Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ವಿಜಯಪುರ ಜಿಲ್ಲಾ ಹಾಗೂ ದೇವರಹಿಪ್ಪರಗಿ ತಾಲ್ಲೂಕು ಆಡಳಿತದ ವೈಫಲ್ಯ ಖಂಡಿಸಿ ಹಾಗೂ ನ್ಯಾಯಯುತ ಬೇಡಿಕೆಗಳನ್ನು ಇಡೇರಿಸುವಂತೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ಕೈಗೊಂಡು ತಹಶೀಲ್ದಾರ ನಿಂಗಣ್ಣ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ಮೊಹರೆ ಹಣಮಂತ್ರಾಯ ವೃತ್ತದಲ್ಲಿ ಸೇರಿದ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಮೆರವಣಿಗೆ ಮೂಲಕ ಅಂಬೇಡ್ಕರ್ ವೃತ್ತ ತಲುಪಿದರು.ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಪ್ರಕಾಶ ಗುಡಿಮನಿ ಮಾತನಾಡಿ, ಸರ್ಕಾರದಿಂದ ಜಾರಿಯಾಗುವ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತಗಳು ವಿಫಲವಾಗಿವೆ. ೨೦೨೦ ರಿಂದ ೨೦೨೬ ರವರೆಗೆ ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ೧೫ ಕೋಟಿಗಳಿಗಿಂತ ಹೆಚ್ಚಿನ ಅನುದಾನ ಬಿಡುಗಡೆಯಾಗಿದ್ದು, ದಲಿತ ಕಾಲೋನಿಗಳಲ್ಲಿ ಮೂಲಭೂತ ಸೌಲಭ್ಯಗಳಾದ ಸಿ,ಸಿರಸ್ತೆ, ಸಮುದಾಯ ಭವನ, ಶುದ್ಧ ಕುಡಿಯುವ ನೀರು, ಬೀದಿದೀಪ, ಚರಂಡಿಗಳು ಸರಿಯಾಗಿಲ್ಲ. ಇದು ದಲಿತರನ್ನು ಸೌಕರ್ಯಗಳಿಂದ ವಂಚಿತರಾಗಿಸುವದಕ್ಕೆ ನಿದರ್ಶನಗಳಾಗಿವೆ ಎಂದರು.ವಿಭಾಗೀಯ ಸಂಚಾಲಕ ವಿನಾಯಕ ಗುಣಸಾಗರ, ಜಿಲ್ಲಾ ಸಂಚಾಲಕ ಅಶೋಕ ಚಲವಾದಿ, ಜಿಲ್ಲಾ ಸಂಘಟನಾ ಸಂಚಾಲಕರಾದ ಪರಶುರಾಮ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪಟ್ಟಣದ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಎರಡನೆಯ ಅವಧಿಗೆ ಅಧ್ಯಕ್ಷರಾಗಿ ಸಂತೋಷ ದೇಸಾಯಿ ಉಪಾಧ್ಯಕ್ಷರಾಗಿ ಪ್ರಭಾವತಿ ಮಲ್ಲಿಕಾರ್ಜುನಮಠ(ಮಠಪತಿ) ಅವಿರೋಧವಾಗಿ ಆಯ್ಕೆಯಾದರು.