿ. ಮತ,ಪಂಥ ಭಾಷೆ ಎನ್ನದೆ ಮಸಬಿನಾಳ ಗ್ರಾಮದ ಗೌರಿಶಂಕರ ಜಾತ್ರೆಯಲ್ಲಿ ಪಾಲ್ಗೊಂಡಿದ್ದು ಶ್ಲಾಘನೀಯ. ಈ ಜಾತ್ರೆಯಲ್ಲಿ ಸವ೯ಧಮಿ೯ಯ ಭಕ್ತರು ಭಾಗವಹಿಸುವುದು ವಿಶೇಷ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಮಸಬಿನಾಳ ಗ್ರಾಮದ ಗೌರಿಶಂಕರ ಜಾತ್ರೆಯಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಸವ೯ಧಮ೯ ಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಧಮ೯ಗಳು ಮಾನವೀಯ ಮೌಲ್ಯ ಕಾಪಾಡಿವೆ. 20 ದಿನಗಳ ಕಾಲ ಜಾತ್ರೆಯಂಗವಾಗಿ ಯಡಿಯೂರ ಸಿದ್ಧಲಿಂಗೇಶ್ವರ ಜೀವನ ಚರಿತ್ರೆ ಪುರಾಣ
ಕಾರ್ಯಕ್ರಮ ಅತ್ಯಂತ ಯಶಸ್ವಿಗೊಂಡಿದ್ದು ಸಂತಸದಾಯಕ ಸಂಗತಿ. ನಿತ್ಯ ಭಕ್ತಾದಿಗಳು ವಿಧ-ವಿಧವಾದ ಮಹಾಪ್ರಸಾದ ಸೇವೆ ಮಾಡಿದ್ದಾರೆ. ಧಮ೯ ನಮ್ಮಲ್ಲೆರಿಗೂ ಸನ್ಮಾಗ೯ ತೋರಿಸುತ್ತದೆ. ಮಾನವ ಜನ್ಮ ಅತ್ಯಂತ ಶ್ರೇಷ್ಠ ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ ಮಸಬಿನಾಳದ ದಾಸೋಹ ವಿರಕ್ತಮಠದ ಸಿದ್ದರಾಮ ಸ್ವಾಮೀಜಿ ಮಾತನಾಡಿ, ಶಕ್ತಿಯುಳ್ಳವರು ದಾನ ಧಮ೯ದಲ್ಲಿ ತೊಡಗಬೇಕು.
ಮಕ್ಕಳಿಗೆ ಜ್ಞಾನದೊಂದಿಗೆ ಸಂಸ್ಕಾರ. ಸಂಸ್ಕೃತಿ ಹಾಗು ಸದ್ವಿಚಾರ ಮೈಗೂಡಿಸಿಕೊಳ್ಳಬೇಕೆಂದರು.
ನೇತೃತ್ವ ವಹಿಸಿದ್ದ ಬಸವನಬಾಗೇವಾಡಿ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನೂತನವಾಗಿ ಗೌರಿಶಂಕರ ದೇವಸ್ಥಾನದ ನಿಮಾ೯ಣ ಹಾಗೂ ಕಲ್ಲಿನ ಗೋಪುರ ನಿರ್ಮಾಣ ಮಾಡಿದ್ದು ಗ್ರಾಮದ ಜನರು ಅಭಿನಂದನಾರ್ಹರು. ದೇವಸ್ಥಾದ ಕ್ರಿಯಾಶೀಲ ಅಧ್ಯಕ್ಷ ಸಿದ್ಧಲಿಂಗಯ್ಯ ಚೌಕಿಮಠ ಅವರ ಕಾರ್ಯಕ್ಷಮತೆ ಅಪರೂಪ. ಗೌರಿಶಂಕರ ದೇವಸ್ಥಾನಕ್ಕೆ ಸವ೯ಧಮಿ೯ಯರು ಸಹಕಾರ ನೀಡಿದ್ದು ಸ್ಮರಣೀಯ ಎಂದರು.
ಗೌರಿಶಂಕರ ದೇವಸ್ಥಾನದ ಅಧ್ಯಕ್ಷ ಸಿದ್ದಲಿಂಗಯ್ಯ ಚೌಕಿಮಠ ಮಾತನಾಡಿ, ನೂತನ ದೇವಸ್ಥಾನದ ಉದ್ಘಾಟನೆ ಶೀಘ್ರದಲ್ಲಿ ನಡೆಯಲಿದೆ. ಗೌರಿಶಂಕರ ದೇವಸ್ಥಾನಕ್ಕೆ ಸಹಾಯ ಸಹಕಾರ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮಸೂತಿಯ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ಅಗರಖೇಡದ ಮಾತೋಶ್ರೀ, ಸಾಹಿತಿ ಕವಿತಾ ಕಲ್ಯಾಣಪ್ಪಗೋಳ, ಶ್ರೀಶೈಲ ತೊನಶ್ಯಾಳ. ಗುರುನಾಥ ಹಳ್ಳಿ, ಕಲ್ಲಪ್ಪ ರಂಜನಗಿ,ಶ್ರೀಶೈಲ ಕವಲಗಿ, ಶಂಕರಪ್ಪ ಕುಂಬಾರ, ಬಸವರಾಜ ಭುಯ್ಯಾರ ಇತರರು ಇದ್ದರು. ಇದೇ ಸಂದರ್ಭದಲ್ಲಿ ಜರುಗಿದ ಕವಿಗೋಷ್ಠಿಯಲ್ಲಿ ಸುಜಾತಾ ಚೌಕಿಮಠ, ಕವಿತಾ ಕಲ್ಯಾಣಪ್ಪಗೋಳ, ರೇಣುಕಾ ಹೆಬ್ಬಾಳ ಇತರರು ಸ್ವರಚಿತ ಕವನ ವಾಚನ ಮಾಡಿದರು. ಇದೇ ಸಂದರ್ಭ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.

