ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪರವಾನಗಿ ಇಲ್ಲದೇ ಅನಧಿಕೃತ ಮದ್ಯ ಮಾರಾಟಮಾಡುತ್ತಿದ್ದ ಕಿರಾಣಿ ಅಂಗಡಿಯ ಮೇಲೆ ದಾಳಿ ನಡೆಸಿದ ಪಿಎಸ್‌ಐ ಸಂಜಯ ತಿಪರೆಡ್ಡಿ ಪ್ರಕರಣ ದಾಖಲಿಸಿ ಬಿಸಿ ಮುಟ್ಟಿಸಿದ್ದಲ್ಲದೇ, ಅನಧಿಕೃತ ಮದ್ಯ ಮಾರಾಟ ಮಾಡುವವರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ತಾಲೂಕಿನ ಕುಂಟೋಜಿ ಗ್ರಾಮದ ಸಂಗಮೇಶ ಕೋಳೂರ ಈತನ ಮೇಲೆ ದಾಳಿ ನಡೆಸಿದ್ದು, ೯೦ ಪೆಟ್ ನ ಒಟ್ಟು ೩೬ ವಿವಿಧ ಬ್ರ್ಯಾಂಡ್ ವಿಸ್ಕಿ ಪೌಚ್‌ಗಳು, ೧೮೦ಎಂ.ಎಲ್ ನ ೨ ಬಿಪಿ ವಿಸ್ಕಿ ಪ್ಯಾಕೆಟ್ ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
