Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಯಾವಾಗ ಚುನಾವಣೆ ನಡೆದರೂ ಬಿಜೆಪಿಗೆ ಬಹುಮತ

ಡಿ.೨೯ರಂದು ವಿಶ್ವಮಾನವ ದಿನಾಚಾರಣೆ

೨ ಹೊಸ ಸಿಟಿ ಬಸ್‌ಗಳಿಗೆ ಚಾಲನೆ ನೀಡಿದ ಶಾಸಕ ಮನಗೂಳಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಹಳ್ಳಿಯಿಂದ ದಿಲ್ಲಿ ದರ್ಬಾರಕ್ಕೆ ಹೋದ ಬಸಪ್ಪ ದಾನಪ್ಪ ಜತ್ತಿ
ವಿಶೇಷ ಲೇಖನ

ಹಳ್ಳಿಯಿಂದ ದಿಲ್ಲಿ ದರ್ಬಾರಕ್ಕೆ ಹೋದ ಬಸಪ್ಪ ದಾನಪ್ಪ ಜತ್ತಿ

By Updated:No Comments5 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಡಾ ಶಶಿಕಾಂತ ರುದ್ರಪ್ಪ ಪಟ್ಟಣ
ರಾಮದುರ್ಗ – ಪುಣೆ

ಉದಯರಶ್ಮಿ ದಿನಪತ್ರಿಕೆ

ಒಬ್ಬ ಹಳ್ಳಿಯ ಸಾಧಾರಣ ಲಿಂಗಾಯತ ವ್ಯಾಪಾರಸ್ಥ ಮನೆತನದಲ್ಲಿ ಹುಟ್ಟಿ ಭಾರತದ ಪರಮೋಚ್ಚ ಅಧ್ಯಕ್ಷ ಸ್ಥಾನಕ್ಕೆ ಹೋದ ಅಪ್ರತಿಮ ರಾಜಕೀಯ ಮುತ್ಸದ್ಧಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ಬಸಪ್ಪ ದಾನಪ್ಪ ಜತ್ತಿ ಅವರ ಬದುಕು ಒಂದು ಸಂಘರ್ಷವೇ ಆಗಿದೆ.
ಒಂದು ಅವಿಸ್ಮರಣೀಯ ಪ್ರಸಂಗ
ಸಾವಳಗಿ ಇವತ್ತಿನ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಒಂದು ಪುಟ್ಟ ಗ್ರಾಮ. ಆ ಊರಿನಲ್ಲಿ ದಾನಪ್ಪ ಎಂಬ ವ್ಯಾಪಾರಿ ಮನೆತನದ ಮಧ್ಯಮ ವರ್ಗದ ವ್ಯಕ್ತಿ ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳ ಪರಮ ಶಿಷ್ಯರಾಗಿದ್ದರು. ಒಂದು ದಿನ ದಾನಪ್ಪನವರು ತಮ್ಮ ಕಿಡಿಗೇಡಿ ಬಾಲಕ ಬಸಪ್ಪನನ್ನು ಕರೆದು ಕೊಂಡು ಅಥಣಿಯ ಶ್ರೀ ಗಚ್ಚಿನ ಮಠಕ್ಕೆ ಪರಮ ಪೂಜ್ಯರ ದರ್ಶನಕ್ಕೆ ಹೋದರು.
ಪರಮ ಪೂಜ್ಯ ಶ್ರೀ ಅಥಣಿಯ ಮುರುಗೇಂದ್ರ ಶಿವಯೋಗಿಗಳು ಲಿಂಗ ಪೂಜೆ ಮುಗಿಸಿ ಮಠದ ಆವರಣದಲ್ಲಿ ಭಕ್ತರ ದರ್ಶನ ನೀಡಲು ಬಂದು ಕುಳಿತು ಕೊಳ್ಳುತ್ತಾರೆ. ಆಗ ಮಠದಲ್ಲಿ ಆಡುತ್ತಿದ್ದ ಬಾಲಕ ಓಡಿ ಹೋಗಿ ಪರಮ ಪೂಜ್ಯ ಶ್ರೀ ಅಥಣಿಯ ಮುರುಗೇಂದ್ರ ಶಿವಯೋಗಿಗಳ ತೊಡೆಯ ಮೇಲೆ ಕುಳಿತು ಕೊಳ್ಳುತ್ತಾನೆ. ಮಗನ ಶಿಕ್ಷಣ ಮತ್ತು ವಿದ್ಯೆಗಾಗಿ ಪೂಜ್ಯ ಶ್ರೀ ಶಿವಯೋಗಿಗಳ ಆಶೀರ್ವಾದಕ್ಕಾಗಿ ಬಂದ ಶ್ರೀ ದಾನಪ್ಪನಿಗೆ ಒಂದು ರೀತಿಯ ಮುಜುಗರ ಉಂಟಾಗಿತ್ತು. ಅವಸರದಲ್ಲಿ ಓಡಿ ಹೋಗಿ ಶ್ರೀಗಳ ತೊಡೆಯ ಮೇಲೆ ಕುಳಿತ ಬಾಲಕ ಬಸಪ್ಪನನ್ನು ಕರೆದು ಕೊಳ್ಳಲು ಹೋದಾಗ
