Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವಿಜೃಂಭಣೆಯ ಶ್ರೀಶೈಲ ಮಲ್ಲಿಕಾರ್ಜುನ ಕಂಬಿ ಐದೇಶಿ ಉತ್ಸವ

ಸಮಾನತೆ ಸಂದೇಶ ಸಾರಿದ ಡಾ.ಅಂಬೇಡ್ಕರ್ :ಶಾಸಕ ಕಟಕಧೋಂಡ

ಸಂಗಪ್ಪ ಸೊನ್ನದ ನಿಧನ: ಇಂದು ಅಂತ್ಯಕ್ರಿಯೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»‘ಕಾಯಕ’-‘ದಾಸೋಹ’ ತತ್ವಗಳನ್ನು ಮುನ್ನಡೆಸುವುದೇ ಬಸವ ಜ್ಯೋತಿ ಯಾತ್ರೆ ಉದ್ದೇಶ
(ರಾಜ್ಯ ) ಜಿಲ್ಲೆ

‘ಕಾಯಕ’-‘ದಾಸೋಹ’ ತತ್ವಗಳನ್ನು ಮುನ್ನಡೆಸುವುದೇ ಬಸವ ಜ್ಯೋತಿ ಯಾತ್ರೆ ಉದ್ದೇಶ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಬಸವ ಜಯಂತಿ ನಿಮಿತ್ತ ಬಸವನ ಬಾಗೇವಾಡಿಯಿಂದ ವಿಜಯಪುರದವರೆಗೆ ಪಾದಯಾತ್ರೆ ಮತ್ತು 50ಕಿ.ಮೀ ಓಟ ಆಯೋಜನೆ | ಆಯೋಜಕ ಬಿ.ಬಿ.ಪಾಟೀಲ ಹೇಳಿಕೆ

