Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಲೇಖನ – ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಪೀಠೋಕರಣಗಳಿಂದ ಅಲಂಕೃತ ವೈಭವೋಪೇತ ಮಹಲಿನಲ್ಲಿ ಇರಬೇಕೆಂದು ನಾವೆಲ್ಲ ಹಂಬಲಿಸುತ್ತೇವೆ. ಗೆಲುವಿನ ಸರದಾರರಾಗಬೇಕೆಂದು ಕನಸು ಕಾಣುತ್ತೇವೆ. ಕೇವಲ ಅಪೇಕ್ಷೆ ಮತ್ತು ಹಂಬಲದಿಂದ ಎಲ್ಲವೂ ನೆರವೇರುವುದಿಲ್ಲ. ಅದಕ್ಕೆ ಬೆವರ ಧಾರೆಯನ್ನು ಹರಿಸಬೇಕು. ಕಾರ್ಯಕ್ಷೇತ್ರವನ್ನು ವಿಸ್ತರಿಸಬೇಕು. ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಬೇಕು. ಎಂಬ ಸಾಮಾನ್ಯ ಜ್ಞಾನ ನಮ್ಮಲಿಲ್ಲ ಅಂತೇನಿಲ್ಲ. ಶ್ರಮದಲ್ಲಿ ಗೆಲುವು ಅಡಗಿದೆ. ಅವಿರತ ಶ್ರಮದ ಫಲವಾಗಿ ದೊರೆಯುವುದೇ ಯಶಸ್ಸು. ಎಂಬುದು ಗೊತ್ತಿದೆ. ಏನೆಲ್ಲ ಗೊತ್ತಿದ್ದರೂ ನಾವೇಕೆ ಹೀಗಿರುವುದು ಎಂಬ ಪ್ರಶ್ನೆ ತಲೆ ತಿನ್ನುತ್ತದೆ. ಗೊತ್ತಿದ್ದ ಮಾತ್ರಕ್ಕೆ..ವ್ಯಾಯಾಮ ಮಾಡಿದರೆ ತೂಕ ಕಡಿಮೆಯಾಗುತ್ತದೆ. ಎಂಬುದು ಬೊಜ್ಜು ಮೈ ಇರುವವರಿಗೆ ಗೊತ್ತಿದೆ. ಚೆನ್ನಾಗಿ ಓದಿದರೆ ಉತ್ತಮ ಅಂಕ ಪಡೆಯಲು ಸಾಧ್ಯ. ಎಂಬುದು ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗಳಿಗೆ ಗೊತ್ತಿದೆ. ಬೆಳಿಗ್ಗೆ ಬೇಗ ಎದ್ದು ಧ್ಯಾನ ಮಾಡಿದರೆ ಸಮಾಧಾನವಾಗಿರಬಹುದು. ಎನ್ನುವುದು ಕಿರಿಕಿರಿ ಅನುಭವಿಸುತ್ತಿರುವವರಿಗೆ ಗೊತ್ತು. ಆದರೂ ಅವರೆಲ್ಲ ಇದ್ದ ದೇಹ ಸ್ಥಿತಿಯಲ್ಲಿ ಇದ್ದ ಮನಸ್ಥಿತಿಯಲ್ಲೇ ಇರುತ್ತಾರೆ ಏಕೆ? ಏಕೆಂದರೆ ಕೇವಲ ಗೊತ್ತಿದ್ದ ಮಾತ್ರಕ್ಕೆ…
ಬಸವ ಜಯಂತಿ ನಿಮಿತ್ತ ಬಸವನ ಬಾಗೇವಾಡಿಯಿಂದ ವಿಜಯಪುರದವರೆಗೆ ಪಾದಯಾತ್ರೆ ಮತ್ತು 50ಕಿ.ಮೀ ಓಟ ಆಯೋಜನೆ | ಆಯೋಜಕ ಬಿ.ಬಿ.ಪಾಟೀಲ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಸಮಾನತೆಯ ಹರಿಕಾರ, ಕರ್ನಾಟಕದ ಸಾಂಸ್ಕೃತಿಕ ನಾಯಕ ಮಹಾತ್ಮ ಬಸವೇಶ್ವರ ಅವರ ಜಯಂತಿ ನಿಮಿತ್ತ ಅವರ ಜನ್ಮಭೂಮಿ ಬಸವನ ಬಾಗೇವಾಡಿಯಿಂದ ವಿಜಯಪುರದ ಬಸವೇಶ್ವರ ವೃತ್ತದವರೆಗೆ ಪಾದಯಾತ್ರೆ ಮತ್ತು 50ಕಿ.ಮೀ ಓಟವನ್ನು ಈ ವರ್ಷ ಬಾರಿ ವಿಶಿಷ್ಟವಾಗಿ ಆಯೋಜಿಸಲಾಗಿದೆ ಎಂದು ಆಯೋಜಕ ಬಿ. ಬಿ. ಪಾಟೀಲ ತಿಳಿಸಿದ್ದಾರೆ.