Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಬಕ್ರಿದ್ ಹಬ್ಬ ಶಾಂತಿ ಸೌಹಾರ್ದತೆಯಿಂದ ಆಚರಿಸಿ :ಡಿವೈಎಸ್ಪಿ

ಶಾಸಕ ಯಶವಂತರಾಯಗೌಡಬಗೆಗಿನ ಆರೋಪ ಸುಳ್ಳು

ಬೀಜಗಳಲ್ಲಿ ಬರನಿರೋಧಕತೆ ಹೆಚ್ಚಿಸಲು ಬೀಜೋಪಚಾರ ಅಗತ್ಯ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಶಾಸಕ ಯಶವಂತರಾಯಗೌಡಬಗೆಗಿನ ಆರೋಪ ಸುಳ್ಳು
(ರಾಜ್ಯ ) ಜಿಲ್ಲೆ

ಶಾಸಕ ಯಶವಂತರಾಯಗೌಡಬಗೆಗಿನ ಆರೋಪ ಸುಳ್ಳು

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ದಲಿತ ಮುಖಂಡರಿಂದ ಸುದ್ದಿಗೋಷ್ಟಿ | ಜಿತೇಂದ್ರ ಕಾಂಬಳೆ ರಿಂದ ಶಾಸಕರ ತೇಜೋವಧೆ ಸಲ್ಲದು ಎಂದ ಮುಖಂಡರು

