ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ತೂಕ ವ್ಯಾತ್ಯಾಸ ಆಗುವದರ ಕುರಿತು ಕರ್ನಾಟಕ ರಾಜ್ಯ ರೈತ ಸಂಘದವರು ಮತ್ತು ಕಬ್ಬು ಬೆಳೆಗಾರರು ಕಾಖಾನೆಯಲ್ಲಿರುವ ತೂಕ ಪರಿಶಿಲನೆಗೆ ಸಮಿತಿ ರಚಿಸಲು ಆಗ್ರಹಿಸಿ ಆಡಳಿತಸೌಧ ಎದುರು ಪ್ರತಿಭಟನೆ ಮಾಡಿದರು.
ಅಲ್ಲಿ ಮಾತನಾಡಿದ ಕರ್ನಾಟಕ ರೈತ ಸಂಘ ಜಿಲ್ಲಾಧ್ಯಕ್ಷ ಎಸ್.ಬಿ.ಕಂಬೋಗಿ ಸರಕಾರದ ಆದೇಶದಂತೆ ಮಾನದಂಡಗಳನ್ನು ರೂಪಿಸಿ ಕಾರ್ಖಾನೆಯವರು ಕಬ್ಬಿನ ತೂಕಕ್ಕಾಗಿ ಸಮಿತಿ ರಚಿಸಬೇಕು. ಅದರಲ್ಲಿ ರೈತರು ಇರಬೇಕು ಎಂದರು.
ಈ ಹಿಂದೆ ಕಬ್ಬಿನ ತೂಕದಲ್ಲಿ ಮೋಸವಾಗುತ್ತಿದ್ದು ರೈತರಿಗೆ ಅನ್ಯಾಯವಾಗುತ್ತಿರುವದನ್ನು ಪ್ರತಿಭಟಿಸಿ ರೈತರು ಸಮಿತಿ ರಚನೆಗೆ ಆಗ್ರಹಿಸಿದರು.
ಕಂದಾಯ ಉಪವಿಬಾಗಾಧಿಕಾರಿಗಳ ನೇತೃತ್ವದಲ್ಲಿ ತಹಸೀಲ್ದಾರರು, ಕೃಷಿ ಅಧಿಕಾರಿಗಳು, ಪಿ.ಎಸ್.ಐ, ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು ಮತ್ತು ರೈತರು ಪಾಲ್ಗೊಂಡಿರಬೇಕು ಎಂದರು.
ಕಂದಾಯ ಉಪ ವಿಬಾಗಾಧಿಕಾರಿ ಅನುರಾಧಾ ವಸ್ತçದ ಇವರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಎಸಿ ಅನುರಾಧಾ ವಸ್ತçದ ಕಂದಾಯ ಉಪವಿಬಾಗಾಧಿಕಾರಿಗಳ ನೇತೃತ್ವದಲ್ಲಿ ತಾಲೂಕಿನ ಎಲ್ಲ ಸಕ್ಕರೆ ಕಾರ್ಖಾನೆಗಳಿಗೆ ತೂಕ ಪರಿಶೀಲನಾ ಸಮಿತಿ ರಚಿಸುವದಾಗಿ ಮತ್ತು ಅದರಲ್ಲಿ ರೈತರನ್ನು ತೆಗೆದುಕೊಳ್ಳುವದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಸಿದ್ದಪ್ಪ ತಳವಾರ, ಅದೃಷ್ಟಪ್ಪಾ ವಾಲಿಕಾರ, ಶ್ರೀಶೈಲ ವನಂಜಿಕರ, ಮಲ್ಲಿಕಾರ್ಜುನ ನಾವದಗಿ, ತಮ್ಮಾರಾಯ ಆಸಂಗಿ, ಸೋಮಣ್ಣ ಗುಡ್ಲ, ಕಾಳಪ್ಪ ರೂಗಿ, ಮಾಳಪ್ಪ ಗುಡ್ಲೆನವರ, ನಿಂಗಪ್ಪ ಮಾವಿನಹಳ್ಳಿ, ಭೀರಪ್ಪ ರೂಗಿ ಮತ್ತಿತರಿದ್ದರು.

