Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕಾರು ಅಪಘಾತದಲ್ಲಿ ದುರ್ಮರಣ | ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಹಾಂತೇಶ್ ಬೀಳಗಿ | ಸಿಎಂ, ಡಿಸಿಎಂ ಸಂತಾಪ ಉದಯರಶ್ಮಿ ದಿನಪತ್ರಿಕೆ ಕಲಬುರಗಿ: ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಮೃತಪಟ್ಟಿದ್ದಾರೆ.ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಹಾಂತೇಶ್ ಬೀಳಗಿ ಹಾಗೂ ಅವರ ಸಹೋದರರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಮಂಗಳವಾರ ಜೇವರ್ಗಿ ಬೈಪಾಸ್ ಬಳಿ ಅಪಘಾತಕ್ಕೀಡಾಗಿದೆ. ಭೀಕರ ಅಪಘಾತದಲ್ಲಿ ಮಹಾಂತೇಶ್ ಬಿಳಗಿ ಅವರ ಸಹೋದರ ಶಂಕರ ಬೀಳಗಿ ಹಾಗೂ ಈರಣ್ಣ ಶಿರಸಂಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಾಂತೇಶ್ ಬೀಳಗಿ ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ವಿಜಯಪುರದಿಂದ ಕಲಬುರಗಿಗೆ ತೆರಳುತ್ತಿದ್ದ ವೇಳೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಗೌನಳ್ಳಿ ಕ್ರಾಸ್ ಬಳಿ ಈ ಅಪಘಾತ ಸಂಭವಿಸಿದೆ. ಕಾರಿಗೆ ಅಡ್ಡ ಬಂದ ನಾಯಿಯನ್ನು ಉಳಿಸಲು ಹೋಗಿ ಕಾರು ಚಾಲಕನ ನಿಯಂತ್ರಣ…
ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಮನುಷ್ಯ ಸಂಘಜೀವಿ, ಇಂದು ಮೊಬೈಲ್ ಹಾವಳಿಯಿಂದ ಜೀವನದಲ್ಲಿ ಒಂಟಿಯಾಗಿದ್ದು ಭೇದ ಭಾವ ತೊರೆದು ಎಲ್ಲರೊಂದಿಗೂ ಬೆರೆತು ಸುಂದರ ಬದುಕಿನ ದಿವ್ಯಜ್ಯೋತಿಯನ್ನು ಬೆಳಗಬೇಕೆಂದು ಸ್ಥಳಿಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ಹೇಳಿದರು.ಗ್ರಾಮದಲ್ಲಿ ಶ್ರೀ ಪ್ರಭುಲಿಂಗೇಶ್ವರ ಕಾರ್ತಿಕೋತ್ಸವದ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ದೀಪೋತ್ಸವ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಅವರು ಕಾರ್ತಿಕ ಮಾಸದ ಮಾಗಿಯ ಛಳಿಯಿಂದ ಪ್ರಕೃತಿದತ್ತ ಬರುವ ರೋಗಾಣುಗಳನ್ನು ನಾಶಗೊಳಿಸಲು ಆಚರಣೆಗೆ ತಂದಿರುವ ಈ ದೀಪೋತ್ಸವದಿಂದ ಮನುಷ್ಯರ ಜೀವನ ಬೆಳಗಲಿದೆಯಂದರು. ಸ್ಥಳಿಯ ರಘುನಾಥ ಪ್ರೀಯ ಸಾಧು ಮಹಾರಾಜರ ಮಠದ ಶ್ರೀ ಜನಾರ್ಧನ ಮಹಾರಾಜರು ಮಾತನಾಡಿ ಗ್ರಾಮದಲ್ಲಿ ಪ್ರತಿಯೊಂದು ಧರ್ಮದ ಪೂರ್ವಜರು ಆಚರಣೆಗೆ ತಂದಿರುವ ಹಬ್ಬ, ಹರಿದಿನ, ಧಾರ್ಮಿಕ, ಸಾಮಾಜಿಕ ಉತ್ಸವಗಳಿಗೆ ವೈಜ್ಞಾನಿಕ ಹಿನ್ನೆಲೆಗಳಿವೆ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಅನ್ನಪ್ರಸಾದ ವಿತರಿಸುವ ಪದ್ದತಿ ದೈವ ನೀಡಿದ ಮಹತ್ವದ ಕೊಡುಗೆಯಾಗಿದ್ದು ಅನ್ನ ಸಂತರ್ಪಣೆ ನಡೆಯುವ ಮನೆಗಳು ಸಕಲ ಸೌಭಾಗ್ಯಗಳಿಂದ ಕೂಡಿದ್ದು ಹದಿನಾಲ್ಕು ಬ್ರಹ್ಮಗಳಲ್ಲಿ ಅನ್ನ ಪೂರ್ಣಬ್ರಹ್ಮವಾಗಿದೆ ಎಂದರು.ಪ್ರಮುಖರಾದ ಪರಪ್ಪಾ ಪಾಲಭಾವಿ, ಗುರಲಿಂಗಪ್ಪ ಪೂಜಾರಿ, ಶಿಕ್ಷಕ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಲ್‌ಗೆ ೩೦೦೦ ಬೆಂಬಲ ನಿಗದಿಪಡಿಸಿ ಶೀಘ್ರದಲ್ಲಿ ಖರೀದಿ ಕೇಂದ್ರ ಪ್ರಾರಂಭಿಸುವುದು ಹಾಗೂ ಹಾನಿಗೊಳಗಾದ ತೊಗರಿಗೆ ಕೂಡಲೇ ಪರಿಹಾರ ಹಣ ರೈತರ ಖಾತೆಗೆ ಜಮಾ ಮಾಡಬೇಕೆಂದು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಯವರಿಗೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಮೂಲಕ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ತೊಗರಿ ಬೆಳೆ ಅಂತೂ ವಿಪರೀತ ಮಳೆಯಿಂದ ಸಂಪೂರ್ಣ ಹಾಳಾಗಿ ಹೋಗಿ ರೈತರ ಬದುಕನ್ನೇ ಮೂರಾ ಬಟ್ಟೆ ಮಾಡಿದೆ. ಸರ್ಕಾರ ಇನ್ನು ಬಿಡಿಗಾಸು ಪರಿಹಾರ ಹಣ ರೈತರ ಕೈಗೆ ಸೇರಿಲ್ಲ. ಜಿಲ್ಲಾಧಿಕಾರಿಗಳನ್ನು ಕೇಳಿದರೆ ಈಗಾಗಲೇ ವಿಜಯಪುರ ಜಿಲ್ಲೆಗೆ ೩೩೩ ಕೋಟಿ ತೊಗರಿ ಬೆಳೆ ಹಾನಿ ಪರಿಹಾರ ಜಮೆಯಾಗಿದೆ ಎಂದು ಹೇಳಿದ್ದಾರೆ. ಅದರಲ್ಲಿ ಈಗಾಗಲೇ ನೂರು ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಆದರೂ ಜಿಲ್ಲೆಯ ಯಾವೊಬ್ಬ…
ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನವೆಂಬರ್ ೨೬ ರಂದು ಸಂವಿಧಾನ ದಿನವನ್ನು ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸಿರುವ ಜಿಲ್ಲೆಯ ಎಲ್ಲಾ ಅಮೃತ ಸರೋವರ ದಡದ ಮೇಲೆ ಆಚರಿಸಲಾಗುವುದು ಎಂದು ಜಿಲ್ಲಾ ಪಂಚಾಯತಿ ಸಿಇಓ ರಿಷಿ ಆನಂದ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನವೆಂಬರ್ ೨೬ ರಂದು ಅಮೃತ ಸರೋವರ ದಡದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಯುವಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ನರೇಗಾ ಕೂಲಿಕಾರ್ಮಿಕರು ಸೇರಿದಂತೆ ಸಾರ್ವಜನಿಕರು ಒಳಗೊಂಡು “ಸಂವಿಧಾನ ದಿನ”ವನ್ನು ಅರ್ಥಪೂರ್ಣವಾಗಿ ಆಚರಿಸಲು ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.ಕಾರ್ಯಕ್ರಮದಲ್ಲಿ ಭಾರತ ಸಂವಿಧಾನದ ಪ್ರಸ್ತಾವನೆಯನ್ನು ಓದುವುದು, ಸಂವಿಧಾನದಲ್ಲಿ ಉಲ್ಲೇಖಿಸಿರುವ ಮೂಲಭೂತ ಕರ್ತವ್ಯಗಳು, ಹಕ್ಕುಗಳು ಮತ್ತು ಮೌಲ್ಯಗಳ ಕುರಿತು ಸಂಕ್ಷಿಪ್ತ ಉಪನ್ಯಾಸಗಳನ್ನು ಏರ್ಪಡಿಸಲಾಗುವುದು. ನೀರಿನ ಸಂರಕ್ಷಣೆ, ಸ್ವಚ್ಛತೆ ಮತ್ತು ಅಮೃತ ಸರೋವರಗಳ ರಕ್ಷಣೆಯ ಪ್ರತಿಜ್ಞೆ ಸ್ವೀಕರಿಸುವುದು.ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಯುವಕ ಸಂಘಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ, ನರೇಗಾ ಕೂಲಿಕಾರ್ಮಿಕರು ಮತ್ತು ಸ್ಥಳೀಯ ಜನರಿಂದ ಅಮೃತ ಸರೋವರ ಸುತ್ತಮುತ್ತ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಿಸಿಐ ಅಧಿಕಾರಿ ಸಿದ್ದಲಿಂಗ ಮದರಕಿಂಡಿ ಅವರು ರೈತರಿಗೆ ಏಕ ವಚನದಲ್ಲಿ ಮಾತನಾಡುತ್ತ ಅನ್ಯಾಯ ಎಸಗಿ ಹತ್ತಿ ಸರಿ ಇಲ್ಲಾ ಎಂದು ಮತ್ತು ಕಪಾಸ ಸೈಟ್ ಅಲ್ಲಿ ಹತ್ತಿ ಎಂದು ನಮೂದಿಸಿಲ್ಲ ನಿಮ್ಮ ಹತ್ತಿ ತೆಗೆದುಕೊಳ್ಳುವುದಿಲ್ಲ ಎಂದು ಅಹಂಕಾರದಿಂದ ಮಾತನಾಡಿ ರೈತರಿಗೆ ಜೋರು ದ್ವನಿಯಲ್ಲಿ ಮಾತನಾಡಿ ಅವಮಾನ ಮಾಡಿರುವ ವಿರುದ್ದ ರೈತರು ಆಕ್ರೋಶ ವ್ಯಕ್ತಪಡಿಸಿದರು.