ಉದಯರಶ್ಮಿ ದಿನಪತ್ರಿಕೆ

ಇಂಡಿ: ಮತಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಂದ ದಲಿತ ಸಮುದಾಯಕ್ಕೆ ಯಾವುದೇ ಅನ್ಯಾಯ, ಅವಮಾನ ಆಗಿರುವುದಿಲ್ಲ. ದಲಿತ ಸಮುದಾಯದ ವ್ಯಕ್ತಿಗೆ ಸಾಮಾನ್ಯ ಮೀಸಲಾತಿಯಲ್ಲಿ ಪುರಸಭೆ ಅಧ್ಯಕ್ಷರನ್ನಾಗಿ ಮಾಡಿದ್ದು, ಗ್ಯಾರಂಟಿ ಅನುಷ್ಟಾನ ಸಮಿತಿ ತಾಲ್ಲೂಕು ಅಧ್ಯಕ್ಷರನ್ನಾಗಿ ಮಾಡಿದ್ದು, ಸಮುದಾಯಕ್ಕೆ ಹೆಮ್ಮೆ ತರುವ ವಿಷಯ. ಜೀತೆಂದ್ರ ಕಾಂಬಳೆ ಅವರು ಶಾಸಕರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದು ಛಲವಾದಿ ಸಮಾಜದ ಮುಖಂಡ ಭೀಮಾಶಂಕರ ಮೂರಮನ ಮತ್ತು ದಲಿತ ಮುಖಂಡ ಮುತ್ತಪ್ಪ ಪೊತೆ ಜಂಟಿಯಾಗಿ ಹೇಳಿದರು.
ಅವರು ನಗರದ ಸರ್ಕಾರಿ ನೌಕರರ ಸಭಾ ಭವನದಲ್ಲಿ ಮಂಗಳವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಯಾವುದೇ ಸಮುದಾಯದವರು ಶಾಸಕರ ಭೇಟಿಗೆ ಹೋದರೆ ಎಲ್ಲರೊಂದಿಗೆ ಗೌರವಯುತವಾಗಿ ಮಾತನಾಡುತ್ತಾರೆ. ಅದರಲ್ಲಿಯೂ ದಲಿತ ಸಮುದಾಯದವರಿಗೆ ಕಾಳಜಿ ವಹಿಸಿ ಮಾತನಾಡುತ್ತಾರೆ. ದಲಿತ ಸಮುದಾಯದ ಕಾಲೋನಿಗಳಿಗೆ ಸಿಸಿ ರಸ್ತೆ, ಸಮುದಾಯ ಭವನ, ಗ್ರಂಥಾಲಯ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳು ಮಾಡಿದ್ದಾರೆ. ದಲಿತ ಸಮುದಾಯದವರಿಗಾಗಿ ಇಂಡಿ ನಗರದಲ್ಲಿ ಮಂಗಲ ಭವನ ನಿರ್ಮಾಣಕ್ಕೆ ಜಾಗ ಒದಗಿಸಿ, ಒಂದು ಕೋಟಿ ಅನುದಾನ ನೀಡಿದ್ದಾರೆ ಎಂದರು. ದಲಿತ ಮುಖಂಡ ಜಿತೇಂದ್ರ ಕಾಂಬಳೆ ಎನ್ನುವವರು ಒಂದು ಮಗುವಿನ ವಿಷಯ ಮುಂದಿಟ್ಟುಕೊಂಡು ಸಮಾಜದ ಹೆಸರು ಬಳಸಿಕೊಂಡು ಶಾಸಕರ ತೆಜೋವಧೆ ಮಾಡುವುದು ಬಿಡಬೇಕು ಎಂದು ಹೇಳಿದರು.
ಇಂಡಿ ನಗರದಲ್ಲಿ ಡಾ. ಬಿ.ಆರ್. ಅಂಬೇಡ್ಕರವರ ಭವ್ಯ ಮೂರ್ತಿ, ಸರ್ಕಲ್ ಅಭಿವೃದ್ದಿಗೆ ಹೆಚ್ಚಿನ ಕಾಳಜಿವಹಿಸಿದ್ದಾರೆ. ಸಾಮಾಜಿಕ ನ್ಯಾಯದ ತತ್ವದ ಅಡಿಯಲ್ಲಿ ಜನ ಸೇವೆ ಮಾಡುತ್ತಿರುವ ಅಪರೂಪದ ಶಾಸಕರು. ಅವರು ಸರ್ವ ಸಮುದಾಯಕ್ಕೆ ರಾಜಕೀಯ ಸ್ಥಾನಮಾನ ನೀಡಿದಕ್ಕಾಗಿ ಮೂರು ಬಾರಿ ಎಲ್ಲ ಸಮುದಾಯದ ಮತದಾರರು ಮತ ನೀಡಿದ್ದಾರೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಪ್ರಶಾಂತ ಕಾಳೆ ಮಾತನಾಡಿ, ಯಶವಂತರಾಯಗೌಡ ಪಾಟೀಲ ಅವರು ಶಾಸಕರಾದ ಮೇಲೆ ಮುಖ್ಯಮಂತ್ರಿ ಪರಿಹಾರ ನೀದಿಯಿಂದ ಜಿಲ್ಲೆಯಲ್ಲಿಯೇ ಇಂಡಿ ಮತಕ್ಷೇತ್ರದಲ್ಲಿಯ ರೈತರಿಗೆ ಹೆಚ್ಚು ಪರಿಹಾರ ಬಂದಿದ್ದು, ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರ ರಿಕ್ಮೆಂಡ್ ದಿಂದ ದಲಿತ ಸಮುದಾಯದ ಬಾಲಕಿಯ ಚಿಕಿತ್ಸೆಗಾಗಿ ಶಾಸಕರ ಬಳಿ ಬಾಲಕಿ ತಂದೆ ಬಂದಾಗ ಅವಮಾನಿಸಿ ಮಾತನಾಡುವ ಕಠೋರ ಹೃದಯದವರು ಶಾಸಕರಲ್ಲ. ಯಾರ ಮನಸ್ಸು ನೋಯಿಸದಂತೆ ಮಾತನಾಡುವ ಹೃದಯವಂತ ಶಾಸಕ ಯಶವಂತರಾಯಗೌಡ ಪಾಟೀಲ ಅವರದ್ದು. ಸ್ವಹಿತಾಸಕ್ತಿಗಾಗಿ ಸಮುದಾಯ ಬಲಿಕೊಡುವ ಕೆಲಸ ದಲಿತ ಮುಖಂಡರು ಮಾಡಿದರೆ ಸಮುದಾಯ ಸಹಿಸುವುದಿಲ್ಲ. ಶಾಸಕರ ಬಗ್ಗೆ ಇನ್ನು ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದಾದರೆ ಜಿತೇಂದ್ರ ಕಾಂಬಳೆ ಬಗ್ಗೆ ಛಲವಾದಿ ಸಮುದಾಯ ಕಠಿಣ ನಿಲುವು ತಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗಣಪತಿ ಬಾಣಿಕೋಲ, ಪ್ರದೀಪ ಮೂರಮನ್, ಮಲ್ಲು ಮಡ್ಡೀಮನಿ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಛಲವಾದಿ ಸಮಾಜದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಬಕ್ರಿದ್ ಹಬ್ಬ ಶಾಂತಿ ಸೌಹಾರ್ದತೆಯಿಂದ ಆಚರಿಸಿ :ಡಿವೈಎಸ್ಪಿ

