Author: editor.udayarashmi@gmail.com

ಲೇಖನ- ಡಾ ಶಶಿಕಾಂತ ರುದ್ರಪ್ಪ ಪಟ್ಟಣರಾಮದುರ್ಗ – ಪುಣೆ ಉದಯರಶ್ಮಿ ದಿನಪತ್ರಿಕೆ ಒಬ್ಬ ಹಳ್ಳಿಯ ಸಾಧಾರಣ ಲಿಂಗಾಯತ ವ್ಯಾಪಾರಸ್ಥ ಮನೆತನದಲ್ಲಿ ಹುಟ್ಟಿ ಭಾರತದ ಪರಮೋಚ್ಚ ಅಧ್ಯಕ್ಷ ಸ್ಥಾನಕ್ಕೆ ಹೋದ ಅಪ್ರತಿಮ ರಾಜಕೀಯ ಮುತ್ಸದ್ಧಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ಬಸಪ್ಪ ದಾನಪ್ಪ ಜತ್ತಿ ಅವರ ಬದುಕು ಒಂದು ಸಂಘರ್ಷವೇ ಆಗಿದೆ.ಒಂದು ಅವಿಸ್ಮರಣೀಯ ಪ್ರಸಂಗಸಾವಳಗಿ ಇವತ್ತಿನ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಒಂದು ಪುಟ್ಟ ಗ್ರಾಮ. ಆ ಊರಿನಲ್ಲಿ ದಾನಪ್ಪ ಎಂಬ ವ್ಯಾಪಾರಿ ಮನೆತನದ ಮಧ್ಯಮ ವರ್ಗದ ವ್ಯಕ್ತಿ ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳ ಪರಮ ಶಿಷ್ಯರಾಗಿದ್ದರು. ಒಂದು ದಿನ ದಾನಪ್ಪನವರು ತಮ್ಮ ಕಿಡಿಗೇಡಿ ಬಾಲಕ ಬಸಪ್ಪನನ್ನು ಕರೆದು ಕೊಂಡು ಅಥಣಿಯ ಶ್ರೀ ಗಚ್ಚಿನ ಮಠಕ್ಕೆ ಪರಮ ಪೂಜ್ಯರ ದರ್ಶನಕ್ಕೆ ಹೋದರು.ಪರಮ ಪೂಜ್ಯ ಶ್ರೀ ಅಥಣಿಯ ಮುರುಗೇಂದ್ರ ಶಿವಯೋಗಿಗಳು ಲಿಂಗ ಪೂಜೆ ಮುಗಿಸಿ ಮಠದ ಆವರಣದಲ್ಲಿ ಭಕ್ತರ ದರ್ಶನ ನೀಡಲು ಬಂದು ಕುಳಿತು ಕೊಳ್ಳುತ್ತಾರೆ. ಆಗ ಮಠದಲ್ಲಿ ಆಡುತ್ತಿದ್ದ ಬಾಲಕ ಓಡಿ ಹೋಗಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರದ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದಲ್ಲಿ ಪ್ರಾಜೆಕ್ಟ್ ಫೆಲೋ ತಾತ್ಕಾಲಿಕ ಹುದ್ದೆಗೆ ಇದೇ ದಿ.೨೯ ರಂದು ಬೆಳಿಗ್ಗೆ ೧೦.೩೦ ಕ್ಕೆ ಪ್ರಾದೇಶಿಕ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕರ ಕಾರ್ಯಾಲಯದಲ್ಲಿ ಸಂದರ್ಶನ ನಡೆಯಲಿದೆ.ಸ್ಕೌಟಿಂಗ್ ಆ್ಯಂಡ್ ಡ್ಯಾಕ್ಯೂಮೆಂಟೇಷನ್ ಆಫ್ ಗ್ರಾಸ್ ರೂಟ್ಸ್ ಇನ್ನೋವೇಷನ್ ಆ್ಯಂಡ್ ಔಟ್‌ಸ್ಟ್ಯಾಂಡಿಂಗ್ ಟ್ರೆಡಿಷನಲ್ ನಾಲೇಜ್ ಆ್ಯಂಡ್ ಪ್ರಾಕ್ಟೀಸ್ ಆಫ್ ಅಗ್ರಿಕಲ್ಚರ್ ಇನ್ ಕರ್ನಾಟಕ ಸ್ಟೇಟ್ ಯೋಜನೆಯಡಿಯಲ್ಲಿ ಈ ಹುದ್ದೆ ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಒಂದು ವರ್ಷದ ಅವಧಿ ಅಥವಾ ಈ ಯೋಜನೆ ಪೂರ್ಣಗೊಳ್ಳುವವರೆಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಕೃಷಿಯಲ್ಲಿ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ಅಗತ್ಯ ಮೂಲ ದಾಖಲಾತಿ, ಧೃಡೀಕೃತ ಪ್ರತಿ, ಭಾವಚಿತ್ರಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ ಎಂದು ಸಹ ಸಂಶೋಧನಾ ನಿರ್ದೇಶಕರು ತಿಳಿಸಿದ್ದಾರೆ.

