ಉದಯರಶ್ಮಿ ದಿನಪತ್ರಿಕೆ
ಇಂಡಿ: ಬಿತ್ತನೆಗೆ ಮುಂಚಿತವಾಗಿ ಬೀಜಗಳಲ್ಲಿ ಬರನಿರೋಧಕತೆ ಹೆಚ್ಚಿಸಲು ಬೀಜೋಪಚಾರ ಅಗತ್ಯವಾಗಿದೆ ಎಂದು ಕೃಷಿ ಉಪ ನಿರ್ದೇಶಕ ಚಂದ್ರಕಾಂತ ಪವಾರ ಹೇಳಿದರು.
ಅವರು ನಗರದ ರೈತ ಸಂಪರ್ಕ ಕೇಂದ್ರದಲ್ಲಿ ಜರುಗಿದ ಬೀಜೋಪಚಾರ ಅಂದೋಲನದಲ್ಲಿ ಪ್ರಾತಕ್ಷತೆಯೊಂದಿಗೆ ರೈತರಿಗೆ ಮಾಹಿತಿ ನೀಡಿ ಮಾತನಾಡಿದರು.
ಬಿತ್ತನೆಗೆ ಮುಂಚೆ ಬೀಜಗಳನ್ನು ಶೇ ೨ ರ ಕ್ಯಾಲ್ಸಿಯಂ ಕ್ಲೋರೈಡ ದ್ರಾವಣದಲ್ಲಿ ಒಂದು ಗಂಟೆ ನೆನಸಿ ನಂತರ ನೆರಳಿನಲ್ಲಿ ಕನಿಷ್ಠ ೭ ಗಂಟೆ ಒಣಗಿಸಬೇಕು. ನಂತರ ಪ್ರತಿ ಕೆಜಿ ಬಿತ್ತನೆ ಬೀಜಕ್ಕೆ ೩ ಗ್ರಾಂ. ಶೀಲೀಂಧ್ರ ಮಿಶ್ರಣವಾದ ಕಾರ್ಬೇಡೈಜಿಯಂ ಶೇ ೧೨ ಹಾಗೂ ಮ್ಯಾಂಕೋಜೇಬ ಶೇ ೬೪ ಅಥವಾ ೧೦ ಗ್ರಾಂ ಜೈವಿಕ ಗೊಬ್ಬರಗಳಾದ ಟ್ರೆöÊಕೋಡರ್ಮ ಪಿಎಸ್‌ಬಿ ಹಾಗೂ ರೈಜೋಬಿಯಂಗಳಿಂದ ಬೀಜೋಪಚಾರ ಮಾಡಬೇಕು ಎಂದರು.
ಕೃಷಿ ಅಧಿಕಾರಿ ಮಹಾಂತೇಶ ಶೆಟ್ಟೆಣ್ಣವರ ಮಾತನಾಡಿದರು.
ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ಏವೂರ, ಮನೋಜ ಪತ್ತಾರ, ಸವಿತಾ ಬಿರಾದಾರ, ಶ್ರೀಕಾಂತ ಚವ್ಹಾಣ, ಪ್ರಗತಿಪರ ರೈತರಾದ ಮಲ್ಲು ಗುಡ್ಲ, ಕೃಷಿ ಸಖಿಗಳು, ಅನುಗಾರರ ಸೇರಿದಂತೆ ರೈತರು ಉಪಸ್ಥಿತರಿದ್ದರು.

