Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಸಾಧಕರ ಆದರ್ಶಗಳನ್ನು ವಿಕಲಚೇತನರು ಪಾಲಿಸಿ :ಗುರವ

1.5 ವರ್ಷದ ಮಗು ಕಳ್ಳತನ ಪ್ರಕರಣ :ಪೊಲೀಸರಿಂದ ಸುಖಾಂತ್ಯ

ಜಮಖಂಡಿ ಬಳಿ ಭೀಕರ ಅಪಘಾತ :ನಾಲ್ವರ ಸಾವು

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಗಟ್ಟಿ ಸಿದ್ಧಾಂತಗಳ ದಿಟ್ಟ ಸಂಪಾದಕ ಇಂದುಶೇಖರ ಮಣೂರ
ವಿಶೇಷ ಲೇಖನ

ಗಟ್ಟಿ ಸಿದ್ಧಾಂತಗಳ ದಿಟ್ಟ ಸಂಪಾದಕ ಇಂದುಶೇಖರ ಮಣೂರ

By Updated:No Comments4 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಸುಧಾ ಪಾಟೀಲ (ಬೆಳಗಾವಿ)
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ
ಪುಣೆ

ಉದಯರಶ್ಮಿ ದಿನಪತ್ರಿಕೆ

ಸಂಘರ್ಷ ಹೋರಾಟ ಒಬ್ಬ ವ್ಯಕ್ತಿಯನ್ನು ಎಷ್ಟು ಎತ್ತರಕ್ಕೆ ಕರೆದೊಯ್ಯಬಲ್ಲದು ಎಂದು ಕಾಲ ಮಾತ್ರ ನಿರ್ಧರಿಸುತ್ತದೆ.
ಇದಕ್ಕೆ ಪೂರಕವಾಗಿ ಜ್ಞಾನ, ಕ್ರಿಯೆ, ಸೃಜನಶೀಲತೆ, ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಎಲ್ಲವನ್ನೂ ಬಿಟ್ಟು ಬಂದು ಪತ್ರಿಕೋದ್ಯಮ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಇವತ್ತು ವಿಜಯಪುರ ಜಿಲ್ಲೆಯ ಪ್ರತಿಷ್ಠಿತ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಆಗಿ ಅವಿರೋಧವಾಗಿ ಆಯ್ಕೆ ಆದದ್ದು ಶ್ರೀ ಇಂದುಶೇಖರ ಮಣೂರ ಅವರ ಕಾರ್ಯತತ್ಪರತೆಯನ್ನು ತೋರಿಸುತ್ತದೆ.
ಅಪ್ಪಟ ಬಸವ ಭಕ್ತರು. ಇಂತಹ ಪ್ರಾಮಾಣಿಕ ಪತ್ರಕರ್ತರ ಪರಿಚಯವನ್ನು ನಾವು – ನಮ್ಮವರು ಎನ್ನುವ ಅಂಕಣದಲ್ಲಿ ಮಾಡಲು ನನಗೆ ಅತೀವ ಸಂತಸ ತಂದಿದೆ. ನನ್ನ ಬರವಣಿಗೆಯ ಶೈಲಿಗೆ, ಪ್ರವೃತ್ತಿಗೆ ಅವರ ಸಂಪಾದಕ್ತ್ವದ ’ಉದಯರಶ್ಮಿ’ ಪತ್ರಿಕೆ ಮಾರ್ಗದರ್ಶಿ ಎಂದರೆ ತಪ್ಪಾಗಲಾರದು. ನನ್ನ ಎರಡು ಮೂರು ಕೃತಿಗಳು ಅವರ ’ಉದಯರಶ್ಮಿ’ ಪತ್ರಿಕೆಯಲ್ಲಿ ಅಂಕಣವಾಗಿ ಮೂಡಿ ಬಂದಿವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.