Read More

ಲೇಖನ- ವೀಣಾ ಹೇಮಂತಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ತನ್ನ ಹೊಲವನ್ನು ಚೆನ್ನಾಗಿ ಹದ ಮಾಡಿ ಬೀಜ ಬಿತ್ತಿ ಅವುಗಳು ಮೊಳಕೆಯೊಡೆದು ಸಸಿಯಾಗಿ ಹುಲುಸಾಗಿ ದವಸ ಧಾನ್ಯಗಳನ್ನು ಬೆಳೆದು ಮತ್ತೆ ರಾಶಿ ಮಾಡುವ ಮುನ್ನ ವಿಶೇಷ ಅಡುಗೆಗಳನ್ನು ತಯಾರಿಸಿ ಬಂಧು ಬಾಂಧವರೊಡಗೂಡಿ ಭೂಮಿ ತಾಯಿಯ ಪೂಜೆಯನ್ನು ಮಾಡುತ್ತಾನೆ. ಬಂಗಾರದ ಬೆಳೆಯನ್ನು ನೀಡುವ ಭೂಮಿ ತಾಯಿಗೆ ಪೂಜೆಯ ಮೂಲಕ ಆತ ಕೃತಜ್ಞತೆಯನ್ನು ತೋರುತ್ತಾನೆ. ತನ್ನ ಬದುಕಿಗೆ ಆಧಾರವನ್ನು ಮೂಲಭೂತ ಸೌಕರ್ಯವಾದ ಆಹಾರವನ್ನು ನೀಡುವ ಭೂಮಿತಾಯಿಗೆ ಪೂಜೆಯನ್ನು ಮಾಡುವ ಮೂಲಕ ಆತ ಸಂಭ್ರಮ ಪಡುತ್ತಾನೆ. ನಮ್ಮ ಹುಟ್ಟಿಗೆ ಕಾರಣರಾಗಿರುವ ನಮ್ಮ ತಂದೆ ತಾಯಿಗಳು ನಮ್ಮನ್ನು ಲಾಲಿಸಿ ಪಾಲಿಸಿ ಬೆಳೆಸುತ್ತಾರೆ. ನಮ್ಮೆಲ್ಲ ಬೇಕು ಬೇಡಗಳಿಗೆ ಸ್ಪಂದಿಸುವ ನಮ್ಮ ತಂದೆ ತಾಯಿ ತಮ್ಮೆಲ್ಲ ತೊಂದರೆಗಳನ್ನು ಮೀರಿಯೂ ಕೂಡ ನಾವು ಬದುಕಿನಲ್ಲಿ ಮುನ್ನಡೆಯಲು ಸಹಾಯ ಹಸ್ತವನ್ನು ಎಸಗುತ್ತಾರೆ. ಮುಂದೆ ನಾವು ಬದುಕಿನಲ್ಲಿ ಮುಂದೆ ಬಂದು ಉನ್ನತ ಸ್ಥಾನವನ್ನು ಗಳಿಸಿದಾಗ ಹೆಮ್ಮೆಯಿಂದ ಬೀಗುತ್ತಾರೆ. ಅಂತಹ ತಂದೆ ತಾಯಿಗಳಿಗೆ ನಾವು ಕೃತಜ್ಞರಾಗಿರಬೇಕು.ಇದನ್ನು…

Read More

ರಾಷ್ಟ್ರೀಯ ಗ್ರಾಹಕರ ದಿನ ಆಚರಣೆಯಲ್ಲಿ ನ್ಯಾಯಾಧೀಶ ಅರವಿಂದ ಹಾಗರಗಿ ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಗ್ರಾಹಕರು ಯಾವುದೇ ವಸ್ತುವನ್ನು ಖರೀದಿಸುವಾಗ ಜಾಹೀರಾತುಗಳಿಗೆ ಮರುಳಾಗದೇ ವಸ್ತುವಿನ ಗುಣಮಟ್ಟ ಮೌಲ್ಯವನ್ನು ಅರಿತು ಎಚ್ಚರಿಕೆಯಿಂದ ಖರೀದಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹಿರಿಯ ಸಿವ್ಹಿಲ್ ನ್ಯಾಯಾಧೀಶ ಅರವಿಂದ ಹಾಗರಗಿ ಅವರು ಕಿವಿಮಾತು ಹೇಳಿದರು.