ಉದಯರಶ್ಮಿ ದಿನಪತ್ರಿಕೆ

ಬೆಂಗಳೂರು: ಸಮಾನತೆಯ ಹರಿಕಾರ, ಕರ್ನಾಟಕದ ಸಾಂಸ್ಕೃತಿಕ ನಾಯಕ ಮಹಾತ್ಮ ಬಸವೇಶ್ವರ ಅವರ ಜಯಂತಿ ನಿಮಿತ್ತ ಅವರ ಜನ್ಮಭೂಮಿ ಬಸವನ ಬಾಗೇವಾಡಿಯಿಂದ ವಿಜಯಪುರದ ಬಸವೇಶ್ವರ ವೃತ್ತದವರೆಗೆ ಪಾದಯಾತ್ರೆ ಮತ್ತು 50ಕಿ.ಮೀ ಓಟವನ್ನು ಈ ವರ್ಷ ಬಾರಿ ವಿಶಿಷ್ಟವಾಗಿ ಆಯೋಜಿಸಲಾಗಿದೆ ಎಂದು ಆಯೋಜಕ ಬಿ. ಬಿ. ಪಾಟೀಲ ತಿಳಿಸಿದ್ದಾರೆ.
ಸಮಾನತೆಯ ಸಂಕೇತವಾಗಿರುವ ಬಸವಾದಿ ಶರಣರ ವಿಚಾರಗಳನ್ನು ಅಳವಡಿಸಿಕೊಳ್ಳುವುದು ಮತ್ತು ಎಲ್ಲ ಜೀವಿಗಳ ಮೇಲೆ ದಯೆ ತೋರುವುದು. ‘ಕಾಯಕವೇ ಕೈಲಾಸ’ ಮತ್ತು ‘ದಾಸೋಹ’ ತತ್ವಗಳನ್ನು ಮುನ್ನಡೆಸುವುದೇ ಬಸವ ಜ್ಯೋತಿ ಯಾತ್ರೆಯ ಉದ್ದೇಶವಾಗಿದೆ.
ವಿಜಯಪುರ ಜಿಲ್ಲೆಯ ಹಂದಿನಗೂರು ಗ್ರಾಮದ ಬಿ.ಬಿ.ಪಾಟೀಲ ಅವರು ಕಳೆದ 40 ವರ್ಷಗಳಿಂದ ಬೆಂಗಳೂರಿನಲ್ಲಿ ತಂತ್ರಜ್ಞರಾಗಿದ್ದು, ಜೊತೆಗೆ ಬಸವಾದಿ ಶರಣರ ತತ್ವ ಪ್ರಸಾರ ಕಾರ್ಯದಲ್ಲಿ ತೊಡಗಿದ್ದಾರೆ. 2012 ರಿಂದ ಪ್ರತಿ ವರ್ಷ ಬಸವ ಜಯಂತಿಯಂದು ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಿಂದ ವಿಜಯಪುರದ ಬಸವೇಶ್ವರ ವೃತ್ತದವರೆಗೆ ಓಟದ ಮೂಲಕ ‘ಬಸವ ಜ್ಯೋತಿ’ಯನ್ನು ತರುವ ಕಾರ್ಯ ಮಾಡುತ್ತಿದ್ದು, ಈ ಬಾರಿ ವಿಜಯಪುರ ಸೈಕ್ಲಿಂಗ್ ಗ್ರುಪ್ ಇವರೊಂದಿಗೆ ಕೈಜೊಡಿಸಿದ್ದು, ಈಗಾಗಲೇ 100ಕ್ಕೂ ಹೆಚ್ಚು ಜನ ಈ ಯಾತ್ರೆಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.
ದಿ.19 ರವಿವಾರ ಸಂ.7ಗಂ. ಬಸವನ ಬಾಗೇವಾಡಿಯಿಂದ ಆರಂಭಗೊಳ್ಳುವ ಈ ಯಾತ್ರೆ ಮಸಬಿನಾಳ, ಉಕ್ಕಲಿ, ಉಕುಮನಾಳ ಮಾರ್ಗವಾಗಿ ದಿ.20 ಸೋಮವಾರ ಬೆ.7ಗಂ. ಶಿವಗಿರಿ ಮೂಲಕ ಒಟ್ಟು 50 ಕಿ.ಮೀ ಸಂಚರಿಸಿ, ವಿಜಯಪುರ ನಗರದ ಬಸವೇಶ್ವರ ವೃತ್ತದಲ್ಲಿ ಯಾತ್ರೆ ಮುಕ್ತಾಯಗೊಳ್ಳಲಿದೆ.
ಈ ಸಂದರ್ಭದಲ್ಲಿ ಬಸವಜ್ಯೋತಿ ಯಾತ್ರೆಗೆ ನಿರಂತರ ಸಹಾಯ ಮತ್ತು ಸಹಕಾರ ನೀಡುತ್ತಿರುವ ಜಿಲ್ಲಾ ಉಸ್ತುವಾರಿ ಹಾಗೂ ಕೈಗಾರಿಕೆ ಸಚಿವ ಡಾ. ಎಂ. ಬಿ. ಪಾಟೀಲ, ಬಸವನ ಬಾಗೇವಾಡಿ ಶಾಸಕ, ಸಚಿವ ಶಿವಾನಂದ ಪಾಟೀಲ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ವಿಜಯಪುರದ ನಾಗರಿಕರು ಈ ಬಸವ ಜ್ಯೋತಿಯನ್ನು ಸ್ವಾಗತಿಸಲಿದ್ದಾರೆ.
ವಿಶಿಷ್ಟ ಮತ್ತು ಓಟದಲ್ಲಿ ಪಾಲ್ಗೊಳ್ಳುವವರು https://docs.google.com/forms/d/1oZduLf4uofxSTpr5_4_CTUkfo8qNFWJGUHQCA1Ykjgk/viewform?edit_requested=true ಈ ಲಿಂಕ್ ಮೂಲಕ ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದು. ಈ ಯಾತ್ರೆಯಲ್ಲಿ ಅಲ್ಪೋಪಹಾರ ಹಾಗೂ ಪಾನಿಯ ವ್ಯವಸ್ಥೆಯನ್ನು ಮಾಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕ: ಶಿವನಗೌಡ ಪಾಟೀಲ-9900536161, ಡಾ.ರಾಜು ಯಲಗೊಂಡ-8095190218, ಡಾ.ಮಹಾಂತೇಶ ಜಾಲಗೇರಿ- 9480152598

