ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಿಸಿಐ ಅಧಿಕಾರಿ ಸಿದ್ದಲಿಂಗ ಮದರಕಿಂಡಿ ಅವರು ರೈತರಿಗೆ ಏಕ ವಚನದಲ್ಲಿ ಮಾತನಾಡುತ್ತ ಅನ್ಯಾಯ ಎಸಗಿ ಹತ್ತಿ ಸರಿ ಇಲ್ಲಾ ಎಂದು ಮತ್ತು ಕಪಾಸ ಸೈಟ್ ಅಲ್ಲಿ ಹತ್ತಿ ಎಂದು ನಮೂದಿಸಿಲ್ಲ ನಿಮ್ಮ ಹತ್ತಿ ತೆಗೆದುಕೊಳ್ಳುವುದಿಲ್ಲ ಎಂದು ಅಹಂಕಾರದಿಂದ ಮಾತನಾಡಿ ರೈತರಿಗೆ ಜೋರು ದ್ವನಿಯಲ್ಲಿ ಮಾತನಾಡಿ ಅವಮಾನ ಮಾಡಿರುವ ವಿರುದ್ದ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಹತ್ತಿ ಖರೀದಿ ಕೇಂದ್ರದಲ್ಲಿ ಆಗುತ್ತಿರುವ ಮೋಸ ಮಾಡುತ್ತಿರುವುದಾಗಿ ಹಲವಾರು ರೈತರು ಅಧಿಕಾರಿಯ ವಿರುದ್ಧ ದೂರುಗಳನ್ನು ನೀಡಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಹತ್ತಿ ಸುರಿವಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ರೈತರೊಂದಿಗೆ ಹೋರಾಟ ಮಾಡಲಾಯಿತು.
ಸತತವಾಗಿ 3 ಘಂಟೆ ಹೋರಾಟದ ನಂತರ cci ಅಧಿಕಾರಿ ಸಿದ್ದಲಿಂಗ ಮದರಕಿಂಡಿ ಅವರನ್ನು ಕರೆಸಿ ಜಿಲ್ಲಾಧಿಕಾರಿ, ಜಿಲ್ಲಾ ಜಂಟಿ ಕೃಷಿ ಅಧಿಕಾರಿ, ಎ. ಪಿ. ಎಂ. ಸಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಅವನಿಂದ ರೈತರಿಗೆ ತಪಾಯಿತು ಎಂದು ಕೇಳಿಸಿ, ಯಾವುದೇ ರೈತರಿಗೆ ಅನ್ಯಾಯ ಮಾಡಬಾರದು ಹಾಗೂ ಮರ್ಯಾದೆ ಕೊಟ್ಟು ಮಾತನಾಡಬೇಕು, ರೈತರ ಜೀವನದ ಜೊತೆ ಚಲ್ಲಾಟ ಮಾಡಬಾರದು ಎಂದು ಎಚ್ಚರಿಕೆ ನೀಡಲಾಯಿತು.
ನೂರಾರು ಕಿ. ಮೀ ದೂರದಿಂದ ರೈತರು ಕಷ್ಟ ಪಟ್ಟು ರಾತ್ರಿ ಪೂರ್ತಿ ನಿದ್ದೆಗೆಟ್ಟು ಹೆಚ್ಚಿನ ಕೂಲಿ ಅಳುಗಳನ್ನು ಹಚ್ಚಿ ಹತ್ತಿ ತೆಗೆದುಕೊಂಡು ಬಂದಿರುತ್ತಾರೆ, ಅವರಿಗೆ ವಿನಾ ಕಾರಣ ತೊಂದರೆ ಕೊಡಬಾರದು, ತೂಕದಲ್ಲಿ ಮೋಸ ಮಾಡದೇ ಬೆಂಬಲ ಬೆಲೆಯೊಂದಿಗೆ ಖರೀದಿ ಮಾಡಬೇಕು ಎಂದು ರೈತ ಮುಖಂಡರು ಅಗ್ರಹಿಸಿದರು
ಎಲ್ಲಾ ಅಧಿಕಾರಿಗಳು ರೈತರೊಂದಿಗೆ ಸಹಕರಿಸಿ ಸಮಸ್ಯೆ ಬಗೆಹರೆಸುವುದಾಗಿ ಹೇಳಿದಾಗ ಹೋರಾಟ ಹಿಂಪಡೆಯಲಾಯಿತು.
ಈ ವೇಳೆ ಮುಖಂಡರಾದ ರಾಜ್ಯ ಉಪಾಧ್ಯಕ್ಷರಾದ ಕಲ್ಲು ಸೊನ್ನದ, ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಸೇರಿದಂತೆ ಹಲವಾರು ರೈತರು ಉಪಸ್ಥಿತರಿದ್ದರು.

