Author: editor.udayarashmi@gmail.com

ನಾಳೆ ಐತಿಹಾಸಿಕ ನಗರ ಮೈಸೂರಿನಲ್ಲಿ ವಿಶ್ವವಿಖ್ಯಾತ ಜಂಬೂ ಸವಾರಿಗಾಗಿ ಅರಮನೆ ನಗರಿ ಶೃಂಗಾರಗೊಂಡು ಝಗಮಗಿಸುತ್ತ ಸಜ್ಜಾಗಿದೆ. ಈ ಹೊತ್ತಲ್ಲಿ ಮೈಸೂರಿಗೆ ಪ್ರಖ್ಯಾತಿ ತಂದುಕೊಟ್ಟ ಮೈಸೂರು ಅರಸರನ್ನು ನೆನೆಯದಿದ್ದರೆ ಹೇಗೆ? ಅವರ ಕುರಿತು ಈ ವಿಶೇಷ ಲೇಖನ ಲೇಖನ- ರಶ್ಮಿ ಕೆ. ವಿಶ್ವನಾಥ್ಮೈಸೂರು ಉದಯರಶ್ಮಿ ದಿನಪತ್ರಿಕೆ ಇದು, ಮೈಸೂರಿಗೆ ʼವಿಶ್ವವಿಖ್ಯಾತ ಮೈಸೂರುʼ ಎಂಬ ಹೆಸರು ತಂದುಕೊಟ್ಟ ಸಾಂಸ್ಕೃತಿಕ ಮೈಸೂರಿನ ರಾಯಭಾರಿಗಳಾದಂತಹ ಅಂಬಾವಿಲಾಸ ಅರಮನೆಯ ಮೈಸೂರು ಒಡೆಯರ ಸ್ವಾರಸ್ಯಕರ ಕಥೆ.ʼಜಗತ್ಪ್ರಸಿದ್ಧ ಮೈಸೂರುʼಮೈಸೂರಿನ ವಿಷಯ ಬಂದಾಗ ಕೆಲವು ವಿಶೇ಼ಷಣಗಳೂ ಸಹ ಅದರೊಂದಿಗೆ ಸೇರಿಕೊಳ್ಳುತ್ತವೆ. ಅದು ಹೇಗೆ ಮೈಸೂರು ಜಗತ್ತಿನಾದ್ಯಾಂತ ಇಷ್ಟೊಂದು ಪ್ರಸಿದ್ಧಿ ಪಡೆಯಿತು. ಇದಕ್ಕೆ ಕಾರಣರಾದವರು ಯಾರು? ಕಾರಣವಾದ ಅಂಶಗಳಾವುವು? ಈ ಕುತೂಹಲ ಮೂಡಲೇಬೇಕಲ್ಲ?. ಸಾಕ್ಷಿ ಕಣ್ಣ ಮುಂದೆಯೇ ಇದೆ. ಅದೇ ಮೈಸೂರು ದಸರಾ. ಅಷ್ಟೆಯೇ? ಅದನ್ನು ಆಚರಿಸಿಕೊಂಡು ಬಂದವರು ಯಾರು? ಹೌದು ಅವರೇ ಮೈಸೂರಿನ ಒಡೆಯರು ಅಥವಾ ಅರಸರು ಅಥವಾ ದೊರೆಗಳು. ಅವರಿಗಿಂತ ಹೆಚ್ಚು ಗೌರವಕ್ಕೆ ಪಾತ್ರರಾಗುವವರು ಯಾರಿರಲು ಸಾಧ್ಯ? ಅದೇಕೆ ಮೈಸೂರಿನ ಅರಸರು…

Read More

ಇಂದು (ಅಕ್ಟೋಬರ-೨ ಗುರುವಾರ) ವಿಶ್ವ ಅಹಿಂಸಾ ದಿನಾಚರಣೆ (ಮಹಾತ್ಮಾ ಗಾಂಧೀಜಿಯವರ ಜನ್ಮ ದಿನ) ತನಿಮಿತ್ಯ ಈ ವಿಶೇಷ ಲೇಖನ ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)ವಿಜಯಪುರ ಉದಯರಶ್ಮಿ ದಿನಪತ್ರಿಕೆ ಥಾಮಸ್ ಅಲ್ವಾ ಎಡಿಸನ್ ಅವರು, ಅಹಿಂಸೆಯು ಅತ್ಯುನ್ನತ ನೀತಿಶಾಸ್ತ್ರಕ್ಕೆ ಕಾರಣವಾಗುತ್ತದೆ. ಅದು ಎಲ್ಲಾ ವಿಕಾಸದ ಗುರಿಯಾಗಿದೆ. ನಾವು ಇತರ ಎಲ್ಲಾ ಜೀವಿಗಳಿಗೆ ಹಾನಿ ಮಾಡುವುದನ್ನು ನಿಲ್ಲಿಸುವವರೆಗೆ, ನಾವು ಇನ್ನೂ ಅನಾಗರೀಕರು” ಎಂದು ಹೇಳಿದ್ದಾರೆ. ಸತ್ಯ, ಶಾಂತಿ, ಸತ್ಯಾಗ್ರಹ, ಅಹಿಂಸೆ ಮತ್ತು ತ್ಯಾಗಗಳೆಂಬ ಪಂಚ ಮೂಲಮಂತ್ರ ಜಪಿಸುತ್ತಾ, ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಂಚೂಣಿಯಲ್ಲಿ ಹೋರಾಡಿ, ರಾಷ್ಟ್ರಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಡುವಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಪಾತ್ರ ಅನನ್ಯವಾದುದು. ಅಹಿಂಸೆಯೇ ಪರಮೋಧರ್ಮ ಎಂಬುದನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟವರೇ ನಮ್ಮ ಗಾಂಧೀ ತಾತ. ರಾಷ್ಟ್ರಪತಿ ಎಂದು ಕರೆಯಿಸಿಕೊಳ್ಳುವ ಮತ್ತು ಅಹಿಂಸೆ, ಸತ್ಯ ಮತ್ತು ಶಾಂತಿಯನ್ನೇ ತಮ್ಮ ಉಸಿರನ್ನಾಗಿಸಿಕೊಂಡು ದೇಶದ ಸ್ವಾತಂತ್ರ್ಯ ದೊರಕಿಸಿ ಕೊಡುವಲ್ಲಿ ಮುಂಚೂಣಿಯಲ್ಲಿ ಹೋರಾಡಿದ ಮಹಾತ್ಮಾ ಗಾಂಧೀಜಿಯವರ ಜನ್ಮ ದಿನ ಅಕ್ಟೋಬರ-೨ ರಂದು…

Read More

ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಬಣ್ಣನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೃಷಿ ಆಧಾರಿತ ಸಹಕಾರಿ ಚಳುವಳಿಗೆ ವಿಜಯಪುರ ಜಿಲ್ಲೆಯ ಕೊಡುಗೆ ಅನುಪಮವಾಗಿದೆ ಎಂದು ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಬಣ್ಣಿಸಿದರು.ವಿಜಯಪುರ ತಾಲೂಕಿನ ಹೆಗಡಿಹಾಳ ಗ್ರಾಮದಲ್ಲಿ ದಿ.ಆರ್.ಎಂ.ಪಾಟೀಲ ವಾಣಿಜ್ಯ ಸಂಕಿರಣ ಉದ್ಘಾಟಿಸಿ, ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಹಕಾರಿ ರಂಗದಲ್ಲಿ ಇರುವವರಿಗೆ ಪ್ರಾಮಾಣಿಕತೆ, ಸೇವಾ ಬದ್ಧತೆ ಮುಖ್ಯವಾಗಿದೆ. ಅನ್ಯರ ಅಭ್ಯುದಯದಲ್ಲಿ ತಮ್ಮ ಸಂತೃಪ್ತಿ ಕಾಣುವುದೇ ಸಹಕಾರಿ ಧ್ಯೇಯ ಎಂದು ವಿವರಿಸಿದರು.