Author: editor.udayarashmi@gmail.com

ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ರಾಜುಗೌಡ ಪಾಟೀಲ ಕೃಷಿ ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಮತಕ್ಷೇತ್ರದ ಗ್ರಾಮಗಳಲ್ಲಿ ಕೆಲವು ರೈತರಿಗೆ ವಾರಸಾ ವಿಷಯದಲ್ಲಿ ಬೆಳೆ ಪರಿಹಾರ ಜಮೆ ಆಗದೇ ಇದ್ದು, ಕೂಡಲೇ ಕೃಷಿ ಇಲಾಖೆಯ ಅಧಿಕಾರಿಗಳು ಈ ಕುರಿತು ಕ್ರಮವಹಿಸಬೇಕು ಎಂದು ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ) ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಜರುಗಿದ ೨೦೨೫-೨೬ನೇ ಸಾಲಿನ ಒಂದನೇ ತ್ರೈಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಶು ಸಂಗೋಪನಾ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ, ಶಾಲೆಯ ಕೋಣೆಗಳ ಲಭ್ಯತೆ, ಕಟ್ಟಡಗಳ ಸ್ಥಿತಿಗತಿಗಳ ಕುರಿತು ಮಾಹಿತಿ ನೀಡಬೇಕು ಇದನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಮತಕ್ಷೇತ್ರದ ಎಲ್ಲ ಶಾಲೆಗಳ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳು, ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಉದ್ಘಾಟನೆಗೆ ಕ್ರಮವಹಿಸುವುದು ಹಾಗೂ ಜಾಲವಾದ ಗ್ರಾಮದ ಹೆಸ್ಕಾಂ ವಿತರಣಾ ಕೇಂದ್ರಕ್ಕಾಗಿ ಭೂಮಿ ನೀಡಿದ ರೈತರಿಗೆ ಪರಿಹಾರ ನೀಡುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದರು.ಸಭೆಯಲ್ಲಿ ಅಧಿಕಾರಿಗಳು ಬೀದಿನಾಯಿಗಳ…