ಪಟ್ಟಣದ ವಿ.ಪ್ರಾ.ಗ್ರಾ.ಕೃ.ಸ. ಸಂಘದ ಕಾರ್ಯಾಲಯದಲ್ಲಿ ಶುಕ್ರವಾರ ಜರುಗಿದ ಸಭೆಯಲ್ಲಿ ಆಡಳಿತ ಮಂಡಳಿಯ ಒಟ್ಟು ೧೨ ಜನ ಸದಸ್ಯರಿದ್ದು, ಸರಳವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆರಂಭಗೊAಡಿತು. ಮೊದಲ ೨೦ ತಿಂಗಳ ಅವಧಿಗೆ ಅಧ್ಯಕ್ಷರಾಗಿದ್ದ ಶಾಂತಪ್ಪ ಬಿರಾದಾರ ಹಾಗೂ ಉಪಾಧ್ಯಕ್ಷರಾಗಿದ್ದ ಬುರಾನಸಾಬ್ ಮಸಳಿ ರಾಜೀನಾಮೆ ಸಲ್ಲಿಸಿದರು. ನಂತರ ಸರ್ವಾನುಮತದಿಂದ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಜರುಗಿತು. ನಂತರ ಆಡಳಿತ ಮಂಡಳಿ ಸದಸ್ಯರಿಂದ ಸನ್ಮಾನ ಜರುಗಿತು.ಸಭೆಯಲ್ಲಿ ರಿಯಾಜ್ ಯಲಗಾರ, ಕಾಸುಗೌಡ ಬಿರಾದಾರ, ಕಾಸು ಜಮಾದಾರ, ಶಂಕರಗೌಡ ಪಾಟೀಲ ನೇತೃತ್ವ ವಹಿಸಿದ್ದರು. ಆಡಳಿತ ಮಂಡಳಿಯ ಸದಸ್ಯರಾದ ಹಣಮಂತ್ರಾಯ ಜೋಗೂರ, ಬಸವರಾಜ ತಾಳಿಕೋಟಿ, ಶಾಂತಪ್ಪ ಬಿರಾದಾರ, ಮೋದಿನಸಾಬ್ ಯಲಗಾರ, ರಾಜೇಂದ್ರ ಭಾವಿಮನಿ. ಶೃತಿ ಕೋಟಿನ್, ಸೋಮು ಜಾಧವ, ನೀಲಮ್ಮ ಜಂಬಗಿ ಮುಖ್ಯ ಕಾರ್ಯನಿರ್ವಾಹಕ ಶರಣಗೌಡ ಅಂಗಡಿ ಬಸವರಾಜ ದೇವಣಗಾಂವ, ಸಿದ್ದು…
ಉದಯರಶ್ಮಿ ದಿನಪತ್ರಿಕೆ ಇಂಡಿ: ಒಳ ಮಿಸಲಾತಿ ವಿರೋಧಿಸಿ ಇಂದು ಬಂಜಾರಾ ಸಮುದಾಯದವರು ಪ್ರತಿಭಟನೆ ನಡೆಸಿದರು.ಪ್ರತಿಭಟನೆ ಪ್ರವಾಸಿ ಮಂದಿರದಿಂದ ಬಸವೇಶ್ವರ ವೃತ್ತದ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಹಾಯ್ದು ಆಡಳಿತಸೌಧ ತಲುಪಿತು.ಮಾಜಿ ಶಾಸಕ ದೇವಾನಂದ ಚವ್ಹಾಣ ಮಾತನಾಡಿ ೨೦೧೮ ರಲ್ಲಿ ಬಿಜೆಪಿ ಸರಕಾರ ಒಳ ಮಿಸಲಾತಿ ತಂದಿದ್ದರು. ಆಗ ಬಂಜಾರಾ ಸಮುದಾಯ ಮತ್ತು ಸಮುದಾಯದ ಶಾಸಕರು ವಿರೋಧಿಸಿದ್ದರು.ಆದರೂ ಅವರು ಜಾರಿಗೆ ತಂದರು. ಮುಂದೆ ೨೦೧೮ ರ ಚುನಾವಣೆಯಲ್ಲಿ ಹೇಗೆ ಬಿಜೆಪಿಗೆ ಪಾಠ ಕಲಿಸಿದೆಯೋ ಹಾಗೆಯೇ ೨೦೨೮ ರ ಚುನಾವಣೆಯಲ್ಲಿ ವಿರೋಧ ಮರುಕಳಿಸುವದು ಎಂದರು.