ವಿಜಯಪುರದ ಸಿಕ್ಯಾಬ್ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ-2025 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಮಾರುಕಟ್ಟೆಯಲ್ಲಿ ಯಾವುದೇ ವಸ್ತು ಖರೀದಿಸುವಾಗ ವಸ್ತುವಿನ ನೈಜತೆ, ಗುಣಮಟ್ಟ ಪರೀಕ್ಷಿಸಿದ ನಂತರವೇ ಖರೀದಿಸಲು ಮುಂದಾಗಬೇಕು. ಟಿವಿ ಸೇರಿದಂತೆ ವಿವಿಧ ಜಾಹೀರಾತುಗಳಿಗೆ ಮಾರು ಹೋಗದೆ ಅತ್ಯಂತ ಎಚ್ಚರಿಕೆಯಿಂದ ವಸ್ತುವನ್ನು ಖರೀದಿಸಬೇಕು. ಪ್ರತಿಯೊಂದು ವಸ್ತುವಿನ ಖರೀದಿ ಕಡ್ಡಾಯವಾಗಿ ರಸೀದಿಯನ್ನು ಪಡೆಯುವುದು ಗ್ರಾಹಕರ ಹಕ್ಕಾಗಿದೆ ಎಂದು ಅವರು ಹೇಳಿದರು.ಡಿಜಿಟಲ್ ನ್ಯಾಯದ ಮೂಲಕ ದಕ್ಷ ಮತ್ತು ತ್ವರಿತ ವಿಲೇವಾರಿ ಘೋಷ ವಾಕ್ಯ ಕುರಿತಂತೆ ಉಪನ್ಯಾಸ ನೀಡಿದ ನ್ಯಾಯವಾದಿ ಎಂ ಜಿ ಮಠಪತಿ ನ್ಯಾಯವನ್ನು…

Read More

ಪರಿಸರ ವೈವಿದ್ಯತೆ ಲೇಖನ- ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕುದ.ಕ ಜಿಲ್ಲೆ-೫೭೪೧೯೮ದೂ: ೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ಆಲದ ಮರದ ವೈಜ್ಞಾನಿಕ ಹೆಸರು ‘ಫಿಕಸ್ ಬೆಂಗಾಲನೆಸಿನ್’ ಎಂದಾಗಿದ್ದು,ಇದನ್ನು ಭಾರತೀಯ ಆಲ ಮತ್ತು ಅಂಜೂರದ ಮರ, ‘ಸ್ಟಾçö್ಯಂಗ್ಲರ್ ಫಿಗ್’, ‘ವಟವೃಕ್ಷ’ ಎಂದೂ ಕರೆಯುತ್ತಾರೆ. ಈ ಮರದ ಕೊಂಬೆಗಳು ಹರಡಿಕೊಂಡು ಕೊಂಬೆಗಳು ತಾವೇ ಹೊಸ ಬೇರುಗಳನ್ನು ಬಿಟ್ಟು ಹೊಸ ಮರಗಳಾಗುತ್ತವೆ. ಇದು ವಿಶಾಲವಾಗಿ ಹರಡಿಕೊಂಡು ಬೆಳೆಯುವ ನಾಶವಾಗದ ವೃಕ್ಷ ಎನಿಸಿಕೊಂಡಿದೆ. ಈ ಮರದಲ್ಲಿ ಹೊಸ ಬೇರು ಕೊಂಬೆಗಳಿಂದ ಬೆಳೆಯುತ್ತಾ ಹರಡಿಕೊಂಡು ಹೋಗುತ್ತದೆ. ಈಗಲೂ ಆಲದ ಮರವು ಗ್ರಾಮ ಜೀವನದ ಕೇಂದ್ರವಾಗಿದ್ದು, ಕೆಲವೆಡೆ ಈಗಲೂ ಹಳ್ಳಿಯ ಪಂಚಾಯತಿಯು ಆಲದ ಮರದ ಕೆಳಗಿನ ಕಟ್ಟೆಯಲ್ಲಿ ನಡೆಯುತ್ತದೆ.