Author: editor.udayarashmi@gmail.com

40 ನೇ ಪುಣ್ಯಸ್ಮರಣೆಯ ಸಮಾರೋಪ | 7 ದಿನಗಳ ಜಾತ್ರೆ ಸಂಪನ್ನ ಉದಯರಶ್ಮಿ ದಿನಪತ್ರಿಕೆ ಚಡಚಣ: ಜೇವೂರಿನ ಹಠಯೋಗಿ ಪವಾಡ ಪುರುಷ ಶ್ರೀ ರೇವಣಸಿದ್ಧೇಶ್ವರ ಸ್ವಾಮೀಜಿಯ 40ನೇ ಪುಣ್ಯರಾಧನೆ ಪ್ರಯುಕ್ತ ಕೊನೆಯ ದಿನವಾದ ಬುಧವಾರ ರೇವಣಸಿದ್ಧೇಶ್ವರ ಸ್ವಾಮೀಜಿಯವರ ರಥೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ಮತ್ತು ನಂದಿಕೋಲ ಉತ್ಸವದೊಂದಿಗೆ ಆನೆ ಅಂಬಾರಿಯ ಮೇಲೆ ರೇವಣಸಿದ್ಧೇಶ್ವರ ಸ್ವಾಮೀಜಿಯವರ ಭಾವಚಿತ್ರ ಇಟ್ಟು ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಯಿತು.ಜೇವೂರಿನ ಹಠಯೋಗಿ ಶ್ರೀ ರೇವಣಸಿದ್ಧೇಶ್ವರರು ಬೇಡಿದ್ದನ್ನು ಕರುಣಿಸುವ ಕೃಪಾಮಯಿ ಪವಾಡ ಪುರುಷರಾಗಿದ್ದಾರೆ ಎಂದು ತಡವಲಗಾ ಅಭಿನವ ರಾಚೋಟೇಶ್ವರ ಶ್ರೀಗಳು ಹೇಳಿದರು.ಹಠಯೋಗಿ ಪವಾಡ ಪುರುಷ ಶ್ರೀ ರೇವಣಸಿದ್ಧೇಶ್ವರ ಸ್ವಾಮೀಜಿ ಅವರ 40ನೇ ಪುಣ್ಯರಾಧನೆ ಪ್ರಯುಕ್ತ ಬುಧವಾರ ಜರುಗಿದ ಧರ್ಮ ಸಭೆಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ಗದಗದ ಅಸುಂಡಿಯ ಮಾತೊಶ್ರೀ ಮೈತ್ರಾ ದೇವಿ ಅವರು ಮಾತನಾಡಿ ಮಹಾನ್ ತ್ಯಾಗಮಯಿ ಯೋಗಿಗಳ ಪುಣ್ಯರಾಧನೆಯ ಉತ್ಸವಗಳು ಭಕ್ತಿ ಭಾವದ ಸಂಕೇತವಾಗಿವೆ, ಈ ಮಠದಲ್ಲಿ ಪ್ರತಿ ವರ್ಷ ನಡೆಯುವ ಸಂತ ಮಹಾಂತರ ಅನುಭವಿಗಳಿಂದ ನಡೆಯುವ ಪ್ರವಚನಗಳು…

Read More

ಉದಯರಶ್ಮಿ ದಿನಪತ್ರಿಕೆ ​ಜಮಖಂಡಿ: ತಾಲೂಕಿನ ಸುಕೇತ್ರ ಶ್ರೀ ಶಿವಲಿಂಗೇಶ್ವರ ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ, ಶ್ರೀ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವ, ಶಿಲಾಮಂಟಪ ಉದ್ಘಾಟನೆ ಹಾಗೂ ನೂತನ ಗುರುಭವನ ಲೋಕಾರ್ಪಣೆ ಕಾರ್ಯಕ್ರಮದ ವಾಲ್ ಪೋಸ್ಟರ್‌ ಅನ್ನು ಪೂಜ್ಯ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಬಿಡುಗಡೆಗೊಳಿಸಿದರು.​ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಶ್ರೀಗಳು, “ಜಾತ್ರೆಗಳು ಕೇವಲ ಸಂಭ್ರಮದ ಆಚರಣೆಯಲ್ಲ, ಅವು ನಮ್ಮ ಸಂಸ್ಕೃತಿ ಮತ್ತು ಸೌಹಾರ್ದತೆಯ ಸಂಕೇತ. ಈ ಬಾರಿ ಜಾತ್ರೆಯ ಜೊತೆಗೆ ಭಕ್ತರ ಬಹುಕಾಲದ ಕನಸಾದ ಶಿಲಾಮಂಟಪ ಹಾಗೂ ಗುರುಭವನದ ಲೋಕಾರ್ಪಣೆ ನೆರವೇರುತ್ತಿರುವುದು ಸಂತಸದ ವಿಷಯ,” ಎಂದು ತಿಳಿಸಿದರು.​ಜಾತ್ರಾ ಮಹೋತ್ಸವ ಪರಂಪರೆಯಂತೆ ಶ್ರೀ ಶಿವಲಿಂಗೇಶ್ವರರ ಅದ್ಧೂರಿ ರಥೋತ್ಸವ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಲಿವೆ.​ಶಿಲಾಮಂಟಪ ಉದ್ಘಾಟನೆ: ಕಲಾತ್ಮಕವಾಗಿ ಕೆತ್ತಲ್ಪಟ್ಟ ಭವ್ಯ ಶಿಲಾಮಂಟಪವು ಮಠದ ಸೌಂದರ್ಯಕ್ಕೆ ಮತ್ತು ಆಧ್ಯಾತ್ಮಿಕ ಕಳೆಗೆ ಸಾಕ್ಷಿಯಾಗಲಿದೆ.​ಗುರುಭವನ ಲೋಕಾರ್ಪಣೆ: ಭಕ್ತರ ಅನುಕೂಲಕ್ಕಾಗಿ ನಿರ್ಮಿಸಲಾದ ಸುಸಜ್ಜಿತ ಗುರುಭವನವನ್ನು ಸಾರ್ವಜನಿಕರ ಸೇವೆಗೆ ಅರ್ಪಿಸಲಾಗುವುದು.​ಸಾಂಸ್ಕೃತಿಕ ಕಾರ್ಯಕ್ರಮ: ಜಾತ್ರೆಯ ಅಂಗವಾಗಿ ಪ್ರತಿ ದಿನ ಸಂಜೆ ರಾಜ್ಯದ ಪ್ರಸಿದ್ಧ ಕಲಾವಿದರಿಂದ…

Read More

ಪ್ರತಿ ಹಳ್ಳಿಗೂ ತಟ್ಟಿದ ಗ್ಯಾಸ್‌ ಸಮಸ್ಯೆ | ರಸ್ತೆ ಬದಿಯ ಬಂಡಿ ವ್ಯಾಪಾರಿಗಳ ಗಳಿಕೆಗೆ ಹೊಡೆತ ಉದಯರಶ್ಮಿ ದಿನಪತ್ರಿಕೆ ವರದಿ: ಎಸ್ ಎಮ್ ಇಟ್ಟಿ ಜಮಖಂಡಿ: ಅಮೆರಿಕ-ಇಸ್ರೇಲ್ ಜತೆಯಾಗಿ ಇರಾನ್ ಮೇಲೆ ನಡೆಸುತ್ತಿರುವ ದಾಳಿ, ಜಾಗತಿಕ ಯುದ್ಧ ಭೀತಿಯಿಂದಾಗಿ ದೇಶದಾದ್ಯಂತ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಆಗಿದ್ದು, ತಾಲೂಕಿಲ್ಲೂ ಎಲ್‌ ಪಿಜಿ ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆ ತಗ್ಗಿದೆ. ಇದರಿಂದ ಆತಿಥ್ಯ ವಲಯದ ಉದ್ಯಮಕ್ಕೆ ಸಂಕಷ್ಟ ಬಂದೊದಗಿದೆ.