ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತುಮಕೂರಿನ ಗಾರ್ಡನ್ ರಸ್ತೆಯ ಅಯ್ಯಪ್ಪ ಸ್ವಾಮಿ ದೇವಾಲಯ ಸಾರಥ್ಯದಲ್ಲಿ ನಡೆದ ಪೊಲೀಸ್ ರಮೇಶ ಹಾಡಿರುವ ಶ್ರೀ ಶಾಸ್ತ ಗಾನಾಮೃತ ಧ್ವನಿ ಸುರುಳಿ ಬಿಡುಗಡೆ ಸಮಾರಂಭದಲ್ಲಿ ಜಿಲ್ಲೆಯ ಸಿಂದಗಿ ತಾಲೂಕಿನ ಬೋರಗಿ ಗ್ರಾಮದ (ಬೆಂಗಳೂರು ಪೊಲೀಸ್ ಹೆಟ್ ಕಾನ್ಸ್‌ಟೇಬಲ್) ಮೌಲಾಲಿ ಆಲಗೂರಗೆ ಸಾಹಿತ್ಯ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಇದೇ ವೇಳೆ ತುಮಕೂರಿನ ಹಿರೇಮಠದ ಸಂಸ್ಥಾನದ ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು, ಬೆಳ್ಳಾವಿ ಖಾರದ ಮಠದ ಶ್ರೀ ವೀರ ಬಸವ ಮಹಾಸ್ವಾಮಿಗಳು, ಅಯ್ಯಪ್ಪ ಸ್ವಾಮಿ ಮಠದ ಅಧ್ಯಕ್ಷರಾದ ಟಿ.ಬಿ ಶೇಖರ ಗುರುಸ್ವಾಮಿಗಳು, ಗಾಯಕ ಹೆಡ್ ಕಾನ್ಸ್‌ಟೇಬಲ್ ರಮೇಶ, ಖ್ಯಾತ ಹಿಂದುಸ್ತಾನಿ ಗಾಯಕ ಸಿದ್ದೇಂದ್ರಕುಮಾರ್ ಹಿರೇಮಠ, ಸಾಹಿತಿ ರಮೇಶ ನಂದಿಕೋಲ್ ಆಕಾಶವಾಣಿ ನಿರೂಪಕಿ ಸಂಧ್ಯಾ ಭಟ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