ಈ ಮರವು ಒಮ್ಮೆ ನೆಲದ ಮೇಲೆ ಬೇರು ಬಿಟ್ಟರೆ, ಅದು ನೂರಾರು ವರ್ಷಗಳ ಕಾಲ ಬೆಳೆದು ಬದುಕುತ್ತದೆ. ಆಲದ ಮರ ಬೆಳೆದಂತೆ ಅನೇಕ ಬಿಳಲುಗಳನ್ನು ಹೊಂದಿ ವಿಸ್ತಾರವಾಗುತ್ತಾ, ಸುಮಾರು ಒಂದು ಎಕರೆಯಷ್ಟು ಸ್ಥಳವನ್ನೂ ಅದು ಆಕ್ರಮಿಸಿಕೊಳ್ಳಬಲ್ಲದು. ಮನುಷ್ಯನ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಇದರ ನಿರ್ದೇಶನದ ಮೇರೆಗೆ ಬರುವ ಜನೇವರಿ 2 ರಿಂದ 90 ದಿನಗಳ ಕಾಲ ನಡೆಯಲಿರುವ ಮಧ್ಯಸ್ಥಗಾರರ 2.0 ಅಭಿಯಾನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿಯ ಮಧ್ಯಸ್ಥಿಕೆ ಕೇಂದ್ರದಲ್ಲಿ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ. ಎಲ್ಲ ಸಾರ್ವಜನಿಕರು ನ್ಯಾಯಾಲಯದಲ್ಲಿ ಬಾಕಿ ಇರುವ ತಮ್ಮ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಮಧ್ಯಸ್ಥಿಕೆ ಕೇಂದ್ರದಲ್ಲಿ ಬಗೆಹರಿಸಿಕೊಂಡು ಸಮಯ ಹಾಗೂ ಹಣ ಉಳಿತಾಯದ ಸದುಪಯೋಗ ಪಡೆದುಕೊಳ್ಳಬೇಕೆಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ, ನ್ಯಾಯಾಧೀಶ ಶಶಿಧರ ಎಂ.ಗೌಡ, ಸಮಿತಿಯ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ಅಮೀತ ಘಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭಾರತ ಕಂಡ ಶ್ರೇಷ್ಠ ಪ್ರಧಾನಿ, ಅಜಾತಶತ್ರು ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನೋತ್ಸವ ಪ್ರಯುಕ್ತ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ವೃತ್ತಕ್ಕೆ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಮಾಲಾರ್ಪಣೆ ಮಾಡಿ ಗೌರವಿಸಿದರು.ಮೇಯರ್ ಎಂ.ಎಸ್.ಕರಡಿ, ಸಮಾಜ ಸೇವಕ ಶ್ರೀಮೋಯಿನ್ ಕಲಾದಗಿ ಮೊದಲಾದವರು ಈ ಕ್ಷಣಕ್ಕೆ ಸಾಕ್ಷಿಯಾದರು‌.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: 2025/2026 ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿ ಆಯ್ಕೆಶ್ರೀಯುತ ಇರ್ಫಾನ್ ಬೀಳಗಿಯವರು ಎಲೆಕ್ಟ್ರಾನಿಕ್ ಮಾಧ್ಯಮ ಹಾಗೂ ಪತ್ರಿಕೆ ಮಾಧ್ಯಮ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸುತ್ತಿರುವ ಇವರಿಗೆ ದಿನಾಂಕ 27.12.2025 ರಂದು ಶನಿವಾರ ಬೆಳಗ್ಗೆ 10:30ಕ್ಕೆ ಜಿಲ್ಲಾ ಕನ್ನಡ ಪರಿಷತ್ ಕುವೆಂಪು ಕನ್ನಡ ಭವನ ವಿದ್ಯಾನಗರ ದಾವಣಗೆರೆಯಲ್ಲಿ ನಡೆಯುವ ವಿಶ್ವ ದರ್ಶನ ಕನ್ನಡ ದಿನಪತ್ರಿಕೆ ಹಾಗೂ 6ನೇ ರಾಜ್ಯ ಭಾವೈಕ್ಯತೆ ಸಮ್ಮೇಳನದಲ್ಲಿ ಶ್ರೀಯುತರಿಗೆ ರಾಷ್ಟ್ರೀಯ ಮಾಧ್ಯಮ ಸೇವಾ ರತ್ನ ಪ್ರಶಸ್ತಿಯನ್ನು ಕೊಟ್ಟು ತಮ್ಮನ್ನು ಗೌರವಿಸುತ್ತಿದ್ದೇವೆ ಎಂದು ವಿಶ್ವ ದರ್ಶನ ಪತ್ರಿಕೆಯ ಸಂಸ್ಥೆ ಹಾಗೂ ರಾಜ್ಯ ಭಾವೈಕ್ಯತೆಯ ಕಾರ್ಯಕ್ರಮದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Read More

ರಾಜಧಾನಿಯಿಂದ ವಿಜಯಪುರಕ್ಕೆ ಹುಬ್ಬಳ್ಳಿ, ಗದಗ ಬೈಪಾಸ್ ಮೂಲಕ ಪ್ರಪ್ರಥಮ ವಿಶೇಷ ರೈಲು ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಕ್ರಿಸ್ಮಸ್ ಮತ್ತು ವರ್ಷಾಂತ್ಯದ ರಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ತಗ್ಗಿಸಲು ನೈರುತ್ಯ ರೈಲ್ವೆಯು ಇದೇ ಮೊದಲ ಬಾರಿಗೆ ಬೆಂಗಳೂರಿನಿಂದ ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮೂಲಕ ವಿಜಯಪುರಕ್ಕೆ ವಿಶೇಷ ರೈಲನ್ನು ಓಡಿಸಿರುವುದು ಸ್ವಾಗತಾರ್ಹವಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಖಾಯಂ ರೈಲು ಸೇವೆಯಾಗಿ ಪರಿವರ್ತಿಸಬೇಕು ಎಂದು ಮೂಲಸೌಕರ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಆಗ್ರಹಿಸಿದ್ದಾರೆ.ಈ ಬಗ್ಗೆ ಗುರುವಾರ ಮಾತನಾಡಿರುವ ಅವರು, ಬೆಂಗಳೂರಿನಿಂದ ವಿಜಯಪುರಕ್ಕೆ ಈ ಎರಡೂ ಬೈಪಾಸ್ ಮೂಲಕವೇ ರೈಲು ಸಾಗುವಂತೆ ಮಾಡಬೇಕು ಎಂದು ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ. ಈ‌ ನಿಟ್ಟಿನಲ್ಲಿ ನೈರುತ್ಯ ರೈಲ್ವೆ ಅಧಿಕಾರಿಗಳ ಜತೆ ಹಲವು ಸಭೆಗಳನ್ನು ನಡೆಸಲಾಗಿದೆ. ನಮ್ಮ ಪ್ರಯತ್ನಕ್ಕೆ ವಿಶೇಷ ರೈಲಿನ ರೂಪದಲ್ಲಿ ಮೊದಲ ಯಶಸ್ಸು ಸಿಕ್ಕಿರುವುದು ಸಂತಸ ತಂದಿದೆ ಎಂದಿದ್ದಾರೆ.