ಕೆಲ ಹೋಟೆಲ್‌ಗಳವರು ಈಗಾಗಲೇ ಕಟ್ಟಿಗೆಗಳನ್ನು ಸಂಗ್ರಹಿಸಿ, ಒಲೆ ಉರಿಸುವ ಸಿದ್ಧತೆಗಳಲ್ಲಿದ್ದರೆ. ಮತ್ತೆ ಕೆಲವರು ಈಗಾಗಲೆ ಕಟ್ಟಿಗೆ ಒಲೆ ಆರಂಭಿಸಿದ್ದಾರೆ. ಪಾನಿಪುರಿ, ಚೈನೀಸ್ ಬಂಡಿಗಳು, ದೋಸೆ, ಇಡ್ಲಿ ಮಾರಾಟ ಮಾಡುವ ಬಂಡಿಗಳಲ್ಲಿ ವಾಣಿಜ್ಯ ಸಿಲಿಂಡ‌ರ್ ಖಾಲಿಯಾಗಿದ್ದು, ಬಹುತೇಕ ವ್ಯಾಪಾರ ಸ್ಥಗಿತಗೊಳಿಸುವ ಹಂತಕ್ಕೆ ತಲುಪಿವೆ. ಅಲ್ಲೆಲ್ಲೋ ಯುದ್ಧವಾಗುತ್ತಿದ್ದರೆ, ನಮ್ಮನೆಯ, ಹೋಟೆಲ್ ಒಲೆಗಳು ಪರಿಣಾಮ ಎದುರಿಸುವಂತಾಗಿದೆ.ಪೂರೈಕೆಯಲ್ಲಿ ವ್ಯತ್ಯಾಸ, ದರ ಹೆಚ್ಚಳ: ದುಬೈ ಸೇರಿ ನಾನಾ ದೇಶಗಳಿಂದ ವಿಮಾನ, ಹಡಗುಗಳಲ್ಲಿ ದೇಶಕ್ಕೆ ಬರುವ ಖರ್ಜೂರ, ಡೈಫೂಟ್ಸ್‌ಗಳ ಪೂರೈಕೆಯಲ್ಲೂ ವ್ಯತ್ಯಾಸ ಆಗುತ್ತಿರುವುದರಿಂದ ಇವುಗಳ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರಗತಿ ಹಂತದಲ್ಲಿರುವ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಬೇಕು ಎಂದು ವಿಜಯಪುರ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ತಾಳಿಕೋಟಿ ತಾಲೂಕಿನ ಕೊಣ್ಣೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಡೇಕನೂರ ಗ್ರಾಮದ ಅಂಗನವಾಡಿಗೆ ಭೇಟಿ ನೀಡಿದ ಅವರು, ಅಂಗನವಾಡಿ ಸುತ್ತಮುತ್ತಲಿನ ಪರಿಸರ ಸ್ವಚ್ಛತೆ, ಮಕ್ಕಳ ಕಲಿಕಾ ಸಾಮರ್ಥ್ಯ ಗುಣಮಟ್ಟ ಹೆಚ್ಚಿಸಿ ಕಲಿಕೆಗೆ ಆದ್ಯತೆ ನೀಡಬೇಕು. ಅಡುಗೆ ಕೊಠಡಿ ಸ್ವಚ್ಚತೆಗೆ ನಿರಂತರ ಶುಚಿತ್ವ ಕಾಪಾಡಬೇಕು. ಸಿಬ್ಬಂದಿ ಹಾಗೂ ಮಕ್ಕಳ ಹಾಜರಾತಿ, ಮಕ್ಕಳ ಆರೋಗ್ಯ ತಪಾಸಣಾ ವರದಿ ಸೇರಿದಂತೆ ವಿವಿಧ ಮಾಹಿತಿ ದಾಖಲೆ ಪರಿಶೀಲನೆ ನಡೆಸಿದರು.ನಂತರ ಪ್ರಗತಿ ಹಂತದಲ್ಲಿರುವ ಪಡೇಕನೂರ ಗ್ರಾಮದಿಂದ ಹಳ್ಳೂರ ಗ್ರಾಮದವರೆಗೆ ರಸ್ತೆ ನಿರ್ಮಾಣ ಕಾಮಗಾರಿ ಪರಿಶೀಲಿಸಿ, ನಿಗದಿತ ಅವಧಿಯಲ್ಲಿ ಆದ್ಯತೆಯ ಮೇರೆಗೆ ಕಾಮಗಾರಿಯನ್ನು ಪೂರ್ಣಗೊಳಿಸುವುದಕ್ಕೆ ಕ್ರಮವಹಿಸಬೇಕು ಮತ್ತು ಉತ್ತಮ ಗುಣಮಟ್ಟದ ಕಾಮಗಾರಿ ಅನುಷ್ಠಾನಗೊಳಿಸಬೇಕು ಎಂದು ಪಂಚಾಯತ್ ರಾಜ್ ಇಂಜನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಪಂಚಾಯತ್ ರಾಜ್ ಇಂಜನಿಯರಿಂಗ ವಿಭಾಗದ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ಕೊಡುವುದು ಬಹಳ ಅವಶ್ಯಕವಿದೆ ಎಂದು ಶಾಸಕ ರಾಜುಗೌಡ ಪಾಟೀಲ(ಕುದರಿಸಾಲವಾಡಗಿ) ಹೇಳಿದರು.