ಅಥಣಿಯಲ್ಲಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ಅಥಣಿ: ಚಲವಾದಿ (ಬಲಗೈ) ಸಮುದಾಯ ನೌಕರರ ಸಂಘ ಅಥಣಿ ಇವರ ವತಿಯಿಂದ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಶೇ 80ಕ್ಕಿಂತ ಹೆಚ್ಚು ಅಂಕ ಪಡೆದ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಬುಧವಾರ ನಗರದಲ್ಲಿ ಜರುಗಿತು
ಈ ವೇಳೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಐಪಿಎಸ್ ಅಧಿಕಾರಿ ರವಿಂದ್ರ ಗಡಾದಿ ಅವರು, ವಿದ್ಯಾರ್ಥಿಗಳು ಅಂಕ ಗಳಿಕೆ ಮಾಡುವುದು ಮುಖ್ಯ ಆದರೆ ಅಂಕಗಳ ಜೊತೆಗೆ ಜ್ಞಾನ ಸಂಸ್ಕಾರ ಮತ್ತು ಸಮಾಜದ ಬಗ್ಗೆ ಕಾಳಜಿ ಬೆಳೆಸಿಕೊಳ್ಳಬೇಕು ಶಿಕ್ಷಣವು ನಮ್ಮ ಬದುಕನ್ನು ಮಾತ್ರವಲ್ಲ ಇಡೀ ಸಮಾಜವನ್ನು ಬದಲಾಯಿಸುವ ಶಕ್ತಿ ಹೊಂದಿದೆ ಡಾ. ಬಿ.ಆರ್ ಅಂಬೇಡ್ಕರ್ ಅವರು ಹೇಳಿದಂತೆ ಶಿಕ್ಷಣ ಸಂಘಟನೆ ಹೋರಾಟ ಈ ಮೂರು ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಾವುದೇ ಗುರಿ ಮುಟ್ಟಲು ಸಾಧ್ಯ ಎಂದು ಕಿವಿಮಾತು ಹೇಳಿದ ಅವರು,
ನಮ್ಮ ಸಮುದಾಯದ ಮಕ್ಕಳು ಕೇವಲ ನೌಕರರಾಗದೆ ಆಡಳಿತಗಾರರಾಗಬೇಕು ಇದಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನ ಹರಿಸಿ ನಿಮ್ಮ ಯಶಸ್ಸು ಇಡೀ ಸಮಾಜಕ್ಕೆ ಮಾದರಿಯಾಗುತ್ತದೆ ಪೋಷಕರು ಮಕ್ಕಳಿಗೆ ಒತ್ತಡ ಹೇರದೆ ಅವರ ಆಸಕ್ತಿಗೆ ಬೆಂಬಲ ನೀಡಬೇಕು ಎಂದು ಅವರು ಸಲಹೆ ನೀಡಿದರು.
ಬೆಂಗಳೂರಿನ ಅಕ್ಕ ಐಎಎಸ್ ಅಕಾಡೆಮಿಯ ನಿರ್ದೇಶಕ ಡಾ. ಶಿವಕುಮಾರ ಅವರು ಮಾತನಾಡಿ, ವಿದ್ಯಾರ್ಥಿಗಳು ಪ್ರತಿದಿನ ಆರು ಗಂಟೆ ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಅದು ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗುತ್ತದೆ.
ಅದೇ ರೀತಿ ಪಾಲಕರು ಸಹ ತಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆ ವಿಶೇಷ ಗಮನ ಹರಿಸಬೇಕು ಬಲಗೈ ಸಮುದಾಯದ ನೌಕರರು ಎಸ್‌ಎಸ್‌ಎಲ್‌ಸಿಯಲ್ಲಿ ಪ್ರತಿ ವರ್ಷ 550ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಉತ್ತಮ ಶಾಲಾ ಕಾಲೇಜುಗಳಿಗೆ ಸೇರಿಸಲು ಸಹಕರಿಸಬೇಕು. ಹೀಗೆ ಮಾಡಿದರೆ ನಿಮ್ಮ ತಾಲೂಕಿನಲ್ಲಿ ನಮ್ಮ ಬಲಗೈ ಸಮುದಾಯವು ಶೈಕ್ಷಣಿಕವಾಗಿ ಶ್ರೀಮಂತ ಸಮುದಾಯವೆಂದು ಗುರುತಿಸಿಕೊಳ್ಳುತ್ತದೆ
ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಪ್ರೇರಣೆಯಾಗಿಟ್ಟುಕೊಂಡು ವಿದ್ಯಾಭ್ಯಾಸ ಮಾಡಿದರೆ, ಗುರಿ ಮುಟ್ಟುವುದು ಖಂಡಿತ ಸಾಧ್ಯ ಅಂಬೇಡ್ಕರ್ ಅವರನ್ನು ಕೇವಲ ಮೆರವಣಿಗೆಯಲ್ಲಿ ಕಾಣದೆ ಅವರ ಬರವಣಿಗೆಯಲ್ಲಿ ಕಾಣಬೇಕು ಪುತ್ಥಳಿಯಲ್ಲಿ ಕಾಣದೆ ಅವರ ಪುಸ್ತಕಗಳಲ್ಲಿ ಕಾಣಬೇಕು ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಚಲವಾದಿ ಸಮುದಾಯದ ನೌಕರ ಸಂಘದ ಅಧ್ಯಯನದ ಮಹಾಲಿಂಗ ಮೇತ್ರಿ ಹಾಗೂ ಬಿ.ಸಂತೋಷ ಮಾತನಾಡಿದರು.
ಹಾಗೆಯೆ ಶೇ.80% ಕಿಂತ ಅಧಿಕ ಪ್ರತಿಶತ ಪಡೆದ ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳನ್ನು ಸನ್ಮಾನ ಮಾಡಿ ಸತ್ಕರಿಸಿದರು
ಈ ಸಂದರ್ಭದಲ್ಲಿ ಬಂತೇಜೀ ಪ್ರಜ್ಞಾಭೋಧಿ ಥೆರೋ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ವಿಲಾಸ ಕಾಂಬಳೆ, ಚಲವಾದಿ ಸಮುದಾಯ ನೌಕರರ ಸಂಘದ ಕಾರ್ಯದರ್ಶಿ ಮಹಾಂತೇಶ ಕಾಂಬಳೆ, ಅಪ್ಪಾಸಾಬ ಸುರ್ಯವಂಶಿ, ಖಜಾಂಚಿ ನಾಗರಾಜ ಕಾಂಬಳೆ, ಸದಸ್ಯರಾದ ಭರತ ಕಾಂಬಳೆ, ಶಿವಾನಂದ ಮೇಲ್ಗಡೆ, ಸಂಜಯ ಸಾಗರ, ಮಲ್ಲೇಶ ಗೊಂದಳೆ, ಉಮೇಶ ಪಾಂಗಿ, ಅಜೀತ ಕುಟಗೊಳಿ, ಕುಮಾರ ಸತ್ತಿಕರ ವಿಜಯ ಕನಾಳ ಸೇರಿದಂತೆ ತಾಲೂಕಿನ ದಲಿತಪರ ಸಂಘಟನೆಗಳು ಹಾಗೂ ವಿದ್ಯಾರ್ಥಿಗಳು ಪಾಲಕರು ಉಪಸ್ಥಿತರಿದ್ದರು.
ನಿರೂಪಣೆ ಶಿವಾನಂದ ಮೇಲ್ಗಡೆ, ಸ್ವಾಗತ ಮಹಾಲಿಂಗ ಮೇತ್ರಿ ಮಾಡಿದರು.