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ವಿಜೃಂಭಣೆಯ ಶ್ರೀಶೈಲ ಮಲ್ಲಿಕಾರ್ಜುನ ಕಂಬಿ ಐದೇಶಿ ಉತ್ಸವ

ಸಮಾನತೆ ಸಂದೇಶ ಸಾರಿದ ಡಾ.ಅಂಬೇಡ್ಕರ್ :ಶಾಸಕ ಕಟಕಧೋಂಡ

ಸಂಗಪ್ಪ ಸೊನ್ನದ ನಿಧನ: ಇಂದು ಅಂತ್ಯಕ್ರಿಯೆ

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧ :ಶಾಸಕ ಲಕ್ಷ್ಮಣ ಸವದಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವಿಜೃಂಭಣೆಯ ಶ್ರೀಶೈಲ ಮಲ್ಲಿಕಾರ್ಜುನ ಕಂಬಿ ಐದೇಶಿ ಉತ್ಸವ
    In (ರಾಜ್ಯ ) ಜಿಲ್ಲೆ
  • ಸಮಾನತೆ ಸಂದೇಶ ಸಾರಿದ ಡಾ.ಅಂಬೇಡ್ಕರ್ :ಶಾಸಕ ಕಟಕಧೋಂಡ
    In (ರಾಜ್ಯ ) ಜಿಲ್ಲೆ
  • ಸಂಗಪ್ಪ ಸೊನ್ನದ ನಿಧನ: ಇಂದು ಅಂತ್ಯಕ್ರಿಯೆ
    In (ರಾಜ್ಯ ) ಜಿಲ್ಲೆ
  • ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧ :ಶಾಸಕ ಲಕ್ಷ್ಮಣ ಸವದಿ
    In (ರಾಜ್ಯ ) ಜಿಲ್ಲೆ
  • ಬಯಸಿದ್ದೆಲ್ಲ ಸಿಗುವುದು ಬಾಳಲ್ಲಿ!
    In ವಿಶೇಷ ಲೇಖನ
  • ‘ಕಾಯಕ’-‘ದಾಸೋಹ’ ತತ್ವಗಳನ್ನು ಮುನ್ನಡೆಸುವುದೇ ಬಸವ ಜ್ಯೋತಿ ಯಾತ್ರೆ ಉದ್ದೇಶ
    In (ರಾಜ್ಯ ) ಜಿಲ್ಲೆ
  • ೨೫ ವರ್ಷ ಗತಿಸಿದರೂ ಸಂತ್ರಸ್ತರಿಗಿನ್ನೂ ನಿವೇಶನ ಭಾಗ್ಯವಿಲ್ಲ!
    In (ರಾಜ್ಯ ) ಜಿಲ್ಲೆ
  • ಸಹನಾ ಕಾಖಂಡಕಿ ಅತ್ಯುತ್ತಮ ಸಾಧನೆಗೆ ರೂ.೩ಲಕ್ಷ ನಗದು & ಸನ್ಮಾನ
    In (ರಾಜ್ಯ ) ಜಿಲ್ಲೆ
  • ರಾಸಾಯನಿಕ ಗೊಬ್ಬರ ತ್ಯಜಿಸಿ, ಸಾವಯವ ಗೊಬ್ಬರ ಬಳಸಿ :ಶಾಸಕ ಚಿಕ್ಕಮಾದು
    In (ರಾಜ್ಯ ) ಜಿಲ್ಲೆ
  • ಮೊಬೈಲ್ ಅಬ್ಬರದ ನಡುವೆ ಮಕ್ಕಳಿಗೆ ಯೋಗ-ಧ್ಯಾನವೇ ಪರಿಹಾರ :ಚೌದರಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.