ಪರಮ ಪೂಜ್ಯ ಶ್ರೀ ಅಥಣಿಯ ಮುರುಗೇಂದ್ರ ಶಿವಯೋಗಿಗಳು ದಾನಪ್ಪ ಇರಲಿ ಬಿಡು ಈ ಹುಡುಗ ಮುಂದ ದಿಲ್ಲಿ ದರ್ಬಾರದಾಗ ಮೆರೆತನ ಎಂದು ಆಶೀರ್ವಾದ ಮಾಡಿದರಂತೆ. ಬಾಲ್ಯದಲ್ಲಿಯೇ ಇಂತಹ ಮಹಾತ್ಮರ ಕೃಪೆಗೆ ಒಳಗಾದ ಬಾಲಕ ಬಸಪ್ಪ ದಾನಪ್ಪ ಜತ್ತಿ ಎಂಬ ಹಳ್ಳಿಯ ಹುಡುಗ ಸಾವಳಗಿ ಗ್ರಾಮ ಪಂಚಾಯತಿ ಸದಸ್ಯರಿಂದ ಹಿಡಿದು ಜಮಖಂಡಿ ನಗರ ಸಭೆ ಅಧ್ಯಕ್ಷ ನಂತರ ಮುಂಬೈ ಸರಕಾರದಲ್ಲಿ ಬೇರೆ ಬೇರೆ ಖಾತೆ ನಿರ್ವಹಣೆ ಉಪಮುಖ್ಯಮಂತ್ರಿ ಸಂಸದೀಯ ಸಚಿವ ಕಾರ್ಯದರ್ಶಿ ರಾಜ್ಯ ವಿಂಗಡಣೆ ಆದ ಮೇಲೆ ಕರ್ನಾಟಕ ರಾಜ್ಯ ಸರ್ಕಾರದ ಹಲವು ಖಾತೆ ಮತ್ತು ಮುಖ್ಯಮಂತ್ರಿ ಎರಡು ರಾಜ್ಯಗಳ ಗವರ್ನರ್ ಕೊನೆಗೆ ರಾಜ್ಯ ಸಭಾ ಸದಸ್ಯ ಉಪರಾಷ್ಟ್ರಪತಿ ಹಂಗಾಮಿ ರಾಷ್ಟ್ರಪತಿ ಆಗಿ ಉತ್ತರ ಕರ್ನಾಟಕದ ಅಪರೂಪದ ಪ್ರಬುದ್ಧ ಪ್ರಾಮಾಣಿಕ ರಾಜಕೀಯ ಮುತ್ಸದ್ಧಿ ಎಂದು ಹೆಸರು ವಾಸಿಯಾದರು.


ಡಾ ಬಸಪ್ಪ ದಾನಪ್ಪ ಜತ್ತಿ
( ಬಿ.ಡಿ.ಜತ್ತಿ) (ಸೆಪ್ಟೆಂಬರ್ 10,1912 – ಜೂನ್ 7, 2002) – ಭಾರತದ ಮಾಜಿ ಉಪರಾಷ್ಟ್ರಪತಿಗಳಲ್ಲೊಬ್ಬರು ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಲ್ಲೊಬ್ಬರು. ಸ್ವಲ್ಪ ದಿನಗಳ ಕಾಲ ಹಂಗಾಮಿ ರಾಷ್ಟ್ರಪತಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. ಕರ್ನಾಟಕದ ಇವತ್ತಿನ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮ ಪಂಚಾಯತಿಯಿಂದ ದೇಶದ ಹಂಗಾಮಿ ರಾಷ್ಟ್ರಪತಿ ಹುದ್ದೆಯವರೆಗೆ ತಲುಪಿದ ಏಕೈಕ ರಾಜಕಾರಣಿ ಬಿ.ಡಿ.ಜತ್ತಿ.
ವಿಜಯಪುರ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಹತ್ತಿರದ ಕುರಗೊಡ(ತಾಯಿಯ ಊರು) ಎಂಬ ಚಿಕ್ಕ ಗ್ರಾಮದಲ್ಲಿ 1912ರ ಸೆಪ್ಟಂಬರ್ 10ರಂದು ಜನಿಸಿದರು. ತಂದೆ ದಾನಪ್ಪ ಜತ್ತಿ, ತಾಯಿ ಭಾಗವ್ವ. ದಾನಪ್ಪ ಜತ್ತಿಯವರು ಒಬ್ಬ ವ್ಯಾಪಾರಿ, ಅವರ ಮೂವರು ಗಂಡುಮಕ್ಕಳಲ್ಲಿ ಬಸಪ್ಪನವರು ಒಬ್ಬರು.ಗ್ರಾಮವು ಅಂದು ಮುಂಬೈ ಪ್ರಾಂತದ ಜಮಖಂಡಿ ಸಂಸ್ಥಾನಕ್ಕೆ ಸೇರಿತ್ತು.
