Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಹಿಂದುಳಿದ ವರ್ಗಗಳ ಧೀಮಂತ ನಾಯಕ ಡಿ.ದೇವರಾಜ ಅರಸು ಜನ್ಮ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಶೋಷಿತ, ದಮನಿತ ಹಾಗೂ ದೀನ-ದಲಿತ ಸಮುದಾಯಗಳ ಸಮಗ್ರ ಏಳಿಗೆಗಾಗಿ ಡಿ. ದೇವರಾಜ ಅರಸು ಅವರು ರೂಪಿಸಿ ಜಾರಿಗೆ ತಂದ ಕ್ರಾಂತಿಕಾರಿ ಯೋಜನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಹೇಳಿದರುಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಗುರುವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಸಾಮಾಜಿಕ ಪರಿವರ್ತನೆಯ ಹರಿಕಾರ, ಹಿಂದುಳಿದ ವರ್ಗಗಳ ಧೀಮಂತ ನಾಯಕ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ೧೧೧ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ಡಿ. ದೇವರಾಜ ಅರಸು ಅವರು ಊಳುವವನೇ ಭೂ ಒಡೆಯ ಎಂಬ ಐತಿಹಾಸಿಕ ಭೂಸುಧಾರಣಾ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಅನೇಕ ಭೂರಹಿತ ಗೇಣಿದಾರರಿಗೆ ಜಮೀನಿನ ಹಕ್ಕು ದೊರಕಿಸಿಕೊಟ್ಟು, ಸಮಾಜದಲ್ಲಿ ನೆಲೆಸಿದ್ದ ಅಸಮಾನತೆಯನ್ನು ಕೊನೆಗಾಣಿಸಿ ಆರ್ಥಿಕ ಸಮಾನತೆ ತರಲು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ ದಿಂದ ಆ.ರಂದು ನಗರದ ಸರಕಾರಿ ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಲಾದ “ವಿಶ್ವ ಛಾಯಾಗ್ರಹಣ ದಿನಾಚರಣೆ”ಯ ಅಂಗವಾಗಿ ಹಿರಿಯ ಛಾಯಾಗ್ರಾಹಕರಿಗೆ ಸನ್ಮಾನ, ಛಾಯಾಗ್ರಾಹಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಛಾಯಾಚಿತ್ರಗಳ ಪ್ರದರ್ಶನ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಕಲಾವಿದ ವಿದ್ಯಾಧರ ಸಾಲಿ ಮಾತನಾಡಿ, ಒಂದು ಛಾಯಾಚಿತ್ರ ಜಗತ್ತಿನ ಇತಿಹಾಸ ನೆನಪಿಸುತ್ತದೆ ಅದರ ಜೊತೆಯಲ್ಲಿ ದಾಖಲಾತಿಕೂಡ ಆಗುತ್ತದೆ ಇವತ್ತಿನ ಆಧುನಿಕ ಜಗತ್ತಿನಲ್ಲಿ ಛಾಯಾಗ್ರಹಣ ಮಾಡಿ ಜೀವನ ನಡೆಸುವುದು ಕಷ್ಟದಾಯಕದ ಕೆಲಸ ಅದರಲ್ಲೂ ಕ್ಯಾಮರಾಗಳ ಬೆಲೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಒಬ್ಬರೊಂದಿಗೆ ಒಬ್ಬರು ಕಾಂಪಿಟೇಷನ್ ನಡೆಸುವ ಪರಿಸ್ಥಿತಿ ಇದೆ. ಆದರೆ ಹಿಂದಿನ ದಿನಗಳಲ್ಲಿ ಕಪ್ಪು ಬಿಳುಪು ಚಿತ್ರಗಳಿಗೆ ಇರುವ ಇತಿಹಾಸ ಇವತ್ತಿನ ಛಾಯಾಗ್ರಹಣಕ್ಕೆ ಇಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತವಡಿಸಿದರು. ಇನ್ನೊಬ್ಬ ಮುಖ್ಯಅತಿಥಿ ಹಿರಿಯ ಛಾಯಾಗ್ರಾಹಕ ಮತ್ತು ಕಲಾವಿದ ಬಿ.ಎಸ್. ಪಾಟೀಲ ಅವರು ಮಾತನಾಡುತ್ತ, ಡಿಜಿಟಲ್ ಕಾಲ ಬರುವುದಕ್ಕೂ ಮೊದಲು ಛಾಯಾಗ್ರಹಣ ಮಾಡುವುದು ಅಷ್ಟು ಸುಲಭದ ಮಾತಾಗಿರಲಿಲ್ಲ ಅದರಲ್ಲೂ…
ವಿಜಯಪುರ ಜಿಲ್ಲೆ ಬರಪೀಡಿತ ಪ್ರದೇಶವೆಂದು ಘೋಷಿಸಿ; ರೈತರ ಖಾತೆಗೆ ನೇರ ಪರಿಹಾರ ಜಮೆ ಮಾಡಲು ಆಗ್ರಹ ಉದಯರಶ್ಮಿ ದಿನಪತ್ರಿಕೆ ಚಡಚಣ: ಶ್ರೀಮಂತರಿಂದ ಸಾಲ ಪಡೆದು ಬಿತ್ತನೆ ಬೀಜ ಖರೀದಿಸಿ, ಹೊಲದಲ್ಲಿ ಬೆವರು ಸುರಿಸಿ ಬೆಳೆ ಬೆಳೆಸಿ, ಬಂದ ಫಸಲಿನಿಂದ ಸಾಲ ತೀರಿಸಿ, ಕುಟುಂಬದ ಜೀವನ ಸುಗಮವಾಗಿರಲಿ ಎಂಬ ಕನಸು ಕಂಡಿದ್ದ ರೈತನ ಆಶಯ ಇಂದು ಮಣ್ಣುಪಾಲಾಗಿದೆ ಎಂದು ಇಂಡಿ ತಾಲೂಕು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರವಿಕಾಂತ ಕೋನಳ್ಳಿ (ಕುಡಗಿ) ಆಕ್ರೋಶ ವ್ಯಕ್ತಪಡಿಸಿದರು.ಝಳಕಿ, ಬಳ್ಳೊಳ್ಳಿ, ಗುಂದಾವನ ಹಾಗೂ ಕುಡಗಿ ಗ್ರಾಮದ ಸುತ್ತಮುತ್ತಲಿನ ರೈತರ ಜಮೀನುಗಳಿಗೆ ಬಿಜೆಪಿ ಕಾರ್ಯಕರ್ತರೊಂದಿಗೆ ಭೇಟಿ ನೀಡಿದ ಅವರು, ಬೆಳೆಗಳ ಸ್ಥಿತಿಗತಿಗಳನ್ನು ಪರಿಶೀಲಿಸಿ ರೈತರೊಂದಿಗೆ ಚರ್ಚೆ ನಡೆಸಿದರು.ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿರುವುದು, ಬಿತ್ತನೆಗೆ ಮಾಡಿದ ಖರ್ಚು ಕೂಡ ಮರಳುವ ಪರಿಸ್ಥಿತಿ ಇಲ್ಲದಿರುವುದು ಹಾಗೂ ಸಾಲದ ಹೊರೆ ಹೆಚ್ಚುತ್ತಿರುವ ಕುರಿತು ರೈತರಿಂದ ಮಾಹಿತಿ ಪಡೆದು ಅವರ ಅಳಲನ್ನು ಆಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ರವಿಕಾಂತ ಕೋನಳ್ಳಿ, “ರೈತನ ಬೆಳೆ ಮಣ್ಣುಪಾಲಾಗಿದೆ,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಳೆದ ನಾಲ್ಕು ದಶಕಗಳಿಂದ ರಂಗಭೂಮಿ, ಕಿರುತೆರೆ ಹಾಗೂ ಹಿರಿತೆರೆಯ ಕಲಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರಂಗಭೂಮಿ ಕಲಾವಿದ ರಾಜಕುಮಾರ್ ಅವರುಪ್ರಸಕ್ತ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.1987ರಲ್ಲಿ ಶಾಲಾ ದಿನಗಳಲ್ಲಿಯೇ ನಾಟಕದ ಮೂಲಕ ರಂಗಭೂಮಿಗೆ ಪ್ರವೇಶಿಸಿದ ರಾಜಕುಮಾರ್ ಅವರು ನಂತರ ಕಾಲೇಜು ದಿನಗಳಲ್ಲಿ ಕಿರು ನಾಟಕಗಳಲ್ಲಿ ಅಭಿನಯ ಹಾಗೂ ನಿರ್ದೇಶನದ ಮೂಲಕ ತಮ್ಮ ಕಲಾ ಪಯಣವನ್ನು ಮುಂದುವರಿಸಿದರು.1991ರಲ್ಲಿ ಭಾರತ ಯಾತ್ರಾ ಕೇಂದ್ರದ ಕಾಲೇಜು ರಂಗ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು, ಪ್ರಯೋಗ ರಂಗತಂಡದಲ್ಲಿ ಶ್ರೀನಿವಾಸ್ ಪ್ರಭು ಅವರ ನಿರ್ದೇಶನದ ‘ರಾಜಭೇಟೆ’ ನಾಟಕದಲ್ಲಿ ಅಭಿನಯಿಸಿದ್ದು,1992 ರಿಂದ 2014ರವರೆಗೆ ಭಾರತ ಯಾತ್ರಾ ಕೇಂದ್ರ ಆಯೋಜಿಸಿದ ಅಂತರ ಕಾಲೇಜು ರಂಗ ಸ್ಪರ್ಧೆಗಳಲ್ಲಿ ನೇಪಥ್ಯ ನಿರ್ವಹಣೆ ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿರುವ ಅವರು, ಮೈಸೂರು ಲಲಿತ ಕಲಾ ಸಂಘ ಆಯೋಜಿಸಿದ ನಾಟಕ ಸ್ಪರ್ಧೆಯಲ್ಲಿ ‘ರಾಕ್ಷಸ’ ನಾಟಕದ ನಿರ್ದೇಶನ ಸಹ ಮಾಡಿದ್ದಾರೆ. ಉಡುಪಿಯ ‘ನಮ್ಮ ತುಳುವ’ ಕಲಾಸಂಘ ತಂಡದೊಂದಿಗೆ ‘ಶ್ರೀರಂಗ ರಚನೆಯ ನೀ ಮಾಯೆಯೋ,…
ಉದಯರಶ್ಮಿ ದಿನಪತ್ರಿಕೆ ಭಾರತದ ಆತ್ಮ ಅದು ‘ಆಧ್ಯಾತ್ಮ’. ಮಾನವನ ಅಂತಿಮ ಗುರಿ ಸಾಧನೆಯೇ ಪರಮ ಸಂತೋಷ, ನೆಮ್ಮದಿ ಸೌಖ್ಯ ಕಾಣುವುದು.ಬದುಕಿನುದ್ದಕ್ಕೂ ಏನೆಲ್ಲವನ್ನು ಸಂಪಾದಿಸಿದರೂ ಕೂಡ ತನ್ನನ್ನು ತಾನು ಮರೆತು ಅಲ್ಪಸುಖದ ಜೀವಿಯಾಗಿರುತ್ತಾನೆ. ಆಧ್ಯಾತ್ಮ ಅದು ಎಲ್ಲವನ್ನು ತೊರೆ ಎಂದಲ್ಲ, ಎಲ್ಲರೊಳಗೂ ಎಲ್ಲದರೊಳಗೂ ಇದ್ದು ಇಲ್ಲದಂತೆ “ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿ” ಯಂತೆ ತನ್ನನ್ನು ತಾನು ಅರಿಯುವುದರ ಮೂಲಕ ಸ್ವಯವನರಿತು ಆದಮ್ಯ ಚೇತನನಾಗಿ ಬಾಳುವಂತಹುದು.