ಸಮಾನತೆಯ ಸಂಕೇತವಾಗಿರುವ ಬಸವಾದಿ ಶರಣರ ವಿಚಾರಗಳನ್ನು ಅಳವಡಿಸಿಕೊಳ್ಳುವುದು ಮತ್ತು ಎಲ್ಲ ಜೀವಿಗಳ ಮೇಲೆ ದಯೆ ತೋರುವುದು. ‘ಕಾಯಕವೇ ಕೈಲಾಸ’ ಮತ್ತು ‘ದಾಸೋಹ’ ತತ್ವಗಳನ್ನು ಮುನ್ನಡೆಸುವುದೇ ಬಸವ ಜ್ಯೋತಿ ಯಾತ್ರೆಯ ಉದ್ದೇಶವಾಗಿದೆ.ವಿಜಯಪುರ ಜಿಲ್ಲೆಯ ಹಂದಿನಗೂರು ಗ್ರಾಮದ ಬಿ.ಬಿ.ಪಾಟೀಲ ಅವರು ಕಳೆದ 40 ವರ್ಷಗಳಿಂದ ಬೆಂಗಳೂರಿನಲ್ಲಿ ತಂತ್ರಜ್ಞರಾಗಿದ್ದು, ಜೊತೆಗೆ ಬಸವಾದಿ ಶರಣರ ತತ್ವ ಪ್ರಸಾರ ಕಾರ್ಯದಲ್ಲಿ ತೊಡಗಿದ್ದಾರೆ. 2012 ರಿಂದ ಪ್ರತಿ ವರ್ಷ ಬಸವ ಜಯಂತಿಯಂದು ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಿಂದ ವಿಜಯಪುರದ ಬಸವೇಶ್ವರ…
ಸಂಬಂದಿಸಿದ ಇಲಾಖೆಗೆ ಕ್ರಮಕೈಗೊಳ್ಳಲು ಆದೇಶಿಸಲು ಸಿಎಂ-ಡಿಸಿಎಂ ಗೆ ಕೊಲ್ಹಾರ ಪಟ್ಟಣ ಅಭಿವೃದ್ಧಿ ಹಿತಚಿಂತಕರ ವೇದಿಕೆ ಆಗ್ರಹ ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಕೊಲ್ಹಾರ ಊರು ಮುಳಗಡೆಯಾಗಿ ಪುನರ್ವಸತಿ ಕೇಂದ್ರದಲ್ಲಿ ನೆಲೆನಿಂತು ಇಪ್ಪತೈದು ವರುಷ ಗತಿಸಿದರೂ ಸಂತ್ರಸ್ತರು ಸ್ವಂತ ಸೂರು ಕಟ್ಟಿಕೊಳ್ಳಲು ನಿವೇಶನಕ್ಕಾಗಿ ಅಲೆದಾಡುವದನ್ನು ತಪ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕ್ಷೇತ್ರದ ಶಾಸಕ ಸಚಿವ ಶಿವಾನಂದ ಪಾಟೀಲ ಸಂಬಂದಿಸಿದ ಇಲಾಖೆಗೆ ಕ್ರಮಕೈಗೋಳ್ಳಲು ಆದೇಶ ಮಾಡಬೇಕು ಎಂದು ಕೊಲ್ಹಾರ ಪಟ್ಟಣ ಅಭಿವೃದ್ಧಿ ಹಿತಚಿಂತಕರ ವೇಧಿಕೆಯ ರಾಮಣ್ಣ ಉಪ್ಪಲದಿನ್ನಿ, ವೀರಭದ್ರಪ್ಪ ಬಾಗಿ ಒತ್ತಾಯಿಸಿದರು.ಈ ಕುರಿತು ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿ ಕರೆದು ಮಾತನಾಡಿದ ಅವರು ಪುನರ್ವಸತಿ ಇಲಾಖಾ ಅಧಿಕಾರಿಗಳು ಮಧ್ಯವರ್ತಿಗಳ ಜೊತೆ ಸೇರಿ ಕಾನೂನು ಬಾಹೀರವೂ ಅಥವಾ ಕಾನೂನು ಉಲಂಘನೆಯೋ ಗೊತ್ತಿಲ್ಲ ಅವರು ಮಾಡಿದ ತಪ್ಪನ್ನು ಸಂತ್ರಸ್ತರ ಮೇಲೆ ಹೊರಸಿರುವದು ಯಾಕೆ ಮುಳಗಡೆ ಸಂತ್ರಸ್ತರು ನಿವೇಶನದ ಹಕ್ಕುಪತ್ರ ಪಡೆದುಕೊಂಡು ಹಲವಾರು ವರುಷ ಕಳೆದಿವೆ ಆದರೆ ಈಗ ಇ ಸ್ವತ್ತು ಉತಾರೆ ಪಡೆಯಲು…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಬೆಂಗಳೂರಿನಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನಾಚರಣೆ ಸಮಾರಂಭದಲ್ಲಿ ಪಟ್ಟಣದ ವಿದ್ಯಾರ್ಥಿನಿ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ 590 ಅಂಕ ಗಳಿಸಿದ ಸಾಧನೆಗಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಸನ್ಮಾನಿಸಲಾಯಿತು.ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಮೆನ್ನಬೆತ್ತು ಮೂರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಸ್ಥಳೀಯ ಕಲ್ಲಪ್ಪ ಗುರಲಿಂಗಪ್ಪ ಕಾಖಂಡಕಿ ಅವರ ಪುತ್ರಿ ಸಹನಾ ಅವರು, ರಾಜ್ಯದ ವಸತಿ ಶಿಕ್ಷಣ ಸಂಸ್ಥೆಗಳ ಪಿಯುಸಿ ಕಾಲೇಜುಗಳಲ್ಲಿಯೇ ಪ್ರಸಕ್ತ ಸಾಲಿನ ಪರೀಕ್ಷೆಯಲ್ಲಿ ಟಾಪ್ ಐದು ವಿದ್ಯಾರ್ಥಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.ಈ ಸಾಧನೆಗಾಗಿ ಅವರಿಗೆ ಮೂರು ಲಕ್ಷ ರೂ. ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಫಲಕ ನೀಡಿ ಗೌರವಿಸಲಾಯಿತು.ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಚಿವರಾದ ಎಚ್.ಸಿ. ಮಹಾದೇವಪ್ಪ, ಕೆ.ಹೆಚ್. ಮುನಿಯಪ್ಪ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ಹೆಚ್ ಡಿ ಕೋಟೆ: ಕೃಷಿಯಲ್ಲಿ ನಿರಂತರ ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿಯ ಫಲವತ್ತತೆ ಕಡಿಮೆಯಾಗುತ್ತಿದ್ದು, ಇಳುವರಿ ಕುಂಠಿತವಾಗುತ್ತಿದೆ. ಮಣ್ಣಿನ ಸಾರಾಂಶ ಸಂರಕ್ಷಿಸುವ ನಿಟ್ಟಿನಲ್ಲಿ ರಾಸಾಯನಿಕ ಗೊಬ್ಬರ ಬದಲಾಗಿ ಸಾವಯವ ಗೊಬ್ಬರ ಬಳಕೆ ಮಾಡಬೇಕೆಂದುಶಾಸಕ ಅನಿಲ್ ಚಿಕ್ಕಮಾದು ರೈತರಿಗೆ ಸಲಹೆ ನೀಡಿದರು. ತಾಲೂಕಿನ ಮೈಸೂರು-ಮಾನಂದವಾಡಿ ಮಾರ್ಗ ಮಧ್ಯೆದಲ್ಲಿರುವ ಲಕ್ಷ್ಮೀಪುರದಲ್ಲಿ ನೂತನವಾಗಿ ಆರಂಭವಾಗಿರುವ ಮೈಟೆಕ್ ಆಗ್ರೋ ಸಲ್ಯೂಷನ್ಸ್ ಕಚೇರಿ ಓಪನ್ ಮಾಡಿ ಮಾತನಾಡಿದರು. ಈ ಹಿಂದೆ ನಮ್ಮ ಪೂರ್ವಜರು ಸಾವಯವ ಗೊಬ್ಬರ ಬಳಸಿ, ಜಮೀನಿನಲ್ಲಿ ತರಕಾರಿ ಸೇರಿದಂತೆ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದರು. ಈ ಪದ್ಧತಿಯು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದರ ಜೊತೆಗೆ ಮಾನವನ ಆರೋಗ್ಯಕ್ಕೂ ಸಹಕಾರಿಯಾಗಿತ್ತು. ನೈಸರ್ಗಿಕವಾಗಿ ಬೆಳೆದ ತರಕಾರಿಗಳನ್ನು ತಿಂದು ಮನುಷ್ಯ 100-120 ವರ್ಷಗಳವರೆಗೆ ಬದುಕುತ್ತಿದ್ದರು. ಆದರೆ ಇತ್ತೀಚಿಗೆ ಜಾಸ್ತಿ ಕೆಮಿಕಲ್ಸ್ ಬಳಕೆ ಮಾಡುವುದರಿಂದ ಭೂಮಿಯ ಆರೋಗ್ಯ ಕೆಡುವುದರ ಜೊತೆಗೆ ಮನುಷ್ಯ ಜೀವಿಯು ಕೂಡ ಅನಾರೋಗ್ಯಕ್ಕೆ ತುತ್ತಾಗಿ 30 ವರ್ಷದ ಆಸುಪಾಸಿನಲ್ಲೇ ಅಕಾಲಿಕ ಮರಣಕ್ಕೀಡಾಗುತ್ತಿದ್ದಾರೆ. ದಯವಿಟ್ಟು ತಾಲೂಕಿನ ಜನತೆ ಸಾವಯವ ಗೊಬ್ಬರ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಇಂದಿನ ದಿನಮಾನಗಳಲ್ಲಿ ಮೊಬೈಲ್ ಅಬ್ಬರದ ನಡುವೆ ಮಕ್ಕಳಿಗೆ ಯೋಗ, ಧ್ಯಾನವೇ ಪರಿಹಾರ ಎಂದು ನಿವೃತ್ತ ಮುಖ್ಯಗುರು ಡಿ.ಎಂ.ಚೌದರಿ ಹೇಳಿದರು.ಪಟ್ಟಣದ ಗುರು ಖಾಸ್ಗತೇಶ್ವರ ಮಿಡ್‌ಬ್ರೇನ್ ಯೋಗ ಮತ್ತು ಧ್ಯಾನ ತರಬೇತಿ ಕೇಂದ್ರದ ವತಿಯಿಂದ, ಶಾಲಾ ಆವರಣದಲ್ಲಿ, ವಿದ್ಯಾರ್ಥಿಗಳಿಗೆ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಈಗಿನ ಪರಿಸರದಲ್ಲಿ ಮಕ್ಕಳು ಮೊಬೈಲ್, ಕಂಪ್ಯೂಟರ್ ಗಳ ಹಿಂದೆ ಬಿದ್ದು ತಮ್ಮ ನೆನಪಿನ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಪಾಲಕರು ಎಷ್ಟೇ ಹತೋಟಿಗೆ ತರಬೇಕೆಂದರೂ ಸಾಧ್ಯವಾಗುತ್ತಿಲ್ಲ. ಇಂತವರಿಗೆ ಗುರು ಖಾಸ್ಗತೇಶ್ವರ ಮಿಡ್‌ಬ್ರೇನ್ ಯೋಗಾ ಶಾಲೆ ಮಕ್ಕಳಿಗೆ ಯೋಗ ಮತ್ತು ಧ್ಯಾನದ ತರಬೇತಿ ನೀಡುವ ಮೂಲಕ ಮಕ್ಕಳ ಮೂರನೇ ಕಣ್ಣನ್ನು ತೆರೆಸಿ ಅವರ ನೆನಪಿನ ಶಕ್ತಿಯನ್ನು ಹೆಚ್ಚಿಸುವಲ್ಲಿ ಶ್ರಮಿಸುತ್ತಿದ್ದಾರೆ. ಈ ವಿದ್ಯೆ ಪಡೆದ ಮಕ್ಕಳು ಶೈಕ್ಷಣಿಕವಾಗಿ ಸಾಕಷ್ಟು ಪ್ರಗತಿ ಹೊಂದುವ ವಿಶ್ವಾಸ ನನಗಿದೆ. ಅಂತಹ ಶಕ್ತಿ ಯೋಗ ಮತ್ತು ಧ್ಯಾನಕ್ಕಿದೆ ಎಂದರು.ಅತಿಥಿಯಾಗಿದ್ದ ಪ್ರೊ.