ತಂದೆ ದಾನಪ್ಪ, ತಾಯಿ ಭಾಗವ್ವ- ಇಬ್ಬರೂ ಶ್ರಮ ಜೀವಿಗಳು, ದೈವ ಭಕ್ತರು, ಗುರು ಹಿರಿಯರಲ್ಲಿ ಅಪಾರ ಗೌರವುಳ್ಳವರು. ಇವರ ಸದ್ಗುಣಗಳು ಬಸಪ್ಪನವರಿಗೆ ಬಳುವಳಿಕೆಯಾಗಿ ಬಂದವು.
ವಿದ್ಯಾಭ್ಯಾಸ
ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅಭ್ಯಾಸದ ಅನಂತರ ಕೊಲ್ಲಾಪುರದ ರಾಜಾರಾಂ ಕಾಲೇಜಿನಲ್ಲಿ ವ್ಯಾಸಂಗಮಾಡಿ ಕಲಾ ಪದವಿಯನ್ನು ಮುಂದೆ ಲಾ ಕಾಲೇಜಿನಲ್ಲಿ ಎಲ್‍ಎಲ್.ಬಿ. ಪದವಿಯನ್ನೂ ಗಳಿಸಿ (1940) ಜಮಖಂಡಿಯಲ್ಲಿ ವಕೀಲರಾಗಿ ಜೀವನ ಆರಂಭಿಸಿದರು (1940-45). 1948ರಲ್ಲಿ ಜಮಖಂಡಿಯು ಮುಂಬಯಿಗೆ ಸೇರಿದ ನಂತರ ಮತ್ತೆ ಕಾನೂನು ವೃತ್ತಿಗೆ ವಾಪಸಾದರು
ವೃತ್ತಿಯಲ್ಲಿ ವಕೀಲರು
1940 ರಲ್ಲಿ ನ್ಯಾಯವಾದಿಯಾಗಿ ಬದುಕು ಆರಂಭಿಸಿದ ಅವರು ರಾಜಕಾರಣಿಯಾಗಿ ಜೀವನವನ್ನು ಸಮಾಜ ಸೇವೆಗೆ ಅರ್ಪಿಸಿಕೊಂಡರು. ಬಸಪ್ಪನವರು 10 ವರ್ಷದ ಬಾಲಕನಾಗಿದ್ದಾಗಲೇ 5 ವರ್ಷದ ಬಾಲಕಿ ಸಂಗವ್ವಳೊಂದಿಗೆ ವಿವಾಹವಾಯಿತು.
ತಂದೆಯ ಮರಣದ ನಂತರ ಕುಟುಂಬ ನಿರ್ವಹಣೆಯ ಹೊಣೆ ತಮ್ಮ ಮೇಲೆ ಬಿದ್ದುದರಿಂದ, ಬಸಪ್ಪನವರು ಕಾನೂನು ಶಿಕ್ಷಣವನ್ನು ಕೈಬಿಟ್ಟು ಸ್ವಗ್ರಾಮಕ್ಕೆ ಮರಳಿದರು. ಕುಟುಂಬದ ಹೊಣೆಯ ಜೊತೆಗೆ ತಮ್ಮ ಹಳ್ಳಿಯ ಸಾರ್ವಜನಿಕ ಸಮಸ್ಯೆಗಳನ್ನು ಬಿಡಿಸುವ ಹೊಣೆಯನ್ನೂ ವಹಿಸಿಕೊಂಡರು. ಗ್ರಾಮ ಪಂಚಾಯಿತಿ ಸ್ಥಾಪಿಸಿ, ಅದರ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಮೂರೂವರೆ ವರ್ಷ ಅದನ್ನು ಮುನ್ನಡೆಸಿದರು. ಇದು ಅವರ ಸಮಾಜ ಸೇವಾ ಕಾರ್ಯದ ಮೊದಲ ಹಂತ. ಗಾಂಧೀಜಿಯವರ ಆದರ್ಶಗಳಿಂದ ತುಂಬ ಪ್ರಭಾವಿತರಾಗಿದ್ದ ಬಸಪ್ಪನವರು ರಾಜಕೀಯ ಬೆಳವಣಿಗೆಗಳ ಬಗ್ಗೆ ಸದಾ ಜಾಗರೂಕರಾಗಿರುತ್ತಿದ್ದರು.
ಸುಧೀರ್ಘ ರಾಜಕೀಯ ಅನುಭವ
ಮುಂಬಯಿ ರಾಜ್ಯ ಶಾಸನ ಸಭೆಗೆ ಅವರನ್ನು ನಾಮ ನಿರ್ದೇಶನ ಮಾಡಲಾಗಿತ್ತು. ಒಂದೇ ವಾರದಲ್ಲಿ ಅವರನ್ನು ಸಂಸದೀಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು.