ಪವಿತ್ರವಾದ ಶ್ರಾವಣ ಮಾಸದಲ್ಲಿ ಶ್ರವಣ ಮೇನನ ನಿಧಿದ್ಯಾಸದಿಂದ ಸತ್ಸಂಗತ್ತೆ ನಿಸಂಗತ್ವಂ ನಿಸಂಗತ್ವೇ ನಿರ್ಮೂಹಿತ್ವಂ ನಿರ್ಮೂಹಿತ್ವೇ ನಿರ್ಜಲತತ್ವಂ ನಿಶ್ಚಲ ನಿರಾಕಾರ ನಿರಂಜನ ನಿರಾಭಾರಿ ನಿರ್ಭಯನಾದ ಭಗವಂತನ ಸಾನಿಧ್ಯಕ್ಕೆ ಸತ್ಸಂಗ ಬಹಳ ಮುಖ್ಯ. ಸಾರ ಸಜ್ಜನರ ಸಂಘ ಹೆಜ್ಜೇನು ಸವಿದಂತೆ ಎಂಬ ಶರಣ ವಾಣಿಯಂತೆ ಸತ್+ ಜನರ = ಸಜ್ಜನರ ಕೂಟ ಮನಸ್ಸಿನ ನೆಮ್ಮದಿಗೆ ರಹದಾರಿಯಾಗಿದೆ. ಅದಕ್ಕಂತೆಯೇ ಶ್ರವಣ ಶ್ರಾವಣ ಕೇಳುವಿಕೆ ನೆರೆಕೆಳು ಕೇಳುದದನರಿ ಅರಿತೊಮ್ಮೆ ಆಚರಿಸು ಎಂದು ಪೂರ್ವಜರು ಶ್ರಾವಣದಲ್ಲಿ ಸಜ್ಜನರ ಸಂಘದಲ್ಲಿದ್ದು ಪುರಾಣ ಪ್ರವಚನಗಳನ್ನು ಕೇಳುತ್ತಾ, ಕೇಳುತ್ತಾ ಬದುಕಿನ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಸಾಮಾಜಿಕ ಪರಿವರ್ತನೆಯ ಹರಿಕಾರ ಡಿ.ದೇವರಾಜ ಅರಸುರವರ ದೂರದೃಷ್ಟಿತ್ವ, ಬದ್ಧತೆ ರಾಜ್ಯದ ಅಭಿವೃದ್ಧಿಗೆ ದಾರಿದೀಪವಾಗಿದ್ದು, ಅವರ ಕೊಡುಗೆಗಳು ಸದಾ ಪ್ರೇರಣಾದಯಕವಾಗಿವೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ಗುರುವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಡಿ.ದೇವರಾಜ ಅರಸು ಅವರ 111ನೇ ಜಯಂತಿ ಆಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.ನಮ್ಮ ನಾಡಿನ ಸಾಮಾಜಿಕ, ಶಿಕ್ಷಣ, ಆರ್ಥಿಕ ಕ್ಷೇತ್ರದಲ್ಲಿ ಪರಿವರ್ತನೆ ತಂದ ಅರಸು ಅವರು ದುರ್ಬಲ ವರ್ಗದವರಲ್ಲಿ ಸ್ವಾಭಿಮಾನದ ಕಲ್ಪನೆ ಹುಟ್ಟಿಸಿ ಅವರಿಗೆ ಆರ್ಥಿಕ ಸ್ವಾವಲಂಬನೆ ಒದಗಿಸಿದ ಯುಗಪುರುಷರಾಗಿದ್ದಾರೆ ಎಂದು ಹೇಳಿದರು.