ಪ್ರಕಾಶ ನರಗುಂದ ಮಾತನಾಡಿ, ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವದರ ಜೊತೆಗೆ ದೈಹಿಕವಾಗಿ,…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪರವಾನಗಿ ಇಲ್ಲದೇ ಅನಧಿಕೃತ ಮದ್ಯ ಮಾರಾಟಮಾಡುತ್ತಿದ್ದ ಕಿರಾಣಿ ಅಂಗಡಿಯ ಮೇಲೆ ದಾಳಿ ನಡೆಸಿದ ಪಿಎಸ್‌ಐ ಸಂಜಯ ತಿಪರೆಡ್ಡಿ ಪ್ರಕರಣ ದಾಖಲಿಸಿ ಬಿಸಿ ಮುಟ್ಟಿಸಿದ್ದಲ್ಲದೇ, ಅನಧಿಕೃತ ಮದ್ಯ ಮಾರಾಟ ಮಾಡುವವರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.ತಾಲೂಕಿನ ಕುಂಟೋಜಿ ಗ್ರಾಮದ ಸಂಗಮೇಶ ಕೋಳೂರ ಈತನ ಮೇಲೆ ದಾಳಿ ನಡೆಸಿದ್ದು, ೯೦ ಪೆಟ್ ನ ಒಟ್ಟು ೩೬ ವಿವಿಧ ಬ್ರ್ಯಾಂಡ್ ವಿಸ್ಕಿ ಪೌಚ್‌ಗಳು, ೧೮೦ಎಂ.ಎಲ್ ನ ೨ ಬಿಪಿ ವಿಸ್ಕಿ ಪ್ಯಾಕೆಟ್ ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ದ್ವಿತೀಯ ಪಿಯುನಲ್ಲಿ ವಿಜಯಪುರ ಜಿಲ್ಲೆಗೆ ಕ್ರಮವಾಗಿ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ರಿಂದ ಸನ್ಮಾನ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿದ್ಯಾರ್ಥಿಗಳು ಸತತ ಅಧ್ಯಯನಶೀಲರಾದಾಗ ಮಾತ್ರ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಉನ್ನತ ಜೀವನ ನಡೆಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸರಳ ಸಮಾರಂಭದಲ್ಲಿ ೨೦೨೬ರ ಮಾರ್ಚ್ ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ಜಿಲ್ಲೆಗೆ ಕ್ರಮವಾಗಿ ಸ್ಥಾನ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಜಿಲ್ಲಾಡಳಿತದಿಂದ ಸನ್ಮಾನಿಸಿ ಅವರು ಮಾತನಾಡಿದರು.ಈ ದಿಸೆಯಲ್ಲಿ ವಿದ್ಯಾರ್ಥಿಗಳು ಆಯಾ ಶೈಕ್ಷಣಿಕ ವರ್ಷಾರಂಭದಿಂದಲೇ ಆಸಕ್ತಿಯಿಂದ ಓದಲಾರಂಭಿಸಿದರೆ ಪರೀಕ್ಷೆ ಯಶಸ್ಸು ನೀರು ಕುಡಿದಷ್ಟೇ ಸುಲಭವಾಗುತ್ತದೆ ಎಂದರು.ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಠಿಣ ಅಧ್ಯಯನ ಶೈಲಿ ರೂಢಿಸಿಕೊಳ್ಳಬೇಕು. ವಿಷಯ ಕರಗತ ಮಾಡಿಕೊಂಡು ಮನನ ಮಾಡಿಕೊಳ್ಳುವ ಮೂಲಕ ತಮ್ಮನ್ನು ತಾವು ಮೌಲ್ಯಮಾಪನಕ್ಕೊಳಡಿಸಿ ಕೊಂಡರೆ, ಓದಿದ್ದೆಲ್ಲವೂ ಸ್ಮೃತಿಪಟಲದಲ್ಲಿ ಉಳಿಯುತ್ತದೆ ಎಂದರು.ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳಾದ ಡಾ. ಆನಂದ .