ರಾಜ್ಯದಲ್ಲಿ ಅತ್ಯಂತ ಹೆಚ್ಚು ಬಂಜಾರಾ ಸಮುದಾಯ ಜನಸಂಖ್ಯೆ ಹೊಂದಿದ ವಿಜಯಪುರ ಜಿಲ್ಲೆಯಿಂದಲೇ ನಾವೆಲ್ಲರೂ ಪಕ್ಷಾತೀತವಾಗಿ ಸರಕಾರಕ್ಕೆ ಎಚ್ಚರಿಕೆ ಘಂಟೆಯನ್ನು ತಟ್ಟುತ್ತೇವೆ.ಈ ಸರಕಾರ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಿದೆ. ಅರ್ಥಿಕವಾಗಿ ಶೈಕ್ಷಣಿಕವಾಗಿ ಉದ್ಯೋಗಿಕವಾಗಿ ಸರಕಾರದ ಇತರೆ ಮೂಲಭೂತ ಸೌಕರ್ಯಗಳು ಪಡೆದುಕೊಳ್ಳಲು ಉರುಳಾಗಿದೆ ಎಂದರು.ಮಹೇರಿ ರಾಠೋಡ ಪ್ರಕಾಶ ಮಹಾರಾಜ,ಮಹಿಂದರ ನಾಯಕ, ವಿಶ್ವನಾಥ ಚವ್ಹಾಣ, ಜಿ.ಪಂ ಮಾಜಿ ಸದಸ್ಯ ರಾಮು ರಾಠೋಡ ಬಂಜಾರಾ ಸೇವಾ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಬಣಜಿಗ ಸಮುದಾಯವನ್ನು ಪ್ರವರ್ಗ ೨ ಎ ಅಡಿಯಲ್ಲಿಯೇ ಮುಂದುವರೆಸಿ ಉದ್ಯೋಗ ಮಿಸಲಾತಿ ಸೌಲಭ್ಯವನ್ನು ಮುಂದುರೆಸುವಂತೆ ಆಗ್ರಹಿಸಿ ಇಂದು ಬಣಜಿಗ ಸಮುದಾಯವದರು ಆಡಳಿತಸೌಧ ಎದುರು ಪ್ರತಿಭಟನೆ ನಡೆಸಿದರು.ಸಂಗಣ್ಣ ಈರಾಬಟ್ಟೆ ಮಾತನಾಡಿ, ಬಣಜಿಗ ಸಮುದಾಯದ ಶೈಕ್ಷಣಿಕ ಹಾಗೂ ಸಾಮಾಜಿಕ ಹಿತಾಶಕ್ತಿಯನ್ನು ಗಮನದಲ್ಲಿಟ್ಟುಕೊಂಡು ಯಾವದೇ ಗೊಂದಲಕ್ಕೆ ಅವಕಾಶ ನಿಡದೇ ಪ್ರವರ್ಗ ೨ ಎ ಅಡಿಯಲ್ಲಿಯೇ ಮಿಸಲಾತಿ ಸೌಲಭ್ಯ ಮುಂದು ವರೆಸಲು ಆಗ್ರಹಿಸಿದರು.ಸಂತೋಷ ಪಾಟೀಲ ಮಾತನಾಡಿ ಕರ್ನಾಟಕ ಉಚ್ಚ ನ್ಯಾಯಾಲಯದ ಕಲಬುರಗಿ ಪೀಠದಲ್ಲಿ ವಿಚಾರಣೆಗೆ ಬಂದಿದ್ದ ಪ್ರಕರಣವೊಂದರಲ್ಲಿ ಬಣಜಿಗ ಸಮುದಾಯವನ್ನು ಉದ್ಯೋಗದ ಉದ್ದೇಶಕ್ಕಾಗಿ ಒಂದು ಪ್ರವರ್ಗ ಹಾಗೂ ಶಿಕ್ಷಣದ ಉದ್ದೇಶಕ್ಕಾಗಿ ಮತ್ತೊಂದು ಪ್ರವರ್ಗ ದಲ್ಲಿ ವರ್ಗಿಕರಿಸಿರುವದು ಸಂವಿಧಾನದ ಆಶಯಕ್ಕೆ ವಿರುದ್ಧವಾಗುತ್ತದೆ ಎಂಬ ವಿಚಾರವನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ ಎಂದರು.