ಸರಳ, ನೇರ, ನಿರ್ಭೀತ ಆಡಳಿತಕ್ಕೆ ಹೆಸರಾದ ಅರಸು ಅವರು ಜನಸಾಮಾನ್ಯರ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ. ಹಿಂದುಳಿದ ವರ್ಗ, ದಲಿತರ, ಬಡವರ ಮನಸ್ಸಿನಲ್ಲಿ ಅವರು ಚಿರಸ್ಥಾಯಿಯಾಗಿದ್ದಾರೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಕೆ ಐ ಮಕಾನದಾರ ಮಾತನಾಡಿ, ಬಡವರ ಬದುಕಿನಲ್ಲಿ ಹೊಸ ಭರವಸೆ ತಂದ ಅರಸು ಅವರು ಕರ್ನಾಟಕದಲ್ಲಿ ಜನಹಿತ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಧೀಮಂತ ನಾಯಕ ಎಂದು ಹೇಳಿದರು.ಶಿಕ್ಷಕರಾದ ಎಸ್…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಜಿಲ್ಲೆಯಲ್ಲಿ ಆ. ೨೩ ರಿಂದ ೨೫ ರವರೆಗೆ ಪ್ರವಾಸ ಕೈಗೊಂಡಿದ್ದಾರೆ.ಆ.೨೨ ರ ಸಂಜೆ ೬:೧೫ಕ್ಕೆ ಬೆಂಗಳೂರಿನಿಂದ ರೈಲಿನ ಮೂಲಕ ಹೊರಟು ಆ.೨೩ರ ಬೆಳಿಗ್ಗೆ ೫:೧೫ ಕ್ಕೆ ಆಲಮಟ್ಟಿ ತಲುಪಲಿದ್ದಾರೆ.ಆ.೨೩ ರಂದು ಮುದ್ದೇಬಿಹಾಳ ತಾಲೂಕು ಸರ್ಕಾರಿ ಆಸ್ಪತ್ರೆಗೆ ಭೇಟಿ, ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ನಗರದ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಾತ್ರೆಯ ಬೃಹತ್ ವೇದಿಕೆ ಕಾರ್ಯಕ್ರಮ ಉದ್ಘಾಟನೆಯಲ್ಲಿ ಭಾಗವಹಿಸುವರು. ಸಂಜೆ ೪.೩೦ ಕ್ಕೆ ಸಂಕಷ್ಟದಲ್ಲಿರುವ ಮದಭಾವಿ ತಾಂಡಾ ಮಹಿಳೆಯರೊಂದಿಗೆ ಸಂವಾದ ನಡೆಸುವರು.ಆ.೨೪ ರಂದು ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಸುರಕ್ಷತೆ ಮತ್ತು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸುವರು. ಬಳಿಕ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಫೋಸ್ ಕಾಯ್ದೆ-೨೦೧೩ರ ತರಬೇತಿ ಕಾರ್ಯಾಗಾರ ಉದ್ಘಾಟಿಸುವರು. ನಂತರ ದರ್ಗಾ ರಸ್ತೆಯಲ್ಲಿರುವ ಕೇಂದ್ರ ಕಾರಾಗೃಹ ಹಾಗೂ ಮಹಿಳಾ ಪೊಲೀಸ್ ಠಾಣೆಗೆ ಭೇಟಿ ನೀಡುವರು.ನಂತರ ಇಂಡಿ ರಸ್ತೆಯಲ್ಲಿರುವ ಆಲಿಯಾಬಾದ್ ಪಾಂಗ್ರುನ್ ದೊಡ್ಡಿಯ ಕುರಿಗಾಹಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಾಡಿನ ಕಲೆ, ಸಾಹಿತ್ಯ, ಸಂಗೀತ, ಜಾನಪದ ಹಾಗೂ ನೃತ್ಯ ಕಲಾಪ್ರಕಾರಗಳನ್ನು ಪೋಷಿಸುವ ನೋಂದಾಯಿತ ಸಂಘ-ಸಂಸ್ಥೆಗಳು ಮತ್ತು ಕಲಾವಿದರಿಗೆ ಸರ್ಕಾರ ನೀಡುವ ವಿವಿಧ ಸಹಾಯಧನಗಳ ಅರ್ಜಿ ಸಲ್ಲಿಕೆ ಅವಧಿಯನ್ನು ಸೆ.