ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣದ ಶ್ರೀವೀರಭದ್ರೇಶ್ವರ ೧೩ ನೇ ವರ್ಷದ ಕಾರ್ತಿಕೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಕಾರ್ತಿಕೋತ್ಸವದ ಪ್ರಯುಕ್ತ ಹುಬ್ಬಳ್ಳಿ ಶ್ರೀಸಿದ್ಧಾರೂಢರ ಪುರಾಣ ಇದೇ ದಿ:೧೮ ರಂದು ಮಂಗಳವಾರದಿಂದ ಡಿಸೆಂಬರ್ ೮ರವರೆಗೆ ರಾತ್ರಿ ೦೮ ಘಂಟೆಗೆ ಜರುಗುವುದು. ವಡಗೇರಾ ತಾಲ್ಲೂಕು ಯಡ್ರಾಮಿಯ ನಾಗಯ್ಯಸ್ವಾಮಿ ಹಿರೇಮಠ ಇವರಿಂದ ಪುರಾಣ, ಕೆರೂಟಗಿ ಗ್ರಾಮದ ರೇಣುಕಾಚಾರ್ಯ ಗವಾಯಿಗಳಿಂದ ಸಂಗೀತ ಸೇವೆ, ಸುರುಪುರ ರಾಜಶೇಖರ ಗೆಜ್ಜಿ ಇವರಿಂದ ತಬಲಾ ಸೇವೆ ಜರುಗಲಿವೆ.
ಕಾರ್ಯಕ್ರಮದ ಅಂಗವಾಗಿ ತೊಟ್ಟಿಲುಕಾರ್ಯ, ಸುಮಂಗಲೆಯರಿಗೆ ಉಡಿತುಂಬುವದು ಲಿಂಗದೀಕ್ಷೆ ಹಾಗೂ ಅಯ್ಯಾಚಾರ, ಶ್ರೀವೀರಭದ್ರೇಶ್ವರ ಕಲ್ಯಾಣೋತ್ಸವ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಡಿಸೆಂಬರ್ ೮ ಸೋಮವಾರರಂದು ಧರ್ಮಸಭೆ, ದಿ:೯ ಮಂಗಳವಾರ ಪಲ್ಲಕ್ಕಿ ಉತ್ಸವ ಕುಂಭ ಕಳಶ, ಸಕಲ ವಾಧ್ಯವೈಭವಗಳ ಸಹಿತ ನಾಡಿನ ಪುರವಂತರ ಸೇವೆಯೊಂದಿಗೆ ಜರುಗುವುದು. ಈ ಎಲ್ಲ ಕಾರ್ಯಗಳಲ್ಲಿ ಸಕಲ ಸದ್ಬಕ್ತರು ಭಾಗವಹಿಸಿ ಶೋಭೆ ತರಲು ಕಾರ್ತಿಕೋತ್ಸವ ಸಮಿತಿ ಪ್ರಕಟಣೆಯ ಮೂಲಕ ತಿಳಿಸಿದೆ.