1952ರ ಸಾರ್ವತ್ರಿಕ ಚುನಾವಣೆಯಾದ ನಂತರ ಜತ್ತಿಯವರನ್ನು ಮುಂಬಯಿ ಸರ್ಕಾರದಲ್ಲಿ ಆರೋಗ್ಯ ಮತ್ತು ಕಾರ್ಮಿಕ ಮಂತ್ರಿಯನ್ನಾಗಿ ನೇಮಿಸಲಾಯಿತು. ಭಾಷಾವಾರು ಪ್ರಾಂತ್ಯಗಳು ರಚನೆಯಾದ ನಂತರ ಜತ್ತಿಯವರು ಮೈಸೂರಿ ಶಾಸನಸಭೆಯ ಅಧ್ಯಕ್ಷರೂ ಮತ್ತು ಭೂ ಸುಧಾರಣಾ ಸಮಿತಿಯ ಅಧ್ಯಕ್ಷರೂ ಆಗಿದ್ದರು.
3ನೇ ಸಾರ್ವತ್ರಿಕ ಚುನಾವಣೆಯಲ್ಲಿ ಜಮಖಂಡಿ ಕ್ಷೇತ್ರದಿಂದ ಮರು ಚುನಾಯಿತರಾದರು.
1962ರಲ್ಲಿ ನಿಜಲಿಂಗಪ್ಪನವರ ಸಚಿವ ಸಂಪುಟದಲ್ಲಿ ಹಣಕಾಸು ಮಂತ್ರಿಯಾದರು. ಅದೇ ಕ್ಷೇತ್ರದಿಂದ ನಾಲ್ಕನೆಯ ಶಾಸನಸಭೆಗೆ ಮರು ಚುನಾವಣೆಯಲ್ಲಿ ಆಯ್ಕೆಯಾದರು ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಂತ್ರಿಯಾದರು. ನಂತರ ಅವರು ರಾಷ್ಟ್ರ ರಾಜಕಾರಣಕ್ಕೆ ತೊಡಗಿಸಿಕೊಂಡು 1968ರಲ್ಲಿ ಪಾಂಡಿಚೆರಿಯ ಲೆಫ್ಟಿನೆಂಟ್‌ ಗವರ್ನರ್‌ ಆಗಿ ನೇಮಕಗೊಂಡರು.1973ರಲ್ಲಿ ಒರಿಸ್ಸಾದ ರಾಜ್ಯಪಾಲರಾಗಿ, ನಂತರ 1974ರಲ್ಲಿ ಭಾರತದ ಉಪರಾಷ್ಟ್ರಾಧ್ಯಕ್ಷರಾಗಿ 1980ರ ವರೆಗೆ ಸೇವೆ ಸಲ್ಲಿಸಿದರು.
ರಾಜ್ಯದಲ್ಲಿ ಸಚಿವರಾಗಿ, ನಂತರ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿ, ಪಾಂಡಿಚೇರಿಯಲ್ಲಿ ಲೆ.ಗೌವರನರ್ ಆಗಿ ಸೇವೆ ಸಲ್ಲಿಸಿ, ಮುಂದೆ ಉಪರಾಷ್ಟ್ರಪತಿ ಮತ್ತು ಫಕ್ರುದ್ದಿನ್ ಅಹ್ಮದ್ ಅವರ ಅಕಾಲ ಮೃತ್ಯುವಿನ ನಂತರ ಕೆಲಕಾಲ ಹಂಗಾಮಿ ರಾಷ್ಟ್ರಪತಿಯಾಗಿ ಇವರು ಸೇವೆ ಸಲ್ಲಿಸಿದರು. ಉತ್ತಮ ಆಡಳಿತಗಾರ, ಸರಳ ಜೀವಿ ಮತ್ತು ರಾಜಕೀಯ “ಜಟ್ಟಿ”ಎಂದು ಜತ್ತಿ ಹೆಸರು ಗಳಿಸಿದ್ದಾರೆ.