Read More

ಟಿಇಟಿ ಪರೀಕ್ಷೆಯ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಒಟ್ಟು ೬೪ ಪರೀಕ್ಷಾ ಕೇಂದ್ರಗಳಲ್ಲಿ ಡಿಸೆಂಬರ್ ೭ರಂದು ಟಿಇಟಿ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕಾರ್ಯಗಳಲ್ಲಿ ಯಾವುದೇ ಲೋಪವಾಗದಂತೆ ಹಾಗೂ ಸುಸೂತ್ರವಾಗಿ ಪರೀಕ್ಷೆ ನಡೆಸುವಂತೆ ಪರೀಕ್ಷೆಗೆ ನಿಯೋಜಿತ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಆನಂದ ಕೆ ಅವರು ಸೂಚನೆ ನೀಡಿದರು.ಅವರು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ ಟಿಇಟಿ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪರೀಕ್ಷೆ ಎರಡು ಅವಧಿಯಲ್ಲಿ ನಡೆಯಲಿದ್ದು, ಬೆಳಿಗ್ಗೆ ೯.೩೦ ರಿಂದ ಮಧ್ಯಾಹ್ನ ೧೨ರವರೆಗೆ ನಡೆಯುವ ಪರೀಕ್ಷೆಗೆ ಒಟ್ಟು ೫೩೨೧ ಅಭ್ಯರ್ಥಿಗಳು ಹಾಗೂ ಮಧ್ಯಾಹ್ನ ೨ಗಂಟೆಯಿಂದ ಸಂಜೆ ೪.೩೦ರವರೆಗೆ ನಡೆಯುವ ಪರೀಕ್ಷೆಗೆ ೧೭೧೦೦ ಅಭ್ಯರ್ಥಿಗಳು ೬೪ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದು, ಅಭ್ಯರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಪರೀಕ್ಷೆಗೆ ನಿಯೋಜಿತ ಅಧಿಕಾರಿಗಳು ಜಾಗೃತೆಯಿಂದ ಕಾರ್ಯನಿರ್ವಹಿಸಬೇಕು. ಪರೀಕ್ಷೆಯ ದಿನದಂದು ಪಾರದರ್ಶಕ ಹಾಗೂ ಸುವ್ಯವಸ್ಥೆ ಕಾಪಾಡಲು ಮುನ್ನೆಚ್ಚರಿಕೆ ಕ್ರಮವಾಗಿ ಪರೀಕ್ಷಾ ಕೇಂದ್ರಗಳ ಸುತ್ತಲಿನ ೨೦೦ ಮೀ. ಪ್ರದೇಶದಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಅರಣ್ಯ ಇಲಾಖೆ ಪ್ರವಾಸೋದ್ಯಮ ಇಲಾಖೆ ಹಾಗೂ ವೃಕ್ಷ ಅಭಿಯಾನ ಪ್ರತಿಷ್ಠಾನ ಇವರ ಸಹಯೋಗದಲ್ಲಿ ಡಿ.೦೭ ರಂದು ವೃಕ್ಷಥಾನ್ ಪಾರಂಪರಿಕ ಓಟ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಬುಧವಾರ ಟೀ ಶರ್ಟ್ ಬಿಡುಗಡೆ ಕಾರ್ಯಕ್ರಮ ನಡೆಯಿತು.ಜಿಲ್ಲಾಧಿಕಾರಿ ಡಾ. ಆನಂದ ಕೆ., ಎಸ್ಪಿ ಲಕ್ಷ್ಮಣ ನಿಂಬರಗಿ, ಜಿ. ಪಂ. ಸಿಇಓ ರಿಷಿ ಆನಂದ, ವಿಜಯಪುರ ನಗರ ಡಿವೈಎಸ್ಪಿ ಡಾ. ಬಸವರಾಜ ಯಲಿಗಾರ, ಪ್ರಾದೇಶಿಕ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ಮಲ್ಲಿಕಾರ್ಜುನ ಕುಸನಾಳ, ಡಾ. ಮುರಿಗೇಶ ಪಟ್ಟಣಶೆಟ್ಟಿ, ಡಿವೈಎಸ್ಪಿ ಉಪಾಸೆ, ಸಚೀನ ಪಾಟೀಲ, ಸಂದೀಪ ಮಡಗೊಂಡ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆಗೆ ವಿಳಂಬ ನೀತಿ ಅನುಸರಿಸುತ್ತಿರುವುದು ವಿರೋಧಿಸಿ ಜನಪ್ರತಿನಿಧಿಗಳ ಪಿಂಡ ಪ್ರದಾನ ಹಾಗೂ ಪ್ರತಿಕೃತಿ ದಹನ ಮಾಡಲು ಹೋರಾಟಗಾರರು ಅಣಿಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿದ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಪ್ರತಿಭಟನಾ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸರ್ಪಗಾವಲು ಹಾಕಿದ್ದು ಒಂದೆಡೆಯಾದರೆ, ಇನ್ನೊಂದೆಡೆ ಹೋರಾಟಗಾರರು ಹೋರಾಟವನ್ನು ತೀವ್ರಗೊಳಿಸಿದ್ದು ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ ನಡೆಸಿದರು.ಹೋರಾಟಗಾರರಾದ ಅರವಿಂದ ಕುಲಕರ್ಣಿ, ಮಲ್ಲಿಕಾರ್ಜುನ ಬಟಗಿ, ಅಕ್ರಂ ಮಾಶ್ಯಾಳಕರ ಸೇರಿದಂತೆ ಅನೇಕ ಹೋರಾಟಗಾರರು ಕಲ್ಲು ಹೊತ್ತುಕೊಂಡು ಪ್ರತಿಭಟನೆ ಕುಳಿತರು.ಕಲ್ಲು ಹೊತ್ತಿಕೊಂಡೇ ಅಸಮಾಧಾನ ವ್ಯಕ್ತಪಡಿಸಿದ ರೈತ ಮುಖಂಡ ಅರವಿಂದ ಕುಲಕರ್ಣಿ, ಸರ್ಕಾರಿ ಮೆಡಿಕಲ್ ಕಾಲೇಜ್ ಜಿಲ್ಲೆಯ ಬಡಜನತೆಯ ಹಿತಕ್ಕಾಗಿ ಸ್ಥಾಪನೆಯಾಗಬೇಕು, ಈ ಉದ್ದೇಶಕ್ಕಾಗಿ ನಮ್ಮ ಹೋರಾಟ ನಡೆಯುತ್ತಿದೆ, ಆದರೆ ಈ ಹೋರಾಟವನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಎಂದರು.ರಾಜ್ಯ ಸರ್ಕಾರವು ಪೊಲೀಸ್ ಬಲವನ್ನೇ ಇಂದು ದುರುಪಯೋಗಪಡಿಸಿಕೊಂಡು ಹೋರಾಟವನ್ನು ದಮನ ಮಾಡುವ ಹುನ್ನಾರ ನಡೆಸುತ್ತಿದೆ, ಹೋರಾಟಗಾರರ ಸುತ್ತಲೂ ಭಾರಿ ಪೊಲೀಸ್ ಪಡೆಯನ್ನು ನಿಯೋಜಿಸಿ ಸರ್ಪಗಾವಲು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಶಾಲ್ಮೋನ್ ಚೋಪಡೆ ಅವರಿಗೆ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ನರ್ಸಸ್ ಅವಾರ್ಡ್-2025 ಲಭಿಸಿದೆ.ಕರ್ನಾಟಕ ನ್ಯೂಸಪೇಪರ್ಸ್ ಅಸೋಸಿಯೇಶನ್ ಮತ್ತು ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಸಂಯುಕ್ತಾಶ್ರಯದಲ್ಲಿ ನೀಡುವ ಪ್ರತಿಷ್ಠಿತ ಪ್ರಶಸ್ತಿ ಇದಾಗಿದ್ದು, ಬೆಂಗಳೂರಿನ ಸರ್ ಪುಟ್ಟಣ್ಣ ಚೆಟ್ಟಿ ಟೌನಹಾಲ್ ನಲ್ಲಿ ನವೆಂಬರ್ 27 ರಂದು ಗುರುವಾರ ನಡೆದ ಕಾರ್ಯಕ್ರಮದಲ್ಲಿ ಗಣ್ಯರಾದ ಡಾ. ಲವಿನಾ ಜನಾರ್ಧನ, ಡಾ. ಚಂದ್ರಶೇಖರ ಶೆಟ್ಟಿ, ಡಾ. ಸಚ್ಚಿದಾನಂದ ಅವರು ಡಾ. ಶಾಲಮೊನ್ ಚೊಪಡೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಅಲ್ಲದೇ, ಈ ಪ್ರಶಸ್ತಿಯೊಂದಿಗೆ ಈ ಪ್ರಶಸ್ತಿಯೊಂದಿಗೆ ಟ್ರೋಫಿ, ಗೋಲ್ಡ್ ಪ್ಲೇಟೆಡ್ ಪದಕ ಹಾಗೂ ಗೌರವ ಪತ್ರವನ್ನು ಪ್ರದಾನ ಮಾಡಲಾಯಿತು.ನರ್ಸಿಂಗ್ ವೃತ್ತಿಯಲ್ಲಿ ಸಲ್ಲಿಸಿದ ಅಮೂಲ್ಯ ಸೇವೆ, ಸಮಾಜಮುಖಿ ಚಟುವಟಿಕೆಗಳು ಹಾಗೂ ವೃತ್ತಿ ಉತ್ತೇಜನಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಪ್ರೊ. ಶಾಲ್ಮೋನ್ ಚೋಪಡೆ ಅವರಿಗೆ ಈ ರಾಷ್ಟ್ರಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ಡಾ.…