ನಾಡಿನೆಲ್ಲೆಡೆ ತಮ್ಮ ಅಪಾರ ಶಿಷ್ಯಬಳಗವನ್ನು ಹೊಂದಿರುವ ದಿ. ಎಸ್.ಎಂ.ಮಣೂರ ಗುರುಗಳ ಹೆಸರು ಆ ಕಾಲಕ್ಕೆ ಚಿರಪರಿಚಿತ. ’ಮಣೂರ ಮಾಸ್ತರ’ ಎಂದೇ ಖ್ಯಾತರಾಗಿದ್ದ ಆದರ್ಶ ಶಿಕ್ಷಕ ಸಿದ್ದಣ್ಣ ಮಣೂರ ಮತ್ತು ಗಂಗಾಬಾಯಿ ಇವರ ಮೂರನೆಯ ಸುಪುತ್ರರಾಗಿರುವ ಶ್ರೀ ಇಂದುಶೇಖರ ಎಸ್. ಮಣೂರ ಅವರು ಜುಲೈ 01, 1965 ರಲ್ಲಿ ಸಿಂದಗಿಯಲ್ಲಿ ಜನಿಸಿದರು. ಇವರು ಪ್ರಾಥಮಿಕದಿಂದ ಬಿಕಾಂ ಪದವಿವರೆಗೆ ಶಿಕ್ಷಣವನ್ನು ಸಿಂದಗಿಯಲ್ಲೇ ಪೂರೈಸಿದರು. ಚಿತ್ರಕಲೆಯ ಕುರಿತು ಅವರಿಗಿದ್ದ ಒಲವು ಎ.ಎಂ, ಡಿ.ಎಫ್.ಎ ಪದವಿ ಪೂರೈಸಲು ಕಾರಣವಾಯಿತು.
ಇವರು ಕಳೆದ ಐದು ವರ್ಷಗಳಿಂದ ವಿಜಯಪುರದಲ್ಲಿ ವಾಸ್ತವ್ಯ ಹೂಡಿದ್ದಾರೆ. ಇವರ ಕ್ಷೇತ್ರ ಪತ್ರಿಕಾರಂಗವೆನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಇದರಲ್ಲಿ ಇವರಿಗೆ 25 ವರ್ಷಗಳ ಅನುಭವವಿದೆ. ಈಗ ಸಧ್ಯ ಸಂಪಾದಕರಾಗಿ ’ಉದಯರಶ್ಮಿ’ ಕನ್ನಡ ದಿನಪತ್ರಿಕೆಯನ್ನು ನಡೆಸುತ್ತಿದ್ದು ಕನ್ನಡದ ಅನೇಕ ಉದಯೋನ್ಮುಖ ಲೇಖಕರ ಬರಹಗಳಿಗೆ ತಮ್ಮ ಪತ್ರಿಕೆ ಮೂಲಕ ವೇದಿಕೆ ಒದಗಿಸಿದ್ದಾರೆ.
ಇವರ ಪತ್ರಿಕೆಯ ಅಡಿ ಬರಹವೇ “ಜನಪರ – ಜೀವಪರ”. ಇವರ ಪತ್ರಿಕೆಯ ಗುಣಧರ್ಮವನ್ನು ಅರಿಯಲು ಈ ಅಡಿಬರಹ ಸಾಕು.
ಸಾಮಾಜಿಕ ಮತ್ತು ಮಾನವೀಯ ಕಳಕಳಿಯ ಜೀವಪರ ವರದಿಗಳು, ವೈಚಾರಿಕ ಪ್ರಜ್ಞೆ ಮೂಡಿಸುವ ಹಾಗೂ ವ್ಯಕ್ತಿತ್ವ ವಿಕಸನ ಕುರಿತ ಲೇಖನಗಳಿಗೆ ತಮ್ಮ ಪತ್ರಿಕೆಯಲ್ಲಿ ಹೆಚ್ಚಿನ ಆದ್ಯತೆ ನೀಡುವ ಇವರು, ರಾಜಕಾರಣಿಗಳ, ಅಧಿಕಾರಿಗಳ ಜನವಿರೋಧಿ ನಿರ್ಧಾರಗಳನ್ನು ಮುಲಾಜಿಲ್ಲದೇ ಖಂಡಿಸುತ್ತ ಬಂದಿದ್ದಾರೆ. ಇವರ ಅನೇಕ ವರದಿಗಳು ಫಲಶ್ರುತಿಗೆ ಕಾರಣವಾಗಿವೆ. ಇವರ ಗರಡಿಯಲ್ಲಿ ತಯಾರಾದ ಅನೇಕ ಯುವ ಪತ್ರಕರ್ತರು ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಬರಹವನ್ನೇ ಉಸಿರಾಗಿಸಿಕೊಂಡ ಇಂದುಶೇಖರ ಅವರು ’ಉದಯರಶ್ಮಿ ನ್ಯೂಸ್’ (೨೦೨೨ ರಿಂದ) ಎಂಬ ವೆಬ್ ಪತ್ರಿಕೆ ಕೂಡಾ ನಡೆಸಿಕೊಂಡು ಬರುತ್ತಿದ್ದಾರೆ.