ಜಮಖಂಡಿಯ ಪೌರಸಭೆಯ ಸದಸ್ಯರಾಗಿ ಎರಡುಬಾರಿ ಆಯ್ಕೆ ಹೊಂದಿದರಲ್ಲದೆ ಅದರ ಅಧ್ಯಕ್ಷರಾಗಿಯೂ ಇದ್ದರು (1940-45). ಜಮಖಂಡಿ ಸಂಸ್ಥಾನದ ಪ್ರಜಾ ಪರಿಷತ್ತಿನ ಪ್ರಮುಖ ಕಾರ್ಯಕರ್ತರಲ್ಲಿ ಇವರೂ ಒಬ್ಬರಾಗಿದ್ದರು. ಜಮಖಂಡಿಯಲ್ಲಿ ಪ್ರಜಾಪ್ರತಿನಿಧಿ ಸರ್ಕಾರ ಸ್ಥಾಪನೆಯಾದಾಗ ಮಂತ್ರಿಮಂಡಳ ರಚಿಸುವ ಹೊಣೆ ಇವರದಾಯಿತು. 1947ರಲ್ಲಿ ಭಾರತ ಸ್ವತಂತ್ರವಾದಾಗ ಸಂಸ್ಥಾನಗಳ ಭವಿಷ್ಯದ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ದಕ್ಷಿಣ ಸಂಸ್ಥಾನಗಳ ಒಕ್ಕೂಟರಚನೆಯ ಪ್ರಯತ್ನಗಳು ನಡೆದಿದ್ದುವು. ಜತ್ತಿಯವರು ಜಮಖಂಡಿ ಸಂಸ್ಥಾನಿಕರ ಮನವೊಲಿಸಿ ಭಾರತ ಒಕ್ಕೂಟದಲ್ಲಿ ಆ ಸಂಸ್ಥಾನ ವಿಲೀನಗೊಳ್ಳುವಂತೆ ಮಾಡಲು ಶ್ರಮಿಸಿದರು. ವಿಲೀನಗೊಂಡ ಪ್ರದೇಶಗಳ ಪ್ರನಿನಿಧಿಯಾಗಿ ಜತ್ತಿಯವರು ಮುಂಬಯಿ ವಿಧಾನಸಭೆಗೆ ನಾಮಕರಣ ಹೊಂದಿದರು ಮತ್ತು ಅಲ್ಲಿಯ ಮುಖ್ಯಮಂತ್ರಿ ಬಿ.ಜಿ ಖೇರರ ಸಂಸದೀಯ ಕಾರ್ಯದರ್ಶಿಯಾಗಿ ನೇಮಕಗೊಂಡರು (1948). 1952ರ ಚುನಾವಣೆಯಲ್ಲಿ ಮುಂಬಯಿ ವಿಧಾನಸಭೆಗೆ ಚುನಾಯಿತರಾಗಿ ಆ ರಾಜ್ಯದ ಆರೋಗ್ಯ ಮತ್ತು ಕಾರ್ಮಿಕ ಉಪಮಂತ್ರಿಯಾದರು.
1956ರಲ್ಲಿ ರಾಜ್ಯ ಪುನರ್ರಚನೆಯಾದ ಅನಂತರ ಜತ್ತಿಯವರು ನೂತನ ಮೈಸೂರು ರಾಜ್ಯದ (ಈಗ ಕರ್ನಾಟಕ) ಭೂಸುಧಾರಣಾ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡರು.
ರಾಜ್ಯದ ಭೂಸುಧಾರಣಾ ಕಾಯಿದೆಗಳಿಗೆ ಜತ್ತಿ ಸಮಿತಿಯ ವರದಿ ತಳಹದಿಯಾಯಿತು.
1957 ಮತ್ತು 1967ರ ಚುನಾವಣೆಗಳಲ್ಲಿ ಅವರು ರಾಜ್ಯವಿಧಾನಸಭೆಗೆ ಆಯ್ಕೆಯಾದರು.
ಮುಖ್ಯಮಂತ್ರಿಯಾಗಿ ಆಯ್ಕೆ
1958ರ ಜತ್ತಿಯವರು ಮೈಸೂರಿನ ವಿಧಾನ ಮಂಡಲ ಕಾಂಗ್ರೆಸ್ ಪಕ್ಷದ ನಾಯಕರಾಗಿ ಆಯ್ಕೆಯಾಗಿ ರಾಜ್ಯದ ಮುಖ್ಯಮಂತ್ರಿಯಾದರು. ಅನಿರೀಕ್ಷಿತವಾಗಿ ಬಂದ ಹೊಣೆಯನ್ನು ಜತ್ತಿಯವರು ದಕ್ಷತೆಯಿಂದ ನಿರ್ವಹಿಸಿದರು.
1962ರ ಚುನಾವಣೆಗಳ ಅನಂತರ ರಚಿತವಾದ ಶ್ರೀ ಎಸ್ ನಿಜಲಿಂಗಪ್ಪನವರ ಮಂತ್ರಿಮಂಡಲದಲ್ಲಿ ಶ್ರೀ ಜತ್ತಿಯವರು ಹಣಕಾಸಿನ ಮಂತ್ರಿಯಾದರು-1965ರ ವರೆಗೆ ಆ ಹುದ್ದೆಯಲ್ಲಿದ್ದರು.
ಅನಂತರ 1968ರ ವರೆಗೆ ಅವರು ಆಹಾರ ಮಂತ್ರಿಯಾಗಿದ್ದರು.
ಒರಿಸ್ಸಾದಲ್ಲಿ
1973-74ರಲ್ಲಿ ಆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂದಾಗ ಜತ್ತಿಯವರು ಅದರ ಆಡಳಿತವನ್ನು ಯಶಸ್ವಿಯಾಗಿ ನಿರ್ವಹಿಸಿದರು.