Read More

ಲೇಖನ – ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ನಾನು ಈಗ ಹೇಳ ಹೊರಟಿರುವ ವಿಷಯ ಹೊಸದೇನಲ್ಲ. ನಿಮಗೆಲ್ಲ ಅನುಭವಕ್ಕೆ ಬಂದ ವಿಷಯವೇ ಆಗಿದೆ. ಇತ್ತೀಚಿನ ದಿನಗಳಲ್ಲಿ ಟಿವಿ, ಮೊಬೈಲ್ ಗೀಳಿಗೆ ಅದೆಷ್ಟು ಅಂಟಿಕೊಂಡಿದ್ದೇವೆ ಎಂದರೆ ದಿನದ ಇಪ್ಪತ್ನಾಲ್ಕು ಗಂಟೆಗಳು ಸಾಲುತ್ತಿಲ್ಲ. ಸಮಯ ಹೇಗೆ ಹಾರಿ ಹೋಗುತ್ತಿದೆ ಅಂತ ಎಲ್ಲರೂ ದೂರುತ್ತಿದ್ದೇವೆ. ಮೊನ್ನೆ ಮೊನ್ನೆ ಹೊಸ ವರ್ಷ ಆರಂಭವಾಗಿತ್ತು. ಈಗಾಗಲೇ ಒಂದು ವರ್ಷ ಮುಗಿದು ಹೋಯಿತು. ಅದು ಹೇಗೆ ಒಂದು ವರ್ಷ ಕಳೆದು ಹೋಯಿತೋ ತಿಳಿಯಲೇ ಇಲ್ಲ. ಎನ್ನುವ ಮಾತುಗಳು ಕಿವಿಗೆ ಬೀಳುತ್ತವೆ. ಇಂಥ ಮಾತುಗಳು ಕಿವಿಗೆ ಬಿದ್ದಾಗ ಹೌದಲ್ಲ, ಅದೆಷ್ಟು ಅಮೂಲ್ಯ ಸಮಯವನ್ನು ಉಪಯೋಗಕ್ಕೆ ಬಾರದ ವಾಟ್ಸಪ್ ಚಾಟ್‌ಗಾಗಿ ಫೇಸ್ ಬುಕ್ ಲೈಕ್‌ಗಾಗಿ, ಇನ್ಸ್ಟಾಗ್ರಾಮ್ ಇನ್ನಿತರೆ ಸಾಮಾಜಿಕ ಜಾಲತಾಣಗಳಿಗೆ ವ್ಯಯ ಮಾಡುತ್ತಿದ್ದೇವೆ ಎಂಬ ಭಯ ಕಾಡಲು ಶುರುವಾಗುವದಂತೂ ನಿಜ. ಮನೆಯಲ್ಲಿ ಅಪ್ಪ ಅಮ್ಮನಿಗೆ ಮಕ್ಕಳಿಗೆ ಅಗತ್ಯವಾದ ಪ್ರೀತಿ ಕಾಳಜಿ ಸಮಯವನ್ನು ಕೊಡಲು ಆಗುತ್ತಿಲ್ಲ ಎಂದರೆ ಮೊದಲು ನಿಮಗೆ ನೀವೇ…