ಬೈಪಾಸ್ ಮೂಲಕ ಚಲಿಸಿದ್ದ ಕಾರಣಕ್ಕೆ ಎರಡೂ ಕಡೆ ಎಂಜಿನ್ ಬದಲಿಸುವ ಪ್ರಮೇಯ ಬಂದಿಲ್ಲ. ಬಾಗಲಕೋಟೆ,…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಆಲಮೇಲ ಮಕ್ಕಳ ಸಾಹಿತ್ಯ ಸಂಗಮದ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ವಿಶ್ವೇಶ್ವರ ಬಾಲಭಾರತಿ ಪ್ರಾಥಮಿಕ ಶಲೆಯ ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ ರವನ್ನು ಅವಿರೋಧವಾಗಿ ಆಯ್ಕೆ ಮಾಡಿ ನೂತನ ಪದಾಧಿಕಾರಿಗಳಿಗೆ ೧೨ನೇ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಪ್ರಮಾಣ ವಚನ ಬೋಧಿಸಲಾಯಿತು.ಆಲಮೇಲ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳಲ್ಲಿ ಗೌರವಾಧ್ಯಕ್ಷರಾಗಿಸಿಂದಗಿಯ ಶಾಸಕ ಅಶೋಕ ಮನಗೂಳಿ, ಕಾರ್ಯಾಧ್ಯಕ್ಷರಾಗಿ ಅಶೋಕಗೌಡ ಕೋಳಾರಿ, ಉಪಾಧ್ಯಕ್ಷರಾಗಿ ರಮೇಶ ಗಂಗನಳ್ಳಿ, ಪ್ರಧಾನ ಕಾರ್ಯದರ್ಶಿಗಳಾಗಿ ಬಸವರಾಜ ಭೂತಿ, ಕೋಶಾಧ್ಯಕ್ಷರಾಗಿ ಕುದರತ್ ಅಲಿ, ಭೂಸನೂರ, ಸಹ ಕಾರ್ಯದರ್ಶಿಗಳಾಗಿ ಅನಂತನಾಗ ಪಾಟೀಲ, ಮಹಾಂತಗೌಡ ಹಳೇಮನಿ, ಸಂಘಟನಾ ಕಾರ್ಯದರ್ಶಿಗಳಾಗಿ ಅಪ್ಪು ಪಾರ್ಶವನಾಥ ಶೆಟ್ಟಿ , ರಾಜೀವ ಶಂಕರ ಕಲಬುರಗಿ, ಮಾಧ್ಯಮ ಪ್ರತಿನಿಧಿಗಳಾಗಿ ಅಬ್ದುಲ್ ಗನಿ ದೇವರಮನಿ ಮಹಿಳಾ ಪ್ರತಿನಿಧಿಗಳು ಗೀತಾ.ಎಸ್,ಲಕ್ಷ್ಮೀಬಾಯಿ ಕುಂಬಾರ, ಸದಸ್ಯರಾಗಿ, ಯಲ್ಲಪ್ಪ ನಾಯ್ಕೋಡಿ, ಮುಕೇಶ್ ಲೋಣಿ, ಸಂತೋಷ ಚೆಂಗಟ್ಟಿರವರನ್ನು ತಾಲ್ಲೂಕು ಅಧ್ಯಕ್ಷರು ಆಯ್ಕೆ ಮಾಡಿರುತ್ತಾರೆ.ನೂತನ ಪದಾಧಿಕಾರಿಗಳನ್ನು ಗೌರವಾಧ್ಯಕ್ಷ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹ.ಮ‌.ಪೂಜಾರ , ಜಿಲ್ಲಾ ಅಧ್ಯಕ್ಷರು ಪ್ರೊಫೆಸರ್ ಎ.ಆರ್.ಹೆಗ್ಗನದೊಡ್ಡಿ…

Read More