ಕಾರ್ಯನಿರತ ಪತ್ರಕರ್ತರ ಸಂಘದ ಸೇವೆ
ವಿಜಯಪುರ ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಕಳೆದ ೨೧ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಇಂದುಶೇಖರ ಮಣೂರ ಅವರು ಸಂಘದಲ್ಲಿ ಅನೇಕ ಹುದ್ದೆಗಳನ್ನು ಅಲಂಕರಿಸಿ ಕಾರ್ಯ ನಿರ್ವಹಿಸಿದ್ದಾರೆ.
೨೦೦೪ – ೨೦೦೭ ಕಾರ್ಯನಿರತ ಪತ್ರಕರ್ತರ ಸಂಘದ ಸಿಂದಗಿ ತಾಲೂಕು ಘಟಕದ ಅಧ್ಯಕ್ಷನಾಗಿ ಅವಿರೋಧ ಆಯ್ಕೆ, ೨೦೦೮ – ೨೦೧೧ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿ ಅವಿರೋಧ ಆಯ್ಕೆ, ೨೦೧೧ – ೨೦೧೪ ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿ ಮರು ಆಯ್ಕೆ, ೨೦೧೪ – ೨೦೧೭ ಸಂಘದ ವಿಜಯಪುರ ಜಿಲ್ಲಾ ಘಟಕದ ಉಪಾಧ್ಯಕ್ಷನಾಗಿ ಅವಿರೋಧ ಆಯ್ಕೆ, ೨೦೧೮ – ೨೦೨೧ ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿ ಅವಿರೋಧ ಆಯ್ಕೆ, ೨೦೨೨ – ೨೦೨೫ ಜಿಲ್ಲಾ ಘಟಕದ ಉಪಾಧ್ಯಕ್ಷನಾಗಿ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಆಯ್ಕೆ, ಸಧ್ಯ ೨೦೨೫ – ೨೮ ಅವಧಿಗೆ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಯಾಗಿ ಅವಿರೋಧ ಆಯ್ಕೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಾಮಾಜಿಕ ಚಟುವಟಿಕೆ
ರೆಡ್ ಕ್ರಾಸ್ ಸಂಸ್ಥೆಯ ಸಿಂದಗಿ ತಾಲೂಕಿನ ಸ್ಥಾಪಕ ಸದಸ್ಯರಾಗಿ ಸೇವೆ ಸಲ್ಲಿಸಿದ ಇಂದುಶೇಖರ ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರು. ಬಹು ಮಾಧ್ಯಮಗಳ ಸಂಗಮದ “ಸಂಸ್ಕೃತಿ ಮೀಡಿಯಾ ಹೌಸ್”, ಬೆಂಗಳೂರು ಇದರ ಅಧ್ಯಕ್ಷರಾಗಿಯೂ ಸಹ ಅವರು ಮುಂದುವರೆದಿದ್ದಾರೆ‌.
ಕುಟುಂಬ ವಿವರ