Read More

ಲೇಖನ- ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕುದ.ಕ ಜಿಲ್ಲೆ-೫೭೪೧೯೮ದೂ:೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ನಮ್ಮೂರಿನ ಜಾತ್ರೆಯನ್ನು ಮುಗಿಸಿ ಕಾಡು ಗುಡ್ಡದ ಹಾದಿಯಲ್ಲಿ ರಾತ್ರಿ ಹನ್ನೆರಡರ ವೇಳೆಗೆ ನಾನೂ ನನ್ನ ಸಹೋದರ ಇಬ್ಬರೂ ಟಾರ್ಚ್ ಲೈಟಿನ ಬೆಳಕನ್ನು ಹಾಯಿಸಿಕೊಂಡು ಮನೆಯೆಡೆಗೆ ಹೆಜ್ಜೆ ಹಾಕುತ್ತಿದ್ದೆವು. ರಾತ್ರಿಯ ಪಯಣವೆಂದರೆ ನನಗೆ ಅದೇನೋ ಒಂದು ರೀತಿ ರೋಮಾಂಚನವನ್ನು ನೀಡುತ್ತಿದ್ದರೂ ಒಳಗೊಳಗೇ ಏನೋ ಭಯ. ಆದರೂ ಧೈರ್ಯ ಮಾಡಿ ನೆರೆಮನೆಯವರನ್ನು ಜಾತ್ರೆಯಲ್ಲೇ ಬಿಟ್ಟು ಇಬ್ಬರೇ ಮನೆಯ ಕಡೆಗಿನ ಕಾಡು ಹಾದಿಯನ್ನು ದಾಟಿ ತಲುಪಿದ ಇತಿಹಾಸವನ್ನು ಸೃಷ್ಟಿಸುವ ತವಕ ನಮಗಿಬ್ಬರಿಗೂ. ಹೊರಟು ಸ್ವಲ್ಪ ಹೊತ್ತಾಗಿದೆಯಷ್ಟೇ ಕಾಡಿನ ಪೊದೆಯ ಮರೆಯ ತರಗೆಲೆಗಳ ಮೇಲೆ ಏನೋ ಚಲಿಸುತ್ತಿರುವ ಸದ್ದು. ಯಾವುದೋ ಕಾಡು ಪ್ರಾಣಿ ಇರಬಹುದೆಂಬ ಭಯದಿಂದ ಎದೆಬಡಿತ ಹೆಚ್ಚಾಗತೊಡಗಿತು. ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಂತೆ ತರಗೆಲೆಗಳ ಸದ್ದು ಮತ್ತಷ್ಟು ಹೆಚ್ಚಾಯಿತು, ಕುತೂಹಲದಿಂದ ಅತ್ತ ನನ್ನ ಕೈಯಲ್ಲಿದ್ದ ಟಾರ್ಚ್ ಲೈಟಿನ ಬೆಳಕನ್ನು ಬೀರಿದೆ. ಯಾವುದೋ ಒಂದು ಪುಟ್ಟ ಪ್ರಾಣಿ ಏನನ್ನೋ ಕಿತ್ತು…