ಹತ್ತಿ ಖರೀದಿ ಕೇಂದ್ರದಲ್ಲಿ ಆಗುತ್ತಿರುವ ಮೋಸ ಮಾಡುತ್ತಿರುವುದಾಗಿ ಹಲವಾರು ರೈತರು ಅಧಿಕಾರಿಯ ವಿರುದ್ಧ ದೂರುಗಳನ್ನು ನೀಡಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಹತ್ತಿ ಸುರಿವಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ರೈತರೊಂದಿಗೆ ಹೋರಾಟ ಮಾಡಲಾಯಿತು.ಸತತವಾಗಿ 3 ಘಂಟೆ ಹೋರಾಟದ ನಂತರ cci ಅಧಿಕಾರಿ ಸಿದ್ದಲಿಂಗ ಮದರಕಿಂಡಿ ಅವರನ್ನು ಕರೆಸಿ ಜಿಲ್ಲಾಧಿಕಾರಿ, ಜಿಲ್ಲಾ ಜಂಟಿ ಕೃಷಿ ಅಧಿಕಾರಿ, ಎ. ಪಿ. ಎಂ. ಸಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಅವನಿಂದ ರೈತರಿಗೆ ತಪಾಯಿತು ಎಂದು ಕೇಳಿಸಿ, ಯಾವುದೇ ರೈತರಿಗೆ ಅನ್ಯಾಯ ಮಾಡಬಾರದು…
ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ :ನ್ಯಾಯಾದೀಶ ಹರೀಶ.ಎ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಾನಸಿಕ ಹಾಗೂ ದೈಹಿಕ ಸದೃಢತೆಗೆ ಕ್ರೀಡೆಗಳು ಸಹಕಾರಿಯಾಗಿದ್ದು, ದೈನಂದಿನ ಜೀವನದಲ್ಲಿ ಆಟೋಟ ಮತ್ತು ಕ್ರೀಡೆಗಳಲ್ಲಿ ಸಕ್ರಿಯೆವಾಗಿ ತೊಡಗಿಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶರಾದ ಹರೀಶ. ಎ. ಅವರು ಹೇಳಿದರು.ಕರ್ನಾಟಕ ರಾಜ್ಯ ಪೊಲೀಸ್ ಇಂಡಿಯಾ ರಿಸರ್ವ್ ಬಟಾಲಿಯನ್ ವಿಜಯಪುರ ಘಟಕದ ಕವಾಯತು ಮೈದಾನದಲ್ಲಿ ಮಂಗಳವಾರ ಆಯೋಜಿಸಿದ ೨೦೨೫ನೇ ಸಾಲಿನ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.ಕ್ರೀಡೆಗಳಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ. ಇಂದಿನ ಒತ್ತಡದ ಜೀವನದಲ್ಲಿ ಕ್ರಿಯಾಶೀಲತೆಯನ್ನು ರೂಢಿಸಿಕೊಂಡು ಚಟುವಟಿಕೆಗಳಿಂದ ಇರಲು ಕ್ರೀಡೆಗಳು ಪೂರಕವಾಗಿ ಸ್ಫೂರ್ತಿ ನೀಡುತ್ತವೆ. ಇಲ್ಲಿ ಆಯೋಜಿಸಿರುವ ವಿವಿಧ ಕ್ರೀಡೆಗಳಲ್ಲಿ ಎಲ್ಲರೂ ಭಾಗವಹಿಸಿ ಕ್ರೀಡಾ ಸ್ಫೂರ್ತಿ ಮೆರೆಯಬೇಕು. ಜೊತೆಗೆ ಉತ್ತಮ ಆರೋಗ್ಯ ತಮ್ಮದಾಗಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಕಮಾಂಡೆಂಟ್ ಪ್ರಸನ್ನಕುಮಾರ ಅವರು ಸ್ವಾಗತಿಸಿದರು.