ತಾಲ್ಲೂಕಿನ ಕೋರವಾರ ಗ್ರಾಮದಲ್ಲಿ ಮಂಗಳವಾರ ಮಾನಸ ಆಂಗ್ಲ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಯ ಪ್ರಥಮ ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.ಮಾನಸ ಆಂಗ್ಲ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಉತ್ತಮ ಶಿಕ್ಷಣದೊಂದಿಗೆ ಸಂಸ್ಕಾರವನ್ನು ಕೊಡುತ್ತಿದೆ. ಈ ಕಾರ್ಯ ಇದೇ ರೀತಿ ಮುಂದುವರೆಯಲಿ, ಸೈನಿಕ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ನೂರಕ್ಕೆ ನೂರು ಪಲಿತಾಂಶ ಕೊಟ್ಟ ಈ ಶಾಲೆ ಇನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಲಿ ಎಂದರು.ಸಿಂದಗಿ ಟಿಎಪಿಸಿಎಂಎಸ್ ಅಧ್ಯಕ್ಷ ಸಂಗಮೇಶ ಛಾಯಾಗೋಳ, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೇಖರಗೌಡ ಪೊಲೀಸ್‌ಪಾಟೀಲ ಮಾತನಾಡಿದರು.ಸ್ಥಳೀಯ ಹಿರಿಯ ವೈದ್ಯ ಸೋಮಶೇಖರ ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸ್ಥಳೀಯ ಚೌಕಿಮಠದ ಅಭಿನವ ಮುರುಗೇಂದ್ರ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.ತಾಲ್ಲೂಕು ಪಂಚಾಯಿತಿ ಮಾಜಿಸದಸ್ಯ ಮಲ್ಲನಗೌಡ ಬಿರಾದಾರ, ಕೋರವಾರೇಶ್ವರ ವಿ.ವಿ ಸಂಘದ ಅಧ್ಯಕ್ಷೆ ಪ್ರಭಾವತಿ ಬಿರಾದಾರ,…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಇದೇ ೧೩ ಶುಕ್ರವಾರದಂದು ತಾಲ್ಲೂಕಿನ ಯಾಳವಾರ ಗ್ರಾಮದ ವಿಶ್ವಭಾರತಿ ವಿದ್ಯಾವರ್ಧಕ ಸಂಸ್ಥೆಯ ಅಡಿಯಲ್ಲಿ ಸಂಸ್ಕಾರ ಉತ್ಸವ ಹಾಗೂ ೧೪ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಜರುಗಲಿದೆ.ಸಂಸ್ಕಾರಧಾಮ ಶಾಲಾ ಆವರಣದಲ್ಲಿ ಸಾಯಂಕಾಲ ೫ ಗಂಟೆಗೆ ಜರುಗುವ ಕಾರ್ಯಕ್ರಮದಲ್ಲಿ ಸ್ಥಳೀಯ ಕೇದಾರಲಿಂಗಶ್ರೀ, ಕಡಕೋಳದ ರಾಜಗುರು ಮಹಾಲಿಂಗ ಸ್ವಾಮಿಜಿ ಹಾಗೂ ಹಿರೇಮಠದ ಬಸಯ್ಯಸ್ವಾಮಿಜಿ ಸಾನಿಧ್ಯ ವಹಿಸಲಿದ್ದಾರೆ. ಗ್ರಾಮ ಪಂಚಾಯಿತಿ ಮಾಜಿಅಧ್ಯಕ್ಷ ದೇವೇಂದ್ರ ಬಡಿಗೇರ ಅಧ್ಯಕ್ಷತೆ ವಹಿಸಲಿದ್ದಾರೆ.ಶಾಸಕ ರಾಜುಗೌಡ ಪಾಟೀಲ(ಕುದರಿಸಾಲವಾಡಗಿ) ಉದ್ಘಾಟನೆ ನೆರವೇರಿಸಲಿದ್ದಾರೆ. ಮಾಜಿಶಾಸಕ ಸೋಮನಗೌಡ ಪಾಟೀಲ(ಸಾಸನೂರ), ಖ್ಯಾತ ನೇತ್ರತಜ್ಞ ಪ್ರಭುಗೌಡ ಲಿಂಗದಳ್ಳಿ(ಚಬನೂರ), ಯಾದಗಿರಿ ಜಿಲ್ಲಾ ಪಂಚಾಯಿತಿ ಮಾಜಿಅಧ್ಯಕ್ಷ ಬಸನಗೌಡ ಪಾಟೀಲ(ಯಡಿಯಾಪೂರ), ಪಿಕೆಪಿಎಸ್ ಅಧ್ಯಕ್ಷ ರಾಜುಗೌಡ ನಾಡಗೌಡ, ಸೇರಿದಂತೆ ಇತರರು ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ೧೦ ಜನ ಸಾಧಕರಿಗೆ ಸಂಸ್ಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ಯಶಸ್ವಿಗೊಳಿಸಲು ಸಂಸ್ಕಾರಧಾಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಕೆ.ಪಟೇದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಹಳೆಯ ಕಾಲದಲ್ಲಿ ಮಹಿಳೆಯರಿಗೆ ಶಿಕ್ಷಣ ಉದ್ಯೋಗ ಮತ್ತು ನಿರ್ಧಾರಗಳಲ್ಲಿ ಭಾಗವಹಿಸುವ ಅವಕಾಶ ಕಡಿಮೆ ಇತ್ತು. ಆದರೆ ಮಹಿಳೆಯರು ಶಿಕ್ಷಣ ರಾಜಕೀಯ ವಿಜ್ಞಾನ ಕ್ರೀಡೆ ಮತ್ತು ಉದ್ಯಮ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ದೊಡ್ಡ ಸಾಧನೆ ಮಾಡುತ್ತಿದ್ದಾರೆ ಎಂದು ಒಡಲ ಧ್ವನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಡಾ. ಭುವನೇಶ್ವರಿ ಕಾಂಬಳೆ ಹೇಳಿದರು.ನಗರದ ಬಾಬು ಜಗಜೀವನರಾಮ ಭವನದಲ್ಲಿ ಬುಧವಾರ ದೀಪಾಲಯ ಸಂಸ್ಥೆ ಹಾಗೂ ಸ್ವಸಹಾಯ ಸಂಘಗಳ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಹೋದರಿ ಇವಿಲನ್ ಬೆನಿಸ್ ಮಾತನಾಡಿ ಮಹಿಳೆ ಎಂದರೆ ಕೇವಲ ಮನೆಯ ಜವಾಬ್ದಾರಿ ಮಾತ್ರವಲ್ಲ ಅವರು ತಾಯಿ ಶಿಕ್ಷಕಿ ನಾಯಕಿ ಮತ್ತು ಸಮಾಜ ನಿರ್ಮಾಣದ ಶಕ್ತಿ ಆದ್ದರಿಂಸ ಮಹಿಳೆಯರಿಗೆ ಸಮಾನ ಹಕ್ಕುಗಳು ಶಿಕ್ಷಣ ಗೌರವ ನೀಡುವದು ನಮ್ಮ ಪ್ರತಿಯೊಬ್ಬರ ಕರ್ತವ್ಯ ಎಂದರು.