ಇಂದುಶೇಖರ ಅವರ ಪತ್ನಿ ಶ್ರೀಮತಿ ಶೈಲಾ ಮಣುರ ಅವರು ’ಉದಯ ರಶ್ಮಿ’ ದಿನಪತ್ರಿಕೆಯ ಪ್ರಕಾಶಕಿಯಾಗಿ ಇವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು. ಈರ್ವರೂ ಸಹ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ತಂದೆ ಇಂದುಶೇಖರರಂತೆ ಮಕ್ಕಳೂ ಸಹ ಲಲಿತಕಲೆಗಳಲ್ಲಿ ಆಸಕ್ತಿ ಹೊಂದಿದವರಾಗಿದ್ದಾರೆ‌. ಇನ್ನು ಇವರ ಭಾವಿ ಅಳಿಯ ಆಕಾಶ್ ಶಿವಮೊಗ್ಗ ಜಿಲ್ಲೆ ಸಾಗರದವರಾಗಿದ್ದು, ಬಿಇ (ಮೆಕ್ಯಾನಿಕಲ್) ಪದವಿಧರರು. ಸಧ್ಯ ಬೆಂಗಳೂರಿನಲ್ಲಿ ಇವರೂ ಸಹ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರ ಹಿರಿಯ ಸಹೋದರ ದಿ.ರಾಜಶೇಖರ ಮಣೂರ ಬ್ಯುಸಿನೆಸ್ಮನ್ ಆಗಿ ಹೆಸರು ಮಾಡಿದ್ದರು. ಇನ್ನೋರ್ವ ಹಿರಿಯ ಸಹೋದರ ಚಂದ್ರಶೇಖರ ಮಣೂರ ಮತ್ತು ಕಿರಿಯ ಸಹೋದರ ಶರಣಬಸವ ಮಣೂರ ಸಿಂದಗಿಯಲ್ಲಿ ಗಣ್ಯ ವರ್ತಕರು.
ಧಾರವಾಡದಲ್ಲಿ ನೆಲೆನಿಂತಿರುವ ಇವರ ಹಿರಿಯ ಸಹೋದರಿ ಶಿವದೇವಿ (ಚೆನ್ನಮ್ಮ) ಮಹಾಂತೇಶ ವೀರಾಪೂರ ಇವರು ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ಮುಖ್ಯ ಕಚೇರಿಯಲ್ಲಿ ಎಜಿಎಂ ಆಗಿ ನಿವೃತ್ತಿ ಹೊಂದಿದ್ದಾರೆ. ಬ್ಯಾಂಕಿನ ಏಳ್ಗೆಯಲ್ಲಿ ದಕ್ಷತೆ, ಪ್ರಾಮಾಣಿಕತೆ ಮತ್ತು ದಿಟ್ಚ ನಿಲುವಿನ ಇವರ ಪಾತ್ರ ಗುರುತರವಾಗಿದೆ ಎಂದರೆ ತಪ್ಪಾಗದು.
ಕಿರಿಯ ಸಹೋದರಿ ಶೋಭಾ ಸೋಮಶೇಖರ ಅಂಗಡಿ ಎಂಟೆಕ್ ಪದವಿಧರೆಯಾಗಿದ್ದು ಮುಂಬೈನಲ್ಲಿ ನೆಲೆಸಿರುವ ಈ ದಂಪತಿ ಕಂಪನಿಯೊಂದನ್ನು ಹುಟ್ಟುಹಾಕಿ ಅನೇಕರಿಗೆ ಉದ್ಯೋಗ ಕಲ್ಪಿಸಿದ್ದಾರೆ.
ಹವ್ಯಾಸಗಳು
ಓದು, ಬರಹದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಇವರ ಅಧ್ಯಯನಶೀಲತೆಯೇ ಇವರನ್ನು ಪತ್ರಿಕೋದ್ಯಮಕ್ಕೆ ಎಳೆದುತಂದಿದೆ. ಚಿತ್ರಕಲೆ, ಸಂಗೀತದ ಸೆಳೆತ ಹೊಂದಿರುವ ಇವರು ಛಾಯಾಗ್ರಹಣ ಮತ್ತು ವೀಡಿಯೋಗ್ರಫಿಯಲ್ಲಿ ಎತ್ತಿದ ಕೈ. ಬದುಕಿನ ಬಂಡಿ ಎಳೆಯಲು ಇಂದುಶೇಖರ ಅವರು ಕೆಲ ವರ್ಷ ಇದನ್ನು ವೃತ್ತಿಯನ್ನಾಗಿಯೂ ಸ್ವೀಕರಿಸಿದ್ದರು.
ಒಟ್ಟಿನಲ್ಲಿ ಬಹುಮುಖ ವ್ಯಕ್ತಿತ್ವದ ಇಂದುಶೇಖರ ಅವರು ಒಬ್ಬ ನಿಜವಾದ ಬಸವಾಭಿಮಾನಿ ಮತ್ತು ಶರಣ ಚಿಂತಕರು. ನಮ್ಮ ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ ಸಂಸ್ಥೆಯ ಬಗೆಗೆ ಅಪಾರ ಅಭಿಮಾನ ಉಳ್ಳವರು. ಮತ್ತು ನಮ್ಮ ಪ್ರತಿಯೊಂದು ಕಾರ್ಯದಲ್ಲಿ ಕಳಕಳಿಯಿಂದ ಕೈ ಜೋಡಿಸುವ ಮಹನೀಯರು ಎಂದು ಹೆಮ್ಮೆಯಿಂದ ಹೇಳಬಯಸುತ್ತೇನೆ.