ಈ ಸಂದರ್ಭಲ್ಲಿ ಡಾ. ರವೀಂದ್ರ ಚೌಧರಿ, ಡಾ. ಪ್ರಭುಗೌಡ ಪಾಟೀಲ್, ಡೆಪ್ಯೂಟಿ ಕಮಾಂಡೆಂಟ್ ಹೇಮಂತಕುಮಾರ ಹೆಗಡೆ, ನಂದಕುಮಾರ ಸಿಂಗದ, ಶರಣಬಸವ,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಾನಗರ ಪಾಲಿಕೆಯ ಆಯ-ವ್ಯಯ(ಬಜೆಟ್) ಸಾರ್ವಜನಿಕರ ಪೂರ್ವಭಾವಿ ಸಭೆಯನ್ನು ೨೮-೧೧-೨೦೨೫ರಂದು ಬೆಳಿಗ್ಗೆ ೧೧ ಗಂಟೆಗೆ ಮಹಾನಗರ ಪಾಲಿಕೆಯ ಮುಖ್ಯ ಕಚೇರಿಯಲ್ಲಿ ಆಯೋಜಿಸಲಾಗಿದೆ.ಮಹಾನಗರ ಪಾಲಿಕೆಯ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು, ಕಲ್ಯಾಣ ಸಂಸ್ಥೆಯ ಪದಾಧಿಕಾರಿಗಳು, ವ್ಯಾಪಾರ ಮತ್ತು ಕೈಗಾರಿಕೆ ಸಂಸ್ಥೆ ಒಕ್ಕೂಟಗಳ ಸದಸ್ಯರು ಮತ್ತು ಇತರೆ ಸಂಘ-ಸಂಸ್ಥೆಯ ಮುಖ್ಯಸ್ಥರು ಭಾಗವಹಿಸಿ ಸೂಕ್ತ ಸಲಹೆ-ಸೂಚನೆ ನೀಡುವಂತೆ ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರದ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದಲ್ಲಿ ಯಂಗ್ ಪ್ರೋಫೆಶನಲ್ ಎರಡು ಹುದ್ದೆಗಳಿಗೆ ತಾತ್ಕಾಲಿಕವಾಗಿ ಒಂದು ವರ್ಷದವರೆಗೆ ನೇಮಿಸಿಕೊಳ್ಳಲು ನವೆಂಬರ್ ೨೯ರ ಬೆಳಿಗ್ಗೆ ೧೦.೩೦ಕ್ಕೆ ಸಹ ಸಂಶೋಧನಾ ನಿರ್ದೇಶಕರು, ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದಲ್ಲಿ ನೇರ ಸಂದರ್ಶನ ನಡೆಸಲಾಗಿದ್ದು, ಆಸಕ್ತರು ಭಾಗವಹಿಸಬಹುದಾಗಿದೆ.ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ತೂಕ ವ್ಯಾತ್ಯಾಸ ಆಗುವದರ ಕುರಿತು ಕರ್ನಾಟಕ ರಾಜ್ಯ ರೈತ ಸಂಘದವರು ಮತ್ತು ಕಬ್ಬು ಬೆಳೆಗಾರರು ಕಾಖಾನೆಯಲ್ಲಿರುವ ತೂಕ ಪರಿಶಿಲನೆಗೆ ಸಮಿತಿ ರಚಿಸಲು ಆಗ್ರಹಿಸಿ ಆಡಳಿತಸೌಧ ಎದುರು ಪ್ರತಿಭಟನೆ ಮಾಡಿದರು.ಅಲ್ಲಿ ಮಾತನಾಡಿದ ಕರ್ನಾಟಕ ರೈತ ಸಂಘ ಜಿಲ್ಲಾಧ್ಯಕ್ಷ ಎಸ್.ಬಿ.ಕಂಬೋಗಿ ಸರಕಾರದ ಆದೇಶದಂತೆ ಮಾನದಂಡಗಳನ್ನು ರೂಪಿಸಿ ಕಾರ್ಖಾನೆಯವರು ಕಬ್ಬಿನ ತೂಕಕ್ಕಾಗಿ ಸಮಿತಿ ರಚಿಸಬೇಕು. ಅದರಲ್ಲಿ ರೈತರು ಇರಬೇಕು ಎಂದರು.ಈ ಹಿಂದೆ ಕಬ್ಬಿನ ತೂಕದಲ್ಲಿ ಮೋಸವಾಗುತ್ತಿದ್ದು ರೈತರಿಗೆ ಅನ್ಯಾಯವಾಗುತ್ತಿರುವದನ್ನು ಪ್ರತಿಭಟಿಸಿ ರೈತರು ಸಮಿತಿ ರಚನೆಗೆ ಆಗ್ರಹಿಸಿದರು.ಕಂದಾಯ ಉಪವಿಬಾಗಾಧಿಕಾರಿಗಳ ನೇತೃತ್ವದಲ್ಲಿ ತಹಸೀಲ್ದಾರರು, ಕೃಷಿ ಅಧಿಕಾರಿಗಳು, ಪಿ.