ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ ಕೋಟೆ: ತಾಲೂಕಿನ ಹ್ಯಾಂಡ್ ಪೋಸ್ಟ್ ಸರ್ಕಲ್ ನಿಂದ ಕೃಷ್ಣಪುರ ಸರ್ಕಲ್ ವರೆಗೆ ಅಂದಾಜು 3ವರೆ ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ಹಾಗೂ 3.5 ಕೋಟಿ ವೆಚ್ಚದಲ್ಲಿ ಹ್ಯಾಂಡ್ ಪೋಸ್ಟ್ ವೃತ್ತ ಮತ್ತು ಕೊಲ್ಲೇಗೌಡನಹಳ್ಳಿ ವೃತ್ತ ಕಾಮಗಾರಿ ಗುರುವಾರದಿಂದ ಆರಂಭವಾಗಲಿದ್ದು, 6 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.
ತಾಲೂಕಿನ ಹ್ಯಾಂಡ್ ಪೋಸ್ಟ್ ಸರ್ಕಲ್ ನಲ್ಲಿ ಒಟ್ಟು 7.5 ಕೋಟಿ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಶಾಸಕರಾದವರು ಕ್ಷೇತ್ರದ ಅಭಿವೃದ್ಧಿ ಕಾಮಗಾರಿ ಬಗ್ಗೆ ಕನಸು ಕಾಣಬೇಕಂತೆ. ಕ್ಷೇತ್ರದಲ್ಲಿ ರಸ್ತೆ ಹಾಗೂ ಸರ್ಕಲ್ ನಿರ್ಮಾಣ ನನ್ನ ಕನಸು ಕೂಡ ಹೌದು. ದಾವಣಗೆರೆ, ಮೈಸೂರು ಮತ್ತು ಧರ್ಮಸ್ಥಳ ಸೇರಿದಂತೆ ನಾಲ್ಕಾರು ಕಡೆ ಸರ್ಕಲ್ ನೋಡಿದ ಬಳಿಕ ನಮ್ಮ ಕ್ಷೇತ್ರದಲ್ಲೂ ಅದೇ ರೀತಿಯಲ್ಲಿ ಆರ್ ಪಿ ಸರ್ಕಲ್ ನಿರ್ಮಾಣ ಮಾಡಬೇಕೆಂಬ ಆಸೆಯಿತ್ತು. ಹೀಗಾಗಿ ಇಷ್ಟಪಟ್ಟು ರಸ್ತೆ ಹಾಗೂ ಎರಡು ಕಡೆ ಹೈಟೆಕ್ ವೃತ್ತ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರೆವೇರಿಸಿದ್ದೇನೆ. ತಾಲೂಕಿನ ಹೃದಯ ಭಾಗವಾಗಿರುವ, ಹ್ಯಾಂಡ್ ಪೋಸ್ಟ್ ಸರ್ಕಲ್ ಹೈಟೆಕ್ ಮಾದರಿಯಲ್ಲಿ ನಿರ್ಮಾಣವಾಗಲಿದ್ದು, ಸುಮಾರು 50 ಮಂದಿ ಪ್ರಯಾಣಿಕರು ಕುಳಿತುಕೊಳ್ಳಲು ಸಾಮರ್ಥ್ಯವಿರುವ ಬಸ್ ನಿಲ್ದಾಣವನ್ನು ನಾಲ್ಕು ಕಡೆ ನಿರ್ಮಾಣ ಮಾಡಲಾಗುವುದು ಜೊತೆಗೆ ಕುಡಿಯುವ ನೀರು ಹಾಗೂ ಹೈಟೆಕ್ ಟಾಯ್ಲೆಟ್ ನಿರ್ಮಾಣ ಮಾಡಲಾಗುವುದು ಎಂದು ಅನಿಲ್ ಚಿಕ್ಕಮಾದು ಹೇಳಿದರು.
ಹೆಚ್ ಡಿ ಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಏಜಾಜ್ ಪಾಷಾ, ಪುರಸಭೆ ಮಾಜಿ ಸದಸ್ಯ ಹೆಚ್ ಸಿ ನರಸಿಂಹಮೂರ್ತಿ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ಮಂಜುನಾಥ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಅಜರುದ್ದೀನ್, ತಾಲೂಕು ಕಾಂಗ್ರೆಸ್ ವಕ್ತಾರ ಸಾಮ್ರಾಟ್ ಅಶೋಕ್, ಹೋಂಡಾ ನಯಾಜ್, ಪ್ರದೀಪ್ ಕುಮಾರ್, ನೆನಪು ರವಿ, ಪ್ರೇಮ್ ಸಾಗರ್, ಕವಿತಾ ಸುರೇಶ್, ಸೂರ್ಯ ಕುಮಾರ್ ಗೌಡ, ಮಂಜುನಾಥ್ ಹೈರಿಗೆ, ರಾಜು ವಿಶ್ವಕರ್ಮ, ಸ್ಟುಡಿಯೋ ಪ್ರಕಾಶ್, ಪುರಸಭೆ ಮುಖ್ಯಾಧಿಕಾರಿ ಸುರೇಶ್, ಎಇಇ.ರಮೇಶ್, ಸಿದ್ದರಾಮು, ಕಬಿನಿ ಹೇಮಂತ್, ಶಿವಪ್ಪ ಕೋಟೆ ಆಸೀಫ್ ಇಕ್ಬಾಲ್, ಡಾ. ಮರಿದೇವಯ್ಯ, ವಡ್ಡರಗುಡಿ ರವಿ, ಚಿಕ್ಕಣ್ಣ, ಕಾರ್ತಿಕ್, ಶಶಿ ಪಟೇಲ್, ವನಸಿರಿ ಉಮೇಶ್, ಶಿವಮಲ್ಲಪ್ಪ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಯರಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.
ಎಲ್ಲೆಲ್ಲಿ ಸರ್ಕಲ್, ಬಸ್ ನಿಲ್ದಾಣ ನಿರ್ಮಾಣ?
ಹ್ಯಾಂಡ್ ಪೋಸ್ಟ್ ಸರ್ಕಲ್ ನಲ್ಲಿ ಹೈಟೆಕ್ ಮಾದರಿಯಲ್ಲಿ ವೃತ್ತ
ಕೊಲ್ಲೇಗೌಡನಹಳ್ಳಿ ಬಳಿ ವೃತ್ತ ಮತ್ತು ಕಾವೇರಿ ಪ್ರತಿಮೆ
ಸರ್ಕಲ್ ನ ನಾಲ್ಕು ಭಾಗಗಳಲ್ಲೂ ಹೈಟೆಕ್ ಬಸ್ ನಿಲ್ದಾಣ
ಕುಡಿಯುವ ನೀರು ಮತ್ತು ಹೈಟೆಕ್ ಟಾಯ್ಲೆಟ್ ನಿರ್ಮಾಣ
ಹ್ಯಾಂಡ್ ಪೋಸ್ಟ್ ಸರ್ಕಲ್ ನಿಂದ ಕೃಷ್ಣಪುರ ಸರ್ಕಲ್ ವರೆಗೆ ರಸ್ತೆ
ಧರ್ಮಸ್ಥಳ-ಉಜಿರೆ ರಸ್ತೆ ಮಾದರಿಯಲ್ಲಿ ರಸ್ತೆ ನಿರ್ಮಾಣ

