ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಪಟ್ಟಣದ ಮಲ್ಲಾರಟ್ಟಿ ಬೀದಿಯಲ್ಲಿ ಹೆಸ್ಕಾಮ ಅದಿಕಾರಿಗಳು ಪರಿಶೀಲನೆ ನಡೆಸಿ ಅಕ್ರಮ ವಿದ್ಯುತ ಸಂಪರ್ಕ ಕಂಡು ಬಂದ ಹಿನ್ನಲೆ ಶಾಖಾಧಿಕಾರಿಯಾದ ಸೋಮನಗೌಡ ಅವಟಿ, ಹಾಗೂ ಮೆಲ್ವಿಚಾರಕರಾದ ಸೋಮಣ್ಣ ನೀಡೋಣಿ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಅಕ್ರಮ ವಿದ್ಯುತ್ ಸಂಪರ್ಕದಾರರಿಗೆ ನೋಟಿಸ ಜಾರಿ ಮಾಡಿ ವಿದ್ಯುತ ಸಂಪರ್ಕ ಕಟ್ಟ ಮಾಡಿ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಅಕ್ರಮ ವಿದ್ಯುತ್ ಸಂಪರ್ಕದಿಂದ ಅವಘಡ ಸಂಬವಿಸುತ್ತಿದ್ದು ಮತ್ತು ವಿದ್ಯುತ ಕೂಡಾ ಸೋರಿಕೆ ಆಗುವದರಿಂದ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿ ಸಂಬಂದ ಪಟ್ಟವರ ಮೇಲೆ ಕಾನೂನಿನ ಕ್ರಮ ಕೈಗೋಳ್ಳಲಾಗುವುದೆಂದು ಎಚ್ಚಿರಿಕೆ ನೀಡಿದರು.
ಈ ವೇಳೆ ಸಂಜು ಪವಾರ, ರಾಣೋಭಾ ಮಿಸ್ಸಾಳ, ಶರಣು ಬನ್ನೆನವರ, ಹಸನ ಬಾಗವಾನ, ಶಿವಪ್ಪ ಕೋರಿ, ಹಾಗೂ ೨೪*೭ ಸಿಬ್ಬಂದಿಗಳು ಇದ್ದರು.