ಉಪರಾಷ್ಟ್ರಪತಿ ಮತ್ತು ಹಂಗಾಮಿ ರಾಷ್ಟ್ರಪತಿ
1977 ಫೆಬ್ರವರಿ 11ರಿಂದ ಜುಲೈ 25 1977ರ ವರೆಗೂ ಭಾರತದ ಹಂಗಾಮಿ ರಾಷ್ಟ್ರಪತಿಗಳಾಗಿದ್ದರು ಹಾಗೂ 5ನೇ ಉಪ ರಾಷ್ಟ್ರಪತಿಗಳಾಗಿದ್ದರು.
ತುರ್ತು ಪರಿಸ್ಥಿತಿಯ ನಂತರ ನಡೆದ ಚುನಾವಣೆಯಲ್ಲಿ ಜನತಾ ಪಕ್ಷ ಬಹುಮತದಿಂದ ಜಯಗೊಳಿಸಿದರೂ, ಮುರಾರ್ಜಿ ದೇಸಾಯಿಯವರನ್ನು ಪ್ರಧಾನಿ ಮಂತ್ರಿ ಹುದ್ದೆ ಸ್ವೀಕರಿಸಲು ಆಹ್ವಾನಿಸಲು, ಆಗ ಹಂಗಾಮಿ ರಾಷ್ಟ್ರಪತಿಗಳಾಗಿದ್ದ ಜತ್ತಿಯವರು ತಡ ಮಾಡಿದರೆಂದು ಅವರ ವಿರುದ್ಧ ದೆಹಲಿಯಲ್ಲಿ ಭಾರಿ ಪ್ರತಿಭಟನೆ ನೆಡೆದಿತ್ತು. ಇದರಿಂದಾಗಿ, ಶ್ರೀ ಎಸ್ ನಿಜಲಿಂಗಪ್ಪನವರು ರಾಷ್ಟ್ರಪತಿಯಾಗಲು ನಿರಾಕರಿಸಿದ ನಂತರ ಬಹುದಿನಗಳ ನಂತರ ಜತ್ತಿಯವರಿಗೆ ದೊರೆತಿದ್ದ ರಾಷ್ಟ್ರಪತಿ ಹುದ್ದೆ ಅವಕಾಶವು ಕೊನೆಗೆ ನೀಲಂ ಸಂಜೀವ ರೆಡ್ಡಿಯವರ ಪಾಲಾಯಿತೆಂದು ಆಗ ರಾಜಕೀಯ ಚರ್ಚೆ ನೆಡೆದಿತ್ತು. ಅದರ ಸತ್ಯಾಸತ್ಯತೆಗಳೇನೇ ಇರಲಿ, ಕನ್ನಡಿಗರಿಗೆ ರಾಷ್ಟ್ರಪತಿಯಾಗುವ ಅವಕಾಶ ದೂರವಾಗಿದ್ದು ಮಾತ್ರ ಸತ್ಯವಾಗಿದೆ.
ಅಧ್ಯಾತ್ಮ ಒಲವು
ಬಸವೇಶ್ವರರ ಉಪದೇಶ ಮತ್ತು ವಿಚಾರಗಳ ಪ್ರಚಾರದ ಉದ್ದೇಶದಿಂದ ರಚಿತವಾಗಿರುವ ಬಸವ ಸಮಿತಿಗೆ ಜತ್ತಿಯವರು ಪ್ರಾರಂಭದಿಂದಲೂ ಅಧ್ಯಕ್ಷರಾಗಿದ್ದಾರೆ. ಸಣ್ಣ ವಯಸ್ಸಿನಿಂದಲೂ ಅವರು ಆಧ್ಯಾತ್ಮದಲ್ಲಿ ಒಲವು ಬೆಳೆಸಿಕೊಂಡವರು.
ಬಸವ ಸಮಿತಿಯು 1964 ರಲ್ಲಿ ಭಾರತದ ಮಾಜಿ ರಾಷ್ಟ್ರಪತಿ ಡಾ. ಬಿ.ಡಿ. ಜತ್ತಿ ಅವರಿಂದ ಸ್ಥಾಪನೆಗೊಂಡು, 12 ನೇ ಶತಮಾನದ ಬಸವಣ್ಣವರ ಹಾಗು ಅವರ ಸಮಕಾಲೀನ ಶರಣರ ತತ್ವ ಸಂದೇಶಗಳನ್ನು ಪ್ರಪಂಚದಾದ್ಯಂತ ಸಾರುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಭಾರತದ ಮಾಜಿ ರಾಷ್ಟ್ರಪತಿ ಡಾ|| ಬಸಪ್ಪ ದಾನಪ್ಪ ಜತ್ತಿ ಅವರು ಬಸವಣ್ಣವರ ಹಾಗೂ ಶರಣರ ತತ್ವಗಳನ್ನು, ಶರಣ ಸಂಸ್ಕೃತಿಯನ್ನು ಶರಣರ ಸಮಾನತೆಯ ತತ್ವವನ್ನು ಸಾರುವ ಉದ್ದೇಶದಿಂದ 1964 ರಾಲಿ ಬಸವ ಸಮಿತಿಯನ್ನು ಸ್ಥಾಪಿಸಿದರು. ಅಂದಿನಿಂದ ಇಂದಿನವರೆಗೆ ಪಕ್ಷ, ಜಾತಿ ಭೇದವಿಲ್ಲದೆ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತ ಬಸವ ಸಂದೇಶಗಳನ್ನು ಹಾಗೂ ಶರಣರ ತತ್ವಗಳನ್ನು ಪ್ರಚಾರ ಮಾಡುತ್ತಿದೆ.