ಇನ್ನಿತರ ಸೇವೆ

  • ೧೯೯೩ ರಲ್ಲಿ ೧ ವರ್ಷ ಸಿಂದಗಿಯಲ್ಲಿಯ ಶ್ರೀ ಶಾಂತವೀರ ಸ್ವಾಮೀಜಿ ಚಿತ್ರಕಲಾ ವಿದ್ಯಾಲಯದಲ್ಲಿ ಉಪನ್ಯಾಸಕನಾಗಿ ಉಚಿತ ಸೇವೆ ಸಲ್ಲಿಸುವಿಕೆ.
  • * ೧೯೯೪ ರಿಂದ ೨೦೦೪ ವರೆಗೆ ’ಜ್ಞಾನರಶ್ಮಿ’ ಕೋಚಿಂಗ್ ಸೆಂಟರ್ ಮುಖ್ಯಸ್ಥನಾಗಿ ಮಕ್ಕಳಿಗೆ ಸೈನಿಕಶಾಲೆ & ನವೋದಯ ಶಾಲೆಗಳ ಪ್ರವೇಶ ಪೂರ್ವ ಪರೀಕ್ಷೆ ತರಬೇತಿ ನೀಡುವಿಕೆ
    (ಈ ತರಬೇತಿ ಕೇಂದ್ರದಲ್ಲಿ ಶಿಕ್ಷಣ ಪಡೆದ ನೂರಾರು ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.)

