ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಜಯಪುರದ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದಲ್ಲಿ ಪ್ರಾಜೆಕ್ಟ್ ಫೆಲೋ ತಾತ್ಕಾಲಿಕ ಹುದ್ದೆಗೆ ಇದೇ ದಿ.೨೯ ರಂದು ಬೆಳಿಗ್ಗೆ ೧೦.೩೦ ಕ್ಕೆ ಪ್ರಾದೇಶಿಕ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕರ ಕಾರ್ಯಾಲಯದಲ್ಲಿ ಸಂದರ್ಶನ ನಡೆಯಲಿದೆ.
ಸ್ಕೌಟಿಂಗ್ ಆ್ಯಂಡ್ ಡ್ಯಾಕ್ಯೂಮೆಂಟೇಷನ್ ಆಫ್ ಗ್ರಾಸ್ ರೂಟ್ಸ್ ಇನ್ನೋವೇಷನ್ ಆ್ಯಂಡ್ ಔಟ್‌ಸ್ಟ್ಯಾಂಡಿಂಗ್ ಟ್ರೆಡಿಷನಲ್ ನಾಲೇಜ್ ಆ್ಯಂಡ್ ಪ್ರಾಕ್ಟೀಸ್ ಆಫ್ ಅಗ್ರಿಕಲ್ಚರ್ ಇನ್ ಕರ್ನಾಟಕ ಸ್ಟೇಟ್ ಯೋಜನೆಯಡಿಯಲ್ಲಿ ಈ ಹುದ್ದೆ ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಒಂದು ವರ್ಷದ ಅವಧಿ ಅಥವಾ ಈ ಯೋಜನೆ ಪೂರ್ಣಗೊಳ್ಳುವವರೆಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಕೃಷಿಯಲ್ಲಿ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ಅಗತ್ಯ ಮೂಲ ದಾಖಲಾತಿ, ಧೃಡೀಕೃತ ಪ್ರತಿ, ಭಾವಚಿತ್ರಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ ಎಂದು ಸಹ ಸಂಶೋಧನಾ ನಿರ್ದೇಶಕರು ತಿಳಿಸಿದ್ದಾರೆ.