ಬಸವ ಸಮಿತಿಯು ಶರಣರ ಸಂಸ್ಕೃತಿಯನ್ನು ಪ್ರಚಾರ ಮಾಡುವ ಮತ್ತು ಎಲ್ಲಾ ಮಾನವರ ಕಲ್ಯಾಣಕ್ಕಾಗಿ (ಉದ್ಧಾರಕ್ಕಾಗಿ) ಶರಣರ ಕೊಟ್ಟ ಸಂದೇಶಗಳನ್ನು ಕಲುಷಿತಗೊಳಿಸದೆ ಇಂದಿನ ಆಧುನಿಕ ಸಮಾಜಕ್ಕೆ ಒಪ್ಪುವಂತೆ ನವೀಕರಿಸುವ ಉದ್ದೇಶ ಹೊಂದಿದೆ.
ಅನ್ನದಾನಯ್ಯಪುರಾಣಿಕ,ಕೆ.ಎಂ.ನಂಜಪ್ಪ,ವೈ.ಸಿ.ಬಸಪ್ಪ,ಗಂಗಪ್ಪ,ಬಿ.ಎಸ್.ಶಂಕರಪ್ಪಶೆಟ್ಟಿ, ಡಾ ಡಿ ಸಿ ಪಾವಟೆ ಮೊದಲಾದ ಗಣ್ಯರ ಜೊತೆಗೂಡಿ, ಮಾನ್ಯ ಶ್ರೀ ಎಸ್ ನಿಜಲಿಂಗಪ್ಪನವರ ಮಾರ್ಗದರ್ಶನದಲ್ಲಿ ಬೆಂಗಳೂರಿನಲ್ಲಿ ಅಖಿಲ ಭಾರತ ಬಸವ ಸಮಿತಿ ಸ್ಥಾಪಿಸಿದರು. ಬಸವತತ್ವ ಪ್ರಚಾರಕ್ಕಾಗಿ ಮೀಸಲಾದ ಈ ಸಂಸ್ಥೆಯ ಅಭಿವೃದ್ಧಿಗಾಗಿ ಅಧ್ಯಕ್ಷರಾಗಿ ಜತ್ತಿ ಮತ್ತು 27 ವರ್ಷಗಳ ಕಾಲ ಗೌರವ ಕಾರ್ಯದರ್ಶಿಯಾಗಿ ಅನ್ನದಾನಯ್ಯ ಪುರಾಣಿಕ ನಿರಂತರ ಮತ್ತು ನಿಸ್ಪಾರ್ಥ ಸೇವೆ ಸಲ್ಲಿಸಿದ್ದಾರೆ.
ಇಂದು ಡಾ ಅರವಿಂದ ಜತ್ತಿ ಅವರು ಬಸವ ಸಮಿತಿ ಅಧ್ಯಕ್ಷರಾಗಿ ಶರಣರ ವಚನಗಳನ್ನು ರಾಷ್ಟ್ರೀಯ ಇತರ ಭಾಷೆಗಳಿಗೆ ಮತ್ತು ಫ್ರೆಂಚ್ ಇಂಗ್ಲಿಷ್ ಐರಿಶ್ ಜರ್ಮನಿ ಚೀನೀ ಭಾಷೆಗಳಿಗೆ ಭಾಷಾಂತರ ಮಾಡುತ್ತಿದ್ದಾರೆ.