ಪತ್ರಿಕಾರಂಗದಲ್ಲಿ ಸೇವೆ

  • ೨೦೦೦ – ೨೦೦೩ ವರೆಗೆ ಹವ್ಯಾಸಿ ಪತ್ರಕರ್ತನಾಗಿ ನಾಡಿನ ಅನೇಕ ಪತ್ರಿಕೆಗಳಿಗೆ ಸೇವೆ.
  • ೨೦೦೩ – ೨೦೦೭ ’ಪ್ರಜಾಧ್ವನಿ’ ಜನಪರ ಧೋರಣೆಯ ಪಾಕ್ಷಿಕ ಪತ್ರಿಕೆಯ ಪ್ರಕಾಶಕ ಹಾಗೂ ಸಂಪಾದಕನಾಗಿ ಸೇವೆ.
  • ೨೦೦೮ – ೨೦೧೨ ’ವಿಜಯ ಕರ್ನಾಟಕ’ ದಿನಪತ್ರಿಕೆಯ ಸಿಂದಗಿ ತಾಲೂಕು ವರದಿಗಾರನಾಗಿ ಸೇವೆ.
  • ೨೦೧೨ – ೨೦೧೭ ’ಕನ್ನಡ ಪ್ರಭ’ ದಿನಪತ್ರಿಕೆಯ ಸಿಂದಗಿ ತಾಲೂಕು ವರದಿಗಾರನಾಗಿ ಸೇವೆ.
  • ೨೦೧೬ ರಿಂದ ವಿದ್ಯಾರ್ಥಿ ನಿಧಿ’ ಮಾಸಪತ್ರಿಕೆಯ ( ಮಕ್ಕಳ ಮನೋವಿಕಾಸದ ಕೈಪಿಡಿ ) ಪ್ರಕಾಶಕ ಮತ್ತು ಸಂಪಾದಕರಾಗಿ ಕಾರ್ಯನಿರ್ವಹಣೆ.
  • ೨೦೧೭ – ೨೦೨೧ ’ಭಾವತರಂಗ’ ಪಾಕ್ಷಿಕ ಪತ್ರಿಕೆಯ ಪ್ರಕಾಶಕ ಮತ್ತು ಸಂಪಾದಕರಾಗಿ ಕಾರ್ಯನಿರ್ವಹಣೆ.
  • ೨೦೨೧ – ೨೦೨೨ ’ಸಂಜಯ ವಾಣಿ’ ದಿನಪತ್ರಿಕೆಯ ಪ್ರಧಾನ ವರದಿಗಾರನಾಗಿ ಸೇವೆ
  • ೨೦೨೨ ರಿಂದ ’ಉದಯರಶ್ಮಿ’ ದಿನಪತ್ರಿಕೆಯ ಹಾಗೂ ’ಉದಯರಶ್ಮಿ ನ್ಯೂಸ್’ ವೆಬ್ ಪತ್ರಿಕೆಯ ಸಂಪಾದಕನಾಗಿ ಸೇವೆಯಲ್ಲಿ ಮುಂದುವರಿಕೆ..

ಪ್ರಶಸ್ತಿ ಪುರಸ್ಕಾರ

ಕಾರ್ಯನಿರತ ಪತ್ರಕರ್ತರ ಸಂಘ, ವಿಜಯಪುರ ಜಿಲ್ಲಾ ಘಟಕದಿಂದ “ಅತ್ಯುತ್ತಮ ಪತ್ರಕರ್ತ” ಪ್ರಶಸ್ತಿ – ೨೦೦೯
ಡಾ.ರಾಜಕುಮಾರ ಅಂತರಾಷ್ಟ್ರೀಯ ಪ್ರತಿಷ್ಠಾನ ಬೆಂಗಳೂರು ದಿಂದ “ಡಾ.ರಾಜಕುಮಾರ ರಾಜ್ಯೋತ್ಸವ ಪ್ರಶಸ್ತಿ” – ೨೦೦೮
ನವಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ, ಬೆಂಗಳೂರು ಇವರ
“ನವಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ” – ೨೦೧೦
ನೆಹರು ಯುವ ಕೇಂದ್ರ ಬೆಂಗಳೂರು ಇವರಿಂದ “ರಾಜೀವ ಗಾಂಧಿ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ” – ೨೦೧೨
ರೈತಸಂಘ ಮತ್ತು ಹಸಿರು ಸೇನೆ ವಿಜಯಪುರ ಜಿಲ್ಲಾ ಘಟಕದಿಂದ “ಸಮಾಜ ಸೇವಾ ರತ್ನ ಪ್ರಶಸ್ತಿ” – ೨೦೧೩
ನಾಡಿನ ಹಲವಾರು ಮಠ-ಮಾನ್ಯಗಳು ಮತ್ತು ಸಂಘ-ಸಂಸ್ಥೆಗಳಿಂದ ಇಂದುಶೇಖರ ಅವರು ಗೌರವ ಸನ್ಮಾನ ಪಡೆದವರಾಗಿದ್ದಾರೆ.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಸಾಧಕರ ಆದರ್ಶಗಳನ್ನು ವಿಕಲಚೇತನರು ಪಾಲಿಸಿ :ಗುರವ