ಸಹಾಯಕ ಗುರುಗಳು ಸಂತ ಅನ್ನಮ್ಮನವರ ದೇವಾಲಯ ವಿಜಯಪುರದ ಸ್ವಾಮಿ ಜೋನ್ ಕ್ರಾಸ್ತಾ, ದೀಪಾಲಯ ಸಂಸ್ಥೆ ನಿರ್ದೇಸಕಿ ಜೆಸಿಂತ ಮಚಾದೊ, ತಾಪಂ ಇಒ ಭೀಮಾಶಂಕರ ಕನ್ನೂರ,…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ನಗರದ ಸ್ಟೇಷನ್ ರಸ್ತೆಯಲ್ಲಿರುವ ಪಂಚರತ್ನಾ ಹೋಟೆಲಗೆೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಹಾನಿಯಾಗಿದೆ.ಶಾಂತು ಶಿರಕನಹಳ್ಳಿ ಇವರಿಗೆ ಸೇರಿದ ಹೊಟೆಲ್ ಪಂಚರತ್ನಾ ರಾತ್ರಿ ಒಂದು ಗಂಟೆಗೆ ಬೆಂಕಿ ತಗುಲಿದ್ದು ಬೆಂಕಿ ವಿದ್ಯುತ್ ಶಾಟ್ ಸರ್ಕಿಟನಿಂದ ಆಗಿರಬಹುದು ಎಂದು ಹೇಳಲಾಗುತ್ತಿದೆ.ಅಗ್ನಿ ಶಾಮಕ ಇಲಾಖೆಯವರು ಬಂದು ಬೆಂಕಿ ಆರಿಸುವಲ್ಲಿ ಸಹಕರಿಸಿದ್ದಾರೆ.ಅಂದಾಜು ಐದು ಲಕ್ಷ ರೂ ಹಾನಿಯಾಗಿರ ಬಹುದು ಎಂದು ಹೇಳಲಾಗುತ್ತಿದೆ.

Read More

ಕೊಲ್ಹಾರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಬೃಹತ್ ಹಿಂದೂ ಸಮ್ಮೇಳನ ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಹುಟ್ಟು ಇಲ್ಲದ, ಸಾವು ಬರದ ಮೃತ್ತ್ಯುಂಜಯವಾದ ಧರ್ಮವೇ ಸನಾತನ ಹಿಂದೂ ಧರ್ಮವಾಗಿದ್ದು, ಇದು ವಿಶ್ವದ ಶ್ರೇಷ್ಠ ಧರ್ಮವಾಗಿದ್ದು ಸಿಂಧೂ ನಾಗರಿಕತೆಯ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಪ್ರಾಂತ ಪ್ರಮುಖ ಧಾಮೋದರಜಿ ಹೇಳಿದರು.ಪಟ್ಟಣದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಳೀಯ ಘಟಕದ ವತಿಯಿಂದ ಆಯೋಜಿಸಲಾದ ಬೃಹತ್ ಹಿಂದೂ ಸಮ್ಮೇಳನದಲ್ಲಿ ಬೌದ್ಧಿಕ ಪ್ರಮುಖರಾಗಿ ಮಾತನಾಡಿದ ಅವರು, ಭಾರತಭೂಮಿ ತ್ಯಾಗ, ಆಶ್ರಯ ಮತ್ತು ಸಂಸ್ಕಾರ ನೀಡುವ ಪವಿತ್ರ ನೆಲವಾಗಿದ್ದು ವಿಶ್ವಕ್ಕೆ ಮಾದರಿ ರಾಷ್ಟ್ರವಾಗಿದೆ ಎಂದರು.ಗುರು ಪರಂಪರೆ ಹಾಗೂ ಧರ್ಮ ಮಾರ್ಗದ ಮೂಲಕ ಗುರುಕುಲ ಪದ್ಧತಿಯ ಶಿಕ್ಷಣ ವ್ಯವಸ್ಥೆಯಿಂದ ಜ್ಞಾನ, ಆರೋಗ್ಯ ಹಾಗೂ ವಿಜ್ಞಾನ ತಿಳುವಳಿಕೆಯನ್ನು ನೀಡುವ ಶೈಕ್ಷಣಿಕ ಕೇಂದ್ರಗಳಲ್ಲಿ ಮಕ್ಕಳಿಗೆ ಉತ್ತಮ ವಿದ್ಯೆ ದೊರಕುವಂತಾಗಬೇಕು ಎಂದು ಹೇಳಿದರು.