ಗ್ರಾಮೀಣ ಭಾಗದಲ್ಲಿ ರೈತರಿಗೆ ಕೃಷಿ ಹಾಗೂ ತುರ್ತು ಆರ್ಥಿಕ ಅಗತ್ಯಕ್ಕೆ ರಾಷ್ಟ್ರೀಕೃತ ಬ್ಯಾಂಕುಗಳು ನೆರವಿಗೆ ಬರುವುದಿಲ್ಲ. ಆದರೆ ಹಳ್ಳಿಗರ ಆರ್ಥಿಕ ಅಗತ್ಯಕ್ಕೆ ತುರ್ತು ಸ್ಪಂದನೆ ನೀಡುವ ಕೆಲಸವನ್ನು ಗ್ರಾಮೀಣ ಸಹಕಾರಿ ಸಂಸ್ಥೆಗಳು ಮಾಡುತ್ತವೆ. ಹೆಗಡಿಹಾಳ ಗ್ರಾಮದಲ್ಲಿ ಜನ್ಮ ತಳೆದಿರುವ ವಿವಿಧ ಉದ್ದೇಶಗಳ ಸಹಿತ ಗ್ರಾಮೀಣ ಹಾಗೂ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಪಟ್ಟಣದ ಶ್ರೀ ಅಂಬಾಭವಾನಿದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ನಿಮಿತ್ಯ ಚಂಡಿಹೋಮ ಹಮ್ಮಿಕೊಳ್ಳಲಾಗಿತ್ತು.ಕಲಬುರಗಿಯ ಸಂಕೇತಾಚಾರ್ಯ ಅಗ್ನಿಹೋತ್ರಿ, ಮಾಧವಾಚಾರ್ಯ ಜೋಶಿ, ಅಖಿಲೇಶಾಚಾರ್ಯ ಚಂಗದಗಿಕರ ಚಂಡಿಹೋಮ ನಡೆಸಿ ಕೊಟ್ಟರು.ಸವಿತಾ ಏಳಸಂಗ ಮತ್ತು ಬಸವರಾಜ ಏಳಸಂಗ ಚಂಡಿಹೋಮದಲ್ಲಿ ಪಾಲ್ಗೊಂಡಿದ್ದರು.ಇಂಡಿಯ ಅರ್ಚಕ ಶಿವಾನಂದ ಪೂಜಾರಿ, ಶಾಂತು ಪೂಜಾರಿ,ರಮೇಶ ಸುಲಾಖೆ, ಕಿರಣ ಬಳಮಕರ, ಸುಭಾಸ ಬಳಮಕರ, ಬಾಬು ಸುಲಾಖೆ, ಅಮರ ಪತಂಗೆ, ಗಣೇಶ ಮಹೀಂದ್ರಕರ, ಸುನೀಲ ಸುಲಾಖೆ, ಬಾಪು ಮಹೀಂಧ್ರಕರ, ಬಾಳು ಕಠಾರೆ, ಸಂಕೇತ ಮಹೀಂದ್ರಕರ, ಕೀರ್ತನ ಮಹೀಂದ್ರಕರ ಮತ್ತಿತರಿದ್ದರು.ಚಂಡಿಹೋಮ ನಂತರ ಉಡಿ ತುಂಬುವ ಕಾರ್ಯಕ್ರಮ, ಆಶೀರ್ವಾದ ಮತ್ತು ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದಲಿತ ವಿದ್ಯಾರ್ಥಿ ಪರಿಷತ್ ವಿಜಯಪುರ ಜಿಲ್ಲಾ ಘಟಕದಿಂದ ತಕ್ಷಣ ಸರ್ಕಾರ ದಲ್ಲಿ ಖಾಲಿಯಿರುವ ಉದ್ಯೋಗಗಳನ್ನ ಭರ್ತಿ ಮಾಡಬೇಕು, ಉದ್ಯೋಗದ ವಯೋಮಿತಿಯನ್ನ ಜಾಸ್ತಿ ಮಾಡಬೇಕೆಂದು ಆಗ್ರಹಿಸಿ ಮಂಗಳವಾರ ಬ್ರಹತ್ ಜನಾಕ್ರೋಶ ಹೋರಾಟ ಹಮ್ಮಿಕೊಳ್ಳಲಾಯಿತು.ಈ ವೇಳೆ ಡಿ ವಿ ಪಿ ಸಂಘಟನೆಯ ರಾಜ್ಯಧ್ಯಕ್ಷ ಶ್ರೀನಾಥ್ ಪೂಜಾರಿ ಮಾತನಾಡಿ, ನಾಡಿನಾದ್ಯಂತ ವಿದ್ಯಾರ್ಥಿ ಯುವಜನರ ನಿರುದ್ಯೋಗದ ಸಮಸ್ಯೆ ತೀವ್ರವಾಗಿದೆ. ನಾಲ್ಕು ವರ್ಷದಿಂದ ಯಾವುದೇ ಸರ್ಕಾರಿ ಹುದ್ದೆಗಳನ್ನು ತುಂಬದೇ ಸತಾಯಿಸುತ್ತಿರುವುದು ಖಂಡನಿಯ. ವಿದ್ಯಾರ್ಥಿ ಯುವ ಜನರು ನೌಕ್ರಿ ಪಡೆಯಬೇಕೆನ್ನುವ ಉದ್ದೇಶದಿಂದ ಹಗಲು ರಾತ್ರಿ ಕಷ್ಟಪಟ್ಟು ಶ್ರಮ ಪಡ್ತಾ ಇದ್ದಾರೆ ಆದರೆ ಸರ್ಕಾರ ಅವರ ಕಷ್ಟಕ್ಕೆ ಪ್ರತಿಫಲವಾಗಿ ಉದ್ಯೋಗ ನೀಡದೆ ಅವರ ಜೀವನವನ್ನು ಹಾಳು ಮಾಡುತ್ತಿರುವುದು ಅತಿ ಖೇದಕರ ಸಂಗತಿ ಎಂದರು.