ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದಲ್ಲಿ ಮೇ 27ರಂದು ಬುಧವಾರದಂದು ಕುಲ್ಲೊಳ್ಳಿ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸರ್ವಿಸಸ್ ವತಿಯಿಂದ ಡಾ. ಕುಲ್ಲೊಳ್ಳಿ ಹಾಗೂ ಅವರ ನುರಿತ ವೈದ್ಯರ ತಂಡದಿಂದ ಕೊಲ್ಹಾರದ ಎಂ.ಪಿ.ಎಸ್ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಕೊಲ್ಹಾರ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು, ರೈತ ಮಹಿಳೆಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಉಚಿತ ಔಷಧೋಪಚಾರದ ಸೌಲಭ್ಯವನ್ನು ಪಡೆಯುವಂತೆ ಸಂಸ್ಥೆ ವಿನಂತಿಸಿದೆ.
ಈ ಹಿಂದೆ ಯಾವುದೇ ರೀತಿಯ ಚಿಕಿತ್ಸೆಯನ್ನು ಪಡೆಯುತ್ತಿರುವವರು ತಮಗೆ ಚಿಕಿತ್ಸೆ ನೀಡಿದ ವೈದ್ಯರ ಫೈಲ್, ಔಷಧ ಚೀಟಿ ಹಾಗೂ ಸೇವಿಸುತ್ತಿರುವ ಮಾತ್ರೆಗಳ ವಿವರಗಳನ್ನು ಕಡ್ಡಾಯವಾಗಿ ಜೊತೆಯಲ್ಲಿ ತರಬೇಕೆಂದು ತಿಳಿಸಲಾಗಿದೆ.