ಎಸ್.ಐ, ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು ಮತ್ತು ರೈತರು ಪಾಲ್ಗೊಂಡಿರಬೇಕು ಎಂದರು.ಕಂದಾಯ ಉಪ ವಿಬಾಗಾಧಿಕಾರಿ ಅನುರಾಧಾ ವಸ್ತçದ ಇವರಿಗೆ ಮನವಿ ಸಲ್ಲಿಸಿದರು.ಮನವಿ ಸ್ವೀಕರಿಸಿ ಮಾತನಾಡಿದ ಎಸಿ ಅನುರಾಧಾ ವಸ್ತçದ ಕಂದಾಯ ಉಪವಿಬಾಗಾಧಿಕಾರಿಗಳ ನೇತೃತ್ವದಲ್ಲಿ ತಾಲೂಕಿನ ಎಲ್ಲ ಸಕ್ಕರೆ ಕಾರ್ಖಾನೆಗಳಿಗೆ ತೂಕ ಪರಿಶೀಲನಾ ಸಮಿತಿ ರಚಿಸುವದಾಗಿ ಮತ್ತು ಅದರಲ್ಲಿ ರೈತರನ್ನು ತೆಗೆದುಕೊಳ್ಳುವದಾಗಿ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಕೃಷಿಯು ಭಾರತದ ಬೆನ್ನಲುಬು. ಭಾರತ ಕೃಷಿ ಪ್ರಧಾನ ದೇಶವಾಗಿದೆ. ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಶ್ರೀಗಳು ನಿಸರ್ಗದಲ್ಲಿ ದೇವರ ಸ್ವರೂಪದಲ್ಲಿ ಕಾಣುತ್ತಿದ್ದರೆಂದು ಪ್ರಭುಕುಮಾರ ಶ್ರೀಗಳು ಹೇಳಿದರು.ತಾಲೂಕಿನ ಸಾಲೋಟಗಿ ಗ್ರಾಮದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಗುರುದೇವಾಶ್ರಮ ಗುರು ಸ್ವೀಕಾರ ಗುರುಭವನ ಉದ್ಘಾಟನೆ ಸಮಾರಂಭದ ಕೃಷಿ ಕಾಯಕ ಚಿಂತನಾ ವೇದಿಕೆ ಕಾರ್ಯಕ್ರಮದಲ್ಲಿ ಸಾನಿದ್ಯ ವಹಿಸಿ ಮಾತನಾಡಿದರು.ಕೃಷಿಕರು ನಿಸರ್ಗವನ್ನು ಅವಲಂಬಿಸಿರುವದರಿಂದ ಕೃಷಿ ಮತ್ತು ನಿಸರ್ಗ ಸಮನ್ವಯ ಯೋಗ ಎಂದರು.ಶಿವಶಂಕರ ಸ್ವಾಮೀಜಿ, ಗಿರೀಶಾನಂದ ಶ್ರೀಗಳು, ಬಸವಾನಂದ ಶ್ರೀಗಳು, ಜ್ಞಾನಾನಂದ ಶ್ರೀಗಳು, ಸ್ವಪ್ರಕಾಸನಂದ ಶ್ರೀಗಳು, ಗುರುಲಿಂಗ ಶ್ರೀಗಳು, ಬಸವಪ್ರಸಾದ ಶ್ರೀಗಳು, ಶರಣಾನಂದ ಶ್ರೀಗಳು, ಸಿದ್ದಪ್ರಸಾದ ಶ್ರೀಗಳು, ಶಿವಪ್ರಸಾದ ಶ್ರೀಗಳು, ಬ್ರಹ್ಮಾನಂದ ಶ್ರೀಗಳು, ವಿದ್ಯಾನಂದ ಶ್ರೀಗಳು, ಪ್ರಭುಲಿಂಗ ಶ್ರೀಗಳು, ಸಾನಿದ್ಯ ವಹಿಸಿದ್ದರು.ಆಶ್ರಮದ ಗುರುಗಳಾದ ಸಂಗಮೇಶ್ವರ ಶ್ರೀಗಳು, ಜೆಡಿ ಎಸ್ ಮುಖಂಡ ಬಿ.ಡಿ.ಪಾಟೀಲ, ಜಿ.ಪಂ ಮಾಜಿ ಅಧ್ಯಕ್ಷ ಶಿವಯೋಗಪ್ಪ ನೇದಲಗಿ, ಬಿಜೆಪಿ ತಾಲೂಕಾ ಅಧ್ಯಕ್ಷ ಹಣಮಂತ್ ರಾಯಗೌಡ ಪಾಟೀಲ, ಮಾತನಾಡಿದರು. ಭೀಮರಾಯಗೌಡ ಪಾಟೀಲ, ಕಮಲಾಬಾಯಿ ವಿಠ್ಠಲಗೌಡ, ಮಂಜುಳಾ…