ಡಿವಿಪಿ ಜಿಲ್ಲಾ ಸಂಚಾಲಕ ಅಕ್ಷಯ್ ಕುಮಾರ್ ಅಜಮನಿ ಮಾತನಾಡಿ, ದಲಿತ ವಿದ್ಯಾರ್ಥಿ ಪರಿಷತ್ ಸುಮಾರು ನಿರುದ್ಯೋಗಿ ಯುವಕರ ಪರವಾಗಿ ಎರಡು ವರ್ಷದಿಂದ ಹೋರಾಟ ಮಾಡುತ್ತಾ ಬಂದಿದೆ. ಆದರೆ ನಮ್ಮನ್ನಾಳುವ ಸರ್ಕಾರಗಳು ನಮ್ಮ ಕಷ್ಟಗಳನ್ನ ಅರ್ಥಮಾಡಿಕೊಳ್ಳದೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವತಿಯಿಂದ ಪ್ರಯಾಣಿಕರ ಅಹವಾಲು- ಕುಂದುಕೊರತೆಗಳನ್ನು ಆಲಿಸಲು ಅಕ್ಟೋಬರ್ ೦೬ರ ಮಧ್ಯಾಹ್ನ ೩-೩೦ರಿಂದ ೪-೩೦ರವರೆಗೆ ಫೋನ್-ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ದೂರವಾಣಿ ಸಂಖ್ಯೆ : ೬೩೬೬೪೨೩೮೮೭ಗೆ ಸಾರ್ವಜನಿಕರು ಕರೆ ಮಾಡಿ ತಮ್ಮ ಕುಂದು-ಕೊರತೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಫೋನ್-ಇನ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಇದರ ಸದುಪಯೋಗ ಪಡೆದುಕೊಳ್ಳುವಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಿದ ಪ್ರಬಂಧ ಸ್ಪರ್ಧೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಾತ್ಮ ಗಾಂಧೀಜಿಯವರ ೧೫೬ನೇ ಜಯಂತಿ ಅಂಗವಾಗಿ ವಿದ್ಯಾರ್ಥಿ ಹಾಗೂ ಯುವಜನರಲ್ಲಿ ಮಹಾತ್ಮಾಗಾಂಧೀಜಿಯವರ ಬದುಕು, ಸ್ವಾತಂತ್ರ್ಯ ಚಳುವಳಿ, ಸರಳತೆ, ಅಹಿಂಸಾ ಮಾರ್ಗ, ಸಹಬಾಳ್ವೆ, ಅಸ್ಪಶೃತೆ ನಿವಾರಣೆಗಾಗಿ ನಡೆಸಿದ ಪ್ರಯೋಗಗಳು ಇತ್ಯಾದಿ ವಿಚಾರಗಳ ಬಗ್ಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಿದ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ-ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಒಟ್ಟು ೫೭೯ ಶಾಲೆಗಳಿಂದ ೮೧೯೮ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಪ್ರೌಢಶಾಲಾ ವಿಭಾಗದಲ್ಲಿ ವಿಜಯಪುರ ನಗರದ ಜಲನಗರ ಸರ್ಕಾರಿ ಪ್ರೌಢಶಾಲೆ ೧೦ನೇ ತರಗತಿ ವಿದ್ಯಾರ್ಥಿನಿ ಅನ್ನಪೂರ್ಣ ಬ.