1.5 ವರ್ಷದ ಮಗು ಕಳ್ಳತನ ಪ್ರಕರಣ :ಪೊಲೀಸರಿಂದ ಸುಖಾಂತ್ಯ

ಜಮಖಂಡಿ ಬಳಿ ಭೀಕರ ಅಪಘಾತ :ನಾಲ್ವರ ಸಾವು

ವೃಕ್ಷಥಾನ್ ಹೆರಿಟೇಜ್ ರನ್: ಚಿತ್ರಕಲೆ ನಿಬಂಧ ಸ್ಪರ್ಧೆಗಳ ವಿಜೇತರು

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಸಾಧಕರ ಆದರ್ಶಗಳನ್ನು ವಿಕಲಚೇತನರು ಪಾಲಿಸಿ :ಗುರವ
    In (ರಾಜ್ಯ ) ಜಿಲ್ಲೆ
  • 1.5 ವರ್ಷದ ಮಗು ಕಳ್ಳತನ ಪ್ರಕರಣ :ಪೊಲೀಸರಿಂದ ಸುಖಾಂತ್ಯ
    In (ರಾಜ್ಯ ) ಜಿಲ್ಲೆ
  • ಜಮಖಂಡಿ ಬಳಿ ಭೀಕರ ಅಪಘಾತ :ನಾಲ್ವರ ಸಾವು
    In (ರಾಜ್ಯ ) ಜಿಲ್ಲೆ
  • ವೃಕ್ಷಥಾನ್ ಹೆರಿಟೇಜ್ ರನ್: ಚಿತ್ರಕಲೆ ನಿಬಂಧ ಸ್ಪರ್ಧೆಗಳ ವಿಜೇತರು
    In (ರಾಜ್ಯ ) ಜಿಲ್ಲೆ
  • ಇಬ್ರಾಹಿಂಪುರದಲ್ಲಿ ಜಯರಾಮೇಶ್ವರ ಮಹಾರಾಜರ ಜಾತ್ರೆ
    In (ರಾಜ್ಯ ) ಜಿಲ್ಲೆ
  • ಭಕ್ತರ ಭವಭೀತಿ ಪರಿಹರಿಸುವ ದತ್ತನ ಸ್ಥಳ ಸುಕ್ಷೇತ್ರ ಗಾಣಗಾಪುರ
    In ವಿಶೇಷ ಲೇಖನ
  • “ಡಿ.೫ ರಿಂದ ಸುವರ್ಣ ಮಹೋತ್ಸವ ಕಾರ್ಯಕ್ರಮ :ಗೊಳಸಂಗಿ
    In (ರಾಜ್ಯ ) ಜಿಲ್ಲೆ
  • ವಿಕಲಚೇತನರು ಆತ್ಮವಿಶ್ವಾಸದಿಂದ ಜೀವನ ನಡೆಸಲು ಅವಕಾಶ ನೀಡಿ
    In (ರಾಜ್ಯ ) ಜಿಲ್ಲೆ
  • ಬಿ.ಎಲ್.ಡಿ.ಇ ಧ್ವನಿ 98.6 ಎಫ್‌.ಎಂ ರೇಡಿಯೋ ಕೇಂದ್ರ ಆರಂಭ
    In (ರಾಜ್ಯ ) ಜಿಲ್ಲೆ
  • ೫೧ ವರ್ಷಗಳ ಹೋರಾಟಕ್ಕೆ ದೊರಕಿದ ನ್ಯಾಯ :ಪಟ್ಟಣಶೆಟ್ಟಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.