ಕೆ. ಅವರು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭಾರತ ಜನಗಣತಿ-೨೦೨೭ರ ಒಂದನೇ ಹಂತದಲ್ಲಿ ಮನೆಗಳ ಪಟ್ಟಿ ಮತ್ತು ಮನೆ ಗಣತಿ ಕಾರ್ಯ ಏ.೧೬ ರಿಂದ ಮೇ ೧೫ ರವರೆಗೆ ೩೦ ದಿನಗಳ ಕಾಲ ನಡೆಯಲಿದ್ದು, ಗಣತಿದಾರರು ತಮ್ಮ ಮನೆಗಳಿಗೆ ಭೇಟಿ ನೀಡಿದ ವೇಳೆ ಅವರು ಕೇಳುವ ಪ್ರಶ್ನೆಗೆ ಉತ್ತರ ನೀಡುವ ಮೂಲಕ ಗಣತಿ ಕಾರ್ಯ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ತಿಳಿಸಿದ್ದಾರೆ.ತಮ್ಮ ಮನೆಗೆ ಭೇಟಿ ನೀಡುವ ಗಣತಿದಾರರು ಕೇಳುವ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿ ಸಹಕರಿಸುವ ಮೂಲಕ ಭಾರತ ಜನಗಣತಿ ಕಾರ್ಯ ಯಶಸ್ವಿಗೊಳಿಸಬೇಕು ಎಂದು ತಿಳಿಸಿದ್ದಾರೆ.ಸ್ವಯಂ ಗಣತಿದಾರರಿಗೆ ಅಭಿನಂದನೆ ಜನಗಣತಿ-೨೦೨೭ ರ ಮೊದಲ ಹಂತದಲ್ಲಿ ಏ. ೧ರಿಂದ ೧೫ ರವರೆಗೆ ನಡೆದ ಸ್ವಯಂ ಗಣತಿ ಕಾರ್ಯದಲ್ಲಿ ಪಾಲ್ಗೊಂಡ ಜಿಲ್ಲೆಯ ೧೪೦೪೨ ನಾಗರಿಕರಿಗೆ ಇದೇ ವೇಳೆ ಜಿಲ್ಲಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಹೆಚ್ ಡಿ ಕೋಟೆ: ತಾಲೂಕಿನ ಹ್ಯಾಂಡ್ ಪೋಸ್ಟ್ ಸರ್ಕಲ್ ನಿಂದ ಕೃಷ್ಣಪುರ ಸರ್ಕಲ್ ವರೆಗೆ ಅಂದಾಜು 3ವರೆ ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ಹಾಗೂ 3.5 ಕೋಟಿ ವೆಚ್ಚದಲ್ಲಿ ಹ್ಯಾಂಡ್ ಪೋಸ್ಟ್ ವೃತ್ತ ಮತ್ತು ಕೊಲ್ಲೇಗೌಡನಹಳ್ಳಿ ವೃತ್ತ ಕಾಮಗಾರಿ ಗುರುವಾರದಿಂದ ಆರಂಭವಾಗಲಿದ್ದು, 6 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.ತಾಲೂಕಿನ ಹ್ಯಾಂಡ್ ಪೋಸ್ಟ್ ಸರ್ಕಲ್ ನಲ್ಲಿ ಒಟ್ಟು 7.5 ಕೋಟಿ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಶಾಸಕರಾದವರು ಕ್ಷೇತ್ರದ ಅಭಿವೃದ್ಧಿ ಕಾಮಗಾರಿ ಬಗ್ಗೆ ಕನಸು ಕಾಣಬೇಕಂತೆ. ಕ್ಷೇತ್ರದಲ್ಲಿ ರಸ್ತೆ ಹಾಗೂ ಸರ್ಕಲ್ ನಿರ್ಮಾಣ ನನ್ನ ಕನಸು ಕೂಡ ಹೌದು. ದಾವಣಗೆರೆ, ಮೈಸೂರು ಮತ್ತು ಧರ್ಮಸ್ಥಳ ಸೇರಿದಂತೆ ನಾಲ್ಕಾರು ಕಡೆ ಸರ್ಕಲ್ ನೋಡಿದ ಬಳಿಕ ನಮ್ಮ ಕ್ಷೇತ್ರದಲ್ಲೂ ಅದೇ ರೀತಿಯಲ್ಲಿ ಆರ್ ಪಿ ಸರ್ಕಲ್ ನಿರ್ಮಾಣ ಮಾಡಬೇಕೆಂಬ ಆಸೆಯಿತ್ತು. ಹೀಗಾಗಿ ಇಷ್ಟಪಟ್ಟು ರಸ್ತೆ ಹಾಗೂ ಎರಡು ಕಡೆ ಹೈಟೆಕ್…