ಪೂಜಾರಿ ಪ್ರಥಮ, ಇಂಡಿ ತಾಲೂಕಿನ ನಾದ ಕೆ.ಡಿ.ಯ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಸೃಷ್ಟಿ ಹಳೇಮನಿ ದ್ವೀತಿಯ ಸ್ಥಾನ ಹಾಗೂ ಸಿಂದಗಿ ತಾಲೂಕಿನ ಕೆರೂಟರಗಿ ಆರ್.ಎಂ.ಎಸ್.ಎ. ಪ್ರೌಢಶಾಲೆ ವಿದ್ಯಾರ್ಥಿನಿ ಶ್ರೇಯಾ ಮ.ಪಾಟೀಲ ತೃತೀಯ ಸ್ಥಾನ ಪಡೆದಿದ್ದಾರೆ.ಪದವಿಪೂರ್ವ ವಿಭಾಗದಲ್ಲಿ ಕೊಲ್ಹಾರ ತಾಲೂಕಿನ ಕೂಡಗಿ ಸರಕಾರಿ ಪದವಿಪೂರ್ವ ಕಾಲೇಜ್‌ನ…

Read More

ಗಾಣಗಾಪೂರದಲ್ಲಿ ಕಾಳಜಿ ಕೇಂದ್ರಕ್ಕೆ ಭೇಟಿ | ಸಂತ್ರಸ್ತರ ಅಹವಾಲು ಸ್ವಿಕಾರ | ನಿತೀನ್ ಗುತ್ತೇದಾರ ಬೆಂಬಲಿಗರಿಂದ ಬೆಡ್ ಶೀಟ್ ವಿತರಣೆ ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ಭಾರಿ ಮಳೆ ಮತ್ತು ಮಹಾರಾಷ್ಟ್ರ ಜಲಾಶಯಗಳಿಂದ ನೀರು ಬಿಡುಗಡೆಯಿಂದಾಗಿ ಕಲಬುರಗಿ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸೋಮವಾರ ಪಕ್ಷದ ಹಿರಿಯ ನಾಯಕರೊಂದಿಗೆ ತಾಲೂಕಿನ ಪ್ರವಾಹ ಪೀಡಿತ ಪ್ರದೇಶವಾದ ದೇವಲ ಗಾಣಗಾಪೂರಕ್ಕೆ ಭೇಟಿ ನೀಡಿದರು.ಅವರು ಪ್ರವಾಹ ಪೀಡಿತ ಸ್ಥಳಗಳು ಹಾಗೂ ಕಾಳಜಿ ಕೇಂದ್ರಗಳ ಭೇಟಿ ನೀಡಿ ಮಾತನಾಡುತ್ತಾ ರಾಜ್ಯ ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿ ಇಲ್ಲ. ಮುಖ್ಯಮಂತ್ರಿಗಳು ಬರೀ ಜಾತಿ ಗಣತಿಯಲ್ಲಿ ತೊಡಗಿದ್ದಾರೆ. ಕೃಷಿ, ಕಂದಾಯ ಸಚಿವರು ಎಲ್ಲಿದ್ದಾರೋ ಗೊತ್ತಿಲ್ಲ. ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸದಾ ಆಕಾಶದಲ್ಲಿರುತ್ತಾರೆ, ಹೀಗಾಗಿ ನೆಲದ ಮೇಲಿನ ಜನರ ಕಷ್ಟ ಕಾಣೋದಿಲ್ಲ. ಸ್ವತಃ ಅವರ ಚಿತ್ತಾಪುರ ಕ್ಷೇತ್ರದ ಜನರು ಕೂಡ ಅವರ ನಡೆಯಿಂದ ಬೇಸತ್ತು ನನ್ನ ಎದುರು ಅಳಲು ತೋಡಿಕೊಂಡಿದ್ದಾರೆ ಎಂದ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತದ ವತಿಯಿಂದ ಅಕ್ಟೋಬರ್ ೭ರಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಗುವುದು. ಅಂದು ಬೆಳಿಗ್ಗೆ ೯.೩೦ಗಂಟೆಗೆ ನಗರದ ಶ್ರೀ ದೇವಸ್ಥಾನದ ಆವರಣದಿಂದ ಶ್ರೀ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದ ಮೆರವಣಿಗೆ ವಿವಿಧ ಕಲಾ ತಂಡಗಳೊಂದಿಗೆ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದ ಆವರಣದವರೆಗೆ ಮೆರವಣಿಗೆ ನಡೆಯಲಿದೆ.ಅಂದು ಬೆಳಿಗ್ಗೆ ೧೦.೩೦ಗಂಟೆಗೆ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಜರುಗಲಿದ್ದು, ಈ ಕಾರ್ಯಕ್ರಮದಲ್ಲಿ ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿ, ಸಿಬ್ಬಂದಿ ಹಾಗೂ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು, ಎಲ್ಲಾ ಸಮುದಾಯದ ಗಣ್ಯರು ಭಾಗವಹಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ತಾಲೂಕಿನ ರಾಮನಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷರಾಗಿ ರಾಮನಹಳ್ಳಿ ಗ್ರಾಮದ ಧರ್ಮರಾಯಗೌಡ ಪಾಟೀಲ, ಉಪಾಧ್ಯಕ್ಷರಾಗಿ ವಿಭೂತಿಹಳ್ಳಿ ಗ್ರಾಮದ ಅಂಬರೀಷ ಸಾಲಕ್ಕಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಈ ಸಂದರ್ಭದಲ್ಲಿ ಭೀಮರಾಯ ನಂದರಗಿ, ಸೋಮನಾಥ ಮೇಲಿನಮನಿ, ಬಸವರಾಜ ತೆಲ್ಲೂರ, ಅಮರೇಶ ಅಷ್ಟಗಿ, ಮಾಂತು ಮಾಡ್ಯಾಳ, ವಿಠ್ಠಲ ಸಿಂಧನಕೇರಿ, ಪ್ರಭು ವಾಲಿಕಾರ, ರಮೇಶ ಹಳೆಮನೆ, ಲಕ್ಷ್ಮಣ ಬತಗುಣಕಿ, ನವಾಬ ಸುಂಬಡ, ಗೊಲ್ಲಾಳಪ್ಪ ಗೌಡ ಪಾಟೀಲ, ಬಂದೇನವಾಜ್ ಖಾನ ಗೌಡ, ಶಂಕರಗೌಡ ಭೈರುಣಗಿ ಹಾಗೂ ರಾಮನಹಳ್ಳಿ ,ಗುಡ್ಡಳ್ಳಿ, ವಿಭೂತಿಹಳ್ಳಿ ,ನಾಗರಹಳ್ಳಿ ಗ್ರಾಮಗಳ ಮುಖಂಡರು ಇದ್ದರು.

Read More