ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಆಲಮೇಲ ಮಕ್ಕಳ ಸಾಹಿತ್ಯ ಸಂಗಮದ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ವಿಶ್ವೇಶ್ವರ ಬಾಲಭಾರತಿ ಪ್ರಾಥಮಿಕ ಶಲೆಯ ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ ರವನ್ನು ಅವಿರೋಧವಾಗಿ ಆಯ್ಕೆ ಮಾಡಿ ನೂತನ ಪದಾಧಿಕಾರಿಗಳಿಗೆ ೧೨ನೇ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಪ್ರಮಾಣ ವಚನ ಬೋಧಿಸಲಾಯಿತು.
ಆಲಮೇಲ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳಲ್ಲಿ ಗೌರವಾಧ್ಯಕ್ಷರಾಗಿ
ಸಿಂದಗಿಯ ಶಾಸಕ ಅಶೋಕ ಮನಗೂಳಿ, ಕಾರ್ಯಾಧ್ಯಕ್ಷರಾಗಿ ಅಶೋಕಗೌಡ ಕೋಳಾರಿ, ಉಪಾಧ್ಯಕ್ಷರಾಗಿ ರಮೇಶ ಗಂಗನಳ್ಳಿ, ಪ್ರಧಾನ ಕಾರ್ಯದರ್ಶಿಗಳಾಗಿ ಬಸವರಾಜ ಭೂತಿ, ಕೋಶಾಧ್ಯಕ್ಷರಾಗಿ ಕುದರತ್ ಅಲಿ, ಭೂಸನೂರ, ಸಹ ಕಾರ್ಯದರ್ಶಿಗಳಾಗಿ ಅನಂತನಾಗ ಪಾಟೀಲ, ಮಹಾಂತಗೌಡ ಹಳೇಮನಿ, ಸಂಘಟನಾ ಕಾರ್ಯದರ್ಶಿಗಳಾಗಿ ಅಪ್ಪು ಪಾರ್ಶವನಾಥ ಶೆಟ್ಟಿ , ರಾಜೀವ ಶಂಕರ ಕಲಬುರಗಿ, ಮಾಧ್ಯಮ ಪ್ರತಿನಿಧಿಗಳಾಗಿ ಅಬ್ದುಲ್ ಗನಿ ದೇವರಮನಿ ಮಹಿಳಾ ಪ್ರತಿನಿಧಿಗಳು ಗೀತಾ.ಎಸ್,ಲಕ್ಷ್ಮೀಬಾಯಿ ಕುಂಬಾರ, ಸದಸ್ಯರಾಗಿ, ಯಲ್ಲಪ್ಪ ನಾಯ್ಕೋಡಿ, ಮುಕೇಶ್ ಲೋಣಿ, ಸಂತೋಷ ಚೆಂಗಟ್ಟಿ
ರವರನ್ನು ತಾಲ್ಲೂಕು ಅಧ್ಯಕ್ಷರು ಆಯ್ಕೆ ಮಾಡಿರುತ್ತಾರೆ.
ನೂತನ ಪದಾಧಿಕಾರಿಗಳನ್ನು ಗೌರವಾಧ್ಯಕ್ಷ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹ.ಮ.ಪೂಜಾರ , ಜಿಲ್ಲಾ ಅಧ್ಯಕ್ಷರು ಪ್ರೊಫೆಸರ್ ಎ.ಆರ್.ಹೆಗ್ಗನದೊಡ್ಡಿ ಹಾಗೂ ಕಾರ್ಯದರ್ಶಿ ಎಸ್.ಎಸ್.ಸತಿಹಾಳ ರವರ ಆದೇಶದ ಮೇರೆಗೆ ಆಯ್ಕೆ ಮಾಡಲಾಯಿತು