೪ ರವರೆಗೆ ವಿಸ್ತರಿಸಲಾಗಿದೆ.೨೦೨೬-೨೭ನೇ ಸಾಲಿನ ಸಾಮಾನ್ಯ,ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆಯಡಿ ಅರ್ಹ ಫಲಾನುಭವಿಗಳು ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಸೆ.೪ ರವರೆಗೆ ಅರ್ಜಿ ಸಲ್ಲಿಸುವ ಕಾಲಾವಕಾಶ ಒದಗಿಸಲಾಗಿದೆ.ನೋಂದಾಯಿತ ಕಲಾ ಸಂಘ-ಸಂಸ್ಥೆಗಳಿಗೆ ಸಾಂಸ್ಕೃತಿಕ ಚಟುವಟಿಕೆಗಳ ಧನಸಹಾಯ ಕಲಾವಿದರಿಗೆ ವಾದ್ಯ ಪರಿಕರ ಹಾಗೂ ವೇಷಭೂಷಣ ಖರೀದಿಗೆ ನೆರವು ಚಿತ್ರಕಲೆ ಮತ್ತು ಶಿಲ್ಪ ಕಲಾಕೃತಿಗಳ ಪ್ರದರ್ಶನಕ್ಕೆ ಸಹಾಯಧನಕ್ಕಾಗಿ ಅರ್ಜಿಗಳನ್ನು ಕೇವಲ ಸೇವಾಸಿಂಧು ಪೋರ್ಟಲ್ ಮೂಲಕವೇ ಆನ್‌ಲೈನ್‌ನಲ್ಲಿ ಸಲ್ಲಿಸಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯಲ್ಲಿ ನೇರವಾಗಿ ಅರ್ಜಿ ಸ್ವೀಕರಿಸಲಾಗುವುದಿಲ್ಲ. ಸೆ. ೪ ರ ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ದೂರವಾಣಿ ಸಂಖ್ಯೆ:೦೮೦-೨೪೪೧೦೫೭೪, ೦೮೦-೨೨೨೧೩೫೩೦, ೦೮೦-೨೨೨೪೧೩೨೫, ೯೯೮೬೮೩೭೦೩೭ವಿಜಯಪುರ ಜಿಲ್ಲಾ ಕಚೇರಿ: ೦೮೩೫೨-೨೫೧೨೬೧…
ಉದಯರಶ್ಮಿ ದಿನಪತ್ರಿಕೆ ತಾಳಿಕೋಟೆ: ಸಜ್ಜಲಗುಡ್ಡ ಶರಣಮ್ಮನವರು ಹಾಗೂ ಶ್ರೀ ನಿಜಗುಣ ಶಿವಯೋಗಿಗಳ ಇತಿಹಾಸ ಮತ್ತು ತತ್ವಚಿಂತನೆ ಎಲ್ಲರ ಬಧುಕಿಗೆ ಆದರ್ಶಪ್ರಾಯವಾಗಿವೆ ಸಜ್ಜಲಗುಡ್ಡ ಶರಣಮ್ಮನವರ ಬದುಕು ಶರಣ ಪರಂಪರೆಯ ಮೌಲ್ಯಗಳು, ಭಕ್ತಿ, ಧರ್ಮನಿಷ್ಠೆ ಹಾಗೂ ಸಮಾಜಮುಖಿ ಚಿಂತನೆಗಳಿಗೆ ಮಾದರಿಯಾಗಿದೆ ಎಂದು ಎಚ್.ಎಸ್.ಪಾಟೀಲ ಕಾಲೇಜ್ ಆಂಗ್ಲಭಾಷಾ ಉಪನ್ಯಾಸಕ ಪರಶುರಾಮ ಚೌಡಕೇರ್ ಅವರು ಹೇಳಿದರು.