ಬೀಜಗಳಲ್ಲಿ ಬರನಿರೋಧಕತೆ ಹೆಚ್ಚಿಸಲು ಬೀಜೋಪಚಾರ ಅಗತ್ಯ

ಇಂಧನ ದರ ಏರಿಕೆ ವಿರುದ್ಧ ಕಾಂಗ್ರೆಸ್ ಸಮರ

ಬೀದಿನಾಯಿಗಳ ದಾಳಿಗೆ ಮೇಕೆಮರಿ ಬಲಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಬಕ್ರಿದ್ ಹಬ್ಬ ಶಾಂತಿ ಸೌಹಾರ್ದತೆಯಿಂದ ಆಚರಿಸಿ :ಡಿವೈಎಸ್ಪಿ
    In (ರಾಜ್ಯ ) ಜಿಲ್ಲೆ
  • ಶಾಸಕ ಯಶವಂತರಾಯಗೌಡಬಗೆಗಿನ ಆರೋಪ ಸುಳ್ಳು
    In (ರಾಜ್ಯ ) ಜಿಲ್ಲೆ
  • ಬೀಜಗಳಲ್ಲಿ ಬರನಿರೋಧಕತೆ ಹೆಚ್ಚಿಸಲು ಬೀಜೋಪಚಾರ ಅಗತ್ಯ
    In (ರಾಜ್ಯ ) ಜಿಲ್ಲೆ
  • ಇಂಧನ ದರ ಏರಿಕೆ ವಿರುದ್ಧ ಕಾಂಗ್ರೆಸ್ ಸಮರ
    In (ರಾಜ್ಯ ) ಜಿಲ್ಲೆ
  • ಬೀದಿನಾಯಿಗಳ ದಾಳಿಗೆ ಮೇಕೆಮರಿ ಬಲಿ
    In (ರಾಜ್ಯ ) ಜಿಲ್ಲೆ
  • ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಾಟಕ ಬರಹಗಾರರು, ಕವಿಗಳಿಂದ ಮನವಿ
    In (ರಾಜ್ಯ ) ಜಿಲ್ಲೆ
  • ಎಸ್ಐಆರ್ ಪ್ರಕ್ರಿಯೆಯಿಂದ ಯಾವುದೇ ತೊಂದರೆ ಇಲ್ಲ :ಅಣ್ಣಿಗೇರಿ
    In (ರಾಜ್ಯ ) ಜಿಲ್ಲೆ
  • ಬಿರುಗಾಳಿಗೆ ಧರೆಗುರುಳಿದ ಮರ
    In (ರಾಜ್ಯ ) ಜಿಲ್ಲೆ
  • ಸುಗಮ ಸಂಗೀತದಿಂದ ಶಾಂತಿ ವೃದ್ಧಿ :ಮಹಾಂತ ಸ್ವಾಮೀಜಿ
    In (ರಾಜ್ಯ ) ಜಿಲ್ಲೆ
  • ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳಿಗೆ ಸನ್ಮಾನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.