ಉದಯರಶ್ಮಿ ದಿನಪತ್ರಿಕೆ
ಬೆಳಗಾವಿ: ಕಾವ್ಯ ಸಮಯ ಸಂದರ್ಭ ನೋಡಿ ಹುಟ್ಟುವುದಿಲ್ಲ ಅದು ಅಂತಃಸ್ಪೂರ್ತಿಯಾಗಿ ಸ್ಪಂದಿಸಿ ಕವಿಯ ಕಾವ್ಯವಾಗಿ ಹೊರಹೊಮ್ಮುತ್ತದೆ ಪುಸ್ತಕ ಪ್ರೀತಿಸುವವರು ಪುಸ್ತಕ ಓದುವವರು ನಿಜವಾದ ಸುಖಿಗಳು. ಇಂದಿನ ಧಾವಂತದ ದಿನಗಳಲ್ಲಿ ಪುಸ್ತಕ ಸಂಸ್ಕೃತಿ ತೀರಾ ಅಗತ್ಯವಾಗಿದೆ ಎಂದು ವಿದ್ವಾಂಸ ಡಾ ಬಸವರಾಜ ಜಗಜಂಪಿ ನುಡಿದರು.
ಅವರಿಂದು ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದಿಂದ ನಡೆದ ಡಾ ಭವ್ಯಾ ಅಶೋಕ ಸಂಪಗಾರರವರ ನಾಳೆಗಳ ನೆಚ್ಚಿ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಿದ್ದರು.
ಮುಂದುವರಿದು ಸಾಹಿತ್ಯ ಪ್ರವೇಶಿಕರಿಗೆ ಹಿರಿಯ ಸಾಹಿತಿಗಳ ಸಾಹಿತ್ಯದ ಅಭ್ಯಾಸ ಅಗತ್ಯವಿದೆ. ಬರೆದಿದ್ದೆಲ್ಲ ಸಾಹಿತ್ಯವಾಗಲಾರದು. ಸತತ ಅಧ್ಯಯನ ಒಂದು ಒಳ್ಳೆಯ ಕೃತಿಗೆ ಕಾರಣವಾಗುತ್ತದೆಂದರು.
ಬಾಲವಿಕಾಸ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಬಸವರಾಜ ಗಾರ್ಗಿ ಮುಖ್ಯ ಅತಿಥಿ ಸ್ಥಾನದಿಂದ ಬೆಳಗಾವಿ ಜಿಲ್ಲೆಯ ವೈದ್ಯ ಸಾಹಿತ್ಯ ಪರಂಪರೆ ಮತ್ತು ಮಹಿಳಾ ಸಾಹಿತಿಗಳ ಸಾಹಿತ್ಯ ಪರಂಪರೆ ಕುರಿತು ಮಾತನಾಡಿದರು.
ಬೀಮ್ಸ ಆಡಳಿತಾಧಿಕಾರಿ ಡಾ ಸಿದ್ದು ಹುಲ್ಲೋಳಿ ಮಾತನಾಡಿ, ವೈದ್ಯಕೀಯ ಲೋಕದ ಈ ಬೆಳವಣಿಗೆ ಮುಂದುವರೆಯಲೆಂದು ಆಶಿಸಿದರು
ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಸುಮಾ ಕಿತ್ತೂರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಘ ಉದಯೋನ್ಮುಖ ಲೇಖಕಿಯರಿಗೆ ಒಂದು ಉತ್ತಮ ವೇದಿಕೆಯಾಗಿ ಕೆಲಸ ಮಾಡುತ್ತಿದೆ ಎಂದರು.
ಲೇಖಕಿ ಆಶಾ ಯಮಕನಮರಡಿ ಕೃತಿ ಪರಿಚಯಿಸಿದರು
ಅನ್ನಪೂರ್ಣ ಹಿರೇಮಠ ಸ್ವಾಗತಿಸಿದರೆ, ಲೇಖಕಿ ಡಾ. ಭವ್ಯಾ ಸಂಪಗಾರ ತಮ್ಮ ಅನುಭವವನ್ನು ಹಂಚಿಕೊಂಡು ವಂದಿಸಿದರು.
ಡಾ ರಾಮಕೃಷ್ಣ ಮರಾಠೆ ಡಾ ಹೆಚ್ ಬಿ ಕೋಲಕಾರ ಡಾ ಮೈತ್ರೇಯಿಣಿ ಗದಿಗೆಪ್ಪಗೌಡರ ರಮೇಶ ಜಂಗಲ್ ಶಿರೀಷ ಜೋಶಿ ಅರವಿಂದ ಕುಲಕರ್ಣಿ ಡಾ ಅರ್ಚನಾ ಅಥಣಿ
ಸುನಂದಾ ಎಮ್ಮಿ ನೀಲಗಂಗಾ ಚರಂತಿಮಠ ಎ ಎ ಸನದಿ
ಇಂದಿರಾ ಮೋಟೆಬೆನ್ನೂರ ಡಾ ಅಶೋಕ ಸಂಪಗಾರ ಮತ್ತು ಲೇಖಕಿಯರ ಸಂಘದ ಸದಸ್ಯರು ಮತ್ತು ಕುಟುಂಬದ ಸದಸ್ಯರು ಉಪಸ್ಥಿತರಿದ್ದರು
ಇದೆ ಸಂದರ್ಭದಲ್ಲಿ ಸಾಹಿತ್ಯ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಲತಾ ಹಿರೇಮಠ ಪ್ರಾರ್ಥಿಸಿದರೆ, ಖುಷಿ ಪಾಟೀಲ ನಿರೂಪಿಸಿದರು.