ಪಟ್ಟಣದ ಶಿವಶರಣೆ ಶ್ರೀ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ಯ ಆಯೋಜಿಸಲಾದ ಸತ್ಸಂಗ ಅನುಭಾವ ಚಿಂತನೆ ಕಾರ್ಯಕ್ರಮ ಮಾತನಾಡಿದ ಅವರು, ನಿಜಗುಣ ಶಿವಯೋಗಿಗಳ ವಿಚಾರಧಾರೆ ಮುಂದಿನ ಸಂತ-ಶರಣರ ಆಧ್ಯಾತ್ಮಿಕ ಚಿಂತನೆಗಳ ಮೇಲೂ ಪ್ರಭಾವ ಬೀರಿದೆ. ಸಿದ್ದಾರೂಢ ಸ್ವಾಮಿಗಳ ಮೂಲಕ ನಿಜಗುಣ ಶಿವಯೋಗಿಗಳ ಚಿಂತನೆಗಳು ಮತ್ತಷ್ಟು ಜನಮಾನಸಕ್ಕೆ ತಲುಪಿ, ಅವರ ತತ್ವದ ವ್ಯಾಪ್ತಿ ಮುಗಿಲೆತ್ತರಕ್ಕೆ ಬೆಳೆದಿದೆ ನಿಜಗುಣ ಶಿವಯೋಗಿಗಳು ಬರೆದಿರುವ ಪ್ರವಚನ ಹಾಗೂ ತತ್ವಗ್ರಂಥಗಳಲ್ಲಿನ ವಿಚಾರಗಳನ್ನು ಜನರಿಗೆ ಸರಳವಾಗಿ ತಲುಪಿಸುವ ಅಗತ್ಯವಿದೆ ಅವರಂತೆ ಸಜ್ಜಲಗುಡ್ಡ ಶರಣಮ್ಮನವರ ಪುರಾಣ ಪ್ರವಚನವು ಕೇವಲ ಧಾರ್ಮಿಕ ಕಾರ್ಯಕ್ರಮವಾಗಿರದೆ, ಅವರ ಜೀವನಾದರ್ಶ, ಶರಣ ಸಂಸ್ಕೃತಿ ಮತ್ತು ಸಮಾಜಕ್ಕೆ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಒಂದೆಡೆ ಮಳೆ ಕೊರತೆ, ಮತ್ತೊಂದೆಡೆ ಕೃಷಿ ಚಟುವಟಿಕೆಗಳಿಗೆ ಎದುರಾಗಿರುವ ಸಂಕಷ್ಟದಿಂದ ತಾಲೂಕಿನ ರೈತರು ತೀವ್ರ ಆತಂಕದಲ್ಲಿದ್ದು, ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ವೆಂಕನಗೌಡ ಪಾಟೀಲ ಸರ್ಕಾರವನ್ನು ಒತ್ತಾಯಿಸಿದರು.ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರರಿಗೆ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಾರಿ ತಾಲೂಕಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಮಳೆ ಕೊರತೆಯಿಂದ ರೈತರು ಬಿತ್ತನೆ, ಬೆಳೆ ನಿರ್ವಹಣೆ ಸೇರಿದಂತೆ ವಿವಿಧ ಹಂತಗಳಲ್ಲಿ ಸಂಕಷ್ಟ ಎದುರಿಸುತ್ತಿದ್ದು, ಕೃಷಿಯನ್ನೇ ಅವಲಂಬಿಸಿರುವ ಕುಟುಂಬಗಳ ಜೀವನ ನಿರ್ವಹಣೆಯ ಮೇಲೂ ಪರಿಣಾಮ ಬೀರುವ ಆತಂಕ ಎದುರಾಗಿದೆ ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ಸಂಕಷ್ಟದಲ್ಲಿರುವ ರೈತರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.ರೈತರಿಗೆ ಪ್ರತಿ ಎಕರೆಗೆ ₹೫೦ ಸಾವಿರ ಪರಿಹಾರ ನೀಡಬೇಕು. ರೈತರ ಉಪಜೀವನಕ್ಕೆ ಪ್ರಮುಖವಾಗಿರುವ ಕೃಷಿ, ಜಾನುವಾರು ಸಾಕಾಣಿಕೆ…
