ಉದಯರಶ್ಮಿ ದಿನಪತ್ರಿಕೆ
ಇಂಡಿ: ಕೃಷಿಯು ಭಾರತದ ಬೆನ್ನಲುಬು. ಭಾರತ ಕೃಷಿ ಪ್ರಧಾನ ದೇಶವಾಗಿದೆ. ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಶ್ರೀಗಳು ನಿಸರ್ಗದಲ್ಲಿ ದೇವರ ಸ್ವರೂಪದಲ್ಲಿ ಕಾಣುತ್ತಿದ್ದರೆಂದು ಪ್ರಭುಕುಮಾರ ಶ್ರೀಗಳು ಹೇಳಿದರು.
ತಾಲೂಕಿನ ಸಾಲೋಟಗಿ ಗ್ರಾಮದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಗುರುದೇವಾಶ್ರಮ ಗುರು ಸ್ವೀಕಾರ ಗುರುಭವನ ಉದ್ಘಾಟನೆ ಸಮಾರಂಭದ ಕೃಷಿ ಕಾಯಕ ಚಿಂತನಾ ವೇದಿಕೆ ಕಾರ್ಯಕ್ರಮದಲ್ಲಿ ಸಾನಿದ್ಯ ವಹಿಸಿ ಮಾತನಾಡಿದರು.
ಕೃಷಿಕರು ನಿಸರ್ಗವನ್ನು ಅವಲಂಬಿಸಿರುವದರಿಂದ ಕೃಷಿ ಮತ್ತು ನಿಸರ್ಗ ಸಮನ್ವಯ ಯೋಗ ಎಂದರು.
ಶಿವಶಂಕರ ಸ್ವಾಮೀಜಿ, ಗಿರೀಶಾನಂದ ಶ್ರೀಗಳು, ಬಸವಾನಂದ ಶ್ರೀಗಳು, ಜ್ಞಾನಾನಂದ ಶ್ರೀಗಳು, ಸ್ವಪ್ರಕಾಸನಂದ ಶ್ರೀಗಳು, ಗುರುಲಿಂಗ ಶ್ರೀಗಳು, ಬಸವಪ್ರಸಾದ ಶ್ರೀಗಳು, ಶರಣಾನಂದ ಶ್ರೀಗಳು, ಸಿದ್ದಪ್ರಸಾದ ಶ್ರೀಗಳು, ಶಿವಪ್ರಸಾದ ಶ್ರೀಗಳು, ಬ್ರಹ್ಮಾನಂದ ಶ್ರೀಗಳು, ವಿದ್ಯಾನಂದ ಶ್ರೀಗಳು, ಪ್ರಭುಲಿಂಗ ಶ್ರೀಗಳು, ಸಾನಿದ್ಯ ವಹಿಸಿದ್ದರು.
ಆಶ್ರಮದ ಗುರುಗಳಾದ ಸಂಗಮೇಶ್ವರ ಶ್ರೀಗಳು, ಜೆಡಿ ಎಸ್ ಮುಖಂಡ ಬಿ.ಡಿ.ಪಾಟೀಲ, ಜಿ.ಪಂ ಮಾಜಿ ಅಧ್ಯಕ್ಷ ಶಿವಯೋಗಪ್ಪ ನೇದಲಗಿ, ಬಿಜೆಪಿ ತಾಲೂಕಾ ಅಧ್ಯಕ್ಷ ಹಣಮಂತ್ ರಾಯಗೌಡ ಪಾಟೀಲ, ಮಾತನಾಡಿದರು. ಭೀಮರಾಯಗೌಡ ಪಾಟೀಲ, ಕಮಲಾಬಾಯಿ ವಿಠ್ಠಲಗೌಡ, ಮಂಜುಳಾ ಸುನೀಲ ಖೈರಾವಕರ ವೇದಿಕೆಯ ಮೇಲಿದ್ದರು.