ಸಂತೋಷ ಸಂಖ, ಸಿದ್ದರಾಮ ಲಬ್ಬಾ, ಬಸವರಾಜ ನಿಚ್ಚಳ, ಶಿವಾನಂದ ಅಂಗಡಿ, ರವಿ ನಿಗಡಿ, ಗಿರೀಶ ಪೋಪಡಿ, ಪ್ರಭು ನಾಡಗೌಡ, ಅನೀಲ ಝಂಪಾ, ಸುನೀಲ ರಬಶೆಟ್ಟಿ, ಶಿವಪುತ್ರ ಕಡಕೋಳ, ಉಮೇಶ ಇಂಗಳೇಶ್ವರ ಮತ್ತಿತರಿದ್ದರು.ಶಿರಸ್ತೆದಾರ ಎಸ್.ಆರ್ ಮುಜಗೊಂಡ ಇವರಿಗೆ…
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧ | ಎಡದಂಡೆ ನಾಲೆಗೆ ನೀರು ಹರಿಸುವಂತೆ ರೈತರ ಬೃಹತ್ ಪ್ರತಿಭಟನೆ ಉದಯರಶ್ಮಿ ದಿನಪತ್ರಿಕೆ ಹೆಚ್ ಡಿ ಕೋಟೆ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಮಂಡ್ಯದಲ್ಲಿ ಪ್ರತಿಭಟನೆಯ ಕಾವು ಜೋರಾಗಿರುವಾಗಲೇ ಇತ್ತ ಹೆಚ್ ಡಿ ಕೋಟೆ ತಾಲೂಕಿನಲ್ಲಿ ಕಬಿನಿ ಕಿಚ್ಚು ಹೊತ್ತಿ ಉರಿಯಲು ಶುರುವಾಗಿದೆ. ಕಬಿನಿ ಜಲಾಶಯವೊಂದರಿಂದಲೇ ತಮಿಳುನಾಡಿಗೆ 14 ಸಾವಿರ ಕ್ಯೂಸೆಕ್ ನೀರು ಹರಿಸುತ್ತಿರುವುದನ್ನು ವಿರೋಧಿಸಿ, ಹಾಗೂ ಅವಳಿ ಕಬಿನಿ ಎಡದಂಡೆ ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿ, ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಕಾರ್ಯಪಾಲಕ ಅಭಿಯಂತರ ಮುಖ್ಯ ಕಚೇರಿ ಎದುರು ಎಡದಂಡೆ ನಾಲೆ ಅಚ್ಚುಕಟ್ಟು ಪ್ರದೇಶದ ರೈತರು ಬೃಹತ್ ಪ್ರತಿಭಟನೆ ನಡೆಸಿದರು.ಕಬಿನಿ ಕಾರ್ಯಪಾಲಕ ಅಭಿಯಂತರರ ಮುಖ್ಯ ಕಚೇರಿ ಎದುರು ಜಮಾಯಿಸಿದ ತಾಲೂಕಿನ ಎಚ್ ಮಟಕೆರೆ, ಹೆಬ್ಬಲಗುಪ್ಪೆ, ಹುಲಿಕುರ, ತೊರವಳ್ಳಿ, ಇಟ್ನಾ, ತುಂಬಸೋಗೆ, ನಿಲುವಾಗಿಲು, ನೇರಳೆ, ಮಾಗುಡಿಲು, ಪುರ ಸೇರಿದಂತೆ ಎಡದಂಡೆ ನಾಲೆ ವ್ಯಾಪ್ತಿಯ ರೈತರು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಬಿನಿ ನೀರು ಬಿಡುಗಡೆ ಮಾಡಬಾರದು.…
ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಹೆತ್ತ ತಾಯಿ ಮತ್ತು ಹೊತ್ತ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು ಎಂಬ ಮಾತಿನಂತೆ ತಾಯಿಯ ಮಹಿಮೆ ಅಪಾರವಾಗಿದ್ದು, ಹೆತ್ತ ತಾಯಿ ತನಗೆ ಒದಗಿದ ಎಲ್ಲ ನೋವು ನಲಿವುಗಳನ್ನು ಸಮಚಿತ್ತದಲ್ಲಿ ಸ್ವಿಕರಿಸುವ ವಾತ್ಸಲ್ಯ ಮೂರ್ತಿಯಾಗಿದ್ದು, ನೋವನ್ನು ನುಂಗಿ ನಮಗೆಲ್ಲ ಸದಾ ಪ್ರೀತಿಯನ್ನೇ ಧಾರೆಯೆರೆವ ವಾತ್ಸಲ್ಯ ಮೂರ್ತಿಯಾದ ತಾಯಿಯು ಈ ಭೂಮಿತಾಯಿಯಷ್ಟೇ ತೂಕದವಳಾಗಿದ್ದು, ಅವರನ್ನು ಪ್ರತಿನಿತ್ಯವೂ ಸ್ಮರಿಸುವಂತಹ ಮನೋಭಾವದ ಜೊತೆಗೆ ಎಲ್ಲರೂ ತಾಯಿಯ ಪ್ರೀತಿ, ವಾತ್ಸಲ್ಯವನ್ನು ಮೈಗೂಡಿಸಿಕೊಳ್ಳಬೇಕು ಎಂದು ಯೋಗ ಟೀಮ್ ಮಹಾಗುರುಗಳಾದ ಡಿ.ಎನ್.ಚಿಕ್ಕಮಠ ಹೇಳಿದರು.ಕಲಕೇರಿ ಗ್ರಾಮದ ಮಾತೃ ಸೇವಾ ಸಂಸ್ಥೆಯ ವತಿಯಿಂದ ಮಾತೋಶ್ರೀ ದಿ. ಗಂಗಮ್ಮ ಅಡಕಿ ಅವರ ೧೩ನೇ ವರ್ಷದ ಪುಣ್ಯಾರಾಧನೆಯ ನಿಮಿತ್ಯ ಸ್ಥಳಿಯ ವಿದ್ಯುತ್ ವಿತರಣಾ ಕೇಂದ್ರ (ಕೆಇಬಿ)ದಲ್ಲಿ ಸಸಿ ನೆಟ್ಟು ನೀರುಣಿಸಿ ಸಸಿ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಮಾತೃ ಸೇವಾ ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಗ್ರಾಪಂ ಸದಸ್ಯ ಸುಧಾಕರ ಅಡಕಿ ಅವರು ಮಾತನಾಡಿ, ನನ್ನ ತಾಯಿಯ ಸವಿನೆನಪಿಗಾಗಿ ಕಳೆದ ೧೨ ವರ್ಷಗಳಿಂದ…
ಲೇಖನ- ವೀಣಾ ಹೇಮಂತಗೌಡ ಪಾಟೀಲ್.ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಓರ್ವ ರೈತ ತನ್ನ ಹೊಲವನ್ನು ಉತ್ತು, ಹದ ಮಾಡಿ, ಬೀಜವನ್ನು ಬಿತ್ತಿ, ತಾನು ಮಾಡಿದ ಎಲ್ಲಾ ಕೆಲಸಗಳಿಗೆ ಪ್ರತಿಫಲವಾಗಿ ಒಳ್ಳೆಯ ಬೆಳೆಯ ನಿರೀಕ್ಷೆಯಲ್ಲಿ ತೊಡಗುತ್ತಾನೆ. ಆತನ ಪಾಲಿಗೆ ಬೀಜದಲ್ಲಿಯೇ ಬ್ರಹ್ಮಾಂಡವಿದೆ.ಅಂತೆಯೇ ಮಕ್ಕಳು ಕೂಡ ಬ್ರಹ್ಮಾಂಡ ಶಕ್ತಿಯ ಆಗರವಿದ್ದಂತೆ. ಮಕ್ಕಳ ಮೆದುಳು ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ವಿಷಯಗಳ ಕುರಿತು ಎಲ್ಲವನ್ನು ಸಮಾನ ಆಸಕ್ತಿಯಿಂದ ಕಲಿತು ತನ್ನಲ್ಲಿ ಅಡಕಗೊಳಿಸಿಕೊಳ್ಳಬೇಕು.