Read More

ಲೇಖನ- ಸುಧಾ ಪಾಟೀಲ (ಬೆಳಗಾವಿ)ವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ ಸಂಘರ್ಷ ಹೋರಾಟ ಒಬ್ಬ ವ್ಯಕ್ತಿಯನ್ನು ಎಷ್ಟು ಎತ್ತರಕ್ಕೆ ಕರೆದೊಯ್ಯಬಲ್ಲದು ಎಂದು ಕಾಲ ಮಾತ್ರ ನಿರ್ಧರಿಸುತ್ತದೆ.ಇದಕ್ಕೆ ಪೂರಕವಾಗಿ ಜ್ಞಾನ, ಕ್ರಿಯೆ, ಸೃಜನಶೀಲತೆ, ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಎಲ್ಲವನ್ನೂ ಬಿಟ್ಟು ಬಂದು ಪತ್ರಿಕೋದ್ಯಮ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಇವತ್ತು ವಿಜಯಪುರ ಜಿಲ್ಲೆಯ ಪ್ರತಿಷ್ಠಿತ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಆಗಿ ಅವಿರೋಧವಾಗಿ ಆಯ್ಕೆ ಆದದ್ದು ಶ್ರೀ ಇಂದುಶೇಖರ ಮಣೂರ ಅವರ ಕಾರ್ಯತತ್ಪರತೆಯನ್ನು ತೋರಿಸುತ್ತದೆ.ಅಪ್ಪಟ ಬಸವ ಭಕ್ತರು. ಇಂತಹ ಪ್ರಾಮಾಣಿಕ ಪತ್ರಕರ್ತರ ಪರಿಚಯವನ್ನು ನಾವು – ನಮ್ಮವರು ಎನ್ನುವ ಅಂಕಣದಲ್ಲಿ ಮಾಡಲು ನನಗೆ ಅತೀವ ಸಂತಸ ತಂದಿದೆ. ನನ್ನ ಬರವಣಿಗೆಯ ಶೈಲಿಗೆ, ಪ್ರವೃತ್ತಿಗೆ ಅವರ ಸಂಪಾದಕ್ತ್ವದ ’ಉದಯರಶ್ಮಿ’ ಪತ್ರಿಕೆ ಮಾರ್ಗದರ್ಶಿ ಎಂದರೆ ತಪ್ಪಾಗಲಾರದು. ನನ್ನ ಎರಡು ಮೂರು ಕೃತಿಗಳು ಅವರ ’ಉದಯರಶ್ಮಿ’ ಪತ್ರಿಕೆಯಲ್ಲಿ ಅಂಕಣವಾಗಿ ಮೂಡಿ ಬಂದಿವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.ನಾಡಿನೆಲ್ಲೆಡೆ ತಮ್ಮ ಅಪಾರ ಶಿಷ್ಯಬಳಗವನ್ನು…

Read More

ಹಿಂದುಳಿದವರ, ದಲಿತರ & ಮಹಿಳೆಯರ ಮೀಸಲಾತಿ ವಿರೋಧಿಸಿದ್ದು ಬಿಜೆಪಿ | ಸಿಎಂ ಸಿದ್ದರಾಮಯ್ಯ ಹೇಳಿಕೆ ಬೆಂಗಳೂರು: ಹಿಂದುಳಿದವರ, ದಲಿತರ ಹಾಗೂ ಮಹಿಳೆಯರ ಮೀಸಲಾತಿಯನ್ನು ವಿರೋಧಿಸಿದ್ದು ಬಿಜೆಪಿ, ಜಾರಿ ಮಾಡಿದ್ದು ನಮ್ಮ ಕಾಂಗ್ರೆಸ್ ಪಕ್ಷ. ಈಗಿರುವ ಶೇ.50 ರಷ್ಟು ಮಹಿಳಾ ಮೀಸಲಾತಿ ರಾಜೀವ್ ಗಾಂಧಿ ಮತ್ತು ಕಾಂಗ್ರೆಸ್ಸಿನ ಕೊಡುಗೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ 2023-24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಹಾಗೂ ಇ-ಸ್ವತ್ತು 2.0 ತಂತ್ರಾಂಶದ ಚಾಲನೆ ಸಮಾರಂಭದಲ್ಲಿ ಮಾತನಾಡಿದ ಅವರು, ಮಹಿಳಾ ಮೀಸಲಾತಿ ವಿರೋಧ ಮಾಡಿದ್ದು ಬಿಜೆಪಿಯ ಉಪಾಧ್ಯಕ್ಷರಾಗಿದ್ದ ರಾಜ್ಯ ಸಭಾ ಸದಸ್ಯ ರಾಮಾಜೋಯಿಸ್. ಇದನ್ನು ಅರ್ಥ ಮಾಡಿಕೊಳ್ಳಬೇಕು. ಸುಮ್ಮನೆ ಬಿಜೆಪಿಗೆ ಚಪ್ಪಾಳೆ ತಟ್ಟಬಾರದು ಎಂದರು.ಗ್ರಾಮದಿಂದ ರಾಜಧಾನಿಗೆ ಹೀಗೆ ಅಧಿಕಾರ ವಿಕೇಂದ್ರೀಕರಣ ಆಗಬೇಕು ಎನ್ನುವುದು ಗಾಂಧಿ, ನೆಹರೂ, ಲೋಹಿಯಾ ಅವರ ಕನಸಾಗಿತ್ತು. ನಮ್ಮದು ಹಳ್ಳಿಗಳ ದೇಶ. ಗ್ರಾಮ ಭಾರತ ಅಭಿವೃದ್ಧಿ ಆಗದೆ ದೇಶ ಅಭಿವೃದ್ಧಿ ಸಾಧ್ಯವಿಲ್ಲ. ಹಳ್ಳಿಗಳ ಅಭಿವೃದ್ಧಿಯಲ್ಲಿ ಗ್ರಾಮಸ್ಥರ ಪಾಲ್ಗೊಳ್ಳುವಿಕೆ ಬಹಳ ಮುಖ್ಯ.…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಂಚೆ ವಿಭಾಗದ ೨೦೨೫ನೇ ಸಾಲಿನ ೩ನೇ ತ್ರೈಮಾಸಿಕ ಅಂಚೆ ಅದಾಲತ್ ಕಾರ್ಯಕ್ರಮ ಡಿ.೧೫ ರಂದು ಮಧ್ಯಾಹ್ನ ೩ ಗಂಟೆಗೆ ವಿಜಯಪುರ ವಿಭಾಗದ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.ಜಿಲ್ಲೆಯ ಬಬಲೇಶ್ವರ, ಬಸವನಬಾಗೇವಾಡಿ, ಚಡಚಣ, ದೇವರಹಿಪ್ಪರಗಿ, ಇಂಡಿ, ಕೊಲ್ಹಾರ, ಮುದ್ದೇಬಿಹಾಳ, ನಿಡಗುಂದಿ, ಸಿಂದಗಿ, ತಾಳಿಕೋಟೆ, ತಿಕೋಟಾ, ಆಲಮೇಲ ಹಾಗೂ ವಿಜಯಪುರ ತಾಲೂಕುಗಳ ವ್ಯಾಪ್ತಿಯ ಅಂಚೆ ಸೇವೆಗಳಿಗೆ ಸಲಹೆ-ಸೂಚನೆ ಹಾಗೂ ದೂರುಗಳನ್ನು ಅಂಚೆ ಅದಾಲತ್‌ನಲ್ಲಿ ವಿಚಾರಣೆಗೆ ಎಂದು ಮೇಲ್ಬರಹ ಬರೆದು ದಿನಾಂಕ : ೧೦-೧೨-೨೦೨೫ರೊಳಗೆ ಯಾವುದೇ ಅಂಚೆ ಕಚೇರಿಯಲ್ಲಿ ಸಲ್ಲಿಸಬಹುದಾಗಿದೆ. ಇಂತಹ ದೂರು ಮತ್ತು ಸಲಹೆಯ ಲಕೋಟೆಗೆ ಯಾವುದೇ ಅಂಚೆ ವೆಚ್ಚ ಭರಿಸುವ ಅಗತ್ಯವಿರುವುದಿಲ್ಲ.ಅಂಚೆ ಅದಾಲತ್‌ನಲ್ಲಿ ಅಂಚೆ ಇಲಾಖೆಯಿಂದ ಒದಗಿಸಲಾಗುತ್ತಿರುವ ಸೇವೆಗಳಲ್ಲಿ ಇರುವ ಕೊರತೆಗಳನ್ನು ಮತ್ತು ಸುಧಾರಿಸುವ ಸಲಹೆ ಸೂಚನೆಗಳ ಕುರಿತು ಚರ್ಚಿಸಲಾಗುವುದು ಎಂದು ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More