ಬಾಕ್ಸ್

ನಿರ್ವಹಿಸಿದ ಪ್ರಮುಖ ಹುದ್ದೆಗಳು

ಸಾವಳಗಿಯ ಗ್ರಾಮ ಪಂಚಾಯ್ತಿ ಸದಸ್ಯ (1943)
ಮುಂಬಯಿ ವಿಧಾನಸಭೆಯ ಶಾಸಕ (1949)
ಮುಂಬಯಿ ರಾಜ್ಯದ ಉಪ ಮುಖ್ಯಮಂತ್ರಿ (1955)
ಭೂಸುಧಾರಣಾ ಮಂಡಲದ ಅಧ್ಯಕ್ಷ (1957)
ಮೈಸೂರ ರಾಜ್ಯದ 5ನೇಯ ಮುಖ್ಯಮಂತ್ರಿ (16ಮೇ , 1958 ರಿಂದ 9ಮಾರ್ಚ್ 1962)
ಶ್ರೀ ಎಸ್ ನಿಜಲಿಂಗಪ್ಪನವರ ಮಂತ್ರಿಮಂಡಲದಲ್ಲಿ ಜತ್ತಿಯವರು ಹಣಕಾಸಿನ ಮಂತ್ರಿ-1965
ಮೈಸೂರ ರಾಜ್ಯ ಆಹಾರ ಮಂತ್ರಿ
ಪಾಂಡಿಚೇರಿಯ ಲೆಫ್ಟಿನೆಂಟ್ ಗವರ್ನರ್ (1968ರಿಂದ 1972)
ಒಡಿಶಾ ರಾಜ್ಯದ ರಾಜ್ಯಪಾಲ (1975)
ಭಾರತದ 5 ನೇಯ ಉಪರಾಷ್ಟ್ರಪತಿ (ಅಗಸ್ಟ 31 1974 ರಿಂದ ಅಗಸ್ಟ 30, 1979)
ಭಾರತದ ಹಂಗಾಮಿ ರಾಷ್ಟ್ರಪತಿ (11-02-1977 ರಿಂದ 28-07-1977)
ಆತ್ಮಕತೆ
ಬಿ.ಡಿ.ಜತ್ತಿಯವರ ಆತ್ಮಕತೆ – ನನಗೆ ನಾನೇ ಮಾದರಿ ಎಂಬ ತಮ್ಮ ಜೀವನದ ಎಲ್ಲಾ ಸಂಗತಿಗಳನ್ನು ಅರ್ಥಪೂರ್ಣವಾಗಿ ದಾಖಲಿಸಿದ್ದಾರೆ.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಯಾವಾಗ ಚುನಾವಣೆ ನಡೆದರೂ ಬಿಜೆಪಿಗೆ ಬಹುಮತ

ಡಿ.೨೯ರಂದು ವಿಶ್ವಮಾನವ ದಿನಾಚಾರಣೆ

೨ ಹೊಸ ಸಿಟಿ ಬಸ್‌ಗಳಿಗೆ ಚಾಲನೆ ನೀಡಿದ ಶಾಸಕ ಮನಗೂಳಿ

ಹಳೆ ವಿದ್ಯಾರ್ಥಿಗಳ ಸಂಘಗಳಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಯಾವಾಗ ಚುನಾವಣೆ ನಡೆದರೂ ಬಿಜೆಪಿಗೆ ಬಹುಮತ
    In (ರಾಜ್ಯ ) ಜಿಲ್ಲೆ
  • ಡಿ.೨೯ರಂದು ವಿಶ್ವಮಾನವ ದಿನಾಚಾರಣೆ
    In (ರಾಜ್ಯ ) ಜಿಲ್ಲೆ
  • ೨ ಹೊಸ ಸಿಟಿ ಬಸ್‌ಗಳಿಗೆ ಚಾಲನೆ ನೀಡಿದ ಶಾಸಕ ಮನಗೂಳಿ
    In (ರಾಜ್ಯ ) ಜಿಲ್ಲೆ
  • ಹಳೆ ವಿದ್ಯಾರ್ಥಿಗಳ ಸಂಘಗಳಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯ
    In (ರಾಜ್ಯ ) ಜಿಲ್ಲೆ
  • ನಾಳೆ ದೇವರಹಿಪ್ಪರಗಿ ಪತ್ತಿನ ಸಹಕಾರಿ ಸಂಘದ ರಜತ ಮಹೋತ್ಸವ
    In (ರಾಜ್ಯ ) ಜಿಲ್ಲೆ
  • ಜ್ಞಾನದ ಸುವಾಸನೆ ವಿಶ್ವಕ್ಕೆ ಹರವಿದ ದಾರ್ಶನಿಕ ಸಿದ್ಧೇಶ್ವರ ಶ್ರೀ
    In (ರಾಜ್ಯ ) ಜಿಲ್ಲೆ
  • ದೇಶವನ್ನು ಅಭಿವೃದ್ಧಿ ಪಥದತ್ತ ಸಾಗಿಸಿದ ವಾಜಪೇಯಿ :ಪ್ರಭುಗೌಡ
    In (ರಾಜ್ಯ ) ಜಿಲ್ಲೆ
  • ಪ್ರದೇಶ ಕುರುಬ ಸಂಘದ ಅಧ್ಯಕ್ಷರಾಗಿ ಸಿದ್ದು ಕೆರಿಗೊಂಡ ಆಯ್ಕೆ
    In (ರಾಜ್ಯ ) ಜಿಲ್ಲೆ
  • 350ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ನಾನಾ ಕಂಪನಿಗಳಿಗೆ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಡಿಸ್ಮೆನೋರಿಯಾ ಕುರಿತು ಆರೋಗ್ಯ ಉಚಿತ ತಪಾಸಣೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.