ಅಂತೆಯೇ ಪರೀಕ್ಷೆಎಂಬ ವಿಷಯ ಮಕ್ಕಳಿಗೆ ರಕ್ಷೆಯಾಗಿ ಭಾಸವಾಗಬೇಕು.ಮಕ್ಕಳು ಪರೀಕ್ಷೆಯ ವಿಷಯದಲ್ಲಿ ಯಾವುದೇ ರೀತಿಯ ಆತಂಕವನ್ನು ಹೊಂದಿರದೆ ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಲು ಮನೆಯೇ ಮೊದಲ ರಕ್ಷೆಯಾಗಬೇಕು.”ಮನೆಯ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರುವು, ಜನನಿಯಿಂದ ಪಾಠ ಕಲಿತ ಜನರು ನಾವೇ ಧನ್ಯರು” ಎಂಬ ಮಾತಿನಂತೆ ತಾಯಿಯು ಮಗುವಿನಲ್ಲಿ ಧೈರ್ಯ, ಭರವಸೆ ಮತ್ತು ಆತ್ಮವಿಶ್ವಾಸಗಳನ್ನು ಉದ್ದೀಪಿಸಬಲ್ಲಳು.ಪಾಲಕರಾಗಲಿ ಶಿಕ್ಷಕರಾಗಲಿ ಮಕ್ಕಳಿಗೆ ಕುಳಿತರೆ ನಿಂತರೆ ಊಟ ಮಾಡುತ್ತಿರಲಿ, ಆಟ ಆಡುತ್ತಿರಲಿ ಪದೇ ಪದೇ ಪರೀಕ್ಷೆಯ ವಿಷಯವನ್ನು ನೆನಪಿಸಿ ಭೀತಿಯನ್ನು…
ಲೇಖನ- ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕುದ.ಕ ಜಿಲ್ಲೆ-೫೭೪೧೯೮ದೂ: ೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ಅಶ್ವದೀಪ ಎನ್ನುವುದು ಒಂದು ಪುರಾತನ ಕೈಮಗ್ಗ ಸಂಸ್ಥೆಯಾಗಿತ್ತು. ಹಲವು ವಿಧದ ಸೀರೆಗಳು ಮತ್ತು ದೇಸೀ ಬಟ್ಟೆಗಳನ್ನು ಇಲ್ಲಿ ವಿಶ್ವದರ್ಜೆಯ ಮಟ್ಟದಲ್ಲಿ ನೇಯಲಾಗುತ್ತಿತ್ತು. ಈ ಸಂಸ್ಥೆಯಲ್ಲಿ ಸಾವಿರಾರು ಮಂದಿ ನೇಕಾರರು ನೇಯ್ಗೆಯ ಕೆಲಸವನ್ನು ಮಾಡುತ್ತಿದ್ದರು. ಈ ಸಂಸ್ಥೆಯ ಮಾಲೀಕನಾದ ಸೋಹನ್ ಲಾಲ್ ತನ್ನ ಸಂಸ್ಥೆಯ ಉದ್ಯೋಗಿಗಳನ್ನು ಅತ್ಯಂತ ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುತ್ತಿದ್ದ. ಅಲ್ಲಿನ ಕೆಲಸಗಾರರೂ ತಮ್ಮ ಸಂಸ್ಥೆ ಮತ್ತು ಮಾಲೀಕನನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು. ಈ ಸಂಸ್ಥೆಯ ಸಾವಿರಾರು ಕೆಲಸಗಾರರ ಪೈಕಿ ಸೋಹನ್‌ಲಾಲ್‌ಗೆ ನಮನ್ ಎನ್ನುವಾತ ಆತನ ಕೆಲಸದ ಮೇಲಿನ ಬದ್ಧತೆ, ಶ್ರದ್ಧೆ ಮತ್ತು ಕಠಿಣ ಪರಿಶ್ರಮದ ಕಾರಣದಿಂದ ಅತ್ಯಂತ ಅಚ್ಚುಮೆಚ್ಚಿನ ಕೆಲಸಗಾರ ಆಗಿದ್ದ. ಒಂದು ದಿನ ಸೋಹನ್ ಲಾಲ್ ತನ್ನ ನಿಷ್ಟಾವಂತ ಕೆಲಸಗಾರನಾದ ನಮನ್‌ಗೆ ಸೈಕಲ್ ಒಂದನ್ನು ಉಡುಗೊರೆಯಾಗಿ ನೀಡಿದ. ಈ ಸೈಕಲ್ ಆಗಿನ ಕಾಲದ ಅತ್ಯಂತ ದುಬಾರಿ ಸೈಕಲ್ ಆಗಿದ್ದುದಲ್ಲದೇ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಕರ್ನಾಟಕ ರಾಜ್ಯಕ್ಕೆ ಮೈಸೂರ ಪ್ರಾಂತವೆಂಬ ಹೆಸರನ್ನು ತೆಗೆದು ಕರ್ನಾಟಕ ರಾಜ್ಯವೆಂದು ನಾಮಕರಣ ಮಾಡಿದ ರೂವಾರಿ ಹಿಂದುಳಿದ ವರ್ಗಗಳ ನಾಯಕ, ಸಾಮಾಜಿಕ ಪರಿವರ್ತನೆಯ ಹರಿಕಾರ ರಾಜ್ಯದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸರವರು ಎಂದು ಪ್ರಾಧ್ಯಾಪಕ ರವಿಕುಮಾರ ಅರಳಿ ಹೇಳಿದರು.ತಾಲೂಕಾ ಆಡಳಿತ ತಾಪಂ ಮತ್ತು ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಕಾರ್ಯಾಲಯದ ಗುರುಭವನದಲ್ಲಿ ನಡೆದ ದೇವರಾಜ ಅರಸರವರ ೧೧೧ ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.ರಾಜ್ಯದಲ್ಲಿ ಹಾವನೂರ ಆಯೋಗ ಜಾರಿಗೆ ತಂದು ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದ ವರ್ಗದವರಿಗೆ ಸವಲತ್ತು ನೀಡಿದವರು ಮತ್ತು ರಾಜ್ಯದಲ್ಲಿ ಬಡ ಪರಿಶಿಷ್ಠ ಜಾತಿ ಪಂಗಡ ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತ ವಸತಿ ನಿಲಯ ತೆಗೆದು ವಿದ್ಯಾರ್ಥಿಗಳ ವಿದ್ಯಾಬ್ಯಾಸಕ್ಕೆ ಅನುಕೂಲ ಮಾಡಿದ ಧೀಮಂತ ನಾಯಕರು ಎಂದರು.ಕಂದಾಯ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದರು. ಉಳುವವನೇ ಭೂಮಿಯ ಒಡೆಯಕಾಯ್ದೆ ತಂದರು. ಎಲ್ಲ ವರ್ಗದವರು ಕೃಷಿ…