ಸಾಮಾಜಿಕ ಸಾಮರಸ್ಯದ ಮೂಲಕ ಜಾತಿ ಪದ್ದತಿಯನ್ನು ಹೋಗಲಾಡಿಸಿ ಎಲ್ಲರೂ ಭಾರತಮಾತೆಯ ಮಕ್ಕಳು ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ಹಿಂದೂ ಧರ್ಮದ ಮೌಲ್ಯಗಳನ್ನು ಕಾಪಾಡಿಕೊಳ್ಳುವುದು…

Read More

ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ರಾಜ್ಯಾದ್ಯಂತ ಸೂರ್ಯನ ತಾಪ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ತೇವಾಂಶ ಕಡಿಮೆಯಾಗಿ ಉಷ್ಣಾಂಶದಲ್ಲಿ ಭಾರಿ ಏರಿಕೆಯಾಗಿರುವುದರಿಂದ ಮನುಷ್ಯರು ಮಾತ್ರವಲ್ಲದೆ, ಮೂಕಪ್ರಾಣಿ ಮತ್ತು ಪಕ್ಷಿಗಳು ನೀರಿಲ್ಲದೆ ತತ್ತರಿಸುತ್ತಿರುವ ಕಠಿಣ ಪರಿಸ್ಥಿತಿ ಕಂಡು ಯಾದಗಿರಿ ಜಿಲ್ಲೆಯ ಕೆಂಭಾವಿ ಪಟ್ಟಣದ ಇಲ್ಯಾಸ್ ಪಟೇಲ್ ಅವರು ಪ್ರಾಣಿ-ಪಕ್ಷಿಗಳಿಗೆ ನೀರುಣಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.ಬತ್ತಿದ ಕೆರೆ ಬಾವಿಗಳು ಕಂಗಾಲಾದ ಜೀವಿಗಳು ಹಿಂದೆ ಹಳ್ಳ, ಕೊಳ್ಳಗಳು, ಕೆರೆ, ಕುಂಟೆಗಳು ಸಮೃದ್ಧವಾಗಿರುತ್ತಿದ್ದವು. ಆದರೆ ಇಂದು ನಗರೀಕರಣ ಹಾಗೂ ಮಳೆಯ ಅಭಾವದಿಂದ ಜಲಮೂಲಗಳು ಬರಿದಾಗಿವೆ. ಬಿಸಿಲಿನ ಝಳಕ್ಕೆ ಹಾರಾಡುವ ಹದ್ದು, ಕಾಗೆ, ಪಾರಿವಾಳಗಳು ಬಸವಳಿದು ನೆಲಕ್ಕೆ ಬೀಳುತ್ತಿವೆ. ಇಂತಹ ಸಂದಿಗ್ಧ ಸಮಯದಲ್ಲಿ ಇಲ್ಯಾಸ್ ಪಟೇಲ್ ಅವರ ಈ ಸೇವೆ ಪ್ರಕೃತಿ ಸಂರಕ್ಷಣೆಗೆ ದೊಡ್ಡ ಕೊಡುಗೆಯಾಗಿದೆ.ಸದಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಪಟೇಲ್ ಅವರು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಈ ಸೇವೆಯನ್ನು ಆರಂಭಿಸಿದ್ದು ಸಾರ್ವಜನಿಕರು ಬಳಸಿ ಬಿಸಾಡಿದ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿ, ಅವುಗಳನ್ನು ಮರುಬಳಕೆ ಮಾಡಿ ಅವುಗಳಲ್ಲಿ ನೀರು ತುಂಬಿಸಿ…

Read More